ಸಮಾಜ ಸೇವಕ ಬಿ. ಶರಣಬಸವ ಅವರಿಗೆ ಚಿತ್ರಸಂತೆ ‘ರಾಜ್ಯೋತ್ಸವ ಪುರಸ್ಕಾರ’ ಪ್ರಶಸ್ತಿ ಪ್ರದಾನ

ಕನ್ನಡ ನಾಡಿನ ಹೆಮ್ಮೆಯ ಸಾಧಕ: ಬಿ. ಶರಣಬಸವ ಅವರಿಗೆ ಚಿತ್ರಸಂತೆ ‘ರಾಜ್ಯೋತ್ಸವ ಪುರಸ್ಕಾರ’ ಪ್ರದಾನ

 

ಬೆಂಗಳೂರು: ಗುರುವಾರ ಸಂಜೆ ನಡೆದ ಹೈಡ್ ಪಾರ್ಕ್ ಅಪಾರ್ಟ್ ಹೋಟೆಲ್ ನಲ್ಲಿ ಚಿತ್ರಸಂತೆ ಸಂಸ್ಥೆ ವತಿಯಿಂದ ಆಯೋಜಿಸಿದ್ದ 2025 ನೇ ಸಾಲಿನ ಕೊಡಮಾಡುವ ಕನ್ನಡ ನಾಡಿನ ಹೆಮ್ಮೆಯ ಸಾಧಕರು, ರಾಜ್ಯೋತ್ಸವ ಪುರಸ್ಕಾರ 2025 ಪ್ರಶಸ್ತಿ ಕಾರ್ಯಕ್ರಮ ನಡೆಯಿತು.

ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನ ಬೂದುಗುಪ್ಪ ಗ್ರಾಮದ ನಿವಾಸಿ ಪ್ರಸ್ತುತ ವಿಸಿಎನ್ ಟಿವಿಯ ವ್ಯವಸ್ಥಾಪಕರು ಮತ್ತು ಸಮಾಜ ಸೇವಕರು ಇವರು ಕಳೆದ ಹತ್ತು ದಶಕದಿಂದಲೂ ತಮ್ಮ ತನ ಮನ ದನ ಮೂಲಕ ಕಾರಟಗಿ-ಸಿಂಧನೂರು ಸೇರಿದಂತೆ ಇನ್ನಿತರ ನಾನಾ ತಾಲೂಕುಗಳಲ್ಲಿ, ಗ್ರಾಮಗಳಲ್ಲಿ ನಿರಂತರವಾಗಿ ಸೇವೆ ಸಲ್ಲಿಸಿದ (ಮಾಧ್ಯಮ, ಶಿಕ್ಷಣ, ಸಮಾಜ ಸೇವೆ) ಕ್ಷೇತ್ರದಲ್ಲಿ ಸಾಧನೆಯನ್ನು ಗುರುತಿಸಿದ ಚಿತ್ರಸಂತೆ ಸಂಸ್ಥೆಯ 2025 ನೇ ಸಾಲಿನ ಕೊಡಮಾಡುವ ಕನ್ನಡ ನಾಡಿನ ಹೆಮ್ಮೆಯ ಸಾಧಕರಿಗೆ ರಾಜ್ಯೋತ್ಸವ ಪುರಸ್ಕಾರ’ ಪ್ರಶಸ್ತಿಯನ್ನು ಬಿ. ಶರಣಬಸವ ಅವರಿಗೆ ಪ್ರದಾನ ಮಾಡಲಾಯಿತು.

 

 

ಚಿತ್ರಸಂತೆ ಸಂಸ್ಥೆಯ ಅಧ್ಯಕ್ಷರಾದ ಗಿರೀಶ್ ಗೌಡ್ರು ಮಾತನಾಡಿದ ಅವರು ನಮ್ಮ ಸಮಾಜದಲ್ಲಿ ಅತ್ಯಂತ ನಿಷ್ಠೆಯಿಂದ ಸೇವೆ ಸಲ್ಲಿಸಿರುವ ಬಿ. ಶರಣಬಸವ ಅವರನ್ನು ಗೌರವಿಸುವ ಭಾಗ್ಯ ನಮಗೆ ಸಿಕ್ಕಿದೆ. ವ್ಯಕ್ತಿತ್ವವು ಕೇವಲ ಅಧಿಕಾರದಿಂದ ದೊಡ್ಡದಾಗುವುದಿಲ್ಲ, ಅವರು ಮಾಡುವ ಕೆಲಸ ಹಾಗೂ ಸಮಾಜದ ಮೇಲಿನ ಕಾಳಜಿಯಿಂದ ದೊಡ್ಡದಾಗುತ್ತದೆ ಎನ್ನುವುದಕ್ಕೆ ಇವರೇ ಸಾಕ್ಷಿ. ಇವರು ಕಳೆದ 9-10 ವರ್ಷಗಳಿಂದ ಸಮಾಜ ಸೇವೆ ಮತ್ತು ಹೋರಾಟ, ವಿಸಿಎನ್ ಟಿವಿ ಸೇರಿದಂತೆ ರಾಜ್ಯದ ನಾನಾ ಮಾಧ್ಯಮಗಳ ಕ್ಷೇತ್ರದಲ್ಲಿ ಮಾಡಿದ ಸಾಧನೆ ನಿಜಕ್ಕೂ ಮೆಚ್ಚುವಂತದ್ದು. ಕಷ್ಟದ ಸಮಯದಲ್ಲಿಯೂ ದೃತಿಗೆಡದೆ ಅವರು ತೋರಿದ ಹಾದಿ ನಮ್ಮಂತಹ ಅನೇಕರಿಗೆ ಸ್ಫೂರ್ತಿ ಎಂದರು.

ನಂತರದಲ್ಲಿ ಸನ್ಮಾನಿತರಾದ ಬಿ. ಶರಣಬಸವ ಮಾತಾನಾಡಿದ
ಅವರು ತಮ್ಮ ಮಾತಿನ ಮೂಲಕ ಸನ್ಮಾನ ಎಂದರೆ ಕೇವಲ ಶಾಲು ಹೊದಿಸಿ ಹಾರ ಹಾಕಿ ಗೌರವಿಸುವುದಲ್ಲ. ಇದೊಂದು ಸಾಧನೆಗೈದವರ ನಿಸ್ವಾರ್ಥ ಸೇವೆಗೆ ನಾವು ಸಲ್ಲಿಸುತ್ತಿರುವ ಸಣ್ಣ ಕೃತಜ್ಞತೆ. ಇಂತಹ ಸಾಧಕರನ್ನು ಗೌರವಿಸುವುದರ ಮೂಲಕ ನಾವೆಲ್ಲರೂ ಒಳ್ಳೆಯ ಕೆಲಸ ಮಾಡಲು ಪ್ರೇರಣೆ ಪಡೆಯುತ್ತಿದ್ದೇವೆ ಎಂದರು.

 

 

ಇದೇ ಸಂದರ್ಭದಲ್ಲಿ ಬಿಗ್‌ಬಾಸ್‌ ಸೀಸನ್‌-10ರ ವಿಜೇತ ಕಾರ್ತಿಕ್ ಮಹೇಶ್, ಚಿತ್ರರಂಗದ ನಾನಾ ತಾರೆಯರು ಹಾಗೂ ನಾಡಿನ ಸಾಧಕರು, ಸಂಶೋಧಕರು ಹಾಗೂ ಪತ್ರಕರ್ತರು ಈಶ್ವರ್ ಸಿರಿಗೇರಿ, ಗಣ್ಯರು ಪಾಲ್ಗೊಂಡು ಸನ್ಮಾನಿಸಿದರು. ಪುಸ್ತಕ ಸಹ ಬಿಡುಗಡೆ ಮಾಡಲಾಯಿತು. ಚಿತ್ರಸಂತೆ ಸಂಸ್ಥೆಯ ಎಲ್ಲಾ ಪದಾಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು.

 

ಚಿತ್ರಸಂತೆ ಸಂಸ್ಥೆಯ 2025 ನೇ ಸಾಲಿನ ಕೊಡಮಾಡುವ ಕನ್ನಡ ನಾಡಿನ ಹೆಮ್ಮೆಯ ಸಾಧಕರಿಗೆ ರಾಜ್ಯೋತ್ಸವ ಪುರಸ್ಕಾರ’ ಪ್ರಶಸ್ತಿಯನ್ನು ವಿಸಿಎನ್ ಟಿವಿಯ ವ್ಯವಸ್ಥಾಪಕರು ಮತ್ತು ಸಮಾಜ ಸೇವಕ ಬಿ. ಶರಣಬಸವ ಅವರಿಗೆ ಬಿಗ್ ಬಾಸ್ ವಿನ್ನರಾದ ಕಾರ್ತಿಕ್ ಮಹೇಶ್, ಚಿತ್ರಸಂತೆ ಸಂಸ್ಥೆಯ ಅಧ್ಯಕ್ಷರಾದ ಗಿರೀಶ್ ಗೌಡ್ರು,
ಸಂಶೋಧಕರು ಹಾಗೂ ಪತ್ರಕರ್ತರು ಈಶ್ವರ್ ಸಿರಿಗೇರಿ ಮುಂತಾದವರಿಂದ ಸ್ವೀಕರಿಸುತ್ತಿರುವುದು.

Leave a Reply

Your email address will not be published. Required fields are marked *

error: Content is protected !!