ತಾಲೂಕಿನ ವಿವಿಧ ಗ್ರಾಮಗಳಲ್ಲಿ ಪೊಲೀಸ್ ಇಲಾಖೆಯಿಂದ ಜನಸಂಪರ್ಕ ಸಭೆ

ಗುಬ್ಬಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಕಲ್ಲೂರು ಕ್ರಾಸ್, ಕಡಬ, ರಂಗನಾಥಪುರ, ಹಾಗೂ ಮಾದಪುರ ಗ್ರಾಮಗಳಲ್ಲಿ ಗುಬ್ಬಿ ತಾಲೂಕಿನ ವೃತ್ತ ನಿರಿಕ್ಷಕರು ಹಾಗೂ ಸಬ್ ಇನ್ಸ್ಪೆಕ್ಟರ್ ರವರ ನೇತೃತ್ವದಲ್ಲಿ ಜನಸಂಪರ್ಕ ಸಭೆ ನಡೆಸಲಾಯಿತು.

ಜನಸಂಪರ್ಕ ಸಭೆಯಲ್ಲಿ ನೆರದಿದ್ದ ಸಾರ್ವಜನಿಕರಿಗೆ ಇತ್ತೀಚಿನ ದಿನಗಳಲ್ಲಿ ಜಾಲತಾಣದ ಅಪರಾಧಗಳು ಹೆಚ್ಚುತ್ತಿದ್ದು ಜನರು ಜಾಗರುಕತೆಯಿಂದ ಇರಬೇಕು ಅಂತಹ ಅಪರಾದಗಳು ಕಂಡು ಬಂದರೆ ಕೂಡಲೇ ಹತ್ತಿರದ ಪೋಲೀಸ್ ಠಾಣೆಗೆ ದೂರು ನೀಡುವ ಮೂಲಕ ಇಂತಹ ಪ್ರಕರಣಗಳು ಮರುಕಳಿಸದಂತೆ ತಡೆಯಲು ಸಹಕಾರಿಯಾಗುತ್ತದೆ ಎಂದು ಜನರಲ್ಲಿ ಜಾಗೃತಿ ಮೂಡಿಸಿದರು. ಹಳ್ಳಿಗಳಲ್ಲಿ ಕೆಲವು ಅಪರಿಚಿತರು ಕಳ್ಳತನ ಮಾಡುವ ದೃಷ್ಟಿಯಿಂದ ಒಂಟಿ ಮನೆಗಳನ್ನು ಗುರಿಯಾಗಿಟ್ಟುಕೊಂಡು ಯಾವುದೋ ವಸ್ತು ಮಾರುವ ನೆಪವಿಟ್ಟುಕೊಂಡು ಅಕ್ಕ ಪಕ್ಕದಲ್ಲಿ ಯಾರು ಇಲ್ಲದ ಸಮಯದಲ್ಲಿ ಕಳ್ಳತನಕ್ಕೆ ಪ್ರಯತ್ನಿಸುತ್ತಿರುತ್ತಾರೆ ಇಂತಹ ಘಟನೆಗಳನ್ನು ತಡೆಗಟ್ಟಬೇಕೆಂದರೆ ಒಂಟಿ ಮನೆಗಳಲ್ಲಿ ಸಿ ಸಿ ಟೀವಿ ಅಳವಡಿಸಿಕೋಳ್ಳುವುದು ಉತ್ತಮ ಒಂಟಿ ಮನೆಗಳ ಸುತ್ತ ಮುತ್ತ ಅಥವ ಗ್ರಾಮಗಳಲ್ಲಿ ಯಾವುದೇ ಅಪರಿಚಿತ ವ್ಯಕ್ತಿ ಕಂಡು ಬಂದರೆ ಅವನ ಚಲನ ವಲನಗಳ ಬಗ್ಗೆ ನಿಗವಹಿಸಿ ಅಂತವರ ಮೇಲೆ ಅನುಮಾನ ಬಂದರೆ ಕೂಡಲೇ ಹತ್ತಿರದ ಪೊಲೀಸ್ ಠಾಣೆಗೆ ದೂರು ನೀಡುವ ಮೂಲಕ ಅಂತಹ ಘಟನೆಗಳನ್ನು ತಡೆಗಟ್ಟಲು ಪೊಲೀಸ್ ಇಲಾಖೆಯೊಂದಿಗೆ ಸಹಕರಿಸುವಂತೆ ಗುಬ್ಬಿ ತಾಲೂಕಿನ ವೃತ್ತ ನಿರೀಕ್ಷಕರಾದ ಗೋಪಿನಾಥ್ ಸಾರ್ವಜನಿಕರಿಗೆ ತಿಳಿಸಿದರು.

ಪಿ ಎಸ್ ಐ ಸುನೀಲ್ ಕುಮಾರ್ ಮಾತನಾಡಿ ಗ್ರಾಮೀಣ ಪ್ರದೇಶದಲ್ಲಿ ಜನರು ಜಾಗರೂಕತೆಯಿಂದ ಇರಬೇಕು ಯಾವುದೇ ಗ್ರಾಮಗಳಲ್ಲಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಅನುಮಾನಸ್ಪದವಾದ ವ್ಯಕ್ತಿಗಳು ಕಂಡು ಬಂದರೆ ಹತ್ತಿರದ ಪೊಲೀಸ್ ಠಾಣೆಗಾಗಲಿ ಅಥವಾ ಪೋಲಿಸ್ ಇಲಾಖೆಯ ಸಹಾಯವಾಣಿ 112 ಗೆ ಕರೆ ಮಾಡಿದರೆ ತಕ್ಷಣ ಪೋಲೀಸ್ ಇಲಾಖೆ ಸಾರ್ವಜನಿಕರ ನೆರವಿಗೆ ಬರುತ್ತದೆ ಪೊಲೀಸ್ ಇಲಾಖೆ ಸದಾ ಜನರ ಸೇವೆ ಮಾಡುವ ಮೂಲಕ ಜನಸ್ನೇಹಿ ಪೊಲೀಸ್ ಆಗಿ ಕರ್ತವ್ಯ ನಿರ್ವಹಿಸಲು ಸದಾ ಸಿದ್ಧವಾಗಿದೆ ಎಂದು ತಿಳಿಸಿದರು.

ಹೆಣ್ಣು ಮಕ್ಕಳು ಸಭೆ ಸಮಾರಂಬಗಳಲ್ಲಿ ಎಚ್ಚರಿಕೆಯಿಂದ ಇರುವುದು ಉತ್ತಮ ಬಸ್ ನಿಲ್ದಾಣಗಳಲ್ಲಿ ಮದುವೆ ಸಮಾರಂಬಗಳಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಹಾಗೂ ಒಂಟಿಯಾಗಿ ಹೋರಾಡುವ ಸ್ಥಳಗಳಲ್ಲಿ ತಮ್ಮ ಒಡವೆಗಳನ್ನು ತೋರ್ಪಡಿಕೆಯ ರೀತಿಯಲ್ಲಿ ಹಾಕಿಕೊಳ್ಳಬಾರದು ಇಂತಹ ಎಚ್ಚರಿಕೆಯಿಂದ ಸರಗಳ್ಳತನವನ್ನು ತಡೆಯಲು ಸಹಕಾರಿಯಾಗುತ್ತದೆ ಎಂದು ಮಹಿಳೆಯರಲ್ಲಿ ಜಾಗೃತಿ ಮೂಡಿಸಿದರು.

 

 

 

ಸಾರ್ವಜನಿಕರು ಇತ್ತೀಚಿನ ದಿನಗಳಲ್ಲಿ ಸಂಚಾರ ನಿಯಮಗಳನ್ನು ಉಲ್ಲಂಘಿಸಿ ವಾಹನವನ್ನು ಚಲಾಯಿಸುತ್ತಿದ್ದು ಸಾಕಷ್ಟು ಅಪಘಾತಗಳಲ್ಲಿ ತಮ್ಮ ಜೀವವನ್ನು ಕಳೆದುಕೊಳ್ಳುವ ನಿದರ್ಶನಗಳು ನಮ್ಮ ಕಣ್ಣಮುಂದಿವೆ ದ್ವಿಚಕ್ರ ವಾಹನ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ ವಾಹನವನ್ನು ಚಲಾಯಿಸಬೇಕು ವಾಹನಗಳ ಸರಿಯಾದ ದಾಖಲಾತಿಗಳನ್ನು ತಮ್ಮ ಬಳಿ ಇಟ್ಟುಕೊಂಡು ಪೊಲೀಸ್ ಇಲಾಖೆ ವಾಹನಗಳ ತಪಾಸಣೆ ಹಾಗೂ ವಾಹನಗಳ ದಾಖಲಾತಿ ಪರಿಸಿಲನೆ ಮಾಡುವ ಸನ್ನಿವೇಶದಲ್ಲಿ ನೀಡಿದಾಗ ಮಾತ್ರ ವಾಹನಗಳ ಕಳ್ಳತನದ ಪ್ರಕರಣಗಳನ್ನು ನಿಯಂತ್ರಿಸಬಹುದು ಎಂದು ಸಾರ್ವಜನಿಕರಿಗೆ ತಿಳಿಸಿದರು.

ಇಂದಿನ ಯುವಕರು ಮತ್ತು ವಿದ್ಯಾರ್ಥಿಗಳು ಅಲವಾರು ದುಶ್ಚಟಗಳಿಗೆ ಬಲಿಯಾಗಿ ಸಾಕಷ್ಟು ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾಗುತ್ತಿರುವುದು ನಿಜಕ್ಕೂ ಅಘಾತಕಾರಿ ವಿಷಯವಾಗಿದೆ ಯುವಕರ ಮತ್ತು ವಿದ್ಯಾರ್ಥಿಗಳ ಪೋಷಕರು ತಮ್ಮ ಮಕ್ಕಳ ಚಲನವಲನದ ಬಗ್ಗೆ ನಿಗಾವಹಿಸಿದಾಗ ಮಾತ್ರ ಸಾಕಷ್ಟು ಅಪರಾಧ ಪ್ರಕರಣಗಳನ್ನು ತಡೆಗಟ್ಟಲು ಸಹಕಾರಿಯಾಗುತ್ತದೆ ಎಂದು ತಿಳಿಸಿದರು.

 

 

 

ಜನಸಂಪರ್ಕ ಸಭೆಯಲ್ಲಿ ಕಡಬ ಉಪ ಪೊಲೀಸ್ ಠಾಣೆಯ ಉಮೇಶ್, ಸುನಿಲ್ ಕುಮಾರ್, ವಿಜಿ ಕುಮಾರ್, ನವೀನ್ ಕುಮಾರ್, ನಟರಾಜು, ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *