ಪಾಲನಹಳ್ಳಿ ಮಠದ ಶ್ರೀ ಶನೇಶ್ಚರ ಸ್ವಾಮಿಯವರ ಜಾತ್ರಾ ಮತ್ತು ಶಿವರಾತ್ರಿ ಮಹೋತ್ಸವಕ್ಕೆ ಆಹ್ವಾನ

ರಾಮನಗರ ಜಿಲ್ಲೆ ಮಾಗಡಿ ತಾಲೂಕು ಸೋಲೂರು ಹೋಬಳಿಯ ಶ್ರೀ ಶನೇಶ್ಚರ ಸ್ವಾಮಿ ಕ್ಷೇತ್ರ ಪಾಲನಹಳ್ಳಿ ಮಠದ ಸಂಸ್ಥಾಪಕರು ಮಠ ಅಧ್ಯಕ್ಷರು ಆದ ಡಾ ಶ್ರೀ ಶ್ರೀ ಸಿದ್ದರಾಜು ಸ್ವಾಮೀಜಿಗಳು ಇದೇ ತಿಂಗಳು ದಿನಾಂಕ 15 ರಿಂದ 16 ರ ತನಕ ಶ್ರೀ ಕ್ಷೇತ್ರದಲ್ಲಿ ನಡೆಯುವ ಶ್ರೀ ಶನೇಶ್ಚರ ಸ್ವಾಮಿಯವರ ಜಾತ್ರಾ ಮತ್ತು ಶಿವರಾತ್ರಿ ಮಹೋತ್ಸವಕ್ಕೆ ತುಮಕೂರು ಜಿಲ್ಲೆಯ ಸಮಸ್ತ ಸಮುದಾಯದ ಭಕ್ತ ವೃಂದಕ್ಕೆ ಆಹ್ವಾನ ನೀಡಿದರು.

ತುಮಕೂರಿನ ಖಾಸಗಿ ಹೋಟೆಲ್ ನಲ್ಲಿ ತುಮಕೂರಿನ ಹಲವಾರು ಸಮುದಾಯದ ಮುಖಂಡರೊಂದಿಗೆ ಜಾತ್ರಾ ಮಹೋತ್ಸವದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು ಪಾಲನಹಳ್ಳಿ ಮಠದ ಶನೇಶ್ವರ ಸ್ವಾಮಿ ಕ್ಷೇತ್ರದಲ್ಲಿ ಸುಮಾರು ವರ್ಷಗಳಿಂದ ನಡೆದು ಬಂದ ಜಾತ್ರಾ ಮಹೋತ್ಸವದಲ್ಲಿ ಸಹಸ್ರರು ಭಕ್ತಾದಿಗಳ ಸಹಕಾರದಿಂದ ಹಲವಾರು ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿದ್ದು ಮುಂದಿನ ದಿನಗಳಲ್ಲಿಯೂ ಸಹ ಶ್ರೀ ಕ್ಷೇತ್ರದಿಂದ ನಾನಾ ರೀತಿಯ ಯೋಜನೆಗಳನ್ನು ಹಮ್ಮಿಕೊಂಡಿದ್ದು ಅದಕ್ಕೆ ಸಮಸ್ತ ಸಮುದಾಯದ ಭಕ್ತಾದಿಗಳ ಹಾಗೂ ಸಾರ್ವಜನಿಕರ ಸಹಕಾರ ಅತ್ಯಗತ್ಯವಾಗಿದೆ ಎಂದು ತಿಳಿಸಿದರು.

ಶ್ರೀ ಶನೇಶ್ವರ ಸ್ವಾಮಿ ಕ್ಷೇತ್ರಕ್ಕೂ ತುಮಕೂರಿಗೂ ಅವಿನಾಭವ ಸಂಬಂಧವಿದ್ದು ಈಗಾಗಲೇ ಸರಿ ಸುಮಾರು ಮೂರು ವರ್ಷಗಳಿಂದ ತುಮಕೂರು ಜಿಲ್ಲೆಯಲ್ಲಿ ಜಾತ್ರಾ ಮಹೋತ್ಸವದ ಪೂರ್ವಭಾವಿ ಸಭೆಯನ್ನು ಮಾಡುವ ಮೂಲಕ ಶ್ರೀ ಶನೇಶ್ವರ ಸ್ವಾಮಿಯವರ ಜಾತ್ರಾ ಮಹೋತ್ಸವವನ್ನು ಬಹಳ ವಿಜೃಂಭಣೆಯಿಂದ ಆಚರಿಸುತ್ತಾ ಬಂದಿದ್ದೇವೆ ಹಾಗಾಗಿ ಈ ಬಾರಿಯೂ ಸಹ ತುಮಕೂರಿನಿಂದ ಅತಿ ಹೆಚ್ಚಿನದಾಗಿ ಭಕ್ತಾದಿಗಳು ಭಾಗವಹಿಸುವ ಮೂಲಕ ಜಾತ್ರಾ ಮಹೋತ್ಸವವನ್ನು ಯಶಸ್ವಿಗೊಳಿಸಬೇಕೆಂದು ತುಮಕೂರು ಜಿಲ್ಲೆಯ ಸಮಸ್ತ ಭಕ್ತಾದಿಗಳಲ್ಲಿ ವಿನಂತಿ ಮಾಡುತ್ತಿದ್ದೇವೆ ಎಂದು ತಿಳಿಸಿದರು.

ಈ ಬಾರಿಯ ಜಾತ್ರಾ ಮಹೋತ್ಸವಕ್ಕೆ ರಾಜ್ಯದ ವಿವಿಧ ಭಾಗಗಳಿಂದ ಗಣ್ಯರು ಆಗಮಿಸುತ್ತಿದ್ದು ಅವರ ಸಮ್ಮುಖದಲ್ಲಿ ಶ್ರೀ ಶನೇಶ್ವರ ಸ್ವಾಮಿಯವರಿಗೆ ವಿವಿಧ ರೀತಿಯಾದ ಪೂಜಾ ವಿಧಿ ವಿಧಾನಗಳು ನಡೆಯಲಿದ್ದು

ಶ್ರೀ ಕ್ಷೇತ್ರದಲ್ಲಿ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಇದಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಬಂದು ಭಾಗವಹಿಸಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಕೋರುತ್ತಿದ್ದೇವೆ ಎಂದು ತಿಳಿಸಿದರು.

 

ಗಣ್ಯಾಮಾನ್ಯರ ಸಹಕಾರದಿಂದ ಶ್ರೀ ಕ್ಷೇತ್ರದ ಯೋಜನೆಗಳ ಮುಖ್ಯ ಉದ್ದೇಶವೇನೆಂದರೆ ಹಾರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಹಿಂದುಳಿದಿರುವ ಬಡ ಮಕ್ಕಳಿಗೆ ವಿದ್ಯಾಭ್ಯಾಸವನ್ನು ನೀಡುವ ಸಲುವಾಗಿ ವಿದ್ಯಾಸಂಸ್ಥೆಗಳನ್ನು ಸ್ಥಾಪಿಸಿ ಬಡ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸವನ್ನು ನೀಡುವ ಗುರಿಯನ್ನು ಹೊಂದಿದೆ ಹಾಗೂ ಆರೋಗ್ಯ ಕ್ಷೇತ್ರದಲ್ಲಿ ನಾನಾ ರೀತಿಯ ಆನಾರೋಗ್ಯ ಪೀಡಿತರಿಗೆ ಆಯುರ್ವೇದ ಆಸ್ಪತ್ರೆಯನ್ನು ತೆರೆಯುವ ಮೂಲಕ ಆರೋಗ್ಯ ಚಿಕಿತ್ಸೆಯನ್ನು ನೀಡುವ ಚಿಂತನೆ ಹೊಂದಿದ್ದು ಇದಕ್ಕೆ ಹೆಚ್ಚಿನ ಭಕ್ತಾದಿಗಳ ಸಹಕಾರವೂ ಕೂಡ ಅತ್ಯಗತ್ಯವಾಗಿದೆ ಎಂದು ತಿಳಿಸಿದರು.

 

ಶ್ರೀ ಶನೇಶ್ವರ ಸ್ವಾಮಿಯವರ ಜಾತ್ರಾ ಮತ್ತು ಶಿವರಾತ್ರಿ ಮಹೋತ್ಸವಕ್ಕೆ ಆಹ್ವಾನ ನೀಡಲು ತುಮಕೂರು ನಗರಕ್ಕೆ ಆಗಮಿಸಿದ ಪಾಲನಹಳ್ಳಿ ಮಠದ ಸಂಸ್ಥಾಪಕರು ಮಠಾಧ್ಯಕ್ಷರು ಆದ ಡಾ. ಶ್ರೀ ಶ್ರೀ ಸಿದ್ದರಾಜು ಸ್ವಾಮೀಜಿಯವರನ್ನು ತುಮಕೂರು ಜಿಲ್ಲೆಯ ಹಲವಾರು ಸಮುದಾಯದ ಹಿರಿಯ ಮುಖಂಡರು ಹಾಗೂ ಯುವ ಮುಖಂಡರುಗಳು ಡಾ. ಶ್ರೀ ಶ್ರೀ ಸಿದ್ದರಾಜು ಸ್ವಾಮೀಜಿಯವರಿಗೆ ಪುಷ್ಪಮಾಲೆಯನ್ನು ಹಾಕುವ ಮೂಲಕ ಗೌರವ ಸಮರ್ಪಣೆಯನ್ನು ಸಲ್ಲಿಸಿದರು.

ಗೌರವ ಸಮರ್ಪಣಾ ಕಾರ್ಯಕ್ರಮದಲ್ಲಿ ಸಮುದಾಯದ ಹಿರಿಯ ಮುಖಂಡರು ಮಾಜಿ ಶಾಸಕರಾದ ಗಂಗಾ ಹನುಮಯ್ಯನವರು ಹಾಗೂ ಕೆಂಚಮಾರಯ್ಯ, ವೈಎಚ್ ಹುಚ್ಚಯ್ಯ, ನರಸಿಯಪ್ಪ, ಜಯಕುಮಾರ್, ಬೆಳಗುಂಬ ವೆಂಕಟೇಶ್, ಮಾರುತಿ ಗಂಗಹನುಮಯ್ಯ, ಕೋಟ್ಟಶಂಕರ್, ವಕಿಲರಾದ ವೆಂಕಟೇಶ್,ಟಿ ಸಿ ರಾಮಯ್ಯ,ಮಲ್ಲಿಕ ಸಿ ಎಂ, ಪ್ರಕಾಶ್, ಹರೀಶ್ ಕುಮಾರ್, ಟಿ ಸಿ ಅಮರ್, ಮಾರುತಿ ಯೋಗೀಶ್ ಸೋರೆಕುಂಟೆ, ರಾಮಮೂರ್ತಿ, ಗ್ರಾ ಪಂ ಸದಸ್ಯ ರಂಗಸ್ವಾಮಿ, ಸಂತೋಷ್, ಮುಂತಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!