ಜೀತ ವಿಮುಕ್ತರಿಗೆ ರಾಜ್ಯ ಬಜೆಟ್ ನಲ್ಲಿ 500 ಕೋಟಿ ಮೀಸಲಿಡುವಂತೆ ಡಾ.ಜೀವಿಕ ಸಂಜೀವಮೂರ್ತಿ ಒತ್ತಾಯ

 

ಮಧುಗಿರಿ : ಜೀತವಿಮುಕ್ತರ ಸಮಗ್ರ ಪುನರ್ ವಸತಿಗಾಗಿ ರಾಜ್ಯ ಸರ್ಕಾರ ಬಜೆಟ್ ನಲ್ಲಿ ,500 ಕೋಟಿ ಮೀಸಲಿಡಬೇಕು ಪ್ರತ್ಯೇಕ ನಿಗಮ ಸ್ಥಾಪಿಸಿ ಜೀತವಿಮುಕ್ತರ ಬದುಕಿನಲ್ಲಿ ಹೊಸ ಬೆಳಕು ನೀಡಿ ಎಲ್ಲರಂತೆ ಅವರು ಬದುಕಲು ಬಿಡಿ ಎಂದು ಜೀವಿಕ ಜಿಲ್ಲಾ ಸಂಚಾಲಕ ಡಾ.ಸಂಜೀವಮೂರ್ತಿ ಒತ್ತಾಯಿಸಿದರು.

ಪಟ್ಟಣದ ಉಪವಿಭಾಗಾಧಿಕಾರಿಗಳ ಕಛೇರಿ ಆವರಣದಲ್ಲಿ ಜೀತ ವಿಮುಕ್ತಿ ಕರ್ನಾಟಕ (ಜೀವಿಕ) ಸಂಘಟನೆ ಹಾಗೂ ದಲಿತ‌ ಒಕ್ಕೂಟಗಳ ಸಹಯೋಗದೊಂದಿಗೆ ಜೀತವಿಮುಕ್ತರ ವಿವಿಧ ಬೇಡಿಕೆಗಳನ್ನು ಈಡೇರಿಸಲು ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡಿದ ಅವರು ರಾಜ್ಯ ಸರ್ಕಾರವು ಜೀತವಿಮುಕ್ತರಿಗೆ ಬಜೆಟ್ ನಲ್ಲಿ 500 ಕೋಟಿ ಮೀಸಲಿಡಬೇಕು ಮತ್ತು ಅವರ ಅಭಿವೃದ್ಧಿಯ ಹಿತದೃಷ್ಟಿಯಿಂದ ಪ್ರತ್ಯೇಕ ನಿಗಮ ಸ್ಥಾಪಿಸಬೇಕು .2017 ರಿಂದ ಇಲ್ಲಿಯವರೆಗೂ ಅರ್ಜಿ ಸಲ್ಲಿಸಿದ ಜೀತದಾಳುಗಳಿಗೆ ಯಾವುದೇ ಪುನಶ್ಚೇತನ ನೀಡುವ ಅಂಶಗಳು ಕಾಣದೇ ವಿಳಂಬವಾಗಿ ಅವರು ತ್ರಿಶಂಕು ಪರಿಸ್ಥಿತಿಯಲ್ಲಿ ಒದ್ದಾಡುವಂತಾಗಿದ್ದು ಅವರೆಲ್ಲರೂ ಜೀತದಾಳುಗಳೆಂದು ಪರಿಗಣಿಸುವ ಜೊತೆಗೆ ಬಿಡುಗಡೆ ಪತ್ರ ನೀಡಿ ಅವರು ಹೊಸ ಬದುಕು ಕಟ್ಟಿಕೊಳ್ಳುವಂತೆ ಮಾಡಬೇಕು ಹಾಗೂ ಜಿಲ್ಲಾದಿಕಾರಿಗಳು ಜೀವಿಕ ಸಂಘಟನೆಯಲ್ಲಿ ನೈಜವಾಗಿ ಕೆಲಸ ಮಾಡುವಂತಹ ಮುಖಂಡರನ್ನು ಸೇರಿಸಿ
ಜಾಗೃತಿ ಸಮಿತಿ ಸಭೆ ಕರೆಯಬೇಕು ಜೀತವಿಮುಕ್ತರಿಗೆ ವಿಶೇಷ ಪ್ಯಾಕೇಜ್ ಘೋಷಿಸಬೇಕು ಜೀವಿಕ ಸಂಘಟನೆಗೆ ಪುರಸಭಾ ವತಿಯಿಂದ ನಿವೇಶನ ಮುಂಜೂರು ಮಾಡಬೇಕು ಅನೇಕ ವರ್ಷಗಳಿಂದ ಜೀತ ವಿಮುಕ್ತರ ಪೂರ್ವಿಕರು ಸೇರಿದಂತೆ ಸಾಗುವಳಿ ಮಾಡಿಕೊಂಡು ಬರುತ್ತಿರುವ ಜೀತದಾಳುಗಳಿಗೆ ಸಾಗುವಳಿ ಚೀಟಿ ನೀಡಬೇಕು ಎಂದು ಒತ್ತಾಯಿಸಿದರು

ಜೀವಿಕ ತಾಲ್ಲೂಕು ಸಂಚಾಲಕ ನಲ್ಲೇಕಾಮನಹಳ್ಳಿ ಹನುಮಂತರಾಯಪ್ಪ ಮಾತನಾಡಿ ಈಗಾಗಲೇ ಬಿಡುಗಡೆಗೊಂಡ ಜೀತದಾಳುಗಳಿಗೆ ಸಮಗ್ರ ಪುನರ್ವಸತಿ ಕಲ್ಪಿಸುವ ಜೊತೆಗೆ ನಿವೇಶನ ರಹಿತ ಜೀತದಾಳುಗಳಿಗೆ ನಿವೇಶನ ನೀಡಬೇಕು ಜೀತವಿಮುಕ್ತರು ಸ್ವಾವಲಂಬಿಗಳಾಗಲು ಜೀತದಾಳುಗಳಿಗೆ ಎರಡು ಎಕರೆ ಜಮೀನು ನೀಡಬೇಕು ಅಸಂಘಟಿತ ತಮಟೆ ಕಲಾವಿದರಿಗೆ ಮಾಸಾಶನ ನೀಡಬೇಕು ಜೀತ ವಿಮುಕ್ತರಿಗೆ ಮನೆಗಳನ್ನು ನಿರ್ಮಿಸಿ­­ಕೊಡಬೇಕು. ಅಂತ್ಯೋದಯ ಪಡಿತರ ಚೀಟಿ­ಗಳನ್ನು ಒದಗಿಸಬೇಕು. ಜೀತ ವಿಮುಕ್ತರು ವಾಸ­ವಿರುವ ಗ್ರಾಮ­ಗಳಿಗೆ ಮೂಲ ಸೌಕರ್ಯ ಕಲ್ಪಿಸಬೇಕು ಎಂದು ಅಧಿಕಾರಿಗಳನ್ನು ಒತ್ತಾಯಿಸಿ ಜೀತದಾಳುಗಳ ಹಲವು ಬೇಡಿಕೆಗಳನ್ನು ಈಡೇರಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ,ಹಾಗೂ ಸಹಕಾರ ಸಚಿವ ಕೆ.ಎನ್.ರಾಜಣ್ಣನವರಿಗೂ ಮನವಿ ಪತ್ರದಲ್ಲಿ ಮನವಿ ಮಾಡಲಾಗಿದೆ ಎಂದರು.

ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿಗೆ ಹಾರ ಹಾಕುವ ಮೂಲಕ ಪ್ರತಿಭಟನೆಗೆ ಚಾಲನೆ ನೀಡಿ ನಂತರ ಪ್ರಮುಖ ರಸ್ತೆಗಳಲ್ಲಿ ತಮಟೆ ವಾದ್ಯಗಳೊಂದಿಗೆ ಐನೂರುಕ್ಕೂ ಹೆಚ್ಚು ಜೀತದಾಳುಗಳು ಘೋಷಣೆಗಳನ್ನು ಕೂಗುತ್ತಾ ಅಂಬೇಡ್ಕರ್ ಬಗ್ಗೆ ಹಾಡುಗಳನ್ನು ಹಾಡಿಕೊಂಡು ಮೆರವಣಿಗೆ ನಡೆಸಿ ಉಪವಿಭಾಗಾದಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು ಈ ವೇಳೆ ಮಧುಗಿರಿ ಠಾಣೆಯ ಪಿಎಸ್’ಐ ವಿಜಯ್ ಕುಮಾರ್ ತಮ್ಮ ಸಿಬ್ಬಂದಿಯೊಂದಿಗೆ ಪ್ರತಿಭಟನಾ ಮೆರವಣಿಗೆ ಉದ್ದಕ್ಕೂ ರಕ್ಷಣಾ ಕಾರ್ಯ ನೀಡಿದರು.

ಉಪವಿಭಾಗಾಧಿಕಾರಿಗಳ ಕಛೇರಿಯ ಗ್ರೇಡ್-2 ತಹಶೀಲ್ದಾರ್ ಶ್ರೀನಿವಾಸ್ ಪ್ರತಿಭಟನಕಾರರಿಂದ ಮನವಿ ಪತ್ರ ಸ್ವೀಕರಿಸಿ ಮಾತನಾಡಿ ನಿಮ್ಮ ಎಲ್ಲಾ ಬೇಡಿಕೆಗಳನ್ನು ಪೂರೈಸಲು ನಮ್ಮ ಮೇಲಾಧಿಕಾರಿಗಳಿಗೆ ಮನವಿ ಪತ್ರವನ್ನು ನೀಡಿ ಸರ್ಕಾರದ ಗಮನಕ್ಕೆ ತರುವಂತೆ ತಿಳಿಸಿಲಾಗುವುದು ಎಂದರು

ಪ್ರತಿಭಟನೆಯಲ್ಲಿ ಜೀವಿಕ ತಾಲ್ಲೂಕು ಸಂಚಾಲಕ ಎನ್. ಹನುಮಂತರಾಯಪ್ಪ, ಒಕ್ಕೂಟದ ಅಧ್ಯಕ್ಷ ತಿಮ್ಮಯ್ಯ, ಉಪಾಧ್ಯಕ್ಷರುಗಳಾದ ಕದುರಪ್ಪ, ಶ್ಯಾಮಣ್ಣ, ನರಸಿಂಹಪ್ಪ, ಪಾವಗಡ ತಾಲೂಕು ಜೀವಿಕ ಸಂಚಾಲಕ ಕೆ ನರಸಿಂಹಮೂರ್ತಿ, ಕಾರ್ಯದರ್ಶಿ ಗಂಗಾಧರಪ್ಪ ,ಸಂಘಟನಾ ಸಂಚಾಲಕ ಟಿ ಹನುಮಂತರಾಯ, ಗೋಪಾಲ್ ,ಸತೀಶ್, ಸಮಾಜ ಸೇವಕ ನಾಗಪ್ಪ, ಹನುಮಂತರಾಯಪ್ಪ ,ಗಂಗಣ್ಣ ,ದಲಿತ ಮುಖಂಡರುಗಳಾದ ಬೆಜ್ಜಿಹಳ್ಳಿ ನರಸಿಂಹಯ್ಯ,ಸಿದ್ದಾಪುರ ಚಿಕ್ಕರಂಗಯ್ಯ,ರಂಗಪ್ಪ, ಸಿದ್ದಪ್ಪ, ಲಕ್ಷ್ಮಿದೇವಮ್ಮ ಸಂಜೀವಪ್ಪ,ಕೊಂಡಪ್ಪ,ಶಿವಮ್ಮ ಸೇರಿದಂತೆ,ವಿವಿಧ ದಲಿತ ಸಂಘಟನೆಗಳ ಮುಖಂಡರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!