ಪಾವಗಡ : ತಾಲ್ಲೂಕು ಉಪ ನೋಂದಣಾಧಿಕಾರಿಗಳು ಜನರಲ್ಲಿ ಹಾಗೂ ರೈತರಲ್ಲಿ ಉತ್ತಮ ಬಾಂಧವ್ಯವಿಲ್ಲದೇ ನೋಂದಣಿಗೆ ಬರುವ ಸಾರ್ವಜನಿಕರನ್ನು ವಿನಾಕಾರಣ ಅಲೆಸುತ್ತಿದ್ದಾರೆ ಎಂದು ತಾಲೂಕು ರೈತ ಸಂಘದ ವತಿಯಿಂದ ಪ್ರತಿಭಟನೆ ನಡೆಸಿದರು.
ಪ್ರತಿಭಟನೆ ಉದ್ದೇಶಿಸಿ ತಾಲೂಕು ರೈತ ಸಂಘದ ಅಧ್ಯಕ್ಷ ನರಸಿಂಹ ರೆಡ್ಡಿ ಮಾತನಾಡಿ
ತಾಲೂಕು ನೊಂದಣಿ ಅಧಿಕಾರಿ ರಾಧಮ್ಮ ಇಲ್ಲಸಲ್ಲದ ಕಾನೂನುಗಳನ್ನು ಮುಂದಿಟ್ಟುಕೊಂಡು
ಸಾರ್ವಜನಿಕರಿಗೆ ಕೆಲಸವನ್ನು ಮಾಡಿಕೊಡದೆ
ಆಲಿಸುತ್ತಿದ್ದಾರೆ ಎಂದು ಆರೋಪಿಸಿದರು.
ಕಾನೂನು ರೀತ್ಯಾ ನೋಂದಣಿ ಹಣವನ್ನು ಕಟ್ಟಿದರೂ ಕಚೇರಿ ಮಾಮೂಲು ಕೊಡಬೇಕೆಂದು ಲಂಚಿದ ಹಣಕ್ಕಾಗಿ ಸಾಯಂಕಾಲದವರೆಗೂ ನೋಂದಣಿಯ ದಾಖಲೆಗಳನ್ನು ಕೊಡದೇ ಸತಾಯಿಸಿ ಲಂಚ ನೀಡುವವರೆಗೂ ಕೆಲಸವಾಗುವುದಿಲ್ಲ. ಕಾನೂನು ರೀತ್ಯಾ ಜನರು ಕೇಳಿದರೆ ತೊಘಲಕ್ ದರ್ಬಾರ್ ಮಾಡಿ ಬಾಯಿಗೆ ಬಂದಂತೆ ಮಾತನಾಡಿ ಜನರನ್ನು ಭಯಭೀತರನ್ನಾಗಿ ಮಾಡಿ ಬೆದರಿಕೆ ಹಾಕಿ ವಸೂಲಿ ಮಾಡುತ್ತಿದ್ದಾರೆ. ಈ ಅಧಿಕಾರಿಯು ನಾನೊಬ್ಬ ಸರ್ಕಾರಿ ನಾಕರರೆಂಬುದನ್ನು ಮರೆತು ಖಾಸಗಿ ವ್ಯಕ್ತಿಯಂತೆ ಕಾನೂನುಗಳನ್ನು ಗಾಳಿಗೆ ತೂರಿ ನೋಂದಣಿ ಕಚೇರಿಯನ್ನು ತನ್ನ ಸ್ವಂತ ವ್ಯಾಪಾರ ಸ್ಥಳವಾಗಿ ಪರಿವರ್ತಿಸಿದ್ದಾರೆ. ಸಮಯಕ್ಕೆ ಸರಿಯಾಗಿ ಕಚೇರಿಗೆ ಬರದೇ ತನ್ನದೇ ಆದ ಸಮಯಕ್ಕೆ ಬರುತ್ತಾರೆ. ಸಾರ್ವಜನಿಕರು ಕಾದು ಕುಳಿತುಕೊಳ್ಳಬೇಕಾಗಿದೆ. ಸಮಯ ಪಾಲನೆ ಕುರಿತು ಜನರು ಕೇಳಿದರೆ ನೀವು ಯಾರಿಗಾದರೂ ದೂರು ನೀಡಿ ನಾನು ಹೆದರುವುದಿಲ್ಲ. ಎಂಬುದಾಗಿ ಹೇಳುತ್ತಾರೆ.
ಈ ನೋಂದಣಿ ಕಚೇರಿಯಲ್ಲಿ ದಲ್ಲಾಳಿಗಳದ್ದೇ ಕಾರು-ಬಾದು ಆಗಿರುತ್ತದೆ. ಈ ಕಚೇರಿಯನ್ನು ಅನಾಮಧೇಯ ವ್ಯಕ್ತಿಗಳು ಬಾಗಿಲು ತೆಗೆದು ಅಭಿಲೇಖಾಲಯ ಅಥವಾ ದಾಖಲೆ ಕೊಠಡಿಯ ಖಾಸಗಿ ವ್ಯಕ್ತಿಗಳ ಆಧೀನದಲ್ಲಿರುತ್ತದೆ. ಯಾವುದೇ ಅಡ್ಡಿಯಿಲ್ಲದೇ ಹಗಲು-ರಾತ್ರಿ 24 ಗಂಟೆ ಬಗಿಲು ತೆಗೆದು ಸೋಲಾರ್ ಕಂಪನಿಗಳಿಗೆ ದಾಖಲೆಗಳನ್ನು ನೀಡಿ ಲಕ್ಷಾಂತರ ಲಂಬಿದ ಹಣವನ್ನು ಈ ಅಧಿಕಾರಿ ಪಡೆಯುತ್ತಿದಾರೆ:
ಯಾವುದೇ ದಾಖಲೆಗಳು ಬೇಕಾದರೆ ಲಂಚ ನೀಡಿಬೇಕು ಈ ಕಚೇರಿಯನ್ನು ನೋಂದಣಾಧಿಕಾರಿ ಬಿಟ್ಟರೆ ಯಾವುದೇ ಸರ್ಕಾರಿ ನೌಕರರಿಲ್ಲದೇ ಖಾಸಗಿ ವ್ಯಕ್ತಿಗಳಿಂದ ಕಚೇರಿ ನಡೆಸುತ್ತಿದ್ದಾರೆ. ಸಾವಿರಾಣು ಜನರು ಬರುವ ಈ ಕಚೇರಿಗೆ ಯಾವುದೇ ಭದ್ರತೆ ಇಲ್ಲ. ಕೋಟಿಗಟ್ಟಲೇ ವ್ಯವಹಾರ ನಡೆಯುವ ಜಾಗದಲ್ಲಿ ಸೀಸಿ ಕಮೆಂಟಗಳು ಇಲ್ಲ ಅಥವಾ ಸೆಕ್ಯೂರಿಟಿ ಇಲ್ಲ. ಕಚೇರಿಯಲ್ಲಿ ಸಾರ್ವಜನಿಕ ಸಾರ್ವಜನಿಕ ಶೌಚಾಲಯ ದುರ್ವಾಸನೆಯಿಂದ ಕೂಡಿರುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಜನರು ಈ ಅಧಿಕಾರಿಯ ಲಂಚದ ಕಾಟಕ್ಕೆ ಪಕ್ಕದ ಮಧುಗಿರಿ ತಾಲ್ಲೂಕಿನ ನೊಂದಣಿ ಕಚೇರಿಗೆ ಹೋಗಿ ನೋಂದಣಿ ಮಾಡಿಸಿಕೊಂಡು ಬರುತ್ತಿದ್ದಾರೆ. ಈ ನೋಂದಣಾಧಿಕಾರಿಯು ಸರ್ಕಾರಿ ಕೆಲಸ ಮಾಡದೇ ಯಾರ ಭಯವೂ ಇಲ್ಲದೇ ಲಂಚ ವಸೂಲಿ ಮಾಡಿ ಸಾರ್ವಜನಿಕರನ್ನು ರಕ್ತ ಹೀರುತ್ತಿದ್ದಾರೆ.
ಆದುದರಿಂದ ಸಂಬಂಧಪಟ್ಟ ತಾವು ಪಾವಗಡ ತಾಲ್ಲೂಕು ಉಪ ನೋಂದಣಾಧಿಕಾರಿಗಳಾದ ರಾಧಮ್ಮ ನವರನ್ನು ವರ್ಗಾವಣೆ ಗೊಳಿಸಬೇಕೆಂದು ರೈತ ಸಂಘದ ಮುಖಂಡರು ಜಿಲ್ಲಾ ಉಪ ನೊಂದಣಾಧಿಕಾರಿಯಾದ ಬಿ ಶ್ರೀಕಾಂತ್ ರವರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಪಾವಗಡ ತಾಲೂಕು ರೈತ ಸಂಘದ ಉಪಾಧ್ಯಕ್ಷ ಬಡನ್ನ, ಕಾರ್ಯದರ್ಶಿ ಕೊಂಡನ, ಸಹ ಕಾರ್ಯದರ್ಶಿ ವೇಣುಗೋಪಾಲ್, ಸದಸ್ಯರಾದ ವೀರಕ್ಯಾತಪ್ಪ, ಅಂಜಿನಪ್ಪ, ಶ್ರೀನಿವಾಸ್ ರೆಡ್ಡಿ,ನಾಗರಾಜು ಹನುಮಂತರೆಡ್ಡಿ ವೀರ ಹನುಮಪ್ಪ, ತಿಮ್ಮಯ್ಯ, ಗೋವಿಂದಪ್ಪ, ಮಧು, ಬಿ.ಕೆ ಹಳ್ಳಿ ಮೂಡಲಗಿರಿಯಪ್ಪ, ಸುಬ್ಬಣ್ಣ, ನರಸಿಂಹ, ಮಾಜಿ ಪುರಸಭಾ ಸದಸ್ಯ ಮನು ಮಹೇಶ್ , ರಮೇಶ್, ಮುಂತಾದರು ಹಾಜರಿದ್ದರು.