ಕೆರೆಯಲ್ಲಿ ಅಕ್ರಮವಾಗಿ ಮಣ್ಣು ಸಾಗಾಟ ಕಣ್ಣು ಮುಚ್ಚಿ ಕುಳಿತ ಅಧಿಕಾರಿಗಳು

ಪಾವಗಡ: ಪಳವಳ್ಳಿ ಕೆರೆಯಲ್ಲಿನ ಮಣ್ಣನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿರುವುದರಿಂದ ಕೆರೆಯಲ್ಲಿ ಬೆಳೆದಿರುವ ನೂರಾರು ಗಿಡಮರಗಳು ಬೀಳುವ ಹಂತ ತಲುಪಿದ್ದರು ಸಹಾ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದೆ ಕುಳಿತಿದ್ದಾರೆ ಎಂದು ಸಾರ್ವಜನಿಕರ ಆರೋಪವಾಗಿದೆ.

ತಾಲ್ಲೂಕಿನ ಪಳವಳ್ಳಿ ಕೆರೆಯಲ್ಲಿ ಅಕ್ರಮವಾಗಿ ಮಣ್ಣು ಸಾಗಾಟ ಮಾಡುತ್ತಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಕಣ್ಣು ಮುಚ್ಚಿ ಕುಳಿತಿದ್ದಾರೆ,

ಹಾಡಹಗಲೇ ರಾಜಾರೋಷವಾಗಿ ಇಲಾಖೆಯ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ ಅಧಿಕಾರಿಗಳ ಅನುಮತಿ ಪಡೆಯದೆ ಟ್ಯಾಕ್ಟರ್ ನಂಬರ್ KA 64 T 4103 ಹಾಗೂ ಜೆಸಿಬಿ ಬಳಸಿ ಸುಮಾರು ಲೋಡ್ ಕೆರೆಯ ಮಣ್ಣನ್ನು ಲೂಟಿ ಮಾಡುತ್ತಿದ್ದಾರೆ. ಕೆರೆಗಳಲ್ಲಿ 4 ಅಡಿಗಿಂತಲೂ ಆಳವಾಗಿ ಹಾಗೂ ನೇರವಾಗಿ ಮಣ್ಣು ತೆಗೆಯುವಂತಿಲ್ಲ. ಎಂಬ ಆದೇಶವಿದ್ದರು ಸಹ ಸರ್ಕಾರದ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಅನುಮತಿ ಹಾಗೂ ಪರವಾನಗಿ ಪಡೆಯದೆ ಮಣ್ಣು ತೆಗೆಯುವಂತಿಲ್ಲ. ಜೆಸಿಬಿಯಂತಹ ಭಾರಿ ಯಂತ್ರಗಳನ್ನು ಕೆರೆಗಳಿಗೆ ಇಳಿಸುವಂತಿಲ್ಲ. ಇಷ್ಟೆಲ್ಲಾ ನಿಯಮಗಳಿದ್ದರೂ ಕೆಲ ಪ್ರಭಾವಿಗಳಿಂದ ಅವ್ಯಾಹತವಾಗಿ ಮಣ್ಣು ತೆಗೆಯುವ ದಂಧೆ ಹೆಗ್ಗಿಲ್ಲದೆ ನಡೆಯುತ್ತಿದೆ.ಕೆರೆಯ ಮಣ್ಣು ಅಕ್ರಮ ಸಾಗಾಟ: ನಡೆಯುತ್ತಿದೆ,

ಜೆಸಿಬಿ ಚಾಲಕ ಮತ್ತು ಟ್ರ್ಯಾಕ್ಟರ್ ಚಾಲಕ ಇವರನ್ನು ವಿಚಾರಿಸಿದಾಗ ಕಾಂಟ್ರಾಕ್ಟರ್ ಅವರು ಹೇಳಿದ್ದಾರೆ
ನಾವು ಮನೆಗೆ ಏನು ಹೊಡಿಯುತ್ತಿಲ್ಲ
ರಸ್ತೆ ಬದಿಗೆ ನಾವು ಒಡೆಯುತ್ತಿದ್ದೇವೆ, ಎಂದು ಉಡಾಫೆ ಉತ್ತರ ನೀಡುತ್ತಿದ್ದಾನೆ, ರಸ್ತೆಗೆ ಒಡೆಯುವುದಕ್ಕೆ ಯಾವ ಅಧಿಕಾರಿಗಳಿಂದಲೂ ಅನುಮತಿ ಪಡೆಯುವಂತಿಲ್ಲ, ಎಂಬ ಬೇಜವಾಬ್ದಾರಿ ಮಾತುಗಳನ್ನಾಡುತ್ತಾನೆ.

ಇದರ ಬೆನ್ನೆಲೆ ಸಣ್ಣ ನೀರಾವರಿ ಇಲಾಖೆಯ ಚಿತ್ತಯ್ಯ ಎಂಬ ಅಧಿಕಾರಿಗೆ ದೂರವಾಣಿ ಮೂಲಕ ಕರೆ ಮಾಡಿದಾಗ ನಾವು ಯಾರಿಗೂ ಪರ್ಮಿಷನ್ ಕೊಟ್ಟಿಲ್ಲ ಎಂದು ಉತ್ತರ ನೀಡುತ್ತಾರೆ,

ನೀರಿನ ಬಹುಮುಖ್ಯ ಆಕರವಾಗಿದ್ದ ಕರೆಗಳು ಇಂದು ಭೂ ಮಾಫಿಯಾಕ್ಕೆ ಬಲಿಯಾಗಿವೆ. ಅಂತರ್ಜಲ ವೃದ್ಧಿಗೆ ಹೆಚ್ಚು ಸಹಕಾರಿಯಾಗಿದ್ದ ಕೆರೆಗಳು ಒತ್ತುವರಿ ಮತ್ತು ಮಣ್ಣಿನ ಅವೈಜ್ಞಾನಿಕ ಸಾಗಾಟಕ್ಕೆ ನಲುಗಿವೆ. ಇದರಿಂದ ಅಂತರ್ಜಲಮಟ್ಟ ಸಂಪೂರ್ಣವಾಗಿ ಕುಸಿಯುತ್ತಿದೆ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಇನ್ನಾದರೂ ಎಚ್ಚೆತ್ತುಕೊಂಡು ಇಂತಹ ಅಕ್ರಮ ಮಣ್ಣು ಸಾಗಾಟಕ್ಕೆ ಬ್ರೇಕ್ ಹಾಕುತ್ತಾರೆ ಇಲ್ಲವೇ ಎಂದು ಕಾದು ನೋಡಬೇಕಾಗುತ್ತದೆ.

ವರದಿ ಪಾವಗಡ ಕೆ ಮಾರುತಿ ಮುರಳಿ

Leave a Reply

Your email address will not be published. Required fields are marked *

error: Content is protected !!