ಗುಬ್ಬಿ: ತಾಲೂಕಿನಲ್ಲಿ ಶುಕ್ರವಾರ ರಾತ್ರಿ ಗುಡುಗು ,ಮಿಂಚು ,ಗಾಳಿಯಿಂದ ಕೂಡಿದ ಹದವಾದ ಮಳೆ ಬಿದ್ದಿರುವುದು ರೈತರಲ್ಲಿ ಹರ್ಷವನ್ನು ಉಂಟುಮಾಡಿದೆ.
ಮುಂಗಾರು ಪ್ರಾರಂಭವಾಗಿ ಹಲವಾರು ತಿಂಗಳುಗಳಿಂದ ಮಳೆಇಲ್ಲದೆ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದರು.
ತಾಲೂಕಿನಲ್ಲಿ ಬರದ ತೀವ್ರತೆ ಹೆಚ್ಚಾಗಿದ್ದು ರೈತರು ನೀರಿಗಾಗಿ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು.ಪ್ರಾಣಿ ಪಕ್ಷಿಗಳ ಕುಡಿಯುವ ನೀರಿಗೂ ಕಷ್ಟ ಎದುರಾಗಿತ್ತು.
ಭರಣಿ ಮಳೆಯ ಕೊನೆಯ ದಿನವಾದ ಶುಕ್ರವಾರ ರಾತ್ರಿ ಸುರಿದ ಮಳೆಯಿಂದಾಗಿ ತಾಲೂಕಿನ ಜನತೆ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.
ರಾತ್ರಿ ಬೀಸಿದ ಮಳೆ ಗಾಳಿಯಿಂದಾಗಿ ಬೆಣಚಿಗೆರೆ ಗ್ರಾಮದ ಗಂಗಣ್ಣನವರ ತೋಟದಲ್ಲಿ ವಿದ್ಯುತ್ ಟ್ರಾನ್ಸ್ಪರ್ಮರ್ ಹಾಗೂ ಕಂಬಗಳು ಮುರಿದು ಬಿದ್ದು ವಿದ್ಯುತ್ ಸರಬರಾಜಿನಲ್ಲಿ ಅಡಚಣೆ ಉಂಟಾಗಿದ್ದು, ತಕ್ಷಣ ಸರಿಪಡಿಸುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಬಾರಿ ಮಳೆಯಿಂದಾಗಿ ಪಟ್ಟಣದ ಸಂತೆ ಮೈದಾನದಲ್ಲಿರುವ ಬೃಹತ್ ಮರ ಉರುಳಿ ಬಿದ್ದಿದೆ.ಹಲವು ಕಡೆ ಕೆರೆ ಕಟ್ಟೆಗಳಿಗೆ ಸ್ವಲ್ಪ ನೀರು ಬಂದಿದ್ದು ಜಾನುವಾರುಗಳಿಗೆ ಕುಡಿಯುವ ನೀರಿಗೆ ಅನುಕೂಲವಾಗಿದೆ. ತೋಟಗಳಲ್ಲಿ ನೀರು ನಿಂತಿರುವುದು ಸ್ವಲ್ಪ ದಿನಗಳ ಮಟ್ಟಿಗಾದರೂ ನೀರು ಹಾಯಿಸುವುದು ತಪ್ಪಿರುವುದರಿಂದ ರೈತರು ನೆಮ್ಮದಿ ಯಿಂದ ಇರುವಂತಾಗಿದೆ.