ಮಧುಗಿರಿ,. ಪ್ರತಿಯೊಬ್ಬ ವ್ಯಕ್ತಿಯ ಜೀವನ ಉಜ್ವಲವಾಗಬೇಕೆಂದರೆ ವಿದ್ಯೆ ಬಹು ಮುಖ್ಯ. ವಿದ್ಯೆ ಮಾತ್ರ ಮನುಷ್ಯನನ್ನು ಯಶಸ್ವಿ ವ್ಯಕ್ತಿಯನ್ನಾಗಿಸುತ್ತದೆ ಎಂದು ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಚಿತ್ತಯ್ಯ ತಿಳಿಸಿದರು.
ರಂಟವಳ ನಿವೇದಿತ ಆಂಗ್ಲ ಮಾಧ್ಯಮ ಶಾಲೆ ವಾರ್ಷಿಕೋತ್ಸವ ಸಮಾರಂಭದಲ್ಲಿ ಮಾತನಾಡಿ ಈ ಶಾಲೆ ಗಡಿಭಾಗದಲ್ಲಿ ಉತ್ತಮ ಹೆಸರನ್ನು ಗಳಿಸಿ ವರ್ಷದಿಂದ ವರ್ಷಕ್ಕೆ ಮಕ್ಕಳ ಕಲಿಕೆಯಲ್ಲಿ ಯಶಸ್ವಿಯನ್ನು ಕಂಡಿದೆ. ಕೇವಲ ವಿದ್ಯಾವಂತರಾಗಿ ಅಂಕಗಳಿದರಷ್ಟೇ ಸಾಲದು ಸಂಸ್ಕಾರವನ್ನು ಕಲಿತು ಪೋಷಕರ ಶ್ರಮಕ್ಕೆ ತಕ್ಕ ಪ್ರತಿಫಲ ತರುವಂತೆ ಆಗಬೇಕು ಎಂದು ತಿಳಿಸಿದರು.
ಪ್ರಧಾನ ಭಾಷಣಕಾರ ಹಿರಿಯ ಸಾಹಿತಿ ಪ್ರೊ.ಮ ಲ.ನ. ಮೂರ್ತಿ ಮಾತನಾಡಿ ಹಳ್ಳಿಗಳು ದೇಶದ ಬೆನ್ನೆಲುಬು ಅವು ಅಭಿವೃದ್ಧಿಯಾಗಲು ಮಕ್ಕಳಿಗೆ ಶಿಕ್ಷಣ ಅವಶ್ಯಕತೆ. ಶಿಕ್ಷಕರು ಅವರಿಗೆ ಕಲಿಸುವ ಅಕ್ಷರ ಅಸ್ತಿತ್ವ, ಆತ್ಮವಿಶ್ವಾಸ ಅರಿವು, ಅಂತ ಕರಣ ಅರಳಿಸುತ್ತದೆ. ದೇಶದ ಭವಿಷ್ಯದ ಭದ್ರತೆಗೆ ಬುನಾದಿಯಾಗುತ್ತದೆ. ಗಡಿ ಭಾಗದ ಈ ಶಾಲೆ ಅಕ್ಷರ ಸಂಪತ್ತಿನ ಅಕ್ಷಯನಿಧಿ. ಪೋಷಕರು ಆಡಳಿತ ಮಂಡಳಿ ಮತ್ತು ಶಿಕ್ಷಕರು ಒಟ್ಟುಗೂಡಿ ಶ್ರಮಿಸಿದರೆ ದಿವ್ಯದರ್ಶನ ಮಾಡಿಸಬಹುದು ಮಹಾನ್ ಸಾಧಕಿ ನಿವೇದಿತ ಹೆಸರು ಸಾರ್ಥಕ ಗೊಳಿಸಬಹುದು ಎಂದರು.
ಸ್ಥಳೀಯ ಗ್ರಾಮದ ನಿವೃತ್ತ ಯೋಧ ಮಂಜುನಾಥ್ ಮಾತನಾಡಿ ಪೋಷಕರು ಮಕ್ಕಳ ವಿದ್ಯಾಭ್ಯಾಸಕ್ಕೆ ಹೆಚ್ಚು ಆಸಕ್ತಿ ವಹಿಸುತ್ತಿರುವುದು ಶ್ಲಾಘನೀಯ ವಿದ್ಯಾಭ್ಯಾಸಕ್ಕಾಗಿ ಮಕ್ಕಳನ್ನು ಬಹು ದೂರದ ಶಾಲೆಗಳಿಗೆ ಕಳಿಸುವುದು ಸೇಫ ಅಲ್ಲ, ಲಭ್ಯವಿರುವ ಉತ್ತಮ ಶಾಲೆ ಆಯ್ಕೆ ಮಾಡಿ ಸ್ಥಳೀಯವಾಗಿ ತಮ್ಮ ಹಾರೈಕೆಯಲ್ಲಿ ಶಿಕ್ಷಣ ಕೂಡಿಸಿ ಅವರು ಕೇವಲ ಅಂಕ ಗಳಿಸುವ ಯಂತ್ರವಾಗದೆ ಪೋಷಕರ ಕಷ್ಟ ಸುಖ ಅರಿಯುವಂತಹ ಗುಣಗಳನ್ನು ಅವರಲ್ಲಿ ಬೆಳೆಸಿ ಶಾಲೆಗೆ ಮತ್ತು ಗ್ರಾಮಕ್ಕೆ ಹೆಸರು ತರುವಂತಹ ಗುಣ ಬೆಳೆಸಿ ಎಂದರು.
ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿ ಅಧ್ಯಕ್ಷ ಶಿವಣ್ಣ ಗ್ರಾಮ ಪಂಚಾಯಿತಿ ನಿಕಾಟರ್ಪೂರ್ವ ಅಧ್ಯಕ್ಷರುಗಳು ಸದಸ್ಯರುಗಳು ರೋಟರಿ ಅಧ್ಯಕ್ಷರುಗಳಾದ ಎಮ್ ಶಿವಲಿಂಗಪ್ಪ, ಜೀ ಜಯರಾಮಯ್ಯ ಹಾಗೂ ಗ್ರಾಮಸ್ಥರು ಇದ್ದರು