ಗುಬ್ಬಿ : ಪೋಷಕರು ತಮ್ಮ ಮಕ್ಕಳಿಗೆ ಒಳ್ಳೆಯ ವಿದ್ಯೆಯನ್ನು ಕೊಡಿಸಿ ಅದರಲ್ಲಿ ಸಂಗೀತ, ಕಲೆ ದೈಹಿಕ ಚಟುವಟಿಕೆ ಜೊತೆಗೆ ಮಕ್ಕಳಿಗೆ ಯಾವುದರಲ್ಲಿ ಹೆಚ್ಚು ಆಸಕ್ತಿ ಇರುತ್ತದೊ ಅಂತಹ ಶಿಕ್ಷಣವನ್ನು ಕೊಡಿಸಿ ಎಂದು ಜ್ಹೀ ಕನ್ನಡ ಸರಿಗಮಪ ಖ್ಯಾತಿಯ ಗಾಯಕ ಕಂಬದರಂಗಯ್ಯ ಹೇಳಿದರು.
ಅವರು ಗುರುವಾರ ಸಂಜೆ ನಡೆದ ಹೊಸಕೆರೆ ಸನ್ ರೈಸ್ ಇಂಟರ್ ನ್ಯಾಷನಲ್ ಶಾಲೆಯ ಸನ್ ರೈಸ್ ಸಂಭ್ರಮ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ನನ್ನ ಜೀವನದ ಓದುವ ಸಮಯದಲ್ಲಿ ಕಷ್ಟವನ್ನು ಅನುಭವಿಸಿದ್ದೇನೆ, ಅಂತಹ ಕಾಲದಲ್ಲೂ ನನ್ನ ಊರಿನ ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡಿ ಇಷ್ಟರ ಮಟ್ಟಿಗೆ ಬೆಳೆಯಲು ನನ್ನ ಗುರುಗಳು, ನನ್ನ ತಂದೆ ತಾಯಿಯೊಂದಿಗೆ ಹಲವಾರು ಜನರ ಸಹಾಯ ಸಹಕಾರದಿಂದ ನಾನು ಇಷ್ಟರಮಟ್ಟಿಗೆ ಬೆಳೆದು ಗುರುತಿಸಿಕೊಳ್ಳಲು ಸಹಕಾರವಾಗಿದೆ, ನಾನು ಅದನ್ನು ಎಂದಿಗೂ ಸಹಾ ಮರೆಯಲಾರೆ. ನಿಮ್ಮಗಳ ಬೆಂಬಲ, ಅಭಿಮಾನ ಸದಾ ನನ್ನಂತಹ ಚಿಕ್ಕ ಕಲಾವಿದ ಮೇಲೆ ತೋರಿಸಿರುವುದು ನನಗೆ ಹೆಮ್ಮೆಯಾಗುತ್ತಿದೆ., ಇದೇ ರೀತಿ ನಿಮ್ಮಗಳ ಸಹಕಾರ ಸದಾ ನನ್ನ ಮೇಲೆ ಇರಲಿ ಎಂದರು.

ಮಕ್ಕಳೆ ಶಾಲೆಯಲ್ಲಿ ನಿಮ್ಮ ಶಿಕ್ಷಕರು ನಿಮ್ಮನ್ನು ಯಾವ ರೀತಿಯ ಶಿಲೆಯಾಗಿ ಮಾಡುತ್ತಾರೋ ಅದೇ ರೀತಿ ಸಮಾಜಕ್ಕೆ ಉತ್ತಮ ಮಾದರಿಯಾಗಿ ನಿಮ್ಮ ಜ್ಞಾನದೊಂದಿಗೆ ಬಹಳ ಎತ್ತರಕ್ಕೂ ಸಹ ಬೆಳೆಯಿರಿ ಎಂದರು. ಸಂಸ್ಥೆಯ ಕಾರ್ಯದರ್ಶಿ ಬಸವರಾಜು ಮಾತನಾಡುತ್ತಾ ಈ ಶಾಲೆಯು ಪ್ರತಿ ವರ್ಷ ಹಂತ ಹಂತವಾಗಿ ಬೆಳೆಯಲು ನನಗೆ ಸಹಕಾರ ನೀಡಿದ ಪೋಷಕರು ಬೆಂಬಲ, ಸಲಹೆ ಸಹಕಾರ ಮುಖ್ಯವಾಗಿದೆ, ಇದರಿಂದ ಮಕ್ಕಳಿಗೆ ಇನ್ನಷ್ಟು ಜ್ಞಾನಾರ್ಜನೆ ತುಂಬಲು ನಮಗೆ ಸಹಕಾರಿಯಾಗುತ್ತದೆ ಎಂದರು.
ಈ ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳಿಗೆ ಪುರಸ್ಕಾರ, ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ವೈಭವವಾಗಿ ನಡೆದವು. ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ವಿಜಯಕುಮಾರ್ ಕಾರ್ಯದರ್ಶಿ ಬಸವರಾಜು ಗ್ರಾಪಂ ಅಧ್ಯಕ್ಷ ರೇಣುಕಯ್ಯ. ಉಪಾಧ್ಯಕ್ಷೆ ಪಾರ್ವತಮ್ಮ. ಸದಸ್ಯ ದಕ್ಷಿಣಮೂರ್ತಿ. ಮುಖಂಡರಾದ ಎಕೆಪಿ ರಾಜು ಶಾಲೆಯ ಮುಖ್ಯಶಿಕ್ಷಕ ರಮೇಶ್ ಹಾಗೂ ಶಿಕ್ಷಕರು ಪೋಷಕರು ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.