ಹಾಲಿ ಶಾಸಕರು ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸಗಳು ಮಾಡದಿದ್ದರೂ ಪರವಾಗಿಲ್ಲ ದ್ವೇಷದ ರಾಜಕಾರಣ ಮಾಡಬಾರದು ಮಾಜಿ ಶಾಸಕ ಎಂ.ವಿ.ವಿ ವೀರಭದ್ರಯ್ಯ

ಮದುಗಿರಿ: ಕಳೆದ ಒಂದುವರೆ ವರ್ಷದಿಂದ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳು ನಡೆದಿಲ್ಲ, ಅಧಿಕಾರಿಗಳು ಕಾನೂನಿನ ಚೌಕಟ್ಟಿನಲ್ಲಿ ಕೆಲಸ ಮಾಡಿ ಕ್ಷೇತ್ರದಲ್ಲಿ ಸುವ್ಯವಸ್ಥೆ ಕಾಪಾಡಿ ಎಂದು ಮಾಜಿ ಶಾಸಕ ಎಂ.ವಿ.ವಿ ವೀರಭದ್ರಯ್ಯ ತಿಳಿಸಿದರು.

 

 

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಹಾಲಿ ಶಾಸಕರು ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸಗಳು ಮಾಡದಿದ್ದರೂ ಪರವಾಗಿಲ್ಲ ದ್ವೇಷದ ರಾಜಕಾರಣ ಮಾಡಬಾರದು, ದ್ವೇಷದ ರಾಜಕಾರಣದಿಂದ ಮನೆ ಹಂಚಿಕೆಯಲ್ಲಿ ಅವ್ಯವಹಾರ ನಡೆದಿದ್ದು, 70ರಿಂದ 80 ಸ್ಥಳೀಯ ಸಂಸ್ಥೆ ಚುನಾವಣೆಗಳು ಇನ್ನು ಸಹ ನಡೆದಿಲ್ಲ ಇದರಿಂದ ಕ್ಷೇತ್ರದ ಸುವ್ಯವಸ್ಥೆ ಹದೇಗೆಡುತ್ತದೆ ಎಂದರು.

 

ಅಧಿಕಾರಿಗಳು ಸರಕಾರಿ ಇಲಾಖೆ ಕೆಲಸ ಕಾರ್ಯಗಳಲ್ಲಿ ಯಾರಾ ದರ್ಪಕ್ಕೂ ಹೆದರದೆ ಕಾನೂನು ಚೌಕಟ್ಟಿನಲ್ಲಿ ಕೆಲಸ ಮಾಡುವ ಮೂಲಕ ಸುವ್ಯವಸ್ಥೆ ಕಾಪಾಡಿ,ಕ್ಷೇತ್ರದ ಶಾಸಕರು ಅಧಿಕಾರದ ದರ್ಪ ಬಿಟ್ಟು ಅಭಿವೃದ್ಧಿ ಕೆಲಸ ಮಾಡಬೇಕು ಅಧಿಕಾರ ಯಾರಿಗೂ ಶಾಶ್ವತವಲ್ಲ,ಎಂ.ಪಿ ಚುನಾವಣೆ ಫಲಿತಾಂಶ ಎಚ್ಚರಿಕೆಯ ಗಂಟೆ ಇದ್ದಂತೆ ಎಂದು ಹಾಲಿ ಶಾಸಕರಿಗೆ ಮಾಜಿ ಶಾಸಕರಾದ ಎಂ.ವಿ. ವೀರಭದ್ರಯ್ಯ ಎಚ್ಚರಿಕೆ ನೀಡಿದರು.

 

 

ಒಂದುವರೆ ವರ್ಷದಿಂದ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳು ಆಗಿಲ್ಲ, ನನ್ನ ಅವಧಿಯಲ್ಲಿ 300 ಎಕ್ಕರೆ ಜಮೀನು ಗುರುತಿಸಿ ಇಂಡಸ್ಟ್ರಿಯಲ್ ಕ್ಲಸ್ಟರ್ ಮಾಡಲು ಸಿದ್ಧತೆ ನಡೆದಿತ್ತು ಆದರೆ ಈಗ ಇಂಡಸ್ಟ್ರಿಯ ಅಭಿವೃದ್ಧಿ ಕೇವಲ ಮಾತಿಗೆ ಸೀಮಿತವಾಗಿದೆ, ಎಲ್ಲಿ ಅಭಿವೃದ್ಧಿಯಾದರೆ ನನ್ನ ಹೆಸರು ಸೇರ್ಪಡೆಯಾಗುತ್ತೋ ಎಂಬ ಭಯದಿಂದ ಸಾವಿರಾರು ಜನಕ್ಕೆ ಶಕ್ತಿ ತುಂಬುವ ಅಭಿವೃದ್ಧಿ ಕಾರ್ಯಾ ಮೂಲೆಗುಂಪಾಗಿದೆ, ಹಾಲಿ ಶಾಸಕರು ಕೇವಲ ರೋಪವೇ ಹಾಗೂ ರೆಸಾರ್ಟ್ ಅಭಿವೃದ್ಧಿ ಬಗ್ಗೆ ಮುತವರ್ಜಿ ವಹಿಸಿದ್ದಾರೆ ಎಂದು ಆರೋಪಿಸಿದರು.

 

ತುಮುಲ್ ಮಾಜಿ ನಿರ್ದೇಶಕ ಕೊಂಡವಾಡಿ ಚಂದ್ರಶೇಖರ್ ಮಾತನಾಡಿ ಹಾಲಿ ಶಾಸಕರು ಒಂದುವರೆ ವರ್ಷದಿಂದ ನನಗೆ ವೈಯಕ್ತಿಕ ತೊಂದರೆ ನೀಡುತ್ತಿದ್ದಾರೆ, ಅಧಿಕಾರ ದರ್ಪದಿಂದ ಕೆಆರ್‌ಡಿಎಲ್ ಕಚೇರಿ ಬದಲಾಯಿಸಿದರು ಹಾಲು ಉತ್ಪಾದಕರ ಸಂಘದಲ್ಲಿ ನನ್ನ ಸದಸ್ಯತ್ವವನ್ನು ಕಡಿತಗೊಳಿಸಿದರು. 70 ರಿಂದ 80 ಸ್ಥಳೀಯ ಸಂಸ್ಥೆಗಳಲ್ಲಿ ಈಗಾಗಲೇ ಚುನಾವಣಾ ನಡೆಯಬೇಕಿತ್ತು ರಾಜಕೀಯ ದ್ವೇಷದಿಂದ ಇನ್ನೂ ನಡೆದಿಲ್ಲ ಇದರಿಂದ ಸದಸ್ಯರು ಸದಸ್ಯತ್ವದಿಂದ ವಂಚಿತರಾಗುತ್ತಾರೆ ಹಾಗೂ ಕಾನೂನು ಸುವ್ಯವಸ್ಥೆ ಹದಗೆಡುತ್ತದೆ.ಇದೇ ರೀತಿ ಅಧಿಕಾರ ದುರುಪಯೋಗವಾಗಿದ್ದಲ್ಲಿ ಕಾನೂನಿನ ಚೌಕಟ್ಟಿನಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದರು.

 

 

ಈ ಸಂದರ್ಭದಲ್ಲಿ ಪುರಸಭೆ ಮಾಜಿ ಅಧ್ಯಕ್ಷರಾದ ತಿಮ್ಮರಾಯಪ್ಪ, ಮುಖಂಡರಾದ ಎಸ್.ಡಿ. ಕೃಷ್ಣಪ್ಪ, ಸುಮನ್ ಚಂದ್ರಶೇಖರ್, ಕಂಬತನಹಳ್ಳಿ ರಘು ಹಾಗೂ ಇತರರು ಇದ್ದರು.

Leave a Reply

Your email address will not be published. Required fields are marked *