ಗುಬ್ಬಿ ಸಾರ್ವಜನಿಕ ಅಸ್ಪತ್ರೆಯಲ್ಲಿ ಉಚಿತ ನೇತ್ರ ಶಸ್ತ್ರ ಚಿಕಿತ್ಸಾ ಶಿಬಿರಕ್ಕೆ ಚಾಲನೆ

ಗುಬ್ಬಿ ಸುದ್ದಿ

ಗುಬ್ಬಿ ಸಾರ್ವಜನಿಕ ಅಸ್ಪತ್ರೆಯಲ್ಲಿ ಜಿಲ್ಲಾ ಅಂಧತ್ವ ನಿವಾರಣಾ ಸಂಸ್ಥೆ, ಜಿಲ್ಲಾ ಆರೋಗ್ಯ ಇಲಾಖೆ, ಗುಬ್ಬಿ ತಾಲೂಕು ಆರೋಗ್ಯ ಇಲಾಖೆ ಹಾಗೂ ಶಂಕರ ಕಣ್ಣಿನ ಆಸ್ಪತ್ರೆ ಬೆಂಗಳೂರು ಇವರ ಸಂಯುಕ್ತಾಶ್ರಯದಲ್ಲಿ ಆರೋಗ್ಯ ತುಮಕೂರು ಅಭಿಯಾನದಡಿಯಲ್ಲಿ ಉಚಿತ ನೇತ್ರ ಶಸ್ತ್ರ ಚಿಕಿತ್ಸಾ ಶಿಬಿರಕ್ಕೆ ಜಿಲ್ಲಾ ಅಂಧತ್ವ ನಿವಾರಣಾ ಸಂಸ್ಥೆಯ ಜಿಲ್ಲಾ ಅಧಿಕಾರಿ ರವೀಂದ್ರ ನಾಯಕ್ ಚಾಲನೆ ನೀಡಿದರು.

 

 

 

ಕಾರ್ಯಕ್ರಮವನ್ನು ಉದ್ದೇಶಿಸಿ ತಾಲೂಕು ವೈದ್ಯಾಧಿಕಾರಿ ಡಾ.ಬಿಂದು ಮಾಧವ ಮಾತನಾಡಿ ವಯಸ್ಸು ಹೆಚ್ಚಾದಂತೆ ಕಣ್ಣಿಗೆ ಪೊರೆ ಬರುವ ಮೂಲಕ ವೃದ್ಧರು ಮತ್ತೊಬ್ಬರಿಗೆ ಅವಲಂಬಿತರಾಗದೆ ತಮ್ಮ ದೈನಂದಿನ ಕೆಲಸಗಳನ್ನು ತಾವೆ ಮುಂದುವರೆಸಲು ಕಣ್ಣಿನ ಶಸ್ತ್ರ ಚಿಕಿತ್ಸೆ ಬಹಳ ಮುಖ್ಯ , ಇತ್ತಿಚಿನ ದಿನಗಳಲ್ಲಿ ಹಲವಾರು ಸಂಘಟನೆಗಳು ಉಚಿತವಾಗಿ ನೇತ್ರ ತಪಾಸಣೆ ಹಾಗೂ ಶಸ್ತ್ರ ಚಿಕಿತ್ಸೆಗೆ ಅನುಕೂಲ ಮಾಡುತ್ತಿರುವುದು ನೂರಾರು ಬಡ ಕುಟುಂಬಗಳಿಗೆ ಸಹಾಯ ಮಾಡಿದಂತಾಗಿದೆ, ಪ್ರತಿಯೊಬ್ಬರು ಇಂತಹ ಸದಾವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳುವಂತೆ ಮನವಿ ಮಾಡಿದರು.

 

 

 

ಕಣ್ಣಿನ ವೈದ್ಯಾಧಿಕಾರಿ ಡಾ. ಕುಸುಮ ಮಾತನಾಡಿ ಇಂದಿನ ಯುಗದಲ್ಲಿ ಕಣ್ಣಿನ ದೋಷದಿಂದ ಅನೇಕರು ಸಮಸ್ಯೆಗಳನ್ನು ಅನುಭವಿಸುತ್ತಿದ್ದು ಸರ್ಕಾರ ಹಾಗೂ ಸಂಘಟನೆಗಳು ಅಂತವರಿಗೆ ಪರಿಹಾರ ನೀಡಲು ಶಿಬಿರಗಳನ್ನು ಏರ್ಪಡಿಸುತ್ತವೆ ಅವುಗಳಲ್ಲಿ ಭಾಗವಹಿಸಿ ಸೂಕ್ತವಾದ ಚಿಕಿತ್ಸೆ ಪಡೆಯುವ ಮೂಲಕ ಜಿಲ್ಲೆ ಹಾಗೂ ಭಾರತ ದೇಶವನ್ನು ಅಂಧ್ವತ್ವ ದೋಷ ಮುಕ್ತವನ್ನಾಗಿಸುವ ಪಣ ತೊಡಬೇಕಿದೆ. ಜೀವನದಲ್ಲಿ ಅತ್ಯಂತ ಅಮೂಲ್ಯವಾದ ಅಂಗವೆಂದರೆ ಕಣ್ಣು ಅದನ್ನು ರಕ್ಷಿಸಬೇಕಾದರೆ, ಕಾಲ ಕಾಲಕ್ಕೆ ತಪಾಸಣೆ ಮತ್ತು ಕಾಳಜಿ ಬಹುಮುಖ್ಯ. ಹಾಗಾಗಿ ಶುಚಿತ್ವ ಹಾಗೂ ಆಹಾರ ಪದ್ಧತಿ ನಮ್ಮ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಬಿ.ಪಿ, ಶುಗರ್ ಮುಂತಾದ ಕಾಯಿಲೆಗಳಿಂದ ಬಳಲುವವರಿಗೆ ಹೆಚ್ಚಾಗಿ ಕಣ್ಣಿನ ಸಮಸ್ಯೆಯೂ ಕಾಣಿಸುಕೊಳ್ಳುತ್ತದೆ. ಹಾಗಾಗಿ ಆಗಾಗ್ಗೆ ಆರೋಗ್ಯ ತಪಾಸಣೆಯನ್ನು ಮಾಡಿಸಿಕೊಂಡು, ಆರೋಗ್ಯ ಸಲಹೆಗಳನ್ನು ಪಡೆದುಕೊಳ್ಳುವುದು ಸೂಕ್ತ ಎಂದು ಸಲಹೆ ನೀಡಿದರು.

 

 

ಕಣ್ಣಿನ ದೃಷ್ಟಿ ಎಲ್ಲರಿಗೂ ಮಹತ್ವವಾದುದ್ದು ಅದರಲ್ಲೂ ವಿಶೇಷವಾಗಿ ವಯೋವೃದ್ಧರೇ ಹೆಚ್ಚಿನ ಸಂಖ್ಯೆಯಲ್ಲಿ ಕಣ್ಣಿನ ಪೊರೆಗೆ ತುತ್ತಾಗುತ್ತಿದ್ದಾರೆ. ನಿತ್ಯ ಜೀವನದಲ್ಲಿ ಕೆಲಸ ಕಾರ್ಯಗಳನ್ನು ನಿರ್ವಹಿಸಲು ಅವರಿಗೆ ಅನುಕೂಲ ಕಲ್ಪಿಸಲು ನಾವು ಈ ಶಿಬಿರವನ್ನು ಆಯೋಜಿಸಿದ್ದು ಸಾರ್ವಜನಿಕರು ಇದರ ಪ್ರಯೋಜನ ಪಡೆದುಕೊಳ್ಳಿ. ಈಗಾಗಲೆ ಸಾವಿರಾರು ಜನರಿಗೆ ಕಣ್ಣಿನ ಪೊರೆ ಶಸ್ತ್ರ ಚಿಕಿತ್ಸೆಯನ್ನು ಯಶಸ್ವಿಯಾಗಿ ಮಾಡಲಾಗಿದೆ, ಎಲ್ಲರಿಗೂ ಉತ್ತಮವಾದ ವ್ಯವಸ್ಥೆಯಲ್ಲಿ ಆಪರೇಷನ್‌ ಮಾಡಿಸುತ್ತಿದ್ದು ಇದರ ಉಪಯೋಗ ಮಾಡಿಕೊಳ್ಳಿ ಎಂದು ಅಂಧತ್ವ ನಿವಾರಣಾ ಸಂಸ್ಥೆಯ ಅಧಿಕಾರಿ ರವಿಂದ್ರ ನಾಯಕ್ ಮನವಿ ಮಾಡಿದರು.

 

 

 

 

ಈ ಶಿಬಿರದಲ್ಲಿ ವೈದ್ಯಾಧಿಕಾರಿ ಡಾ. ಕೇಶವ್ ರಾಜ್, ಹನುಮಂತರಾಯಪ್ಪ, ಕುಮಾರ್ ಸ್ವಾಮಿ, ನಂದೀಶ್ ಸೇರಿದಂತೆ ಸಿಬ್ಬಂದಿ ಶಿಬಿರಾರ್ಥಿಗಳು ಭಾಗವಹಿಸಿದ್ದರು.

Leave a Reply

Your email address will not be published. Required fields are marked *