ಗೃಹ ಸಚಿವ ಡಾ: ಜಿ. ಪರಮೇಶ್ವರ್ ರವರ ಕಾರ್ಯಕ್ರಮದ ಪೂರ್ವಭಾವಿ ಸಭೆ

ಸೋಮಶೇಖರ್ ರವರ ನೇತೃತ್ವದಲ್ಲಿ ಸರ್ಕಾರಿ ಶಾಲೆಗಳ ಕಂಟೇನರ್ ಶೌಚಾಲಯ ಉದ್ಘಾಟನಾ ಕಾರ್ಯಕ್ರಮ

ಕೊರಟಗೆರೆ: ತಾಲ್ಲೂಕಿನ ಕೋಳಾಲ ಹೋಬಳಿಯ ನೀಲಗೋಂಡನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಕರ್ನಾಟಕ ಪಬ್ಲಿಕ್ ಶಾಲೆ ಇರಕಸಂದ್ರ ಕಾಲೋನಿಯಲ್ಲಿ 30-07-2025ರಂದು ತಾಲೂಕಿನ ಆದ್ಯಂತ 70 ಶಾಲೆಗಳಲ್ಲಿ ಕಂಟೇನರ್ ಶೌಚಾಲಯವನ್ನು ನಿರ್ಮಾಣ ಮಾಡಿದ್ದು. ಇರಕಸಂದ್ರ ಕಾಲೋನಿಯ ಸರ್ಕಾರಿ ಹಿರಿಯ ಪ್ರಾಥಮಿಕ ಪ್ರೌಢ ಶಾಲೆಯಲ್ಲಿ ಗೃಹ ಸಚಿವರಾದ. ಡಾ: ಜಿ. ಪರಮೇಶ್ವರ್ ರವರು ಉದ್ಘಾಟನೆ ಮಾಡುವವರು ಎಂದು ಪೂರ್ವಭಾವಿ ಸಭೆ ಮಾಡಲಾಗಿತ್ತು.

ಮುಖಂಡರಾದ ಸೋಮಶೇಖರ್ ರವರು ಮಾತನಾಡಿ: 30-07-2025ರಂದು ಮಾನ್ಯ ಜನಪ್ರಿಯ ಶಾಸಕರು ಹಾಗೂ ಗೃಹ ಮಂತ್ರಿಗಳಾದ ಡಾ: ಜಿ. ಪರಮೇಶ್ವರ್ ರವರು ಕರ್ನಾಟಕ ಪಬ್ಲಿಕ್ ಶಾಲೆ ಇರಕಸಂದ್ರ ಕಾಲೋನಿಯಲ್ಲಿ ಕಂಟೇನರ್ ಶೌಚಾಲಯವನ್ನು ಉದ್ಘಾಟನೆ ಮಾಡಲಿದ್ದು. ಇಂದು ಖುದ್ದಾಗಿ ಸ್ಥಳ ಪರಿಶೀಲನೆ ಹಾಗೂ ಎಸ್. ಡಿ.ಎಂ.ಸಿ. ಉಪಾಧ್ಯಕ್ಷ ಹಾಗೂ ಸರ್ವ ಸದಸ್ಯರ ಸಭೆಯನ್ನು ಹಮ್ಮಿಕೊಂಡಿದ್ದು. ನಿಮ್ಮಗಳ ಸಹಕಾರ ಬಹಳ ಮುಖ್ಯ ಎಂದರು. ಇಂದಿನ ದಿನಗಳಲ್ಲಿ ಸರಕಾರಿ ಶಾಲೆಗಳ ಶೌಚಾಲಯ ಬಗ್ಗೆ ಪರಿಶೀಲನೆ ಮಾಡಿದಾಗ. ಕೆಲವು ಕಡೆ ಸರಿಯಾಗಿ ಇಲ್ಲದ ಕಾರಣ. ಡಾ. ಜಿ. ಪರಮೇಶ್ವರ್ ಅವರ ಅನುಮತಿ ಪಡೆದು. ಕೊರಟಗೆರೆ ತಾಲೂಕಿನ ಪ್ರತಿಯೊಂದು ಶಾಲೆಗೆ ಭೇಟಿ ನೀಡಿ. ಶೌಚಾಲಯಗಳ ಅಗತ್ಯವಿರುವ ಶಾಲೆಗಳ ಪಟ್ಟಿ ಮಾಡಿ. ಖಾಸಗಿ ಕಂಪನಿಯೊಂದಿಗೆ ಜೊತೆ ಮಾತನಾಡಿ. ತಾಲೂಕಿನ ಎಪ್ಪತ್ತು ಸರ್ಕಾರಿ ಶಾಲೆಗಳ ಇದೀಗ ಕಂಟೇನರ್ ಶೌಚಾಲಯ ನಿರ್ಮಾಣ ಮಾಡಿದ್ದು. ಶಾಲಾ ಮಕ್ಕಳಿಗೆ ಅನುಕೂಲ ಆಗಲಿ ಎಂದರು.

ಮೊದಲಿಗೆ ಕರ್ನಾಟಕ ಪಬ್ಲಿಕ್ ಶಾಲೆ ಇರಕಸಂದ್ರ ಕಾಲೋನಿ ಈ ಶಾಲೆಯನ್ನು ಶೌಚಾಲಯ ಉದ್ಘಾಟನೆ ಮಾಡಲು ಆಯ್ಕೆ ಮಾಡಲಾಗಿದೆ. ಹಿಂದನ ದಿನಗಳಲ್ಲಿ ನಾನು ಕೂಡ ಬಡ ವಿದ್ಯಾರ್ಥಿ ಆಗಿದ್ದು. ನಾನು ಓದುವ ಸಮಯದಲ್ಲಿ ಅನುಕೂಲಗಳ ವಂಚಿತರಾಗಿದ್ದೆ. ಅದನ್ನು ಗಮನದಲ್ಲಿಟ್ಟುಕೊಂಡು. ಈ ಶಾಲೆಯಲ್ಲಿ ಬ್ಯಾಗ್ ಗಳ ಅವಶ್ಯಕತೆ ಇದ್ದು ಈಗ ನನ್ನ ವೈಯಕ್ತಿಕವಾಗಿ ಶಾಲಾ ಮಕ್ಕಳಿಗೆ 600 ಜನ ವಿದ್ಯಾರ್ಥಿಗಳಿಗೆ ಉತ್ತಮವಾದ ಬ್ಯಾಕ್ ಕಿಟ್ಟನ್ನು ಕಾರ್ಯಕ್ರಮದಲ್ಲಿ ಕೊಡಲಾಗುತ್ತದೆ. ಈ ಶಾಲೆಯಲ್ಲಿ ಓದಿದ್ದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಹತ್ತರಿಂದ ಹದಿನೈದು ಜನರಿಗೆ ಪ್ರತಿಭಾ ಪುರಸ್ಕಾರ ಕೂಡ ಮಾಡಲಾಗುತ್ತದೆ. ಮಕ್ಕಳಿಗೆ ಓದುವುದಕ್ಕೆ ಅನುಕೂಲವಾಗಲೆಂದು ಹಣದ ಸಹಾಯ ಮಾಡುತ್ತೇನೆ. ಇದನ್ನು ಡಾ.: ಜಿ. ಪರಮೇಶ್ವರ್ ರವರಿಂದ ನೀಡಲಾಗುವುದು ಮತ್ತು ಈ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಯಶಸ್ವಿ ಆಗಲಿ. ಎಲ್ಲರ ಸಹಕಾರ ಅತ್ಯಗತ್ಯ ಯಾರದು ವೈಯಕ್ತಿಕ ಪ್ರತಿಷ್ಠೆಯಲ್ಲ ನಾನು ಇಲ್ಲಿ ತಾಲೂಕು ಜಿಲ್ಲಾ ಪಂಚಾಯಿತಿ ಅಭ್ಯರ್ಥಿ ಅಥವಾ ರಾಜಕೀಯ ಮಾಡಲು ಬಂದಿಲ್ಲ ನನ್ನ ವೈಯಕ್ತಿಕವಾಗಿ ವಿದ್ಯಾರ್ಥಿಗಳ ಅನುಕೂಲವಾಗಲೆಂದು ನನ್ನ ಸಣ್ಣ ಕಾಣಿಕೆ ವಿದ್ಯಾರ್ಥಿಗಳ ಅನುಕೂಲವಾಗಲೆಂದು ಇಲ್ಲಿ ಬಂದಿದ್ದೇನೆ ಎಂದು ಹೇಳಿದರು.
ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಪೈರೋಜ್ ಬೈಗಂ  ಸಿ.ಆರ್.ಪಿ. ರಾಮೇಗೌಡ. ಇಸಿಓ ರವಿಕುಮಾರ್. ಮುಖ್ಯ ಶಿಕ್ಷಕಿ ವಸುದಾ. ಬೆಟ್ಟೇಗೌಡ. ಎಸ್.ಡಿ.ಎಂ.ಸಿ. ಉಪಾಧ್ಯಕ್ಷ ಈಶ್ವರ್. ಮುಖಂಡರಾದ ಕೊಡ್ಲಾಪುರ ಮಂಜುನಾಥ್. ರೋಹಿತ್. ಗ್ರಾಮ ಪಂಚಾಯತಿ ಸದಸ್ಯರು ಹಾಗೂ ಎಸ್.ಡಿ.ಎಂ.ಸಿ. ಸರ್ವ ಸದಸ್ಯರು ಶಿಕ್ಷಕರು ಹಾಜರಿದ್ದರು.

Leave a Reply

Your email address will not be published. Required fields are marked *

error: Content is protected !!