ರಾಜ್ಯದ ಜನತೆ ಒಂದೆಡೆ ಬಿಸಿಲಿನ ಬೇಗೆಗೆ ಬೆಂದು ಬಸವಳಿದು ಬಿಸಿಲಿನ ಬೇಗೆಯನ್ನು ತಾಳಲಾರದೆ ದಂಡ ತಂಡ ಕೂಲ್ ಕೂಲ್ ಗೆ ಮೊರೆ ಹೋದ ನಿದರ್ಶನಗಳನ್ನು ನಾವು ಇತ್ತೀಚೆಗೆ ಕಾಣುತ್ತಿದ್ದೆವು ರೈತರು ತಾವು ಬೆಳೆದ ಬೆಳೆಯನ್ನು ಉಳಿಸಿಕೊಳ್ಳುವ ಸಲುವಾಗಿ ಕೊಳವೆ ಬಾವಿಗಳಲ್ಲಿ ನೀರಿಲ್ಲದೆ ಮೋಡದತ್ತ ಮುಖ ಮಾಡಿ ವರುಣನ ಆಗಮನವನ್ನು ಕಾಯುತ್ತಿದ್ದ ದೃಶ್ಯಗಳನ್ನು ನಾವು ಕಂಡಿದ್ದೆವು ಇತ್ತೀಚಿನ ದಿನಗಳಲ್ಲಿ ರೈತನು ತಾನು ಮಾಡಿದ ಸಾಲವನ್ನು ತೀರಿಸಲಾಗದೆ ಆತ್ಮಹತ್ಯೆದಾರಿ ಹಿಡಿದ ನಿದರ್ಶನಗಳನ್ನು ನಾವು ಮಾಧ್ಯಮಗಳಲ್ಲಿ ಕಂಡಿದ್ದೇವೆ ಮೂಕ ಪ್ರಾಣಿಗಳ ರೋದನೆಯಂತು ಹೇಳುತ್ತೀರದಾಗಿತ್ತು ರಸ್ತೆಗಳಲ್ಲಿ ಬಸ್ ನಿಲ್ದಾಣಗಳಲ್ಲಿ ಜನರು ಬಿಸಿಲಿನ ಜಳಕ್ಕೆ ಬೇಸತ್ತು ತಂಪಾದ ಮರ-ಗಿಡಗಳನ್ನು ಹುಡುಕುತ್ತಿದ್ದರು ಆದರೆ ಎಲ್ಲಿಯೂ ಸಹ ತಂಪಾದ ಮರ ಗಿಡಗಳು ಕಾಣೆಯಾಗಿದ್ದವು ಎಲ್ಲಿ ನೋಡಿದರೂ ಕಾಂಕ್ರೀಟ್ ನಿಂದ ನಿರ್ಮಿತವಾದ ಕಟ್ಟಡಗಳೆ ಕಾಣುತ್ತಿವೆ ಮನುಷ್ಯ ತಾನು ಮಾಡಿದ ತಪ್ಪಿಗೆ ಶಿಕ್ಷೆ ಅನುಭವಿಸಲೇಬೇಕು ಎಂದು ಜನರೇ ಮಾತಾಡುತ್ತಿರುವುದು ಕೇಳಿಬರುತ್ತಿದೆ ರಾಜ್ಯದ ಎಷ್ಟೋ ಗ್ರಾಮ ಪಂಚಾಯಿತಿ ವ್ಯಾಪ್ತಿಗಳಲ್ಲಿ ಕುಡಿಯುವ ನೀರಿಗಾಗಿ ಖಾಲಿ ಕೊಡಗಳನ್ನು ಪ್ರದರ್ಶನ ಮಾಡವಂತಹ ಪ್ರತಿಭಟನೆಗಳು ಪ್ರಾರಂಭವಾಗಿದ್ದವು ಅದೆಷ್ಟೋ ಶುದ್ಧ ಕುಡಿಯುವ ನೀರನ್ನು ಸರಬರಾಜು ಮಾಡುತ್ತಿದ್ದ ನೀರಿನ ಫ್ಯಾಕ್ಟರಿಗಳಿಗೆ ಕುಡಿಯುವ ನೀರಿನ ಬೇಡಿಕೆ ಹೆಚ್ಚಾದ ನಿದರ್ಶನಗಳು ಸಾಕಷ್ಟನ್ನು ಕಂಡಿದ್ದೇವೆ ಇಂತಹ ಸಂದರ್ಭದಲ್ಲಿ ಮೂಕ ಪ್ರಾಣಿ ಪಕ್ಷಿಗಳ ವೇದನೆಯನ್ನು ನೋಡಲಾರದ ಮಳೆರಾಯ ನೆನ್ನೆ ಮುಸ್ಸಂಜೆಯ ವೇಳೆಗೆ ರಾಜ್ಯದ ಹಲವೆಡೆ ಹಾಲಿಕಲ್ಲು ಸಮೇತನಾಗಿ ಆಗಮಿಸಿದ ವರುಣ ಜನರ ಮನಸ್ಸಿನಲ್ಲಿ ಮಂದಹಾಸವನ್ನೇ ಸೃಷ್ಟಿಸಿರುವುದು ನಿಜಕ್ಕೂ ಸಂತಸದ ವಿಷಯ ಎಂಬುದು ರೖತರ ಅಭಿಪ್ರಾಯವಾಗಿದೆ.
ಮಳೆರಾಯನ ಆಗಮನದಿಂದ ಮಕ್ಕಳ ಮನಸ್ಸಿನಲ್ಲೂ ಮಂದಹಾಸ ಮೂಡಿರುವುದು ಸಂತಸದ ವಿಷಯವಾಗಿದೆ ಒಟ್ಟಾರೆ ಈ ಆನಂದಕ್ಕೆ ಆನಂದಕ್ಕೆ ಪಾರೆ ಇಲ್ಲದಂತಾಗಿದೆ.