ದಾರಿ ಕೇಳಿದ ಸೈನಿಕನ ಮೇಲೆ ಹಲ್ಲೆ ಪ್ರಕರಣ ದಾಖಲು

ದಾರಿ ಕೇಳಿದ ಸೈನಿಕನ ಮೇಲೆ ಹಲ್ಲೆ
ಕೊರಟಗೆರೆ ಆಸ್ಪತ್ರೆಯಲ್ಲಿ ಸೈನಿಕನಿಗೆ ಚಿಕಿತ್ಸೆ.. ೫ಜನರ ಯುವಕರ ಮೇಲೆ ಪ್ರಕರಣ ದಾಖಲು.

ಕೊರಟಗೆರೆ:- ಯೋಧನೋರ್ವ ತನ್ನ ಮನೆಗೆ ತೆರಳಲು ದಾರಿ ಕೇಳಿದ್ದಕ್ಕೆ ಸಿಟ್ಟಿಗೆದ್ದ ೫ ಜನ ಪುಡಿರೌಡಿಗಳ ತಂಡವೊಂದು ಬಿಯರ್ ಬಾಟಲಿನಿಂದ ಯೋಧನಿಗೆ ಹೊಡೆದು ಕೊಲೆಗೆ ಯತ್ನಿಸಿರುವ ಘಟನೆ ಮೇ.೨೧ರ ಮಂಗಳವಾರ ತಡರಾತ್ರಿ ಬೈರೇನಹಳ್ಳಿಯ ಎನ್‌ಟಿಆರ್ ಕಂಪರ್ಟ್ ಮತ್ತು ರೆಸ್ಟೋರೆಂಟ್‌ನಲ್ಲಿ ನಡೆದಿದೆ.
ಕೊರಟಗೆರೆ ತಾಲೂಕು ಹೊಳವನಹಳ್ಳಿ ಹೋಬಳಿ ಅರಸಾಪುರ ಗ್ರಾಪಂ ವ್ಯಾಪ್ತಿಯ ಬೈರೇನಹಳ್ಳಿಯ ಎನ್‌ಟಿಆರ್ ಕಂಪರ್ಟ್ ಮತ್ತು ಬಾರ್‌ ಅಂಡ್ ರೆಸ್ಟುರೆಂಟ್ ನಲ್ಲಿ  ಘಟನೆ ನಡೆದಿದೆ. ರಾಯವಾರದ ಯೋಧ ಗೋವಿಂದರಾಜು(೩೦) ತಲೆ ಮತ್ತು ಕೈಕಾಲುಗಳಿಗೆ ತೀರ್ವತರದ ಗಾಯಗಳಾಗಿ ಕೊರಟಗೆರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಜಮ್ಮುಕಾಶ್ಮಿರದ ಭಾರತೀಯ ಭೂಸೇನೆ ಸಿಪಾಯಿಯಾಗಿ ಜಮ್ಮುಕಾಶ್ಮಿರದ ರಜೌರಿ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ರಾಯವಾರದ ಯೋಧ ಗೋವಿಂದರಾಜು ರಜೆಯ ಪ್ರಯುಕ್ತ ತನ್ನ ಸ್ವಗ್ರಾಮಕ್ಕೆ ಆಗಮಿಸಿದ್ದಾನೆ. ಮಧ್ಯಪಾನ ಮಾಡುವ ಹವ್ಯಾಸ ಇರುವ ಯೋಧ ಬೈರೇನಹಳ್ಳಿಗೆ ತೆರಳಿ ಮಧ್ಯಪಾನ ಮಾಡಿ ಮನೆಗೆ ಹಿಂದಿರುಗುವಾಗ ಯುವಕರ ಗುಂಪು ಹಲ್ಲೆ ನಡೆಸಿದೆ.

 

 

 

ಕೊಲೆಯತ್ನ ಘಟನೆಯ ಹಿನ್ನಲೆ..
ಅಣ್ಣ ದಾರಿ ಬೀಡಿ ನಾನು ಮನೆಗೆ ಹೋಗಬೇಕಿದೆ ಎಂದ ಯೋಧ. ರಸ್ತೆಗೆ ಅಡ್ಡಲಾಗಿ ನಿಂತಿದ್ದ ಯುವಕರಿಗೆ ಮನವಿ ಮಾಡಿದ್ದಾನೆ. ತಕ್ಷಣವೇ ಲೇ ಲೋಪರ್ ನನ್ನ ಮಗನೇ ನಮ್ಮನ್ನೇ ದಾರಿ ಬಿಡು ಎಂದು ಕೇಳುತ್ತಿಯಾ ಎಂದ ಪುನೀತಾ. ದಾರಿ ಕೇಳಿದ್ರೇ ನನ್ನನ್ನೇ ಏಕೆ ಹೀಗೆ ಬೈಯ್ತಿರಾ ಎಂದು ಮರುಪ್ರಶ್ನೆ ಮಾಡಿದ ಯೋಧ. ನಮ್ಮನ್ನೇ ಪ್ರಶ್ನೆ ಮಾಡ್ತಿಯಾ ಎಂದು ಬಿಯರ್ ಬಾಟಲಿಂದ ತಲೆಗೆ ಹೊಡೆದ ಪುನಿತಾ ತನ್ನ ಸ್ನೇಹಿತರ ಜೊತೆಸೇರಿ ಯೋಧನ ಕೊಲೆಗೆ ಯತ್ನಿಸಿರುವ ಘಟನೆ ನಡೆದಿದೆ.
ರಾಯವಾರದ ಯೋಧ ಗೋವಿಂದರಾಜು ದೂರಿನ ಅನ್ವಯ ಮಧುಗಿರಿಯ ಕೊಡಗದಾಲದ ಪುನಿತ(೩೨), ಹುಣಸವಾಡಿಯ ಗೌರಿಶಂಕರ(೩೨), ಶಿವಾ(೩೨), ಕೊರಟಗೆರೆಯ ಅರಸಾಪುರದ ಭರತ್(೨೯), ಕೊಡಿಗೇನಹಳ್ಳಿ ಸಮೀಪದ ಭಟ್ಟಗೆರೆಯ ದಿಲೀಪ್(೩೫) ಎಂಬಾತನ ಮೇಲೆ ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಕೊಲೆಯತ್ನ ಸೇರಿ ೧೦ಸೇಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

೨೪ ಕೊರಟಗೆರೆ ಚಿತ್ರ೧:- ಆರೋಪಿ ಪುನಿತಾ(೩೨)

 

೨೪ ಕೊರಟಗೆರೆ ಚಿತ್ರ೨:- ಆರೋಪಿ ದಿಲೀಪ್(೩೫)

Leave a Reply

Your email address will not be published. Required fields are marked *