ದ್ವಿದಳ ಧಾನ್ಯ, ಸಿರಿ ಧಾನ್ಯಗಳನ್ನು ಆಹಾರದಲ್ಲಿ ಹೆಚ್ಚಾಗಿ ಬಳಸಬೇಕು ಇದರಿಂದ ಆರೋಗ್ಯದಲ್ಲಿ ಸಮತೋಲನ ಕಾಪಾಡಲು ಸಾಧ್ಯವಾಗುತ್ತದೆ ಎಂದು ಒಕ್ಕೂಟದ ಅಧ್ಯಕ್ಷೆ ಮಂಗಳ ಗೌರಮ್ಮ ಅಭಿಮತ .

ಗುಬ್ಬಿ : ಸುದ್ದಿ :

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ.ಸಿ.ಟ್ರಸ್ಟ್ (ರಿ) ವತಿಯಿಂದ
ತಾಲೂಕಿನ ನಿಟ್ಟೂರು ವಲಯದ ನಿಟ್ಟೂರು ಬಿ ಕಾರ್ಯ ಕ್ಷೇತ್ರದ ನಿರಂತರ ಜ್ಞಾನ ವಿಕಾಸ ಕೇಂದ್ರದಲ್ಲಿ ಸಿರಿ ಧಾನ್ಯ ಮಾಹಿತಿ ಕಾರ್ಯಕ್ರಮದಡಿಯಲ್ಲಿ ಸಿರಿಧಾನ್ಯ ಪ್ರಾತ್ಯೇಕ್ಷಿಕತೆ ಮತ್ತು ಮಾಹಿತಿ ಕಾರ್ಯಕ್ರಮವನ್ನು ಉದ್ಘಾಟಿಸಿ  ಮಾತನಾಡಿದ ಮಂಗಳ ಗೌರಮ್ಮ ಅವರು ನಮ್ಮ ಆಹಾರದಲ್ಲಿ ಪ್ರತಿ ನಿತ್ಯ ಒಂದು ಸಿರಿಧಾನ್ಯ ವನ್ನು ಸೇವಿಸುವುದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಎಂದು ತಿಳಿಸಿದರು.

 

 

ಸಂಪನ್ಮೂಲ ವ್ಯಕ್ತಿ ತ್ರಿವೇಣಿ ಮಾತನಾಡಿ ಸಿರಿಧಾನ್ಯ ಬಳಕೆಯ ವಿಧಾನಗಳು ಹಾಗೂ ಎಚ್ಚರಿಕೆಗಳು ಕುರಿತಾಗಿ ಮಾಹಿತಿ ನೀಡಿದರು ನವಣೆ ಹಾಗೂ ಬರಗು ಈ ಧಾನ್ಯಗಳಿಂದ ಮೊಸರನ್ನ ಹಾಗೂ ರಾಗಿ ಮಾಲ್ಟ್ ಇವುಗಳ ಪ್ರತ್ಯೇಕ್ಷಿತೆ ಮಾಡಿ ಎಲ್ಲ ಸದಸ್ಯರಿಗೆ ಸವಿಯಲು ನೀಡಲಾಯಿತು.

 

 

ಸಿರಿಧಾನ್ಯ ಮೇಲ್ವಿಚಾರಕ ರಾಜೇಶ್ ಮಾತನಾಡಿ ಸಿರಿಧಾನ್ಯ ಬಳಕೆ ಮತ್ತು ಮಧುಮೇಹ ಖಾಯಿಲೆಗೆ ಉಪಯೋಗಿಸುವ ಸಿರಿಧಾನ್ಯ, ಮಾಲ್ಟ್ ಪೌಡರ್ ಮತ್ತು ಬರಗೂ, ನವಣೆ ಮುಂತಾದವುಗಳಿಂದ ಅರೋಗ್ಯ ಹೇಗೆ ಕಾಪಾಡಿಕೊಳ್ಳಬಹುದು ಮಾಹಿತಿ ನೀಡಿದರು.

 

 

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಸದಸ್ಯೆ ಹಸೀನಾ ತಾಜ್, ಪದಾಧಿಕಾರಿ ಕನಕಲಕ್ಷ್ಮಿ, ಒಕ್ಕೂಟದ ಪದಾಧಿಕಾರಿಗಳಾದ ಬೋರೇಗೌಡ್ರು, ನಟರಾಜ್,ವಲಯ ಮೇಲ್ವಿಚಾರಕಿ ಇಂದ್ರಮ್ಮ , ಜ್ಞಾನ ವಿಕಾಸ ಸಮನ್ವಯಾಧಿಕಾರಿ ಜಯಲಕ್ಷ್ಮೀ, ಸೇವಾಪ್ರತಿನಿಧಿ ಲತಾಮಣಿ, ಹೇಮಾ ಲಕ್ಷ್ಮಮ್ಮ, ಸಿ.ಎಸ್.ಸಿ ಕಾರ್ಯಕರ್ತರು, ಸದಸ್ಯರುಗಳು ಸೇರಿದಂತೆ ಇನ್ನಿತರರು ಹಾಜರಿದ್ದರು.

Leave a Reply

Your email address will not be published. Required fields are marked *