ಪೋಷಕರೇ ಮಕ್ಕಳ ಜವಾಬ್ದಾರಿ ಯಾರ ಹೊಣೆ

ಸಾರ್ವಜನಿಕರೇ ಹಾಗೂ ಪೋಷಕರೇ ತಮ್ಮ ಮಕ್ಕಳಿಗೆ ಶಾಲಾ ಕಾಲೇಜು ಗಳಿಗೆ ಕಳುಹಿಸುವಾಗ ಎಚ್ಚರವಹಿಸಬೇಕಿದೆ.

ಇವತ್ತಿನ ದಿನಗಳಲ್ಲಿ ನಡೆಯುತ್ತಿರುವ ಅಹಿತಕರ ಘಟನೆಗಳನ್ನು ನೋಡಿದಾಗ , ಪೋಷಕರು ತಮ್ಮ ಮಕ್ಕಳಿಗೆ ಶಾಲಾ ಕಾಲೇಜು ಗಳಿಗೆ ಕಳುಹಿಸಲು ಆತಂಕ ಪಡುವಂತಹ ವಾತಾವರಣ ನಿರ್ಮಾಣವಾಗಿದೆ. ಹೆಣ್ಣು ಮಕ್ಕಳಿಗೆ ರಕ್ಷಣೆ ಇಲ್ಲ ಎಂಬ ಅಭದ್ರತೆ ಕಾಡುತ್ತಿದೆ.

ಇದಕ್ಕೆ ಕಾರಣ ಯಾರು ? ಪೋಲಿಸರ ವೈಫಲ್ಯವೇ ? ಆಡಳಿತ ಸರ್ಕಾರದ ವೈಫಲ್ಯವೇ ? ಪೋಷಕರ ವೈಫಲ್ಯವೇ ? ಸರ್ಕಾರಿ ಶಾಲಾ ಕಾಲೇಜುಗಳಲ್ಲಿನ ಮುಖ್ಯಸ್ಥರ ಬೇಜವಾಬ್ದಾರಿತನವೇ ? ಖಾಸಗಿ ಶಾಲಾ ಕಾಲೇಜುಗಳಿದ್ದರೆ ಅದರ ಆಡಳಿತ ಮಂಡಳಿಯವರ ಬೇಜವಾಬ್ದಾರಿತನವೇ ?
ಸಮಾಜದಲ್ಲಿ ಸಾರ್ವಜನಿಕರ ಬೇಜವಾಬ್ದಾರಿತನವೇ ?
ಮುಖ್ಯ ವಾಗಿ ಮೊಬೈಲ್ ಬಳಸುವಿಕೆ ಕಾರಣವೇ ? ಮೊಬೈಲ್ ಗಳಲ್ಲಿನ ಯೂಟ್ಯೂಬ್ ಗಳಲ್ಲಿನ ಅಶ್ಲೀಲ ವಾದ ವೀಡಿಯೋ ಗಳೇ ? ಎಂಬೆಲ್ಲಾ ಪ್ರಶ್ನೆಗಳು ಮೂಡತ್ತವೆ .

ಇದಕ್ಕೆ ಸೂಕ್ತವಾದುದು ಯಾವುದು ಎಂಬುದು ನಾವೆಲ್ಲರೂ ನಿರ್ಧರಿಸಬೇಕಿದೆ.

ಇಂದಿನ ಯುವ ಪೀಳಿಗೆಯ ವಿಧ್ಯಾರ್ಥಿಗಳು ಶಾಲಾ ಕಾಲೇಜುಗಳಿಗೆ ಹೋಗುವುದು ವಿದ್ಯಾಭ್ಯಾಸ ಮಾಡಲು . ಇದು ಪ್ರಮುಖ ಉದ್ದೇಶ . ಒಳ್ಳೆಯ ವಿದ್ಯಾಭ್ಯಾಸ ಪಡೆದು ಮುಂದಿನ ಭವಿಷ್ಯ ರೂಪಿಸಿಕೊಳ್ಳಲು , ಆದರೆ ಇಂದಿನ ಯುವ ಪೀಳಿಗೆಯ ಯುವಕ ಯುವತಿಯರು ಪ್ರಮುಖವಾದ ಉದ್ದೇಶ ಮರೆತು , ಕೆಲವರು ಹುಚ್ಚು ಪ್ರೀತಿ ಪ್ರೇಮದ ಗುಂಗಿಗೆ ಬಿದ್ದು ಪಬ್ ,ಪಾರ್ಕು ,ಹೋಟೆಲ್ , ಪಾನಿ ಪೂರಿ ಚಾಟ್ ಸೆಂಟರ್ ಗಳಲ್ಲಿ , ಅಲ್ಲಿ ಇಲ್ಲಿ ಹೀಗೆ ಸುತ್ತಿ ದಿನಕಳೆದು ,ಕೊನೆಗೆ ಪ್ರೀತಿ ಪ್ರೇಮ ಎಂಬ ಪಾಷಕ್ಕೆ ಸಿಲುಕಿ ಮುಂದೆ ಹೋಗಲಾಗದೆ , ಹಿಂದೆ ಸರಿಯಲಾಗದೇ , ಕೊನೆಗೆ ಜಾತಿಯ ವಿಷಯ ಅಡ್ಡ ಬಂದು , ಬೇರೆ ಬೇರೆ ರೀತಿಯಲ್ಲಿ ತಮ್ಮ ಜೀವನ ಕೊನೆಗೊಳ್ಳಿಸುತ್ತಿದ್ದಾರೆ.

ಪ್ರೀತಿ ಪ್ರೇಮ ವೈಫಲ್ಯ ಅಥವಾ ತಮ್ಮ ಪ್ರೀತಿ ಗೆ ಎರಡು ಕುಟುಂಬದವರ ವಿರೋಧ ಅಥವಾ ಹುಡುಗ ನಂಬಿಸಿ ಕೈಕೊಟ್ಟ ಅಥವಾ ಹುಡುಗಿ ಕೈಕೊಟ್ಟಳು ಎಂದು ತಮ್ಮ ಜೀವನ ಹಾಳು ಮಾಡಿಕೊಳ್ಳುತ್ತಿದ್ದಾರೆ.

ಹುಡುಗಿ ಕೈಕೊಟ್ಟ ಪ್ರಕರಣಗಳಲ್ಲಿ ಕೆಲ ಹುಡುಗರು ಪ್ರೀತಿ ಯಲ್ಲಿ ಹುಚ್ಚರಾಗಿ ,ಹುಡುಗಿ ಗೆ ಕೊಲೆ ಮಾಡುವಂತಹ ನೀಚ ಕೆಲಸ ಮಾಡುತ್ತಿದ್ದಾರೆ.
ಕೆಲವು ಕಡೆ ಬಲವಂತವಾಗಿ ನನಗೆ ಪ್ರೀತಿಸು ಎಂದು ಹುಡುಗಿ ಹಿಂದೆ ಬಿದ್ದು ,ಹುಡುಗಿ ಒಪ್ಪದಿದ್ದರೆ ,ಕೊನೆಗೆ ನಿರಾಶರಾಗಿ ಹುಡುಗಿ ಗೆ ಕೊಲೆ ಮಾಡುವುದು , ಇಂತಹ ಕೆಲಸಗಳು ಇವತ್ತು ಆಗುತ್ತಿವೆ.
ಇದೆಲ್ಲಾ ನೋಡಿದರೆ ಇಂದಿನ ಯುವ ಪೀಳಿಗೆಯು ಎತ್ತಾ ಸಾಗುತ್ತಿದೆ ಎಂದು ಕಳವಳ ಆಗುತ್ತದೆ.

ಹೀಗೆಯಾದರೆ ಮುಂದೆ ಹೆಣ್ಣು ಮಕ್ಕಳ ರಕ್ಷಣೆ ಹೇಗೆ ಎಂಬೆಲ್ಲಾ ಭಯ ಉಂಟಾಗುತ್ತದೆ.

ಆದ್ದರಿಂದ ಈಗಲಾದರು ಎಚ್ಚೆತ್ತುಕೊಂಡು ನಾವುಗಳು ,ಸಾರ್ವಜನಿಕರು ,ಪೋಷಕರು , ತಮ್ಮ ಮಕ್ಕಳಿಗೆ ಶಾಲೆ ಕಾಲೇಜು ಗಳಿಗೆ ಕಳುಹಿಸಿ ಬೇಕಾದರೆ ,ತಮ್ಮ ಮಕ್ಕಳಿಗೆ ಬುದ್ದಿ ಹೇಳಬೇಕಿದೆ. ಹಾಗು ಆಗಾಗ್ಗೆ ಅವರುಗಳ ಶಾಲೆ ಕಾಲೇಜು ಗಳಿಗೆ ತೆರಳಿ ತಮ್ಮ ಮಕ್ಕಳ ಬಗ್ಗೆ ಶಾಲಾ ಕಾಲೇಜುಗಳ ಶಿಕ್ಷಕರು ,ಪ್ರಾಧ್ಯಾಪಕರು ,ಪ್ರಾಂಶುಪಾಲರ ಜೊತೆ ಮಾತನಾಡಬೇಕು. ಹಾಗು ಅವರ ಸಹಪಾಠಿಗಳೊಡನೆಯೂ ಮಾತನಾಡಿದರೆ , ಆಗಾಗ್ಗೆ ಈ ರೀತಿಯಲ್ಲಿ ಹೋಗಿ ಬರುತ್ತಿದ್ದರೆ , ವಿಧ್ಯಾರ್ಥಿಗಳಿಗಲ್ಲಿ ಭಯ ಇರುತ್ತದೆ. ಅಡ್ಡ ದಾರಿ ಹಿಡಿಯುವುದಿಲ್ಲ ಹಾಗು ಅಹಿತಕರ ಘಟನೆಗಳು ನಡೆಯುವುದಿಲ್ಲ. ಅಥವಾ ಅಂತಹ ಸಮಸ್ಯೆ ಗಳಿದ್ದರು ,ಪೋಷಕರ ಅರಿವಿಗೆ ಬರುತ್ತದೆ.

ಹಾಗೂ ತಮ್ಮ ಮಕ್ಕಳಿಗೆ ಮೊಬೈಲ್ ಕೊಡಿಸಬಾರದು , ಕೊಡಿಸಿದರು ಎಮರ್ಜೆನ್ಸಿ ಗಾಗಿ ಕೀಪ್ಯಾಡ್ ಮೊಬೈಲ್ ( Key Pad Mobile )ಕೊಡಿಸಬೇಕು ಅಷ್ಟೇ. ಹಾಗು ಮನೆಗಳಲ್ಲಿ ತಮ್ಮ ಮಕ್ಕಳ ಚಲನವಲನ ಗಳ ಬಗ್ಗೆ ಗಮನ ಇಡಬೇಕು.

ಅಂತಹ ಸಮಸ್ಯೆ ಗಳು ಕಂಡು ಬಂದರೆ ,ಸಂಬಂಧಿಸಿದ ಶಾಲೆ ಕಾಲೇಜಿನ ಮುಖ್ಯಸ್ಥರೊಂದಿಗೆ ಮಾತನಾಡಿ ತಿಳಿಸಬೇಕು , ಸಮಸ್ಯೆ ಇನ್ನೂ ಕಠಿಣ ಅನ್ನಿಸಿದರೆ ,ಪೋಲಿಸರಿಗೆ ದೂರು ನೀಡಿ ಮುಂಜಾಗ್ರತಾ ಕ್ರಮ ವಹಿಸಬೇಕು.

ಶಾಲಾ ಕಾಲೇಜುಗಳಲ್ಲಿ ಕಡ್ಡಾಯವಾಗಿ ಸಿ.ಸಿ .ಕ್ಯಾಮರಾ ಅಳವಡಿಸಬೇಕು.

ಪೋಲಿಸರು ಹೈಸ್ಕೂಲ್ ಹಾಗು ಪಿ.ಯು.ಸಿ ,ಡಿಗ್ರಿ ಕಾಲೇಜುಗಳಲ್ಲಿ ತಿಂಗಳಿಗೊಮ್ಮೆ ಪೋಷಕರ /ಶಿಕ್ಷಕರ/ ಪ್ರಾಧ್ಯಾಪಕರ / ಪ್ರಾಂಶುಪಾಲರ ಹಾಗು ವಿದ್ಯಾರ್ಥಿಗಳ ಸಮ್ಮುಖದಲ್ಲಿ ಸಭೆ ನಡೆಸಿ (Meeting ) ಹುಡುಗ ಹುಡುಗಿಯರ ಸಮಸ್ಯೆ ಗಳಿದ್ದರೆ, ಅದನ್ನು ಅವರ ಎರಡು ಕುಟುಂಬದವರ ಗಮನಕ್ಕೆ ಬರುವಂತೆ ಮಾಡಿ , ಅದಕ್ಕೆ ಪರಿಹಾರ ಕಂಡುಕೊಳ್ಳಬೇಕು.

ಕೆಲವು ಪೋಲಿ ಪುಂಡರಿದ್ದರೆ ಅವರ ವಿರುದ್ಧ ಪೋಲಿಸರು ಕ್ರಮ ಕೈಗೊಳ್ಳಬೇಕು.

ಪೋಲಿಸರು ಪಾರ್ಕು , ಪಾನಿ ಪೂರಿ ಚಾಟ್ ಸೆಂಟರ್ ಗಳ ಬಳಿ ಶಾಲಾ ಕಾಲೇಜುಗಳ ಗಂಡು ಮಕ್ಕಳು ಹೆಣ್ಣು ಮಕ್ಕಳು ಒಟ್ಟಿಗೆ ಇರದಂತೆ ಎಚ್ಚರವಹಿಸಬೇಕು.
ಪಾರ್ಕುಗಳಲ್ಲಿ ಸಿ.ಸಿ.ಕ್ಯಾಮರಾ ಕಡ್ಡಾಯ ಮಾಡಬೇಕು ಹಾಗೂ ಪಾರ್ಕುಗಳಲ್ಲಿ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿಗೆ ಪ್ರವೇಶ ನಿರ್ಭಂಧಿಸಬೇಕು.
ಹಾಗು KSRTC Bustand ಗಳಲ್ಲಿ ಸಿ.ಸಿ.ಕ್ಯಾಮರಾ ಕಡ್ಡಾಯಗೊಳಿಸಬೇಕು.

ಏಕೆಂದರೆ ಇವತ್ತಿನ ದಿನಗಳಲ್ಲಿ ಹೆಚ್ಚಾಗಿ ಶಾಲಾ ಕಾಲೇಜಿನ ವಿದ್ಯಾರ್ಥಿಗಳು ಪಾರ್ಕು , ಪಾನಿಪೂರಿ ಸೆಂಟರ್ ,ಹೋಟೆಲ್ ಹಾಗು KSRTC Bustand ಗಳಲ್ಲಿಯೇ ಪ್ರೀತಿ ಪ್ರೇಮದ ಗುಂಗಿನಲ್ಲಿ ,ಶಾಲಾ ಕಾಲೇಜು ಗಳಿಗೆ ಬಂಕ್ ಮಾಡಿ , ಈ ಸ್ಥಳಗಳಲ್ಲಿ ಬಂದು ಸಾರ್ವಜನಿಕರಿಗೆ ಮುಜುಗರ ವಾಗು ವಂತಹ ಕೆಲಸಗಳನ್ನು ಮಾಡುತ್ತಾ ,ಟೈಂಪಾಸ್ ಮಾಡುತ್ತಿರುತ್ತಾರೆ.

ಪಾರ್ಕು , ಹೋಟೆಲ್ ,ಶಾಲಾ ಕಾಲೇಜು , KSRTC Bustand ಹಾಗು ನಗರ ,ಪಟ್ಟಣಗಳ ಪ್ರಮುಖ ಬೀದಿಗಳಲ್ಲಿ ಸಿ.ಸಿ.ಕ್ಯಾಮರಾದಲ್ಲಿ ಸೆರೆಯಾಗುವ ಅಂದಿನ ವೀಡಿಯೋ ಗಳನ್ನು ಅಂದೇ ಸಂಬಂಧಿಸಿದವರು Social Media ದಲ್ಲಿ ಕಳುಹಿಸುವಂತಾಗಬೇಕು. ( Facebook ,YouTube ) .

ಏಕೆಂದರೆ ಈ ರೀತಿ ಮಾಡಿದರೆ ಶಾಲಾ ಕಾಲೇಜು ಗಳಿಗೆ ಅಂತ ನಗರ ,ಪಟ್ಟಣಗಳಿಗೆ ಬಂದು , ಪ್ರಮುಖವಾದ ಉದ್ದೇಶ ಮರೆತು , ಹುಚ್ಚು ಪ್ರೀತಿ ಪ್ರೇಮ ಎಂಬ ಗುಂಗಿನಲ್ಲಿ ಅಲೆದಾಡುತ್ತಿದ್ದರೆ ,ಅಂತಹವರ ಬಂಡವಾಳ ಬಯಲಾಗಿ ,ಅವರವರ ಕುಟುಂಬದವರಿಗೆ ಅಥವಾ ಸ್ನೇಹಿತರಿಗೆ ತಲುಪಿ , ಎಚ್ಚೆತ್ತುಕೊಳ್ಳುತ್ತಾರೆ.

ಆದರೆ ನಾವು ಎಲ್ಲದಕ್ಕೂ ಪೋಲಿಸರ ವೈಫಲ್ಯ ಎನ್ನಬಾರದು , ಅಥವಾ ಸರ್ಕಾರದ ವೈಫಲ್ಯ ಎನ್ನಬಾರದು .
ಈ ಪ್ರೀತಿ ಪ್ರೇಮ ಎಂಬುದು ಎರಡು ಕುಟುಂಬದ ಹುಡುಗ ಹುಡುಗಿಯರಿಗೆ ಸೇರಿದ ವೈಯಕ್ತಿಕ ವಿಚಾರ.

ಸಮಾಜ ತಿದ್ದುವ ಜವಾಬ್ದಾರಿ ನಮ್ಮೆಲ್ಲರ ಹೊಣೆ.

( ಬಾಬುಖಾನ್. ಪತ್ರಕರ್ತರು.)

Leave a Reply

Your email address will not be published. Required fields are marked *