ದಿನಾಂಕ:03.05.2024 ರಂದು ಸಂಜೆ 4:30 ರಿಂದ 5:00 ಗಂಟೆ ಸಮಯದಲ್ಲಿ ಕೊಟ್ಟನಹಳ್ಳಿ ಗ್ರಾಮದ ತನ್ನ ವಾಸದ ಮನೆಯಲ್ಲಿ ಇದ್ದ ಸಿದ್ದನಂಜಮ್ಮ ರವರನ್ನು ಯಾರೋ ಕತ್ತು ಹಿಸುಕಿ ಕೊಲೆ ಮಾಡಿ. ಅವರ ಕೊರಳಿನಲ್ಲಿದ್ದ ಚಿನ್ನದ ಸರವನ್ನು ತೆಗೆದುಕೊಂಡು ಹೋಗಿರುತ್ತಾರೆ. ಪತ್ತೆ ಮಾಡಿ ಕಾನೂನು ರೀತ್ಯಾ ಕ್ರಮ ಕೈಗೊಳ್ಳುವಂತೆ ನೀಡಿದ ದೂರಿನ ಮೇರೆಗೆ ತುಮಕೂರು ಗ್ರಾಮಾಂತರ ಪೊಲೀಸ್ ಠಾಣಾ ಮೊ.ಸಂ:116/2024, ಕಲಂ: 302 ಐ.ಪಿ.ಸಿ ರೀತ್ಯಾ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತೆ.
ಸದರಿ ಪ್ರಕರಣದಲ್ಲಿ ಕೊಲೆ ಮಾಡಿರುವ ಆರೋಪಿಯನ್ನು ಪತ್ತೆ ಮಾಡಲು ತುಮಕೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಅಶೋಕ್ ಕೆ.ವಿ. ಐ.ಪಿ.ಎಸ್ ರವರ ಹಾಗೂ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳಾದ ವಿ ಮರಿಯಪ್ಪ ಮತ್ತು ಬಿ.ಎಸ್ ಅಬ್ದುಲ್ ಖಾದರ್ ಕೆ.ಎಸ್.ಪಿ.ಎಸ್ ರವರ ಸೂಚನೆ ಮತ್ತು ಮಾರ್ಗದರ್ಶನದಂತೆ ತುಮಕೂರು ಉಪವಿಭಾಗದ ಪೊಲೀಸ್ ಉಪಾಧೀಕ್ಷಕರಾದ ಕೆ.ಆರ್ ಚಂದ್ರಶೇಖರ್. ಕೆ.ಎಸ್.ಪಿ.ಎಸ್ ರವರ ನೇತೃತ್ವದಲ್ಲಿ ತುಮಕೂರು ಗ್ರಾಮಾಂತರ ವೃತ್ತ ನಿರೀಕ್ಷಕರಾದ ಅಮರೇಶ್ ಗೌಡ, ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆಯ ಪಿಎಸ್‌ಐ ಮೋಹನ್ ಎನ್ ಮತ್ತು ಸಿಬ್ಬಂದಿಯನ್ನೊಳಗೊಂಡ ತಂಡವನ್ನು ರಚಿಸಿದ್ದು, ಕಾರ್ಯಪ್ರವೃತ್ತವಾದ ತಂಡವು ದಿನಾಂಕ:07.05.2024 ರಂದು ಆರೋಪಿಯಾದ ನಂದೀಶ ಬಿನ್ ಶ್ರೀಧರ, 22 ವರ್ಷ. ವ್ಯವಸಾಯ. ಕೊಟ್ಟನಹಳ್ಳಿ, ಬೆಳ್ಳಾವಿ ಹೋಬಳಿ, ತುಮಕೂರು ತಾಲ್ಲೂಕು ರವರನ್ನು ದಸ್ತಗಿರಿ ಮಾಡಿ, ತನಿಖೆ ಕೈಗೊಂಡು ಸಿದ್ದನಂಜಮ್ಮ ರವರನ್ನು ಕೊಲೆ ಮಾಡಿ ತೆಗೆದುಕೊಂಡು ಹೋಗಿದ್ದ ಸು, 1.20,000/- ರೂ ಬೆಲೆ ಬಾಳುವ ಚಿನ್ನದ ಸರವನ್ನು ವಶಪಡಿಸಿಕೊಂಡು ಘನ ನ್ಯಾಯಾಲಯದ ಮುಂದೆ ಆರೋಪಿಯನ್ನು ಹಾಜರುಪಡಿಸಿದ್ದು, ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನಕ್ಕೆ ಆದೇಶಿಸಿರುತ್ತೆ.
ಕೊಲೆ ಪ್ರಕರಣವನ್ನು ಶೀಘ್ರವಾಗಿ ಭೇದಿಸಿದ ಪೊಲೀಸ್ ಉಪಾಧೀಕ್ಷಕರಾದ ಕೆ.ಆರ್ ಚಂದ್ರಶೇಖರ್ ನೇತೃತ್ವದ ತುಮಕೂರು ಗ್ರಾಮಾಂತರ ವೃತ್ತದ ಪೊಲೀಸ್ ನಿರೀಕ್ಷಕರಾದ ಅಮರೇಶ್ ಗೌಡ ಎ, ಪಿ.ಎಸ್.ಐ ಮೋಹನ್ ಎನ್. ಎ.ಎಸ್.ಐ ಮೋಹನ್ ಕುಮಾರ್. ಹೆಚ್.ಸಿ ನಾಗರಾಜು, ಈರಣ್ಣ ಜಿ, ಪಿಸಿ ರಮೇಶ್, ಫಕೃಸಾಬ್, ಪರಮೇಶ್, ಚಿದಾನಂದ ಕೆ.ಎನ್. ಮಧು ಹಾಗೂ ಜಿಲ್ಲಾ ಪೊಲೀಸ್ ಕಛೇರಿಯ ರಮೇಶ್ ಹಾಗೂ ನರಸಿಂಹರಾಜು ರವರ ತಂಡವನ್ನು ತುಮಕೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಅಶೋಕ್ ಕೆ.ವಿ. ಐ.ಪಿ.ಎಸ್ ರವರು ಶ್ಲಾಘಿಸಿದ್ದಾರೆ.
ಪ್ರಕಟಣೆ: ಜಿಲ್ಲಾ ಪೊಲೀಸ್ ಕಛೇರಿ, ತುಮಕೂರು ಜಿಲ್ಲೆ.