ಕೊರಟಗೆರೆ :ತಾಲೂಕಿನ ಕೋಳಾಲ ಹೋಬಳಿಯ ಎಲೆರಾಂಪುರ ಗ್ರಾಪಂಯ ಅಧ್ಯಕ್ಷರ ಚುನಾವಣೆಯಲ್ಲಿ. ಗೀತಾ ನರಸಿಂಹರಾಜು ಆಯ್ಕೆಯಾಗಿದ್ದಾರೆ. ಎಂದು ಚುನಾವಣಾಧಿಕಾರಿಯಾದ ತಹಸೀಲ್ದಾರ್ ಕೆ.ಮಂಜುನಾಥ್ ಘೋಷಣೆ ಮಾಡಿದರು.
ಎಲೆರಾಂಪುರ ಗ್ರಾಪಂಯಲ್ಲಿ ಒಟ್ಟು 18 ಜನ ಸದಸ್ಯರ ಸಂಖ್ಯಾಬಲ ಹೊಂದಿದ್ದು ಈ ಹಿಂದೆ ಅಧ್ಯಕ್ಷರಾಗಿದ್ದ ಎಚ್ಎಸ್ ಚಂದ್ರಶೇಖರ್ ಅವರ ರಾಜಿನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಗೀತಾ ನರಸಿಂಹರಾಜು ಹಾಗೂ ಡಿ. ನಾಗೇನಹಳ್ಳಿಯ ಚಂದ್ರಯ್ಯ ಇಬ್ಬರು ನಾಮಪತ್ರ ಸಲ್ಲಿಸಿದ ಕಾರಣ ಗೀತಾ ರವರಿಗೆ 10 ಮತಗಳು ಹಾಗೂ ಚಂದ್ರಯ್ಯನವರಿಗೆ 8 ಮತಗಳು ಚಲಾವಣೆ ಆದವು ಚುನಾವಣೆಯಲ್ಲಿ ಗೆದ್ದು ಗೀತ ನರಸಿಂಹರಾಜು ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಇನ್ನೂ ಉಪಾಧ್ಯಕ್ಷರಾಗಿ ಪಿ. ಗಂಗಾದೇವಿ ಅವರು ಮುಂದುವರೆಯಲಿದ್ದಾರೆ ಎಂದು ತಿಳಿಸಿದರು.
ನೂತನ ಅಧ್ಯಕ್ಷೆ ಗೀತಾ ನರಸಿಂಹರಾಜು ಮಾತನಾಡಿ ನಮ್ಮ ಎಲೆರಾಂಪುರ ಗ್ರಾಪಂ ವ್ಯಾಪ್ತಿಗೆ ಬರುವ ಗ್ರಾಮಗಳ ಅಭಿವೃದ್ದಿಗಾಗಿ ಎಲ್ಲಾ ಸದಸ್ಯರ ಸಹಕಾರ ಪಡೆಯಲಾಗುವುದು, ಗ್ರಾಮಗಳಲ್ಲಿರುವ ನೀರು, ಚರಂಡಿ, ಬೀದಿ ದೀಪ, ಸೇರಿದಂತೆ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುವುದರ ಜೊತೆಗೆ ಗ್ರಾಮಗಳ ಅಭಿವೃದ್ದಿ ಮಾಡಲಾಗುವುದು, ನನ್ನ ಅಧ್ಯಕ್ಷೆಯಾಗಿ ಆಯ್ಕೆ ಮಾಡಿದ ಗ್ರಾಪಂ ಸದಸ್ಯರು, ಊರಿನ ಮುಖಂಡರು ಎಲ್ಲರಿಗೂ ಧನ್ಯವಾದಗಳನ್ನ ತಿಳಿಸಿದರು.
ಸದಸ್ಯೆ ಮಮತಾ ಮಾತನಾಡಿ: ನೂತನ ಅಧ್ಯಕ್ಷರಾಗಿ ಆಯ್ಕೆ ಮಾಡಲಾಗಿದ್ದು, ಗ್ರಾಮಗಳ ಅಭಿವೃದ್ದಿಗೆ ಎಲ್ಲಾ ಸದಸ್ಯರು ಸಹಕಾರ ನೀಡಲಾಗುವುದು ಎಂದು ತಿಳಿಸಿದರು.
ಸಂದರ್ಭದಲ್ಲಿ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಸುರೇಶ್. ವೇದಾವತಿ. ಸದಸ್ಯರಾದ ಗೌರಮ್ಮ ವೈ ಎಚ್ ಹನುಮಂತರಾಯಪ್ಪ. ತ್ರಿವೇಣಿ. ಕೃಷ್ಣವೇಣಿ. ಹನುಮಂತರಾಯಪ್ಪ. ಪ್ರಕಾಶ್. ಕುಮಾರ್. ಹನುಮಂತರಾಯಪ್ಪ. ನಳಿನ. ಗಂಗಮ್ಮ. ಗಂಗಾದೇವಿ. ರಂಗಯ್ಯ. ಸರ್ವೇಶ್. ಉಮೇಶ್ ಚಂದ್ರ ಹಾಗೂ ಗ್ರಾಮ ಪಂಚಾಯತಿ ಸಿಬ್ಬಂದಿ. ಹಾಗೂ ಕೋಳಾಲ ಪಿಎಸ್ಐ ಯೋಗೀಶ್ ಹಾಗೂ ಸಿಬ್ಬಂದಿ ವರ್ಗ ಹಾಜರಿದ್ದರು.