ಹೇಮಾವತಿ ಎಕ್ಸ್ ಪ್ರೆಸ್ ಲಿಂಕ್ ಕೆನಾಲ್ ಕಾಮಗಾರಿ ವಿರುದ್ಧ ಪುಡಿದೆದ್ದ ಹೋರಾಟ ಸಮಿತಿ ಜೂ.25ಕ್ಕೆ ಜಿಲ್ಲಾ ಬಂದ್ ಗೆ ಕರೆ

: ಹೇಮಾವತಿ ಎಕ್ಸ್ ಪ್ರೆಸ್ ಲಿಂಕ್ ಕೆನಾಲ್ ಕಾಮಗಾರಿ ವಿರುದ್ಧ ಪುಡಿದೆದ್ದ ಹೋರಾಟ ಸಮಿತಿ ಜೂ.25ಕ್ಕೆ ಜಿಲ್ಲಾ ಬಂದ್ ಗೆ ಕರೆ ಹಿನ್ನೆಲೆ ಗುಬ್ಬಿ ಪ್ರವಾಸ ಮಂದಿರದಲ್ಲಿ ಪೂರ್ವಭಾವಿ ಸಭೆ ನಡೆಸಲಾಯಿತು.

 

 

ಮಾಗಡಿಯ ಶ್ರೀರಂಗ ಏತ ಯೋಜನೆಗೆ ಕುಣಿಗಲ್‌ನಿಂದ ಹೇಮಾವತಿ ನೀರು ಹರಿಸಲು ಎಕ್ಸ್‌ಪ್ರೆಸ್‌ ಕೆನಾಲ್‌ ಯೋಜನೆಗೆ ಡಿಸಿಎಂ ಡಿ.ಕೆ ಶಿವಕುಮಾರ್ ಚಾಲನೆ ಕೊಟ್ಟಿದ್ರು. ಯೋಜನೆ ಜಾರಿಯಾದಾಗಿನಿಂದ ರೈತರು ಹಾಗೂ ಜನಪ್ರತಿನಿಧಿಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದು, ತುಮಕೂರು ಜನರ ಆತಂಕಕ್ಕೂ ಕಾರಣವಾಗಿದೆ. ಹಾಸನದಿಂದ ಹರಿದು ಬರೋ ಹೇಮಾವತಿ ನೀರು ತುಮಕೂರಿಗೆ ಜೀವನದಿಯಾಗಿದೆ. ಇದೀಗ ಅದೇ ನೀರನ್ನ ಹೇಮಾತಿ ಎಕ್ಸ್‌ಪ್ರೆಸ್‌ ಲಿಂಕ್ ಕೆನಾಲ್‌ ಮೂಲಕ ಕುಣಿಗಲ್‌ನಿಂದ ಮಾಗಡಿಗೆ ನೀರು ಹರಿಸೋದಕ್ಕೆ ವಾಮ ಮಾರ್ಗದಲ್ಲಿ ಕೊಂಡೊಯ್ಯಲು ಮುಂದಾಗಿರುವ ಹಿನ್ನೆಲೆ ಹೇಮಾವತಿ ಎಕ್ಸ್ ಪ್ರೆಸ್ ಲಿಂಕ್ ಕೆನಾಲ್ ಹೋರಾಟ ಸಮಿತಿಯು ಜೂನ್ 25 ಕ್ಕೆ ಜಿಲ್ಲಾ ಬಂದ್ ಗೆ ಕರೆ ನೀಡಿದೆ.

 

 

 

ಕಾಗ್ರೆಸ್ ಪಕ್ಷವು ತನ್ನ ಅಧಿಕಾರವನ್ನು ದುರುಪಯೋಗ ಪಡಿಸಿಕೊಂಡು ಹೋರಾಟವನ್ನು ಹತ್ತಿಕ್ಕುವ ನಿಟ್ಟಿನಲ್ಲಿ ಗೃಹ ಸಚಿವ ಡಾ.ಜಿ ಪರಮೇಶ್ವರ ಮನೆಯ ಮುಂದೆ ಹೋರಾಟಕ್ಕೆ ಹೋಗುವವರನ್ನು ಎಲ್ಲೆಂದರಲ್ಲಿ ಬಂಧನ ಮಾಡಿ ರಾಜ್ಯ ಸರ್ಕಾರವು ಹೋರಾಟವನ್ನು ಹತ್ತಿಕ್ಕುವ ಕೇಕಾದ ಮಾಡುತ್ತಿರುವುದು ಸರಿಯಲ್ಲ. ಕಳೆದ 20 ವರ್ಷದ ಹಿಂದೆ ಹೇಮೆಯು ತುಮಕೂರು ಜಿಲ್ಲೆಗೆ ವರವೋ ಶಾಪವೋ ಎಂದು ವ್ಯಾಖ್ಯಾನಿಸಲಾಗಿದ್ದು, ಅದು ಈಗ ಸತ್ಯವಾಗುವ ಸಾಧ್ಯತೆ ಇದೆ. ಈಗಲಾದರೂ ಈ ಭಾಗದ ಹೋರಾಟಗಾರರು ಮೈಸೂರು ಮಂಡ್ಯ ಭಾಗದ ರೈತರ ಹೋರಾಟದ ಕಿಚ್ಚನ್ನು ಹಚ್ಚಿಕೊಳ್ಳುವ ಸಮಯ ಇದೀಗ ಒದಗಿ ಬಂದಿದೆ ಎಂದು ಹೋರಾಟಗಾರರಿಗೆ ಬಿಜೆಪಿ ಅಧ್ಯಕ್ಷ ಬಿ.ಎಸ್ ಪಂಚಾಕ್ಷರಿ ಕರೆ ನೀಡಿದರು.

 

 

ಈಗಾಗಲೇ ಹೇಮಾವತಿ ಎಕ್ಸ್ ಪ್ರೆಸ್ ಲಿಂಕ್ ಕೆನಾಲ್ ಕಾಮಗಾರಿಯನ್ನು ಪ್ರಾರಂಭಿಸಲು ರಾಮನಗರ ಮಾಗಡಿ ಭಾಗದ ರೈತರು ಸರ್ಕಾರಕ್ಕೆ ಕಡುವು ನೀಡಿದ್ದು, ಅದರಂತೆ ನಾವು ಸಹ ಸರ್ಕಾರಕ್ಕೆ ಕಡುವು ನೀಡುತ್ತಿದ್ದು, ಅವೈಜ್ಞಾನಿಕವಾಗಿ ಕಾಮಗಾರಿ ನಡೆಸುತ್ತಿರುವುದನ್ನು ತಕ್ಷಣ ಸ್ಥಗಿತಗೊಳಿಸುವ ಕೆಲಸ ಸರ್ಕಾರವು ಮಾಡಬೇಕಿದೆ. ನಾಲೆಯಿಂದ ಮೇಲ್ಭಾಗ ಎರಡು ಅಡಿ ಎತ್ತರದಲ್ಲಿ ಪೈಪ್ ಲೈನ್ ಹಾಕಬೇಕಿದ್ದು, ಆದರೆ 10 ಅಡಿ ಕೆಳಭಾಗದಿಂದ ಪೈಪ್ ಲೈನ್ ಮಾಡುತ್ತಿದ್ದು, ಇದರಿಂದ ಪೂರ್ಣವಾದ ನೀರು ಸರಾಗವಾಗಿ ಹರಿದು ಹೋಗುತ್ತದೆ. ಹಾಗಾಗಿ ಸರ್ಕಾರವು ತಕ್ಷಣವೇ ಕಾಮಗಾರಿಯನ್ನು ಸ್ಥಗಿತಗೊಳಿಸುವಂತೆ ಒತ್ತಾಯಿಸಿ ಇದೆ ತಿಂಗಳ 25 ರಂದು ಜಿಲ್ಲಾ ಬಂದ್ ಗೆ ಜಿಲ್ಲಾ ಹೋರಾಟ ಸಮಿತಿ ಕರೆ ನೀಡಿದ ಹಿನ್ನೆಲೆ ಬಂದ್ ಯಶಸ್ವಿಗೆ ಹೋಬಳಿ ಕೇಂದ್ರಗಳಲ್ಲಿ ಹಾಗೂ ಪಟ್ಟಣದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸಿ ಸರ್ಕಾರಕ್ಕೆ ಜಿಲ್ಲೆಯ ತಾಕತ್ತು ತೋರಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಬಿಜೆಪಿ ಮುಖಂಡ ಎಸ್ ಡಿ ದಿಲೀಪ್ ಕುಮಾರ್ ತಿಳಿಸಿದರು.

 

 

ಜಿಲ್ಲಾ ಹೋರಾಟ ಸಮಿತಿ ಜೂನ್ 25 ರಂದು ಜಿಲ್ಲಾ ಬಂದ್ ಗೆ ಕರೆ ನೀಡಿದ್ದು, ಆಯಾ ತಾಲೂಕಿನಲ್ಲಿ ಬಂದ್ ಯಶಸ್ವಿಗೆ ಮುಖಂಡರು ಹಾಗೂ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ತಾಲೂಕು ಬಂದ್ ಮಾಡಿದ್ದೇ ಆದಲ್ಲಿ ಜಿಲ್ಲಾ ಬಂದ್ ಯಶಸ್ವಿಯಾಗುವ ಹಿನ್ನೆಲೆ ಇಂದು ಅದರ ಪೂರ್ವಭಾವಿ ಸಭೆಯನ್ನು ಇಂದು ಹಮ್ಮಿಕೊಂಡಿದ್ದು, ಈ ಬಂದ್ ನಲ್ಲಿ ಕೇಂದ್ರ ಸಚಿವ ವಿ.ಸೋಮಣ್ಣ ಹಾಗೂ ಮಾಜಿ ಸಂಸದ ಜಿ ಎಸ್ ಬಸವರಾಜ್ ಸಹ ಸಾದ್ ನೀಡಲಿದ್ದಾರೆ. ಕಳೆದ ಹೋರಾಟದಲ್ಲಿ ಹೋರಾಟದ ಪ್ರಮುಖರನ್ನು ಗೃಹ ಬಂಧನದ ರೀತಿಯಲ್ಲಿ ಮನೆಗಳಿಗೆ ತೆರಳಿ ಬಂಧನ ಮಾಡುವ ಮೂಲಕ ಹೋರಾಟವನ್ನು ಹತ್ತಿಕ್ಕುವ ಕೆಲಸವನ್ನು ರಾಜ್ಯ ಸರ್ಕಾರವು ಮಾಡಿದ್ದು, ಈ ರೀತಿಯಲ್ಲಿ ಮತ್ತೊಮ್ಮೆ ಹೋರಾಟವನ್ನು ಹತ್ತಿಕ್ಕುವ ಪ್ರಯತ್ನಕ್ಕೆ ಮುಂದಾದಲ್ಲಿ ಅದಕ್ಕೆ ತಕ್ಕ ಬೆಲೆಯನ್ನು ಸರ್ಕಾರವೇ ಭರಿಸಬೇಕಾಗುತ್ತದೆ ಎಂದು ರಾಜ್ಯ ಸರ್ಕಾರಕ್ಕೆ ಜೆಡಿಎಸ್ ಮುಖಂಡ ಬಿ.ಎಸ್ ನಾಗರಾಜ್  ಎಚ್ಚರಿಕೆಯನ್ನು  ನೀಡಿದರು.

 

 

ರಾಮನಗರ ಮಾಗಡಿ ಭಾಗದಲ್ಲಿ ಹೇಮಾವತಿ ಎಕ್ಸ್ ಪ್ರೆಸ್ ಲಿಂಕ್ ಕೆನಾಲ್ ಕಾಮಗಾರಿ ಆರಂಭಿಸಲು ಸರ್ಕಾರಕ್ಕೆ ಗಡುವು ನೀಡಿದ್ದು, ಇದೀಗ ತುಮಕೂರು ಜಿಲ್ಲೆಯ ರೈತರು, ಹೋರಾಟಗಾರರು ನಮ್ಮ ನೀರು ನಮ್ಮ ಹಕ್ಕು ಎನ್ನುವಂತೆ ಯಾವುದೇ ಕಾರಣಕ್ಕೂ ಕಾಮಗಾರಿಯನ್ನು ನಡೆಸದೆ ವಾಪಸ್ ಪಡೆಯುವವರೆಗೂ ನಮ್ಮ ಹೋರಾಟ ನಿಲ್ಲದು ಎಂಬ ಸಂದೇಶವನ್ನು ಜೂನ್ 25 ಕ್ಕೆ ನೀಡಿರುವ ಜಿಲ್ಲಾ ಬಂದ್ ಮೂಲಕ ತಿಳಿಸಲು ಸಮಿತಿಯು ಮುಂದಾಗಿದೆ.

 

 

 

ಈ ಸಭೆಯಲ್ಲಿ ರೈತ ಸಂಘದ ಅಧ್ಯಕ್ಷ ವೆಂಕಟೇಗೌಡ, ಮಾಜಿ ತಾಪಂ ಅಧ್ಯಕ್ಷೆ ಸಿದ್ದಗಂಗಮ್ಮ, ಕಳ್ಳಿಪಾಳ್ಯ ಲೋಕೇಶ್, ಬೈರಪ್ಪ, ಬೆಟ್ಟಸ್ವಾಮಿ, ಸಿದ್ದರಾಮಣ್ಣ, ಸುರೇಶ್ ಗೌಡ, ಪರಮೇಶ್, ಯಲ್ಲಪ್ಪ, ಶಂಕರ್ ಕುಮಾರ್, ಲೋಕೇಶ್, ಸೇರಿದಂತೆ ವಿವಿಧ ಪಕ್ಷದ ಮುಖಂಡರು ಸಂಘ ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.

 

 

Leave a Reply

Your email address will not be published. Required fields are marked *