ಡಾ.ಗುಬ್ಬಿ ವೀರಣ್ಣ ಟ್ರಸ್ಟ್ ವತಿಯಿಂದ 40 ದಿನಗಳ ಕಾಲ ಯಶಸ್ವಿಯಾಗಿ ನೆರವೇರಿದ ಮಕ್ಕಳ ಬೇಸಿಗೆ ಶಿಬಿರ

ಗುಬ್ಬಿ ಪಟ್ಟಣದ ಡಾ.ಗುಬ್ಬಿ ವೀರಣ್ಣ ರಂಗ ಮಂದಿರದಲ್ಲಿ ಡಾ.ಗುಬ್ಬಿ ವೀರಣ್ಣ ಟ್ರಸ್ಟ್ ವತಿಯಿಂದ 40 ದಿನಗಳ ಕಾಲ ಯಶಸ್ವಿಯಾಗಿ ನೆರವೇರಿದ ಮಕ್ಕಳ ಬೇಸಿಗೆ ಶಿಬಿರಕ್ಕೆ ಪ್ರಗತಿ ವಾಹಿನಿಯ ಸಿಇಓ ಟಿ ಎನ್ ಶಿಲ್ಪಾಶ್ರೀ ಹಾಗೂ ಸಂಗೀತಗಾರ್ತಿ ಮತ್ತು ಮಕ್ಕಳ ತಜ್ಞೆ ಡಾ. ಶ್ರಾವ್ಯ ರಾವ್ ಚಾಲನೆ ನೀಡಿದರು.

ಖಾಸಗಿ ವಾಹಿನಿಯ ಸಿಇಓ ಟಿ ಎನ್ ಶಿಲ್ಪಾಶ್ರೀ ಮಾತನಾಡಿ ನಮ್ಮ ಊರಿನಲ್ಲಿಯೇ ನಮ್ಮ ಮಕ್ಕಳು ತಮ್ಮ ಪ್ರತಿಭೆಯನ್ನು ಹೊರ ತರುವ ಪ್ರಯತ್ನಕ್ಕೆ ಬೇಸಿಗೆ ಶಿಬಿರ ಮೂಲಕ ಸದಾವಕಾಶವನ್ನು ಮಾಡಿಕೊಟ್ಟಿರುವುದು ಶ್ಲಾಘನೀಯ ಸಂಗತಿ. ಇದಕ್ಕೆ ಪೋಷಕರು ಸಹ ತಮ್ಮ ಮಕ್ಕಳಲ್ಲಿರುವ ಪ್ರತಿಭೆಯನ್ನು ಹೊರ ತರುವ ಪ್ರಯತ್ನಕ್ಕೆ ಕೈ ಜೋಡಿಸಿದ್ದು, ಕೇವಲ ಡಾಕ್ಟರ್, ಇಂಜಿನಿಯರ್ ಆಗಬೇಕೆಂಬ ಮನಸ್ಥಿತಿಗೆ ಬಂದಿರುವ ಸಂದರ್ಭದಲ್ಲಿ ಪೋಷಕರು ತಮ್ಮ ಮನಸ್ಥಿತಿಯನ್ನು ಬದಲಾಯಿಸಿರುವುದು ಸ್ವಾಗತಾರ್ಹ ಸಂಗತಿ.ಈ ಶಿಬಿರವು ತಾಲೂಕು ಕೇಂದ್ರಕ್ಕೆ ಸೀಮಿತವಾಗದೆ ಜಿಲ್ಲೆ ಹೊರ ಜಿಲ್ಲೆಗಳಿಗೂ ವ್ಯಾಪಿಸಿ ಕಲೆ ಸಾಹಿತ್ಯ ಸಂಸ್ಕೃತಿಯನ್ನ ಉಳಿಸುವಂತಾಗಲಿ ಎಂದು ಕರೆ ನೀಡಿದರು

 

ಮಕ್ಕಳ ವೈದ್ಯಕೀಯ ತಜ್ಞೆ ಡಾ. ಶ್ರಾವ್ಯ ರಾವ್ ಮಾತನಾಡಿ ಇತ್ತೀಚಿನ ದಿನಗಳಲ್ಲಿ ಪೋಷಕರು ತಮ್ಮ ಮಕ್ಕಳನ್ನು ಕೇವಲ ದೈಹಿಕವಾಗಿ ಬೆಳವಣಿಕೆಗೆ ಮುಂದಾಗುತ್ತಿದ್ದು, ಅದರಂತೆ ಮಾನಸಿಕ ಬೆಳವಣಿಗೆಯು ಬಹುಮುಖ್ಯವಾಗಿ ಬೇಕಾಗಿದೆ. ನಾನು ಮಕ್ಕಳ ವೈದ್ಯಕೀಯ ತಜ್ಞೆಯಾಗಿ ಹೇಳುವುದಾದರೆ ಇಂದಿನ ದಿನಮಾನಗಳಲ್ಲಿ ಮಾನಸಿಕ ಖಿನ್ನತೆಗೆ ಒಳಗಾಗಿ ತಮ್ಮ ಮಕ್ಕಳ ಬೆಳವಣಿಗೆಗೆ ತಾವೇ ಅಡ್ಡಿ ಆದಂತೆ ಕಾಣುತ್ತದೆ. ಹಾಗಾಗಿ ಪೋಷಕರು ತಮ್ಮ ಮಕ್ಕಳನ್ನು ಈ ರೀತಿಯ ಶಿಬಿರಗಳಲ್ಲಿ ಕಳುಹಿಸಿ ಕಲೆ ಸಂಸ್ಕೃತಿಯನ್ನು ಉಳಿಸುವ ಜೊತೆಯಲ್ಲಿ ತಮ್ಮಲ್ಲಿ ಅಡಕವಾಗಿರುವ ಪ್ರತಿಭೆಯನ್ನು ಹೊರ ತರುವ ಪ್ರಯತ್ನಕ್ಕೆ ಸಹಕಾರಿಯಾಗಲಿದೆ. ಹಾಗಾಗಿ ಪೋಷಕರು ದೈಹಿಕ ಬೆಳವಣಿಗೆಗೆ ಆದ್ಯತೆ ಕೊಡುವ ಬದಲು ಮಾನಸಿಕ ಬೆಳವಣಿಗೆಗೂ ಹೆಚ್ಚು ಗಮನ ಕೊಡುವ ಅವಶ್ಯಕತೆ ಇದ್ದು, ಶಿಬಿರಗಳಲ್ಲಿ ತಮ್ಮ ಮಕ್ಕಳನ್ನು ಕಳುಹಿಸಿ ಕೊಡುವ ಮುಖೇನ ಕಲೆ ಸಾಹಿತ್ಯ, ಸಂಗೀತ, ಸಂಸ್ಕೃತಿ ಯನ್ನು ಉಳಿಸುವ ನಿಟ್ಟಿನಲ್ಲಿ ಕೈಜೋಡಿಸಲಿ ಕರೆ ನೀಡಿದರು.

 

ಜಾನಪದ ಅಕಾಡೆಮಿ ರಾಜ್ಯಾಧ್ಯಕ್ಷ ಗೊಲ್ಲಹಳ್ಳಿ ಶಿವಪ್ರಸಾದ್ ಮಾತನಾಡಿ ಇತ್ತೀಚಿನ ದಿನಗಳಲ್ಲಿ ರಿಯಾಲಿಟಿ ಶೋಗಳು ಖಾಸಗಿ ವಾಹಿನಿಗಳಲ್ಲಿ ಪ್ರಸಾರವಾಗುತ್ತಿದ್ದು ತಮ್ಮ ಮಕ್ಕಳು ವಾಹಿನಿಗಳಲ್ಲಿ ಗುರ್ತಿಸಿಕೊಂಡರೆ ಸಾಕು ಎಂಬ ಮನಸ್ಥಿತಿಗೆ ಪೋಷಕರು ಬಂದಿದ್ದು, ಮಕ್ಕಳಲ್ಲಿ ಒತ್ತಡ ತರುವ ಪ್ರಯತ್ನವು ಇತ್ತೀಚಿನ ದಿನಗಳಲ್ಲಿ ಕಂಡುಬರುತ್ತಿದೆ. ಶೋ ಗಳಲ್ಲಿ ತಮ್ಮ ಮಕ್ಕಳ ಭಾಗವಹಿಸುವಿಕೆಗೆ ಮುಂದಾಗುತ್ತಿರುವುದು ತರವಲ್ಲ. ತಮ್ಮ ಮಕ್ಕಳು ಮಾನಸಿಕವಾಗಿ ಸಧೃಡ ಮನಸ್ಸಿನಿಂದ ತಮ್ಮಲ್ಲಿರುವ ಪ್ರತಿಭೆಯನ್ನು ಹೊರ ತರುವ ಪ್ರಯತ್ನವನ್ನು ಮಾಡಬೇಕಿದೆ, ಆಗ ಮಾತ್ರ ತಮ್ಮ ಮಕ್ಕಳ ಮಾನಸಿಕ ಬೆಳವಣಿಗೆಯಾಗಲು ಸಾಧ್ಯ. ಹಾಗಾಗಿ ನಾಡಿಗೆ ನಟ ನಟಿಯರನ್ನು ಕೊಟ್ಟಂತಹ ಮಹಾನುಭಾವ ಗುಬ್ಬಿ ವೀರಣ್ಣ ಅವರ ಹೆಸರಿನಲ್ಲಿ ಅವರ ಹುಟ್ಟೂರಿನಲ್ಲಿ ರಂಗ ಮಂದಿರವನ್ನು ತೆರೆದಿದ್ದು, ಮುಂದಿನ ದಿನಗಳಲ್ಲಿ ತಿಂಗಳಿಗೊಮ್ಮೆ ವಿನೂತನ ಕಾರ್ಯಕ್ರಮಗಳಿಗೆ ಜಾನಪದ ಅಕಾಡೆಮಿಯ ಸಹಕಾರ ಯಾವಾಗಲೂ ಇರುತ್ತದೆ ಎಂದು ತಿಳಿಸಿದರು.

 

ಶಿಬಿರದ ಸಮಾರೋಪ ಸಮಾರಂಭ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ ಸಂಗೀತಾಗಾರ್ತಿ ಡಾ.ಶ್ರಾವ್ಯ ರಾವ್ ಹಾಡನ್ನು ಹಾಡುವ ಮೂಲಕ ಕಲಾ ರಸಿಕರಲ್ಲಿ ಕಣ್ಮನ ಸೆಳೆದರೆ, ಬೆಟ್ಟಕ್ಕೆ ಚಳಿಯಾದ್ರೆ ಎಂಬ ನಾಟಕ ಪ್ರದರ್ಶನವನ್ನು ನಡೆಸಿಕೊಟ್ಟ ಶಿಬಿರಾರ್ಥಿಗಳು

ಡಾ.ಗುಬ್ಬಿ ವೀರಣ್ಣ ಟ್ರಸ್ಟ್ ಗುಬ್ಬಿ ವತಿಯಿಂದ ಗುಬ್ಬಿ ವೀರಣ್ಣ ರಂಗ ಮಂದಿರದಲ್ಲಿ ಬೇಸಿಗೆ ಶಿಬಿರವನ್ನು ಆಯೋಜನೆ ಮಾಡುವ ಮುಖೇನ ಮಕ್ಕಳಲ್ಲಿರುವ ಪ್ರತಿಭೆಯನ್ನು ಹೊರ ತರುವ ಜೊತೆಗೆ ಅವರಲ್ಲಿ ಆತ್ಮಸ್ಥೈರ್ಯವನ್ನು ತುಂಬುವ ನಿಟ್ಟಿನಲ್ಲಿ ಮುಂದಾಗುತ್ತಿದ್ದು, ಇನ್ನಷ್ಟು ವಿನೂತನ ಕಾರ್ಯಕ್ರಮಗಳ ಮೂಲಕ ಕಲಾ ರಸಿಕರು, ಕಲಾವಿದರನ್ನು ಆಕರ್ಷಿಸಲಿ ಎಂಬುದು ಪೋಷಕರ ಒತ್ತಾಯ

ಈ ಸಂದರ್ಭದಲ್ಲಿ ಟ್ರಸ್ಟಿಗಳಾದ ಡಾ ಲಕ್ಷ್ಮಣ್ ದಾಸ್, ಗುಬ್ಬಿ ರಾಜೇಶ್, ಕುಮಾರಣ್ಣ, ರಂಗಣ್ಣ, ಕೆಂಕೆರೆ ಮಲ್ಲಿಕಾರ್ಜುನ್ ಉಪಸ್ಥಿತರಿದ್ದರು.

 

Leave a Reply

Your email address will not be published. Required fields are marked *