ಇತಿಹಾಸದ ಮರು ಸೃಷ್ಟಿಯತ್ತ ದಿಟ್ಟ ಹೆಜ್ಜೆ: ಮಹೇಶ್ ಪದವಿ ಪೂರ್ವ ಕಾಲೇಜು

ಪದವಿ ಪೂರ್ವ ಶಿಕ್ಷಣ ವಿಭಾಗದಲ್ಲಿ ತನ್ನದೇ ಆದ ವಿಶಿಷ್ಟ ಶೈಕ್ಷಣಿಕ ಸುಧಾರಣೆಯಿಂದ ತುಮಕೂರು ಜಿಲ್ಲೆಯಾದ್ಯಂತ ಸಾವಿರಾರು ವಿದ್ಯಾರ್ಥಿಗಳ ಭವಿಷ್ಯವನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿ ಇತಿಹಾಸ ಸೃಷ್ಟಿಸಿದ ಮಹೇಶ್ ಪಿಯು ಕಾಲೇಜು ಮತ್ತೆ ಇತಿಹಾಸದ ಮರು ಸೃಷ್ಟಿಯತ್ತ ದಿಟ್ಟ ಹೆಜ್ಜೆಯನ್ನು ಇಟ್ಟಿದೆ.

2012 ರಲ್ಲಿ ಕೇವಲ 173 ವಿದ್ಯಾರ್ಥಿಗಳ ಮೂಲಕ ಪ್ರಾರಂಭವಾದ ಮಹೇಶ್ ಪಿಯು ಕಾಲೇಜು 2019ರಲ್ಲಿ ತುಮಕೂರು ಜಿಲ್ಲೆಯಲ್ಲಿಯೇ 1200 ವಿದ್ಯಾರ್ಥಿಗಳನ್ನೊಳಗೊಂಡ ಎರಡು ಶಾಖೆಗಳು ಶೈಕ್ಷಣಿಕ ಕ್ರಾಂತಿಯನ್ನು ಮಾಡಿತು. ತದನಂತರದಲ್ಲಿ ಗುಪ್ತಗಾಮಿನಿಯಂತೆ ತನ್ನ ಸೇವೆಯನ್ನು ಮಾಡುತ್ತಾ ಬಂದಿರುವ ಮಹೇಶ್ ಪಿಯು ಕಾಲೇಜು ಜಿಲ್ಲೆಯಲ್ಲಿ ವಿನೂತನ ಶೈಕ್ಷಣಿಕ ಗುರಿಯನ್ನು ಸಾಧಿಸಲು ಸಜ್ಜಾಗಿದೆ.

ಪ್ರಾಂಶುಪಾಲರಾದ ಶ್ರೀಮತಿ ವಿದ್ಯಾ ಪಟೇಲ್ ಅವರು ಸಂಸ್ಥೆಯಲ್ಲಿ ವಿದ್ಯಾರ್ಥಿಗಳಿಗೆ ವಿಭಿನ್ನ ಶೈಲಿ ಶೈಕ್ಷಣಿಕ ನೀತಿಗಳನ್ನು ಸಿದ್ಧಪಡಿಸಿ, ಜಾರಿಗೊಳಿಸುತ್ತಿದ್ದಾರೆ. ವಿಜ್ಞಾನ ವಿಭಾಗದಲ್ಲಿ ಹೆಸರು ಮಾಡಿದ್ದ ಕಾಲೇಜಿನಲ್ಲಿ ಇದೀಗ ವಾಣಿಜ್ಯ ವಿಭಾಗನ್ನು ಕೂಡ ತೆರೆದಿದ್ದು, ಪೋಷಕರಿಂದ ಉತ್ತಮ ಪ್ರತಿಕ್ರಿಯೆ ಬರುತ್ತಿದೆ ಎಂದು ಅವರು ತಿಳಿಸಿದರು.

ಉಚಿತ ಶಿಕ್ಷಣ: ಜಿಲ್ಲೆಗೆ ಪ್ರಥಮ ರ್ಯಾಂಕ್ ಪಡೆದ ವಿದ್ಯಾರ್ಥಿಗೆ, ಅನಾಥ ಮಕ್ಕಳಿಗೆ ಹಾಗೂ ಕೋವಿಡ್‌ನಿಂದ ತಂದೆ ತಾಯಿ ಕಳೆದುಕೊಂಡ ಅನಾಥ ಮಕ್ಕಳಿಗೆ ಹಾಸ್ಟೆಲ್ ಸಹಿತ ಉಚಿತ ಶಿಕ್ಷಣ ಹಾಗೂ ಶೇ.95ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದ ಮೊದಲು ಮೂರು ವಿದ್ಯಾರ್ಥಿನಿಯರುಗಳಿಗೆ ಹಾಸ್ಟೆಲ್ ರಹಿತ ಉಚಿತ ಶಿಕ್ಷಣವನ್ನು ಪ್ರಾಂಶುಪಾಲರಾದ ಶ್ರೀಮತಿ ವಿದ್ಯಾ ಪಟೇಲ್ ಅವರು ಘೋಷಿಸಿದ್ದಾರೆ.

ಬ್ಯಾಟರಿ: EWS (ಆರ್ಥಿಕ ವ್ರೆಕರ್ಸ್ ವಿಭಾಗ) 2 4 2

ಶುಲ್ಕದಲ್ಲಿ ರಿಯಾಯಿತಿ ಹಾಗೂ ಒಬ್ಬರೆ ಪೋಷಕರು ಇರುವ ಹೆಣ್ಣುಮಕ್ಕಳಿಗೆ ಕಾಲೇಜು ಶುಲ್ಕದಲ್ಲಿ ಶೇ. 50 ರಷ್ಟು ರಿಯಾಯಿತಿಯನ್ನು ಪಡೆಯಬಹುದಾಗಿದೆ.

ಮೀಸಲಾತಿ ಶಿಕ್ಷಣ: ಎಸ್‌.ಸಿ, ಎಸ್.ಟಿ, ಓ.ಬಿ.ಸಿ (SC, ST and OBC) ವಿದ್ಯಾರ್ಥಿಗಳಿಗೆ ಮೀಸಲಾತಿಯಲ್ಲಿ ರಿಯಾಯಿತಿ, ಅಂಗವಿಕಲ ವಿದ್ಯಾರ್ಥಿಗಳಿಗೆ ಕಾಲೇಜು ಶುಲ್ಕದಲ್ಲಿ ಶೇ.50 ರಷ್ಟು ರಿಯಾಯಿತಿಯನ್ನು ಕೊಡಲಾಗುವುದು ಎಂದು ತಿಳಿಸಿದ್ದಾರೆ.

ಕಾಲೇಜಿನಲ್ಲಿ ನೀಟ್‌ (NEET), ಜೆಇಇ (JEE) ಹಾಗೂ ಕೆಸಿಇಟಿ (KCET)ಗೂ ಕೂಡ ಬೋಧನೆಯನ್ನು ನೀಡುತ್ತಿದ್ದು 2019ರಲ್ಲಿ ಜಿಲ್ಲೆಯ ಇತಿಹಾಸದಲ್ಲಿ ಪ್ರಪ್ರಥಮ ಬಾರಿಗೆ ನೀಟ್ (NEET) ನಲ್ಲಿ 720ಕ್ಕೆ 645ಅಂಕಗಳನ್ನು (ವರುಣ್ ಆರ್, ಬಿ.ಎಂ.ಸಿ (BMC) ಯಲ್ಲಿ ಅಧ್ಯಯನ ಮಾಡುತ್ತಿದ್ದಾನೆ.) ಪಡೆದ ಏಕೈಕ ಕಾಲೇಜು ಮಹೇಶ್ ಪಿಯು ಕಾಲೇಜು ಆಗದೆ ಎಂದರು. ಹಾಗೂ ಐಐಟಿ (ಆದರ್ಶ), ಎನ್‌ಐಟಿ (ರಕ್ಷಿತ್ ಗೌಡ) ಗೆ ಪ್ರವೇಶಾತಿಯನ್ನು ಪಡೆದಿದ್ದು ಹಾಗೂ ಜಿಲ್ಲೆಯ ಪ್ರತಿಷ್ಠಿತ ಕಾಲೇಜು ಆದ ಎಸ್‌ಐಟಿ (SIT) ಯಲ್ಲಿ ಪ್ರತಿವರ್ಷ ಸುಮಾರು ಶೇ.10 ರಷ್ಟು ವಿದ್ಯಾರ್ಥಿಗಳು ದಾಖಲಾತಿಯನ್ನು ಪಡೆಯುವ ಅತ್ಯುತ್ತಮ ಕಾಲೇಜು ಇದಾಗಿದ್ದು ಜಿಲ್ಲೆಯಲ್ಲ ಹಲವು ಪ್ರಥಮಗಳಿಗೆ ಕಾರಣವಾಗಿದೆ.

ಕಳೆದ 12 ವರ್ಷಗಳಿಂದ ಜಿಲ್ಲೆಯಲ್ಲಿ ಶೈಕ್ಷಣಿಕ ಸೇವೆಯನ್ನು ಮುಂದುವರೆಸುತ್ತಿರುವ ಪೋಷಕರ ಹಾಗೂ ವಿದ್ಯಾರ್ಥಿಗಳ ನಂಬಿಕಾರ್ಹ ಕಾಲೇಜು ಇದಾಗಿದೆ. ಇನ್ನು ಮುಂದೆಯು ಕೂಡ ವಿಜ್ಞಾನ ಹಾಗೂ ವಾಣಿಜ್ಯ ಕ್ಷೇತ್ರದಲ್ಲಿ ಮತ್ತೊಮ್ಮೆ ಇತಿಹಾಸವನ್ನು ಮರು ಸೃಷ್ಟಿ ಮಾಡುವತ್ತಾ ದಾಪುಗಾಲು ಇಟ್ಟಿದ್ದೇವೆ ಎಂದು ಶ್ರೀಮತಿ ವಿದ್ಯಾ ಪಟೇಲ್ ಅವರು ತಿಳಿಸಿರುತ್ತಾರೆ. ಪೋಷಕರು ಸಂಪರ್ಕಿಸಬೇಕಾದ ವಿಳಾಸ: ಮಹೇಶ್ ಪಿಯು ಕಾಲೇಜು 8ನೇ ಕ್ರಾಸ್, ಅಶೋಕನಗರ, ಎಸ್‌ಐಟಿ ಬಡಾವಣೆ, ತುಮಕೂರು 575103. ಫೋನ್ ನಂಬರ್: 6366996079, 6366996130, 8546996079, 8546996130.

Leave a Reply

Your email address will not be published. Required fields are marked *