ತುಮಕೂರು:ವಿದ್ಯಾರ್ಥಿ,ಯುವಜನರಿಗೆ ಎಲ್ಲಾ ಕಲೆಗಳ ತಾಯಿಬೇರಾಗಿರುವ ಜನಪದ ಕಲೆಯನ್ನು ಪರಿಚಯಿಸುವ ನಿಟ್ಟಿನಲ್ಲಿ ಶ್ರೀವಿನಾಯಕ ಕಲಾ ಸಂಘ ಹಮ್ಮಿಕೊಂಡಿರುವ ಜನಪದ ಸಂಭ್ರಮ ಅತ್ಯಂತ ಅರ್ಥಪೂರ್ಣವಾಗಿದೆ ಎಂದು ಕಲಾಶ್ರೀ ಡಾ.ಲಕ್ಷ್ಮಣದಾಸ್ ತಿಳಿಸಿದ್ದಾರೆ.
ತುಮಕೂರು ತಾಲೂಕು ಸ್ವಾಂದೇನಹಳ್ಳಿ ಗ್ರಾಮದಲ್ಲಿ ಶ್ರೀವಿನಾಯಕ ಸಾಂಸ್ಕøತಿಕ ಕಲಾ ಸಂಘ(ರಿ),ಬೆಜ್ಜಿಹಳ್ಳಿ,ಶಿರಾ ತಾಲೂಕು ಇವರು ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ತುಮಕೂರು ವಿವಿ ಸಮಾಜ ಕಾರ್ಯ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಜನಪದ ಸಂಭ್ರಮ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತಿದ್ದ ಅವರು,ತುಮಕೂರು ವಿವಿ ವಿದ್ಯಾಲಯದ ಅಡಿಯಲ್ಲಿ ಎನ್.ಎಸ್.ಎಸ್.ವಿಶೇಷ ಶಿಬಿರಕ್ಕೆ ರಾಜ್ಯದ ಮೂಲೆ ಮೂಲೆಗಳಿಂದ ಬಂದಿರುವ ವಿದ್ಯಾರ್ಥಿಗಳು,ಜನಪದ ಸಂಭ್ರಮದಲ್ಲಿ ಈ ಭಾಗದ ಸಾಂಸ್ಕøತಿಕ ಕಲಾಪ್ರಕಾರಗಳ ಪರಿಚಯ ಮಾಡಿಕೊಟ್ಟಂತಾಗಿದೆ ಎಂದರು.
ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸುರೇಶಕುಮಾರ್ ಮಾತನಾಡಿ,ಜನಪದ ಸಂಭ್ರಮ ಎಂಬ ಹೆಸರಿನೊಂದಿಗೆ ಒಂದು ಒಳ್ಳೆಯ ಕಾರ್ಯಕ್ರಮ.ಜನರು ನಮ್ಮ ಮೂಲ ಕಲೆಗಳಾದ ಜನಪದ,ರಂಗಗೀತೆಗಳನ್ನು ಆಸ್ವಾದಿಸುತ್ತಿರುವುದು. ಇಲಾಖೆ ಕಾರ್ಯಕ್ರಮಕ್ಕೆ ಸಹಕಾರ ನೀಡಿರುವುದಕ್ಕೆ ಸಾರ್ಥಕತೆ ಬಂದಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸ್ವಾಂದೇನಹಳ್ಳಿ ಗ್ರಾ.ಪಂ,ಅಧ್ಯಕ್ಷೆ ಮಹಾಲಕ್ಷ್ಮಿ ಮಾತನಾಡಿ,ತುಮಕೂರು ವಿವಿ ಸಮಾಜ ಕಾರ್ಯವಿಭಾಗದಿಂದ ನಮ್ಮೂರಿನಲ್ಲಿ ಕಳೆದ 7 ದಿನಗಳಿಂದ ನಡೆಸುತ್ತಿರುವ ವಿಶೇಷ ಶಿಬಿರದಿಂದ ಈ ಭಾಗದ ಜನರಿಗೆ ಹೆಚ್ಚು ಅನುಕೂಲವಾಗಿದೆ. ಪ್ರತಿದಿನ ಸಂಜೆ ಒಂದೊಂದು ಇಲಾಖೆ ಮುಖ್ಯಸ್ಥರು ಆಗಮಿಸಿ, ತಮ್ಮ ಇಲಾಖೆಯ ಮಾಹಿತಿ ನೀಡುವುದರ ಜೊತೆಗೆ, ಸರಕಾರದ ಸವಲತ್ತುಗಳನ್ನು ಹೇಗೆ ಬಳಕೆ ಮಾಡಿಕೊಂಡು ಅಭಿವೃದ್ದಿ ಹೊಂದಬಹುದು ಎಂಬುದನ್ನು ಮನವರಿಕೆ ಮಾಡಿಕೊಟ್ಟಿದ್ದಾರೆ.ಇಂದು ಶ್ರೀವಿನಾಯಕ ಕಲಾ ಸಂಘದ ನೇತೃತ್ವದಲ್ಲಿ ನಡೆಯುತ್ತಿರುವ ಸಾಂಸ್ಕøತಿಕ ಕಾರ್ಯಕ್ರಮ ಜನಪದ ಸಂಭ್ರಮ ಇಡೀ ಗ್ರಾಮದಲ್ಲಿ ಹಬ್ಬದ ವಾತಾವರಣ ನಿರ್ಮಿಸಿದೆ, ಸಾಂಸ್ಕøತಿಕ ಮೆರವಣಿಗೆ ಒಂದು ಜಾನಪದ ಲೋಕವನ್ನೇ ಸೃಷ್ಟಿಸಿದೆ.ಇದಕ್ಕೆ ಕಾರಣರಾದ ಎಲ್ಲರಿಗೂ ಅಭಿನಂದನೆ ಸಲ್ಲಿಸುವುದಾಗಿ ನುಡಿದರು.
ಎನ್.ಎಸ್.ಎಸ್.ಶಿಬಿರಾಧಿಕಾರಿ ಡಾ.ನಿಸರ್ಗಪ್ರಿಯ ಮಾತನಾಡಿ,ಸ್ವಾಂದೇನಹಳ್ಳಿ ಗ್ರಾಮದಲ್ಲಿ ನಮ್ಮ ವಿವಿಯಿಂದ ನಡೆಯುತ್ತಿರುವ ವಿಶೇಷ ವಾರ್ಷಿಕ ಶಿಬಿರದಲ್ಲಿ ಪ್ರತಿದಿನ ಒಂದೊಂದು ವಿಚಾರದ ಬಗ್ಗೆ ಗ್ರಾಮಸ್ಥರಿಗೆ ಮಾಹಿತಿಯ ಜೊತೆಗೆ, ಸ್ವಚ್ಚತೆ ಮತ್ತು ಆರೋಗ್ಯದ ಬಗ್ಗೆ ಅರಿವು ಮೂಡಿಸುವ ಕೆಲಸವನ್ನು ಮಾಡಲಾಗುತ್ತಿದೆ. ಶ್ರೀದೇವಿ ಆಸ್ಪತ್ರೆಯ ಸಹಯೋಗದಲ್ಲಿ ಆರೋಗ್ಯ ಶಿಬಿರದ ಜೊತೆಗೆ, ಸರಕಾರದ ವಿವಿಧ ಇಲಾಖೆಗಳಿಂದ ಜನರಿಗೆ ಸಿಗುವ ಸವಲತ್ತುಗಳ ಬಗ್ಗೆಯೂ ಜನರಿಗೆ ಅರಿವು ಮೂಡಿಸಲಾಗುತ್ತಿದೆ.ಇದರಿಂದ ಜನರಿಗೂ ಹಾಗೂ ವಿದ್ಯಾರ್ಥಿಗಳಿಗೂ ಹೆಚ್ಚಿನ ಉಪಯೋಗವಾಗಿದೆ ಎಂದರು.