ವಿದ್ಯೆ ಸಾದಕನಸೊತ್ತೆ ಹೊರತು ಸೋಮಾರಿಯ ಸೊತ್ತಲ್ಲ ಎಸ್‌.ಡಿ.ಎಂ ಸಿ.ಅದ್ಯಕ್ಷ ವಕೀಲ ಶಿವಣ್ಣ

ಮಧುಗಿರಿ . ವಿದ್ಯೆ ಸಾದಕನಸೊತ್ತೆ ಹೊರತು ಸೋಮಾರಿಯ ಸೊತ್ತಲ್ಲ ಎಂದು ಪ್ರಾ ರ್ಥ ನಾಪಬ್ಲಿಕ್ ಶಾಲೆ ಯ ಎಸ್‌.ಡಿ.ಎಂ ಸಿ.ಅದ್ಯಕ್ಷ ವಕೀಲ ಶಿವಣ್ಣ ತಿಳಿಸಿದರು

 

ಮಧುಗಿರಿ ತಾಲೂಕಿನ ದಂಡಿನ ದಿಬ್ಬ ಗ್ರಾಮದ ಪ್ರಾರ್ಥನಾ ಪಬ್ಲಿಕ್ ಶಾಲಾ ಆವರಣದಲ್ಲಿ ಏರ್ಪಡಿಸಿ ದ್ದ ವಿನಾಯಕ ಮತ್ತು ಸರಸ್ವತಿ ವಿಗ್ರಹ ಗಳ ಪ್ರತಿಷ್ಠಾಪನೆ ಹಾಗೂ ಶಾಲಾ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮದ ಅದ್ಯಕ್ಷ ತೆ ವಹಿಸಿ ಮಾತನಾಡಿದ ಅವರು ಪುಸ್ತಕ ಸರಸ್ವತಿ ಯಾಗಿದೆ ಜ್ಞಾನ ಶಿಕ್ಷಣ ಮತ್ತು ಸಾಹಿತ್ಯದ ಸಂಕೇತ . ಪುಸ್ತಕ ಹಿಡಿದು ತಲೆತಗ್ಗಿಸಿ ನೀನು ಒದಿದರೆ ಮುಂದೆ ನಿಮ್ಮನ್ನು ಸಮಾಜದಲ್ಲಿ ತಲೆ ಎತ್ತಿ ನಿಲ್ಲುವಂತೆ ಮಾಡುತ್ತದೆ ವಿದ್ಯಾರ್ಥಿ ದೆಸೆಯಲ್ಲಿ ಯಾವುದೇ ರೀತಿಯ ಕೆಟ್ಟ ಚಟಗಳಿಗೆ ಬಲಿಯಾಗದೆ ಶಿಕ್ಷಣ ಕೊಟ್ಟ ಗುರುಗಳಿಗೆ ಹಾಗೂ ಜನ್ಮದಾತರಿಗೆ ಗೌರವವನ್ನು ತರಬೇಕು ಪರೀಕ್ಷೆ ಯು ಹತ್ತಿರ ವಿರುವುದರಿಂದ ಟಿ.ವಿ.ಮೊಬೈಲ್ ಕಡೆ ತಮ್ಮ ಮಕ್ಕಳಿಂದ ದೂರವಿರುವಂತೆ ಪೋಷಕರು ಸಹ ಇದರಕಡೆ ಗಮನ ವಿರಬೇಕೆಂದು ಪೋಷಕ ರಿಗಸಲಹೆಯನ್ನು ನೀಡಿದರು ‌ ಸಂಸ್ಥೆಯ ಅದ್ಯಕ್ಷ ಡಿ.ವಿ.ದ್ವಾರಕೀಶ್ ಮಾತನಾಡಿ ನಮ್ಮ ವಿದ್ಯಾಸಂಸ್ಥೆ ಗ್ರಾಮೀಣ ಪ್ರದೇಶದ ಮಕ್ಕಳಿಗೆ ಶಿಕ್ಷಣ ಕೊಡುವ ಉದ್ದೇಶದಿಂದ ಸುಮಾರು ಇಪ್ಪತ್ತು ವರ್ಷಗಳ ಕಾಲ ಸತತ ವಾಗಿ ಕಾರ್ಯನಿರ್ವಹಿಸುತ್ತಾ ಬಂದಿದೆ ಇದಕ್ಕೆ ಕಾರಣ ಪೋಷಕ ರು ಇನ್ನೂ ಹೆಚ್ಚಿನ ನಮ್ಮ ಸಂಸ್ಥೆಯ ಮೂಲಕ ಉಚಿತವಾಗಿ ಅನೇಕ ರೀತಿಯ ತರಬೇತಿ ಯನ್ನು ಕೊಡಲಾಗುತ್ತದೆ ಆದ್ದರಿಂದ ಪೋಷಕ ರು ವಿದ್ಯಾಸಂಸ್ಥೆ ಗೆ ನಿಮ್ಮಗಳ ಸಹಕಾರ ಅತಿಮುಖ್ಯ ಎಂದು ತಿಳಿಸಿದರು

 

ವಿಘ್ನ ನಿವಾರಕ ವಿನಾಯಕ ಮತ್ತು ವಿದ್ಯೆಯ ಪ್ರತಿರೂಪ ದೇವತೆಯಾದ ಸರಸ್ವತಿ ಮೂರ್ತಿಗಳ ಅನಾವರಣ ಮಾಡಲಾಯಿತು ಎಂದು ವಿದ್ಯಾಸಂಸ್ಥೆ ಯ ಕಾರ್ಯದರ್ಶಿ ಎಂ.ಎಸ್. ವಿಜಯಪ್ರಕಾಶ್ ಹೇಳಿದರು ಗ್ರಾಮೀಣ ಪ್ರದೇಶದ ಬಡ ಮದ್ಯಮ ವರ್ಗದ ಮಕ್ಕಳಿಗೆ ನಗರ ಪ್ರದೇಶ ಕ್ಕೆ ಹೋಗಿ ವಿದ್ಯಾಭ್ಯಾಸ ಮಾಡಲು ಕಷ್ಟ ಕರ ಇದನ್ನು ಅರಿತು ಸುಮಾರು ಇಪ್ಪತ್ತು ವರ್ಷಗಳ ಕಾಲದಿಂದಲೂ ನಮ್ಮ ವಿದ್ಯಾಸಂಸ್ಥೆ ಶಿಕ್ಷಣ ಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಾ ಬಂದಿದೆ ಇದಕ್ಕೆ ಬೆನ್ನೆಲುಬಾಗಿ ಪೋಷಕರು ಕೈಜೋಡಿಸಿ ದ್ದಾರೆ ಮುಂದೆ ಯು ಸಹ ನಿಮ್ಮ ಮಾರ್ಗದರ್ಶನ ಸಲಹೆಯನ್ನು ನೀಡಬೇಕೆಂದು ಪೋಷಕರಿಗೆ ತಿಳಿಸಿದರು
ಶೈಕ್ಷಣಿಕ ವರ್ಷದಿಂದ ನಮ್ಮ ವಿದ್ಯಾಸಂಸ್ಥೆ ಯು ನವೋದಯ ಹತ್ತು ಹಲವಾರು ವಸತಿ ಶಾಲೆಗೆ ಹೋಗ ಬಯಸುವ ವಿದ್ಯಾರ್ಥಿ ಗಳಿಗೆ ಉಚಿತವಾಗಿ ತರಬೇತಿ ಯನ್ನು ನೀಡಲಾಗುತ್ತದೆ ಯಾವುದೇ ವಿಕಲಚೇತನ ಮಗು ಶಾಲೆಗೆ ದಾಖಲಾದರೆ ಉಚಿತವಾಗಿ ಶಿಕ್ಷಣ ವನ್ನು ಕೊಡಲಾಗುತ್ತದೆ ಯಾವುದೇ ಮಗುವಿನ ಪೋಷಕ ರು ಒಬ್ಬರು ಇದ್ದರೆ ಅಂತಹ ಮಗುವನ್ನು ನಮ್ಮ ಶಾಲೆಗೆ ದಾಖಲೆಯನ್ನು ಮಾಡಿದೆ ಶೇಕಡ ಐವತ್ತು ರಷ್ಟು ರಿಯಾಯಿತಿ ದರದಲ್ಲಿ ದಾಖಲೆಯನ್ನು ಮಾಡಿಕೊಂಡು ಶಿಕ್ಷಣ ಕೊಡಲಾಗುತ್ತದೆ ಉಚಿತವಾಗಿ ವಾಹನ ಸೌಲಭ್ಯ ಇರುತ್ತದೆ ಎಂದು ಶಾಲಾ ಆಡಳಿತ ಮಂಡಳಿಯ ಆಡಳಿತಾದಿಕಾರಿ ಶಶಿದರ್ ಸಂದರ್ಭದಲ್ಲಿ ತಿಳಿಸಿದರು

 

ಕಾರ್ಯಕ್ರಮ ದಲ್ಲಿ ದೊಡ್ಡೇರಿ ಗ್ರಾ.ಪಂ.ಮಾಜಿ.ಅದ್ಯಕ್ಷ ರುಗಳಾದ ಹರೀಶ್ ಶ್ರೀ ಶೈಲಕುಮಾರ್ ಶಾಲಾ ಆಡಳಿತ ಮಂಡಳಿಯ ನಿರ್ದೇಶಕ ಜಿ.ಕೃಷ್ಣ ಮೂರ್ತಿ ವಿಶ್ವರಾದ್ಯ ನಾಗಶ್ರೀ. ಅಥರ್ವಗ್ಲೋಬಲ್‌ಸ್ಕೂಲ್.ಶಿರಾ ಮಾಜಿ ಸೈನಿಕ ದೇವರಾಜ್ ಬೆಂಚೆ ಜ್ಞಾನ ಸುದಾ ಶಾಲೆಯ ನರಸಿಂಹಯ್ಯ . ಕಳ್ಳಂಬೆಳ್ಳ ಮಾತಾ ಪಬ್ಲಿಕ್ ಸ್ಕೂಲ್ ದೇವರಾಜ್ ಶಾಲೆಯ ಮುಖ್ಯ ಶಿಕ್ಷಕಿ ಬಾಗ್ಯಮ್ಮ ಸಹಶಿಕ್ಷಕಿಯರು ಸಾವಿತ್ರಮ್ಮ ಅಶ್ವಿನಿ ಮಂಜುಳಾ. ಪಲ್ಲವಿ ಹಾಗೂ ಪೋಷಕ ರು ವಿದ್ಯಾರ್ಥಿ ಗಳು ಇದ್ದರು ಶಾಲಾಮಕ್ಕಳಿಂದ ರಸಮಂಜರಿ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು

Leave a Reply

Your email address will not be published. Required fields are marked *

error: Content is protected !!