ಹಲಸಿನಕಾಯಿ ಕೀಳಲು ಮರ ಹತ್ತಿದ ಕೂಲಿ ಕಾರ್ಮಿಕ ಕಾಲು ಜಾರಿ ಕೆಳಗೆ ಬಿದ್ದು ಸಾವು

ಕೊರಟಗೆರೆ ತಾಲೂಕಿನ ನೀಲಗೊಂಡನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಅಳಸಂದ್ರ ಗ್ರಾಮದ ಸಮೀಪ ತೋಟದಲ್ಲಿ ನೆಡೆದ ದುರ್ಘಟನೆ.

ಹಲಸಿನಕಾಯಿ ಕೀಳಲು ಹೇಳಿದ ತೋಟದ ಮಾಲಿಕ ಬಸವರಾಜು ಕೂಲಿ ಕಾರ್ಮಿಕ ಸತ್ತಿದ್ದಾನೆ ಎಂದ ಕೂಡಲೇ ಸ್ಥಳದಿಂದ ಪರಾರಿಯಾದ ಎಂದು ಗ್ರಾಮಸ್ಥರ ಆರೋಪ
ಪ್ರತಿದಿನವೂ ಕೆಲಸಕ್ಕೆ ಬರುವುದಿಲ್ಲ ಎಂದರು ಬಲಂತವಾಗಿ ಕರೆದುಕೊಂಡು ಹೋಗಿ
ಮಧ್ಯಪಾನ ಮಾಡಿಸಿ ತನ್ನ ತೋಟದ ಕೆಲಸ ಮಾಡಿಸಿಕೊಳ್ಳುತ್ತಿದ್ದ ತೋಟದ ಮಾಲೀಕ
ಮರ ಹತ್ತಲು ಬರದಿದ್ದವನಿಗೆ ಮಧ್ಯಪಾನ ಮಾಡಿಸಿ ಮರ ಅತ್ತಲು ಹೇಳಿರುವ ತೋಟದ ಮಾಲೀಕ ಎಂದು ಕುಟುಂಬಸ್ಥರ ಆರೋಪ
ಬೆಳಿಗ್ಗೆ 7-45ಕ್ಕೆ ನಡೆದ ಘಟನೆಯನ್ನ ಮದ್ಯಾಹ್ನ ವರೆಗೂ ಯಾರಿಗೂ ಮಾಹಿತಿ ನೀಡದೆ ಮುಚ್ಚಿ ಹಾಕುವ ಯತ್ನ.
ಊರಿನ ಪ್ರಮುಖರ ಜೊತೆ ಸೇರಿ ತೋಟದ ಮಾಲೀಕ ಪ್ರಕರಣವನ್ನು ಮುಚ್ಚಿ ಹಾಕಲು ಪ್ರಯತ್ನ
ಊರಿನ ಜನರಿಗೆ ಮಾಹಿತಿ ತಿಳಿಯುತ್ತಿದ್ದಂತೆ ಏನು ಗೊತ್ತಿಲ್ಲದ ಹಾಗೆ ಸ್ಥಳಕ್ಕೆ ಬಂದ ತೋಟದ ಮಾಲೀಕ
ಕೊರಟಗೆರೆ ತಾಲೂಕಿನ ನೀಲಗೊಂಡನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಅಳಸಂದ್ರ ಗ್ರಾಮದ ಸಮೀಪ ತೋಟದಲ್ಲಿ ದುರ್ಘಟನೆ.
ವರ್ಷದಿಂದ ತನ್ನ ತೋಟದಲ್ಲಿ ಕೆಲಸ ಮಾಡುತ್ತಿದ್ದ ಹುಳಿಸೊಪ್ಪನಹಳ್ಳಿ ಗ್ರಾಮದ ವೆಂಕಟಶಾಮಯ್ಯ ಮಗನಾದ ಮಧುಸೂದನ್
ಕೂಲಿ ಕಾರ್ಮಿಕನ ಸಾವಿಗೆ ನ್ಯಾಯ ಕೊಡಿಸಬೇಕಿದೆ
ಕೂಲಿ ನಾಲಿ ಮಾಡಿ ತನ್ನ ಕಣ್ಣು ಕಾಣದ ತಾಯಿಯ ಜೊತೆ ಸಂತೋಷದಿಂದ ಇದ್ದ ಮಧುಸೂದನ್
ತನ್ನ ಮಗನಿಗೆ ಮದುವೆ ಮಾಡಿ ಮಗನ ಸಂತೋಷವನ್ನು ಕಾಣಬೇಕು ಎಂದಿದ್ದ ತಾಯಿಯ ಕನಸು ಕನಸಾಗಿಯೇ ಉಳಿತೆ
ಕೂಲಿ ಕಾರ್ಮಿಕನ ಮೇಲೆ ಕಳ್ಳತನದ ಆರೋಪ ಹೊರಿಸುತ್ತಿರುವ ತೋಟದ ಮಾಲೀಕ ಬಸವರಾಜ.
ಬಡ ಕೂಲಿ ಕಾರ್ಮಿಕನ ಸಾವಿನಲ್ಲಿ ಆಟ ಆಡುತ್ತಿರುವ ಊರಿನ ಹಿರಿಯ ಮುಖಂಡರು
ಎರಡು ಲಕ್ಷ ಹಣದ ಆಸೆ ತೋರಿಸಿ ಸಾವಿನ ಕೇಸನ್ನೇ ಮುಚ್ಚಿ ಹಾಕಲು ಹೋದ ಗ್ರಾಮದ ಹಿರಿಯ ಮುಖಂಡರು..
ಪ್ರಕರಣದ ಪೂರ್ಣ ಮಾಹಿತಿ ಪೊಲೀಸ್ ತನಿಕೆಯಿಂದ ಹೊರಬರಬೇಕಾಗಿದೆ..

ಹಳ್ಳಿ ಹಿರಿಯರ ಮಧ್ಯಸ್ಥಿಕೆಯಲ್ಲಿ ಬಡಪಾಯಿಯ ಸಾವಿಗೆ ನ್ಯಾಯ ದೊರಕುವುದೇ..

ತೋಟದ ಮಾಲೀಕನ ವಿರುದ್ಧ ಕ್ರಮ ಕೈಗೊಂಡು ಬಡ ಕುಟುಂಬಕ್ಕೆ ಪರಿಹಾರ ನೀಡುವಂತೆ ಗ್ರಾಮಸ್ಥರ ಆಗ್ರಹ..

ಕೋಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಸ್ಥಳಕ್ಕೆ ಪೊಲೀಸ್ ಠಾಣ ಅಧಿಕಾರಿಗಳು ಭೇಟಿ ಪರಿಶೀಲನೆ..

Leave a Reply

Your email address will not be published. Required fields are marked *