ಕೊರಟಗೆರೆ :- ಕೋಳಾಲ ಹೋಬಳಿಯ ಚಿನ್ನಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಇಂದು ಚುನಾವಣೆ ನಡೆಯಿತು. ನೂತನ ಅಧ್ಯಕ್ಷರನ್ನಾಗಿ ತಾಲೂಕಿನ ದಂಡಾಧಿಕಾರಿ ಮಂಜುನಾಥ್ ರವರು ಚುನಾವಣಾ ವೀಕ್ಷಕರಾಗಿ ಚುನಾವಣೆ ನೆಡೆಸಿದರು.
ಚುನಾವಣೆಯಲ್ಲಿ ಓಟ್ಟು 14 ಸದಸ್ಯರ ಪೈಕಿ ತಿಮ್ಮಸಂದ್ರ ಗ್ರಾಮದ ಪಂಚಾಯ್ತಿ ಸದಸ್ಯರಾದ ಎ.ವಿಜಯ ರವರು ಅಧ್ಯಕ್ಷರ ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದ ರು. ಇವರನ್ನು ಬಿಟ್ಟು ಯಾರೂ ಕೂಡ ನಾಮಪತ್ರವನ್ನು ಸಲ್ಲಿಸದೆ ಇರುವುದರಿಂದ. ತಿಮ್ಮಸಂದ್ರ ಗ್ರಾಮದ ಎ. ವಿಜಯ ರವರನ್ನು ತಾಲೂಕಿನ ದಂಡಾಧಿಕಾರಿ ಮಂಜುನಾಥ್ ರವರು ಅಧ್ಯಕ್ಷ ಸ್ಥಾನವನ್ನು ಅವಿರೊಧವಾಗಿ ಆಯ್ಕೆ ಮಾಡಲಾಯಿತ್ತು.
ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಅಧ್ಯಕ್ಷೆ ಎ. ವಿಜಯ ಅವರು ಮಾತನಾಡಿ ಮೊದಲಿಗೆ ನನ್ನನ್ನು ಆಯ್ಕೆ ಮಾಡಿದ ಎಲ್ಲಾ ಸರ್ವ ಸದಸ್ಯರಿಗೆ ಹಾಗೂ ನಮ್ಮ ಭಾಗದ ಮುಖಂಡರಿಗೆ ಧನ್ಯವಾದಗಳನ್ನು ಸಲ್ಲಿಸುತ್ತಾ ನಮ್ಮ ಕುಟುಂಬ ರಾಜಕೀಯ ಜೀವನದಲ್ಲಿ ಮೂರನೇ ಬಾರಿ ನಮ್ಮ ಕುಟುಂಬಕ್ಕೆ ಅಧ್ಯಕ್ಷಗಿರಿ ಒಲಿದು ಬಂದಿದ್ದು ನನಗೆ ಸಂತೋಷದ ವಿಷಯ ಹಾಗೂ ನಾನು ಮುಂದಿನ ದಿನಗಳಲ್ಲಿ ಸರ್ಕಾರದಿಂದ ಬರುವ ಸವಲತ್ತುಗಳನ್ನು ಜನರಿಗೆ ಕೂಲಿ ಕಾರ್ಮಿಕರಿಗೆ ಜನರಿಗೆ ರಸ್ತೆ ಚರಂಡಿ ವ್ಯವಸ್ಥೆ ಕುಡಿಯುವ ನೀರು. ದಾರಿ ದ್ವೀಪ ಅದರಲ್ಲೂ ಅಂಗವಿಕಲರಿಗೆ ವಿದ್ಯಾರ್ಥಿಗಳಿಗೆ ಬರುವ ಸೌಲತ್ತುಗಳನ್ನು ಎಲ್ಲರಿಗೂ ತಲುಪಿಸುವ ಕೆಲಸ ಮಾಡುತ್ತೇನೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶ್ರೀಧರ್ ಗ್ರಾಮ ಪಂಚಾಯತಿ ಸದಸ್ಯರಾದ ಭಾಗ್ಯಮ್ಮ. ಸುಜಾತ ಎಂ. ನಾಗೇಂದ್ರ ಸಿ.ಎನ್. ಯಶೋದಮ್ಮ. ನರಸಿಂಹರಾಜು. ಅಶ್ವಥ್ ನಾರಾಯಣ.. ರವಿಕುಮಾರ್ ಎಸ್. ಹೆಚ್. ಗೀತಮ್ಮ. ರಂಗಯ್ಯ. ಛಾಯಾದೇವಿ. ನಾಗರಾಜು. ಜಯಣ್ಣ. ಜೆಡಿಎಸ್ ಮುಖಂಡರಾದ ದೇವರಾಜು. ವಿವೇಕ್. ಹರಿಶ್ಚಂದ್ರನ. ಗ್ರಾಮ ಪಂಚಾಯತಿ ಸಿಬ್ಬಂದಿ ವರ್ಗ ಹಾಗೂ ಮುಖಂಡರು ಹಾಜರಿದ್ದರು.