ಗುಬ್ಬಿ ತಾಲೂಕಿನ ಕಡಬ ಹೋಬಳಿಯ ಮಾದರ ಮಹಾಸಭಾದ ಅಧ್ಯಕ್ಷರಾಗಿ ದಾಸರಕಲ್ಲಹಳ್ಳಿ ಲಕ್ಷ್ಮಣ್ ರವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು ಕಡಬ ಗ್ರಾಮದಲ್ಲಿ ಮಾದರ ಮಹಾಸಭಾ ಹೋಬಳಿ ಘಟಕ ರಚನೆಗೆ ಆಯೋಜನೆ ಮಾಡಲಾಗಿದ್ದ ಸಭೆಯಲ್ಲಿ ಗುಬ್ಬಿ ತಾಲೂಕು ಘಟಕದ ತಾಲೂಕು ಅಧ್ಯಕ್ಷರು ಹಾಗು ಪದಾಧಿಕಾರಿಗಳ ಸಮ್ಮುಖದಲ್ಲಿ ಕಡಬ ಹೋಬಳಿಯ ಎಲ್ಲಾ ಗ್ರಾಮಗಳ ಮಾದಿಗ ಸಮುದಾಯದ ಮುಖಂಡರು ಸೇರಿ ಹೋಬಳಿ ಮಟ್ಟದ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ಮಾದರ ಮಹಾ ಸಭಾದ ತಾಲೂಕು ಅಧ್ಯಕ್ಷ ಕೊಡೆಯಾಲ ಮಹದೇವ್ ರವರು ರಾಜ್ಯದಲ್ಲಿ ಮಾದಿಗ ಸಮಾಜಕ್ಕೆ ಉತ್ತಮ ಅವಕಾಶ ಬಂದಿದೆ ನಮ್ಮ ಹಿರಿಯ ಹೋರಾಟಗಾರರು ಚಿಂತಕರು ರಾಜಕೀಯ ಮುತ್ಸದಿಗಳು ಹೊಂದಾಗಿ ಮಾದರ ಮಹಾಸಭಾವನ್ನು ರಚಿಸಿದ್ದಾರೆ ನಮ್ಮ ಸಮುದಾಯದ ವಿದ್ಯಾರ್ಥಿಗಳಿಗೆ ಉನ್ನತ ಮಟ್ಟದ ವಿಧ್ಯಾಭ್ಯಾಸದ ಅನುಕೂಲಕ್ಕೆ ಸಹಕಾರ ಹಾಗೂ ಸಮುದಾಯ ಮುಖ್ಯವಾಗಿ ಸಾಮಾಜಿಕ ಶೈಕ್ಷಣಿಕ ಹಾರ್ಥಿಕ ಮತ್ತು ರಾಜಕೀಯವಾಗಿ ಮುಖ್ಯ ವಾಹಿನಿಗೆ ಬರುವ ಉದ್ದೇಶದಿಂದ ಈ ಮಾದರ ಮಹಾಸಭಾ ರಚನೆಯಾಗಿದೆ ಗುಬ್ಬಿ ತಾಲೂಕಿನ ಎಲ್ಲಾ ಮಾದಿಗ ಸಮಾಜದ ಜನರು ಜಾಗೃತರಾಗಿ ಸಂಘಟಿತರಾಗಿ ನಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಬೇಕಾಗಿದೆ ನಮ್ಮ ಸಮುದಾಯದ ಹಿರಿಯರ ಮಾರ್ಗದರ್ಶನದಂತೆ ಗುಬ್ಬಿ ತಾಲೂಕಿನ ಎಲ್ಲಾ ಗ್ರಾಮಗಳಲ್ಲಿ ಹೆಚ್ಚಿನದಾಗಿ ಮಾದರ ಮಹಾಸಭಾ ಸದಸ್ಯತ್ವವನ್ನು ಪಡೆಯಬೇಕೆಂದು ಸಮುದಾಯದ ಜನತೆಗೆ ಕರೆ ನೀಡಿದರು.
ಮಾದರ ಮಹಾಸಭಾ ತಾಲೂಕು ಉಪಾಧ್ಯಕ್ಷರು ಹಾಗೂ ಹಿರಿಯ ಹೋರಾಟಗಾರರಾದ ಪಾಂಡುರಂಗಯ್ಯನವರು ಮಾತನಾಡಿ ಹಲವಾರು ವರ್ಷಗಳಿಂದ ನಿರಂತರವಾಗಿ ಸಮುದಾಯದ ಏಳಿಗೆಗೆ ಹೋರಾಟ ಮಾಡುತ್ತಾ ಬಂದರೂ ಸಹ ಇಲ್ಲಿಯವರೆಗೂ ಸಮುದಾಯದ ಯುವಕರು ನಿರುದ್ಯೋಗ ಸಮಸ್ಯೆಯಿಂದ ಹಲವಾರು ದುಶ್ಚಟಗಳಿಗೆ ಬಲಿಯಾಗಿ ತಮ್ಮ ಜೀವನವನ್ನು ಹಾಳು ಮಾಡಿಕೊಂಡಿರುವ ನಿದರ್ಶನಗಳು ನಮ್ಮ ಕಣ್ಣ ಮುಂದೆ ಇವೆ ಹಲವಾರು ವರ್ಷಗಳಿಂದ ಮೀಸಲಾತಿ ಪಡೆಯಲು ನಿರಂತರ ಹೋರಾಟ ಮಾಡಿದರು ಸಹ ಹೋರಾಟದ ಪ್ರತಿಫಲವನ್ನು ಎಸ್ಸಿ ಜಾತಿಗೆ ಸೇರಿದ ಸ್ಪರ್ಶ ಸಮುದಾಯದವರು ಅದರ ಪ್ರತಿಫಲವನ್ನು ಪಡೆದು ಅಧಿಕಾರದ ಚುಕ್ಕಾಣಿಯನ್ನು ಹಿಡಿಯುವಲ್ಲಿ ಯಶಸ್ವಿಯಾಗಿ ಸರ್ಕಾರದ ಹಲವು ಯೋಜನೆಗಳನ್ನು ಪಡೆದಿದ್ದಾರೆ ಇತ್ತೀಚಿನ ದಿನಗಳಲ್ಲಿ ಒಳ ಮೀಸಲಾತಿಯ ಹೋರಾಟದ ಫಲವಾಗಿ ನಮಗೆ ದೊರೆತಿರುವ ಪಾಲನ್ನು ಪಡೆಯುವ ಸಂದರ್ಭ ಬಂದರೂ ಸಹ ನಮ್ಮ ಮಾದಿಗ ಸಮುದಾಯದಲ್ಲಿ ಉನ್ನತ ವಿದ್ಯಾಭ್ಯಾಸ ಮಾಡಿದ ಅಭ್ಯರ್ಥಿಗಳು ಇಲ್ಲವಾಗಿರುವುದು ನಮ್ಮ ದುರ್ದೈವವಾಗಿದೆ ಇವೆಲ್ಲವನ್ನೂ ಅಧ್ಯಯನ ಮಾಡಿದ ನಮ್ಮ ಸಮುದಾಯದ ಹಿರಿಯರು ಚಿಂತಕರು ಸೇರಿ ಮಾದರ ಮಹಾಸಭಾ ಮಾಡಲು ಮುಂದಾಗಿರುವುದು ಹೆಮ್ಮೆಯ ವಿಚಾರವಾಗಿದೆ ಹಾಗಾಗಿ ಇನ್ನು ನಾವು ಎಚ್ಚೆತ್ತುಕೊಂಡು ನಮ್ಮ ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸುವ ನಿಟ್ಟಿನಲ್ಲಿ ನಾವು ಆಲೋಚಿಸಬೇಕಾಗಿದೆ ಹಾಗಾಗಿ ಪ್ರತಿಯೊಬ್ಬರೂ ಸಹ ಜಾಗೃತರಾಗಿ ಮಾದರ ಮಹಾಸಭಾ ಸದಸ್ಯತ್ವವನ್ನು ಪಡೆಯುವ ಮೂಲಕ ನಮ್ಮ ಮಕ್ಕಳ ಭವಿಷ್ಯವನ್ನು ರೂಪಿಸುವತ್ತ ನಾವು ಚಿಂತನೆಯನ್ನು ನಡೆಸಬೇಕಾಗಿದೆ ಎಂದು ತಿಳಿಸಿದರು.
ಮಾದರ ಮಹಾಸಭಾ ತಾಲೂಕು ಕಾರ್ಯಕಾರಿ ಸಮಿತಿಯ ಸದಸ್ಯರಾದ ಮಂಜುನಾಥ್ ರವರು ಮಾತನಾಡಿ ಈ ದೇಶದ ಮೂಲ ನಿವಾಸಿಗಳು ಮಾತಂಗ ಸಮುದಾಯದವರು ಆದ ನಾವುಗಳು ನಮ್ಮ ಇತಿಹಾಸವನ್ನೇ ಮರೆತಿದ್ದೇವೆ . ಈ ದೇಶದಲ್ಲಿ ಹಲವಾರು ರಾಜರು ಮಾದಿಗ ಸಮುದಾಯಕ್ಕೆ ಸೇರಿದವರಾಗಿದ್ದರು ಸಹ ನಾವುಗಳು ಆರ್ಯರ ಒಳಸಂಚಿಗೆ ಗುರಿಯಾಗಿ ನಿರಂತರವಾಗಿ ತುಳಿತಕ್ಕೆ ಒಳಗಾಗುತ್ತ ಬಂದಿರುವುದು ಮತ್ತು ನಮ್ಮಲ್ಲಿ ಹೆಚ್ಚಿನದಾಗಿ ಮೌಡ್ಯತೆಗೆ ಮಾರುಹೋಗಿರುವುದು ವಿಪರ್ಯಾಸದ ಸಂಗತಿ ನಾವುಗಳು ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಆದರ್ಶಗಳನ್ನು ಓದುವ ಮೂಲಕ ಮೌಡ್ಯತೆಯಿಂದ ಹೊರಬಂದು ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸುವ ಕೆಲಸವನ್ನು ಮಾಡಬೇಕಾಗಿದೆ ನಮ್ಮ ಮಕ್ಕಳ ಮುಂದಿನ ಭವಿಷ್ಯ ಉಜ್ವಲವಾಗಬೇಕಾದರೆ ಮಾದರ ಮಹಾಸಭಾ ಸದಸ್ಯತ್ವವನ್ನು ಪಡೆಯುವ ಮೂಲಕ ಜಿಲ್ಲಾ ಮತ್ತು ತಾಲೂಕುಗಳಲ್ಲಿ ಮಹಾಸಭಾ ವತಿಯಿಂದ ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸಲು ಶಿಕ್ಷಣ ಸಂಸ್ಥೆಗಳು ವಸತಿ ನಿಲಯಗಳು ಮಾದರ ಮಹಾಸಭಾ ಸಮುದಾಯ ಭವನಗಳನ್ನು ನಿರ್ಮಿಸುವುದರ ಮೂಲಕ ಸಮುದಾಯದ ಏಳಿಗೆಗೆ ನಾವೆಲ್ಲರೂ ಶ್ರಮಿಸಬೇಕಾದ ಅನಿವಾರ್ಯತೆ ಬಂದಿದೆ ಹಾಗಾಗಿ ಗುಬ್ಬಿ ತಾಲೂಕಿನಲ್ಲಿ ಅತಿ ಹೆಚ್ಚಿನದಾಗಿ ಮಾದರ ಮಹಾಸಭಾ ಸದಸ್ಯತ್ವವನ್ನು ಪ್ರತಿ ಗ್ರಾಮಗಳ ಕಾಲೋನಿಗಳಲ್ಲಿ ಜಾಗೃತಿ ಮೂಡಿಸುವ ಮೂಲಕ ನಾವು ಜಾಗೃತರಾಗಿ ಸಮುದಾಯ ಮುಖ್ಯ ವಾಹಿನಿಗೆ ಬರಲು ಶ್ರಮಿಸಬೇಕಾಗಿದೆ ಎಂದು ತಿಳಿಸಿದರು.
ನಿವೃತ್ತ ಮುಖ್ಯ ಶಿಕ್ಷಕರಾದ ಬೆಲವತ್ತ ಶಿವಣ್ಣನವರು ಮಾತನಾಡಿ ಹಿಂದಿನ ದಿನಗಳಲ್ಲಿ ನಮ್ಮ ಮಾದಿಗ ಸಮುದಾಯದ ಪೋಷಕರು ಕಡು ಬಡತನದಲ್ಲಿದ್ದರೂ ಸಹ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಬೇಕಾದ ಸಂದರ್ಭದಲ್ಲಿ ವಿದ್ಯಾರ್ಥಿ ನಿಲಯಗಳಲ್ಲಿ ಸೇರಿಸುತ್ತಿದ್ದರು ವಿದ್ಯಾರ್ಥಿ ನಿಲಯಗಳಲ್ಲಿ ಯಾವುದೇ ರೀತಿಯ ಉತ್ತಮವಾದ ವ್ಯವಸ್ಥೆ ಇಲ್ಲದಿದ್ದರೂ ಸಹ ಕೇವಲ ತಿಂಡಿ ಊಟ ಮಾಡುವ ಮೂಲಕ ವಿದ್ಯಾಭ್ಯಾಸ ಮಾಡಿ ಸರ್ಕಾರಿ ಹುದ್ದೆಯನ್ನು ಪಡೆದುಕೊಂಡು ಸರ್ಕಾರಿ ಸೇವೆ ಮಾಡುವುದರ ಜೊತೆಗೆ ಸಮುದಾಯದ ಅನಕ್ಷರತೆಯನ್ನು ತೊಡೆದು ಹಾಕುವಂತ ಕೆಲಸವನ್ನು ಮಾಡಿದಂತಹ ಮಹನೀಯರ ಇತಿಹಾಸವಿದೆ ಆದರೆ ಇತ್ತೀಚಿನ ದಿನಗಳಲ್ಲಿ ನಮ್ಮ ಸಮುದಾಯದ ವಿದ್ಯಾರ್ಥಿಗಳಿಗೆ ಸರ್ಕಾರ ಹಲವಾರು ಸೌಲಭ್ಯಗಳನ್ನು ನೀಡಿದರು ಸಹ ವಿದ್ಯಾಭ್ಯಾಸದ ಕಡೆ ಗಮನ ಹರಿಸದೆ ವಿದ್ಯಾಭ್ಯಾಸದಿಂದ ವಂಚಿತರಾಗಿ ನಾನಾ ರೀತಿಯ ದುಶ್ಚಟಗಳಿಗೆ ಬಲಿಯಾಗುತ್ತಿರುವುದನ್ನು ನಾವುಗಳು ಕಣ್ಣಾರೆ ಕಾಣುತ್ತಿದ್ದೇವೆ ಇದೇ ರೀತಿ ಮುಂದುವರೆದರೆ ಮುಂದಿನ ದಿನಗಳಲ್ಲಿ ಮಾದಿಗ ಸಮುದಾಯ ಮತ್ತೆ ಅನಕ್ಷರತೆಯ ಹಾದಿ ಹಿಡಿದು ಮೂಢನಂಬಿಕೆಗೆ ಮಾರುಹೋಗುವುದು ನಿಜಕ್ಕೂ ನಮ್ಮೆಲ್ಲರಿಗೂ ಆಘಾತಕಾರಿ ವಿಷಯವಾಗಿದೆ ಹಾಗಾಗಿ ಸಮುದಾಯದ ಪೋಷಕರು ತಮ್ಮ ಮಕ್ಕಳ ವಿದ್ಯಾಭ್ಯಾಸದ ಕಡೆಗೆ ಹೆಚ್ಚಿನ ಗಮನ ಹರಿಸಿ ಅವರಿಗೆ ಉನ್ನತ ಶಿಕ್ಷಣ ಕೊಡಿಸುವ ಮೂಲಕ ಈ ಸಮಾಜದ ಮೌಡ್ಯತೆಯನ್ನು ಅಳಿಸಿ ಜ್ಞಾನದ ಮಾರ್ಗವನ್ನು ತೋರಿಸಬೇಕೆಂದು ನನ್ನ ಸಮುದಾಯದ ಜನರಿಗೆ ನಾನು ಕಳಕಳಿಯ ವಿನಂತಿ ಮಾಡುತ್ತಿದ್ದೇನೆ ಅದರ ಜೊತೆಯಲ್ಲಿ ಇಂದು ಕಡಬ ಹೋಬಳಿ ಶಾಖೆಗೆ ಆಯ್ಕೆ ಯಾಗಿರುವ ನೂತನ ಪದಾಧಿಕಾರಿಗಳು ಪ್ರತಿಯೊಂದು ಗ್ರಾಮಗಳಲ್ಲಿ ಜಾಗೃತಿ ಮೂಡಿಸುವ ಮೂಲಕ ಸಂಘಟನೆಗೆ ಬಲ ತುಂಬುವ ಕೆಲಸ ಮಾಡಬೇಕೆಂದು ತಿಳಿಸಿದ ನಂತರ ಮಾದರ ಮಹಾಸಭಾದ ಈ ಉತ್ತಮ ಆಲೋಚನೆಯೊಂದಿಗೆ ನಾವು ಸದಾ ಜೊತೆಯಲ್ಲಿ ಇರುತ್ತೇವೆ ಎಂದು ತಿಳಿಸಿದರು.
ಕಡಬ ಹೋಬಳಿ ಮಾದರ ಮಹಾಸಭಾ ಅಧ್ಯಕ್ಷರಾಗಿ ಲಕ್ಷ್ಮಯ್ಯ ಡಿಎಂ ದಾಸರಕಲ್ಲಳ್ಳಿ , ಉಪಾಧ್ಯಕ್ಷರಾಗಿ ಸುರೇಶ್ ಕೆಆರ್ ಕಡಬ, ಕಾರ್ಯದರ್ಶಿಯಾಗಿ ಬಸವರಾಜು ಜೀಗನಹಳ್ಳಿ, ಸಂಘಟನಾ ಕಾರ್ಯದರ್ಶಿಯಾಗಿ ರಾಮಕೃಷ್ಣ ಕಡಬ, ಖಜಾಂಚಿಯಾಗಿ ಕುಮಾರ್ ಬ್ಯಾಡಗೇರೆ ಹಾಗೂ ಹೋಬಳಿಯ ಕಾರ್ಯಕಾರಿಣಿ ಸಮಿತಿಯ ಸದಸ್ಯರಾಗಿ ಬಸವರಾಜು ಮಾರಶೇಟ್ಟಿಹಳ್ಳಿ, ನಾರಾಯಣಪ್ಪ ಹಾಗೂ ಇತರರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ಕಡಬ ಹೋಬಳಿ ಶಾಖೆಯ ಪದಾಧಿಕಾರಿಗಳ ಆಯ್ಕೆ ಸಮಿತಿ ಸಭೆಯಲ್ಲಿ ಗುಬ್ಬಿ ತಾಲೂಕು ಮಾದರ ಮಹಾಸಭಾ ಅಧ್ಯಕ್ಷರಾದ ಮಹದೇವ್ ಕೊಡಿಯಾಲ, ಉಪಾಧ್ಯಕ್ಷರಾದ ಪಾಂಡುರಂಗಯ್ಯ, ಪಣೀಂದ್ರ, ತಾಲೂಕು ಕಾರ್ಯದರ್ಶಿ ಶ್ರೀಧರ್ ದಾಸರಕಹಳ್ಳಿ, ಸಂಘಟನಾ ಕಾರ್ಯದರ್ಶಿ ಬಸವರಾಜು ಹೋಸಕೇರೆ, ಖಜಾಂಚಿ ಆನಂದ್, ಕಾರ್ಯಕಾರಿಣಿ ಸಮಿತಿ ಸದಸ್ಯ ಮಂಜುನಾಥ್, ನಿವೃತ್ತ ಶಿಕ್ಷಕರಾದ ಬಿಸಿ ಶಿವಣ್ಣ ತಾಲೂಕು ದಲಿತ ಸಂಘರ್ಷ ಸಮಿತಿ ಸಂಚಾಲಕರಾದ ಕಡಬ ಶಂಕರ್, ರಾಘವೇಂದ್ರ ಕರೆಗೌಡನಹಳ್ಳಿ, ಕಸಬ ಹೋಬಳಿ ಮಾದರ ಮಹಾಸಭಾ ಅಧ್ಯಕ್ಷ ದೇವರಾಜು ಮಡೇನಹಳ್ಳಿ, ಮುಖ್ಯ ಶಿಕ್ಷಕರಾದ ಶಿವಣ್ಣ, ಕಲ್ಲೂರು, ಕಲ್ಲೇಶ್ ಕೋಟೆ, ಈಶ್ವರಯ್ಯ ಅದಲಗೇರೆ, ನಟರಾಜು ಕುಂದುರನಹಳ್ಳಿ, ರಾಮು ಮುಂಚಿಹಳ್ಳಿ, ಹಾಗೂ ಕಡಬ ಹೋಬಳಿಯ ಹಲವಾರು ಗ್ರಾಮಗಳ ಮಾದಿಗ ಸಮುದಾಯದ ಮುಖಂಡರು ಉಪಸ್ಥಿತರಿದ್ದರು.