ಮಧುಗಿರಿ:ಮುಖ್ಯಮಂತ್ರಿ ಸಿದ್ದರಾಮಯ್ಯನವರು ಚುನಾವಣೆಗೂ ಮೊದಲು ಕೊಟ್ಟ ಭರವಸೆಯಂತೆ ಒಳಮೀಸಲಾತಿ ಜಾರಿ ಮಾಡುತ್ತಾರೆಂಬ ವಿಶ್ವಾಸವಿದೆ ಎಂದು ಚಿತ್ರದುರ್ಗದ ಮಾದಾರ ಚೆನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮಿಜೀ ಅಭಿಪ್ರಾಯ ವ್ಯಕ್ತಪಡಿಸಿದರು.
ತಾಲ್ಲೂಕಿನ ಕಸಬಾ ಹೋಬಳಿಯ ಜಡೇಗೊಂಡನಹಳ್ಳಿ ಬಳಿ ಇರುವ ನಿವೃತ್ತ ಅಪಾರ ಜಿಲ್ಲಾಧಿಕಾರಿ ಈರಪ್ಪನವರ ಮನೆಗೆ ಭೇಟಿ ನೀಡಿ ಆಶೀರ್ವದಿಸಿ ಮಾತನಾಡಿದ ಅವರು
ಒಳಮೀಸಲಾತಿ ವಿಚಾರವಾಗಿ ಚರ್ಚೆ ನಡೆಸಿದ ಶ್ರೀಗಳು ಎಬಿಸಿಡಿ ವರ್ಗೀಕರಣ ಜಾರಿ ವಿಳಂಭವಾಗುತ್ತಿದ್ದು ಜಾತಿವಾರು ಅಂಕಿಅಂಶ ಪರಿಶಿಷ್ಟ ಜಾತಿಯಲ್ಲಿ ಯಾವ ಯಾವ ಜಾತಿಗಳು ಎಷ್ಟು ಪರ್ಸೇಂಟ್ ಇದಾವೆ ಎಂಬ ಅಂಕಿಅಂಶಗಳನ್ನು ನೀಡಿ ಸರ್ಕಾರವು ಒಳಮೀಸಲಾತಿ ತ್ವರಿತವಾಗಿ ಮುಗಿಸಿಕೊಡಬೇಕಿದೆ ಹೀಗಾದಾಗ ಮಾತ್ರ ಅರ್ಥಿಕ,ಶೈಕ್ಷಣಿಕ,ಸಾಮಾಜಿಕ ಹಾಗೂ ರಾಜಕೀಯವಾಗಿ ಹಿಂದೆ ಉಳಿದಿರುವ ನಮ್ಮ ಸಮುದಾಯಕ್ಕೆ ಹೊಸ ಚೈತನ್ಯ ಸಿಕ್ಕಂತಾಗುತ್ತದೆ ಅತಿ ಹೆಚ್ಚು ಜನಸಂಖ್ಯೆಯುಳ್ಳ ನಮ್ಮ ಜನಾಂಗವು ನಿರ್ಲಕ್ಷಕ್ಕೆ ಒಳಗಾಗಿದ್ದು ಒಳಮೀಸಲಾತಿ ನೀಡುವು ಮೂಲಕ ನಮ್ಮ ಜನಾಂಗಕ್ಕೆ ಸಾಮಾಜಿಕ ನ್ಯಾಯವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಆದಷ್ಟೂ ಬೇಗನೆ ಈಡೇರಿಸುತ್ತಾರೆಂಬ ವಿಶ್ವಾಸವಿದೆ ಎಂದ ಶ್ರೀಗಳು,
ಸಮಾಜದ ಸೇವೆ ಮಾಡಿಕೊಂಡು ಬರುತ್ತಿರುವ ನಿವೃತ ಅಪಾರ ಜಿಲ್ಲಾಧಿಕಾರಿ ಈರಪ್ಪನವರ ಕುಟುಂಬದ ಸೇವೆ ಅನನ್ಯವಾದದ್ದು ಇವರ ಕುಟುಂಬವು ಮೊದಲಿನಿಂದಲೂ ಸಮಾಜ ಸೇವೆಯಲ್ಲಿ ತೊಡಗಿಕೊಂಡಿದ್ದು ಯಾವುದೇ ಪ್ರಚಾರ ಬಯಸದೇ ಸೇವೆ ಮಾಡುತ್ತಾ ಬಂದಿರುತ್ತಾರೆ ಈರಪ್ಪನವರ ಸುಪುತ್ರ ಜೆ.ಇ.ಶಶಿಧರ್ ಸಹ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಾ ತಮ್ಮ ತಂದೆಯವರ ಹಾದಿಯಲ್ಲಿ ನಡೆಯುತ್ತಿರುವುದು ಸಂತಸದ ವಿಚಾರ ಇವರ ಬಳಿ ಯಾವ ಸಮುದಾಯದವರೇ ಬಂದರು ಸಹಾಯ ಹಸ್ತ ಚಾಚುವ ಗುಣ ರೂಡಿಸಿಕೊಂಡಿರುವ ಒಳ್ಳೆಯ ಮನಸ್ಸು ಇವರದ್ದಾಗಿದ್ದು ಹಿರಿಯರು ಹೇಳಿದಂತೆ ದೇಹ ಭಾರವಾದಾಗ ಯೋಗ ಮಾಡು ಮನಸ್ಸು ಭಾರವಾದಾಗ ಧ್ಯಾನ ಮಾಡು ಸಂಪತ್ತು ಭಾರವಾದಾಗ ದಾನ ಮಾಡು ಎಂಬ ನಾಣ್ಣುಡಿ ನೆನಪಿಗೆ ಬರುತ್ತದೆ ಸ್ವಾರ್ಥವಿಲ್ಲದ ಸೇವೆಯೇ ಮನುಷ್ಯನ ಜೀವನದ ಸಾರ್ಥಕತೆ ತಮ್ಮ ಸಮುದಾಯದ ಏಳ್ಗೆ ಬಗ್ಗೆ ಸದಾ ಚಿಂತಿಸುವ ಕುಟುಂಬ ಇವರದು ಇಂತಹ ವ್ಯಕ್ತಿಗಳು ನಮ್ಮ ಸಮುದಾಯಕ್ಕೆ ಒಂದು ಕಳಶಪ್ರಾಯವಿದ್ದಂತೆ ಎಂದರು.
ಇದೇ ವೇಳೆ ಶ್ರೀಗಳಿಗೆ ಈರಪ್ಪನವರ ಕುಟುಂಬದವರು ಗೌರವ ಪೂಜೆಯಿಂದ ಪುರಸ್ಕರಿಸಿ ಶ್ರೀಗಳ ಆಶೀರ್ವಾದ ಪಡೆದರು.
ಈ ಸಂಧರ್ಭದಲ್ಲಿ ಈರಪ್ಪನವರ ಸುಪುತ್ರ ಜೆ.ಇ.ಶಶಿಧರ್. ನಿರ್ದೇಶಕರು ವಿಧಾನಸಭಾ ಸಚಿವಾಲಯ, ಲತಾ ಚಂದ್ರಶೇಖರ್, ಪುಟ್ಟಲಕ್ಷ್ಮಮ್ಮ,ನರಸಿಂಹಯ್ಯ,ನಾಗರಾಜು, ಸುದ್ದೇಕುಂಟೆ ಮೂರ್ತಿ, ಈರಪ್ಪನವರ ಕುಟುಂಬದವರು ಹಾಗೂ ಸಮುದಾಯದ ಮುಖಂಡರು ಉಪಸ್ಥಿತರಿದ್ದರು.