ತಾಂತ್ರಿಕ ದೋಷದಿಂದಾಗಿ ಜಾತಿಗಣತಿ ವಿಳಂಬ ಸಮುದಾಯಕ್ಕೆ ಅನ್ಯಾಯ: ಕಾಲಾವಕಾಶ ಹೆಚ್ಚಿಸಲು ಮುಖಂಡರಿಂದ ಜಿಲ್ಲಾಡಳಿತಕ್ಕೆ ಒತ್ತಾಯ.

 

ಮಧುಗಿರಿ: ಸರ್ಕಾರ ಮಾಡಿರುವ ಒಳ ಮೀಸಲಾತಿ ವರ್ಗೀಕರಣದ ಮನೆ ಮನೆ ಭೇಟಿ ಗಣತಿ ಕಾರ್ಯಕ್ರಮ ಜಿಲ್ಲಾಡಳಿತದ ವತಿಯಿಂದ ಕಾಟಾಚಾರದ ಜಾತಿ ಗಣತಿಯಾಗಿದೆ ನಿಖರವಾದ ಗಣತಿಯಾಗಿಲ್ಲವೆಂದು ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ದೊಡ್ಡೇರಿ ಕಣಿಮಯ್ಯ ಆರೋಪಿಸಿದ್ದಾರೆ.

ಪಟ್ಟಣದ ಪ್ರವಾಸಿಮಂದಿರದಲ್ಲಿ ದಲಿತ ಸಂಘಟನೆ ಹಾಗೂ ಆದಿಜಾಂಭವ ಮಹಾಸಭಾ ಸಂಘಟನೆಗಳ ವತಿಯಿಂದ ಆಯೋಜಿಸಲಾಗಿದ್ದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಕಾಟಾಚಾರಕ್ಕೆ ಒಳಮೀಸಲಾತಿ ಜಾತಿಗಣತಿ ನಡೆಸುತ್ತಿದ್ದು ಪರಿಶಿಷ್ಟ ಜಾತಿಗೆ ಸೀಮಿತಗೊಳಿಸಿ ಮೇ 5 ರಿಂದ 17ರವರೆಗೆ ರಾಜ್ಯ ಸರ್ಕಾರ ಜಾತಿಗಣತಿ ಕಾರ್ಯವನ್ನು ನಡೆಸುತ್ತಿದೆ. ಈ ಅವಧಿಯಲ್ಲಿ ಗೊಂದಲಕ್ಕೆ ಅವಕಾಶ ನೀಡದೆ ಮಾದಿಗ ಸಮುದಾಯದವರು ಕಡ್ಡಾಯವಾಗಿ ಜಾತಿ ಕಾಲಂನಲ್ಲಿ ಮಾದಿಗ ಎಂದೇ ನಮೂದಿಸುವಂತೆ ಎಲ್ಲಾ ಮಾದಿಗ ಮುಖಂಡರು ಕರೆ ನೀಡಿದ್ದಾರೆ.

ಈ ಜಾತಿ ಗಣತಿ ಕಾರ್ಯ ಅವೈಜ್ಞಾನಿಕವಾಗಿದೆ ಅಕ್ಕಿನೂ ಮುಗಿಬಾರದು – ಮಕ್ಕಳು ಬಡವಾಗಬಾರದು ಎನ್ನುವಂತ ಸರ್ಕಾರದ ಆದೇಶ ಸಮಂಜಸವಾಗಿರುವುದಿಲ್ಲ, ಯಾಕೆಂದರೆ ಗ್ರಾಮೀಣ ಭಾಗದಲ್ಲಿ ನಿರೀಕ್ಷಿತ ಮಟ್ಟದಲ್ಲಿ ಜಾತಿಗಣತಿ ಆಗುತ್ತಿಲ್ಲ, ಹಾಗೂ ಮುಖ್ಯವಾಗಿ ಸರ್ವರ್ ಸಮಸ್ಯೆ ಎಂದು ಶಿಕ್ಷಕರುಗಳು ಒಂದು ಊರಿನಲ್ಲಿ ಕೇವಲ 2 ರಿಂದ 3 ಮನೆಗಳಿಗೆ ಭೇಟಿ ಕೊಟ್ಟು ವಾಪಸ್ ಆಗುತ್ತಿದ್ದಾರೆ. ಹಾಗೆಯೇ ತರಬೇತಿ ಇಲ್ಲದ ಬಿ ಎಲ್ ಓ ಗಳನ್ನು, ಟೀಚರ್ ಗಳನ್ನು ನೇಮಿಸಿ ಇಂಥವರಿಂದ ದಿನಕ್ಕೆ 10 ಕುಟುಂಬದ ಗಣತಿಯನ್ನು ಪೂರೈಸುತ್ತಿಲ್ಲ. ಇಲ್ಲಿಯವರೆಗೂ ಜಿಲ್ಲೆಯಾದ್ಯಂತ 10 ತಾಲೂಕಿನ ಪೈಕಿ ಕೇವಲ 248 ಗ್ರಾಮಗಳನ್ನು ತಲುಪಿದ್ದಾರೆ. ಹಾಗಾಗಿ ಕಾಣದವರ ಕೈಗೊಂಬೆಯಂತೆ ಜಿಲ್ಲಾಧಿಕಾರಿಗಳು ಕೆಲಸ ಮಾಡುತ್ತಿದ್ದಾರೆಂದು ನಮಗೆ ಅನುಮಾನ ಜೊತೆಗೆ ಮತ್ತೊಂದಷ್ಟು ದಿನಗಳ ಅವಧಿ ನೀಡಿ ಸೂಕ್ತ ತರಬೇತಿ ಪಡೆದ ತಂಡವನ್ನು ಜಾತಿ ಗಣತಿಗೆ ಕಳುಹಿಸಬೇಕು. ಇಲ್ಲದಿದ್ದಲ್ಲಿ ಮತ್ತೊಮ್ಮೆ ಉಗ್ರ ಹೋರಾಟಕ್ಕೆ ನಾವು ಸಿದ್ಧ ಎಂದು ಕಿಡಿ ಕಾರಿದರು.

ಆದಿಜಾಂಭವ ಮಹಾಸಭಾ ತಾಲ್ಲೂಕು ಅಧ್ಯಕ್ಷ ಮಹರಾಜು ಮಾತನಾಡಿ ಮಧುಗಿರಿ ತಾಲೂಕಿನಲ್ಲಿ ನಮ್ಮ ಜಾತಿಯ ಕುಟುಂಬಗಳ ಸಂಖ್ಯೆಗೆ ಅನುಗುಣವಾಗಿ ಗಣತಿದಾರರನ್ನು ನೇಮಿಸಿಲ್ಲ ಇದುವರೆಗೂ ಕೆಲವು ಹಳ್ಳಿಗಳಿಗೆ ಗಣತಿದಾರರು ಇನ್ನೂ ಸಹ ತಲುಪಿಲ್ಲ ಗಣತಿ ಮಾಡುವ ಸಂದರ್ಭಗಳಲ್ಲಿ ಸರ್ಕಾರ ನೀಡಿರುವ ಅ್ಯಪ್ ನಲ್ಲಿ ಬಹಳಷ್ಟು ತಾಂತ್ರಿಕ ಸಮಸ್ಯೆಗಳು ಕಂಡು ಬರುತ್ತಿದ್ದು ರೇಷನ್ ಕಾರ್ಡ್ ದಾಖಲಿಸಿದಾಗ ಬೇರೆ ಜಾತಿ ತೋರಿಸುತ್ತಿದ್ದು ಮಧುಗಿರಿ ಆಯ್ಕೆ ಮಾಡಿದರೆ ಕೊರಟಗೆರೆ ತಾಲ್ಲೂಕಿನ ಊರುಗಳು ತೋರಿಸುತ್ತದೆ ಕೆಲವು ಬಾರಿ ಎಸ್.ಸಿ ಅಲ್ಲ ಎಂದು ತೋರಿಸುತ್ತದೆ ಹೀಗೆ ಸಾಕಷ್ಟು ತಾಂತ್ರಿಕ ದೋಷಗಳು ಕಂಡುಬರುತ್ತಿದ್ದು ಎಲ್ಲಿಯೂ ಸಹ ಗಣತಿಕಾರ್ಯ ಸರಿಯಾದ ಕ್ರಮದಲ್ಲಿ ನಡಯದೆ ಹಿನ್ನಡೆಯಾಗುತ್ತಿದೆ ತಾಲೂಕು ಆಡಳಿತ ಮತ್ತು ಜಿಲ್ಲಾಡಳಿತ ಅತ್ಯುತ್ತಮ ತರಬೇತುದಾರರನ್ನು ಸರ್ವೆ ಕಾರ್ಯಕ್ಕೆ ಕಳುಹಿಸಬೇಕಿತ್ತು ಗಣತಿದಾರರಿಗೆ ವೋಟರ್ ಲೀಸ್ಟ್,ಬ್ಯಾಗ್, ಹೀಗೆ ಸೂಕ್ತ ಪರಿಕರಗಳನ್ನು ಒದಗಿಸಿಲ್ಲ ಬಿಸಿಲಿನಲ್ಲಿ ಅಲೆಯುವ ಅವರಿಗೆ ಕನಿಷ್ಠ ಟೋಪಿಗಳು ನೀಡದೆ ತಾತ್ಸಾರ ಮಾಡುತ್ತಿದ್ದಾರೆ. ತಾಂತ್ರಿಕವಾಗಿ ಸರಿಯಲ್ಲದ ಸರ್ವೆಕಾರ್ಯ ನಮಗೆ ಬೇಕಿಲ್ಲ, ಬದಲಾಗಿ ನಿಮ್ಮ ತಾಂತ್ರಿಕ ದೋಷಗಳನ್ನು ಸರಿಪಡಿಸಿಕೊಂಡು ತದನಂತರ ಈ ಸರ್ವೆ ಕಾರ್ಯವನ್ನು ಕೈಗೊಳ್ಳಬೇಕು ತಾಲ್ಲೂಕಿನಾದ್ಯಂತ ಗಣತಿ ವಿಚಾರವಾಗಿ ತುಂಬಾ ದೂರುಗಳು ಕೇಳಿ ಬರುತ್ತಿದ್ದು ಕೆಲವು ಗಣತಿದಾರರು ಅವಿಧ್ಯಾವಂತ ಕುಟುಂಬಳಿಗೆ ಉದ್ದೇಶವಾಗಿ ನಿಮ್ಮನ್ನು ಮೊದಲು ಆದಿಕರ್ನಾಟಕ ಎಂದು ಕರೆಯುತ್ತಿದ್ದರು ಅಲ್ಲವೇ ಎಂದು ದಿಕ್ಕುತಪ್ಪಿಸಿ ಗಣತಿಯ ಮಾರ್ಗವನ್ನೇ ಅನುಸರಿಸದೆ ಯಾಮಾರಿಸುತ್ತಿರುವುದು ನಮಗೆ ಇನ್ನಷ್ಟು ಅನುಮಾನಗಳು ಸೃಷ್ಟಿಸುತ್ತಿವೆ ಕೆಲವು ಗಣತಿದಾರರು ಸರ್ವರ್ ಸಮಸ್ಯೆಯಿಂದ ತೊಂದರೆಯಾಗುತಿದೆ ನಮಗೆ ಲಿಖಿತವಾಗಿ ಬರೆದು ಗಣತಿ ಮಾಡಲು ಅವಕಾಶಕೊಡಿ ಒಂದು ವಾರದಲ್ಲಿ ಗಣತಿ ಮುಗಿಸಿಕೊಡುತ್ತೇವೆ ಎನ್ನುತ್ತಿದ್ದಾರೆ ಒಟ್ಟಾರೆ ಇವೆಲ್ಲಾ ನೋಡುತ್ತಿದ್ದರೆ ಸರ್ವರ್ ಸಮಸ್ಯೆಯೇ ಗಣತಿ ಕಾರ್ಯಕ್ಕೆ ತೊಂದರೆಯಾಗಿದ್ದು ನಮ್ಮ ಜಾತಿಯ ನಿಖರ ಹಾಗೂ ಸಂಪೂರ್ಣ ಗಣತಿಗೆ ಇನ್ನಷ್ಟು ದಿನಗಳನ್ನು ಹೆಚ್ಚಿಸಿ ಸಾಮಾಜಿಕವಾಗಿ ನೊಂದು-ಬೆಂದಿರುವ ನಮ್ಮ ಜನಾಂಗಕ್ಕೆ ಒಳಮೀಸಲಾತಿಯಲ್ಲಿ ನ್ಯಾಯ ಸಿಗುವಂತೆ ಪಾರದರ್ಶಕವಾಗಿ ಗಣತಿ ಮಾಡುವಲ್ಲಿ ಜಿಲ್ಲಾಡಳಿತ ಎಚ್ಚೆತ್ತುಕೊಂಡು ಸರ್ವೆ ಕಾರ್ಯ ಮಾಡಬೇಕು ಒಂದುವೇಳೆ ಗಣತಿಯಲ್ಲಿ ಅನ್ಯಾಯವಾದರೆ ನಮ್ಮ ಜನಾಂಗವು ಮತ್ತೆ ಹೋರಾಟದ ಹಾದಿ ಹಿಡಿಯಬೇಕಾಗುತ್ತದೆ ಎಂದು ಎಚ್ಚರಿಸಿದರು.

 

ಸಮುದಾಯದ ಯುವ ಮುಖಂಡ ರಂಟವಳಲು ಮುಂಜುನಾಥ್ ಮಾತನಾಡಿ ಒಳಮೀಸಲಾತಿಗಾಗಿ ರಾಜ್ಯ ಹಾಗೂ ರಾಷ್ಟ್ರದ ಮಟ್ಟದಲ್ಲಿ ನಮ್ಮ ಸಮುದಾಯವು ಕಳೆದ ನಾಲ್ಕು ದಶಕಗಳಿಂದ ಹೋರಾಟ ಮಾಡುತ್ತ ಬಂದಿದೆ ನಮ್ಮ ಜನಾಂಗವೇ ಮೊಟ್ಟಮೊದಲ ಬಾರಿಗೆ ಒಳಮೀಸಲಾತಿಗಾಗಿ ಹೋರಾಟ ಮಾಡುತ್ತ ಬಂದಿರುವುದು ಈಗ ಕೆಲವರು ನಾವು ಎಸ್.ಸಿ ಎಂದು ಬಿಂಬಿಸಲು ಹೊರಟಿದ್ದಾರೆ ನಮ್ಮ ಅಸ್ಪೃಶ್ಯ ಜಾತಿಗೆ ಸೂಕ್ತ ನ್ಯಾಯ ಒದಗಿಸಿಕೊಡುವಂತಹ ಸರ್ವೆ ಕಾರ್ಯ ಆಗಬೇಕು ಪ್ರತಿದಿನವೂ ಸರ್ವರ್ ಸಮಸ್ಯೆಗಳು ಹೆಚ್ಚಾಗುತ್ತಿದ್ದು,ಇಲಾಖೆಯ ಅಧಿಕಾರಿಗಳು ಅಸ್ಪೃಶ್ಯರನ್ನು ಗೋಳು ಹೊಯ್ದುಕೊಳ್ಳುತ್ತಿದ್ದಾರೆ ಒಬ್ಬ ಅಧಿಕಾರಿಯು ಸಹ ಯಾವ ಹಳ್ಳಿಗಳಿಗೂ ಭೇಟಿ ನೀಡಿಲ್ಲ. ಈ ಕೂಡಲೇ ಎಲ್ಲಾ ತೊಡಕುಗಳನ್ನು ಸರಿಪಡಿಸಿ ಗಣತಿ ಮಾಡುವಾಗ ಗಣತಿದಾರರು ಓಟಿಪಿ ನಿಯಮ ಪಾಲಿಸಿದರೆ ಸೂಕ್ತ ಏಕೆಂದರೆ ಓಟಿಪಿ ಬಂದರೆ ನಾವುಗಳು ಕೊಟ್ಟ ಮಾಹಿತಿ ಚೆಕ್ ಮಾಡಿಕೊಳ್ಳಬಹುದು ಒಂದುವೇಳೆ ಸರಿಯಿಲ್ಲದಿದ್ದರೆ ಸರ್ಕಾರ ನಿಗದಿಪಡಿಸಿರುವ ಆಯೋಗಕ್ಕೆ ದೂರು ನೀಡಬಹುದು ಎಂದರು.

ಸುದ್ದಿಗೋಷ್ಠಿಯಲ್ಲಿ ಆದಿಜಾಂಭವ ಸಮುದಾಯದ ಮುಖಂಡರುಗಳಾದ ಎಂ.ಸಿ.ರಾಮಣ್ಣ, ಹೆಚ್.ಎಂ.ಟಿ ನರಸೀಯಪ್ಪ,ಸಿದ್ದಾಪುರಎಸ್.ಎನ್.ಹನುಮಂತರಾಯಪ್ಪ,ಬ್ರಹ್ಮದೇವರಹಳ್ಳಿ ತಿಪ್ಪೇಸ್ವಾಮಿ, ಕವಣದಾಲ ಮಾಜಿ.ಗ್ರಾ.ಪಂ.ಅಧ್ಯಕ್ಷ ರಂಗನಾಥ್, ಎಂ.ವೈ.ಶಿವಕುಮಾರ್, ನಟರಾಜು,ಮಾಜಿ.ಗ್ರಾ.ಪಂ.ಸದಸ್ಯ ರಂಗಪ್ಪ,ನವೀನ್.ಎಂ.ಎನ್.ಹಳ್ಳಿ.ಮಿಡಿಗೇಶಿ ಮಂಜುನಾಥ್, ಕೃಷ್ಣಪ್ಪ, ಹನುಮಂತರಾಯಪ್ಪ,ವೆಂಕಟೇಶ್, ಎಂ.ಎನ್.ನರಸಿಂಹರಾಜು,ಸಿದ್ದೇಶ್,ರಂಗನಾಥ್, ಹಾಗೂ ವಿವಿಧ ಸಂಘಟನೆಗಳ ಮುಖಂಡರು ಉಪಸ್ಥಿತರಿದ್ದರು

Leave a Reply

Your email address will not be published. Required fields are marked *

error: Content is protected !!