ತಾಲೂಕು ಆಡಳಿತದಿಂದ ಜಗಜ್ಯೋತಿ ಬಸವೇಶ್ವರ ಜಯಂತಿ ಹಾಗೂ ಹೇಮರೆಡ್ಡಿ ಮಲ್ಲಮ್ಮ ಜಯಂತಿ ಆಚರಣೆ

ಗುಬ್ಬಿ ತಾಲೂಕು ಆಡಳಿತ, ವೀರಶೈವ ಲಿಂಗಾಯತ ಮಹಾಸಭಾ, ವೀರಶೈವ ಸಮಾಜ ಮತ್ತು ಅಂಗ ಸಂಸ್ಥೆಗಳಿಂದ ಶ್ರೀಜಗಜ್ಯೋತಿ ಬಸವೇಶ್ವರ ಜಯಂತಿ ಹಾಗೂ ಹೇಮರೆಡ್ಡಿ ಮಲ್ಲಮ್ಮ ಜಯಂತಿಯನ್ನು ತಾಲೂಕು ಕಚೇರಿಯ ಕೋರ್ಟ್ ಹಾಲ್ ನಲ್ಲಿ ಗ್ರೇಡ್ 02 ತಹಶೀಲ್ದಾರ್ ಶಶಿಕಲಾ ಅವರ ಅಧ್ಯಕ್ಷತೆಯಲ್ಲಿ ಆಚರಿಸಲಾಯಿತು.

ಒಬ್ಬ ಗೃಹಿಣಿಯಾಗಿ ಮನೆಯ ಎಲ್ಲ ಜವಾಬ್ದಾರಿಗಳನ್ನು ಸಮರ್ಥವಾಗಿ ನಿಭಾಯಿಸಿದ್ದಲ್ಲದೇ ಸಮಾಜಕ್ಕೂ ಮಾದರಿಯಾಗಬಲ್ಲ ಕೆಲಸ ಮಾಡಿದ ಕೀರ್ತಿ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಅವರಿಗೆ ಸಲ್ಲುತ್ತದೆ. ಮಲ್ಲಮ್ಮ ಅವರ ಸುತ್ತ ಸಾಕಷ್ಟು ಪವಾಡಗಳಿದ್ದರೂ ಅವರು ನಡೆದುಕೊಂಡ ಜೀವನ ಸಾಮಾನ್ಯವೇ ಆಗಿದ್ದು, ಸಮಾಜದ ಏಳ್ಗೆಗೆ ನಿರಂತರ ಶ್ರಮಿಸಿದ್ದ ಇವರ ವಿಚಾರಗಳು ಭವಿಷ್ಯದ ಪೀಳಿಗೆಗೆ ಸಿಗುವ ಅಗತ್ಯವಿದೆ. ತಾವು ಸಾರಿದ ಮೌಲ್ಯ ಮತ್ತು ತತ್ವಗಳಿಗೆ ಬದ್ಧವಾಗಿ ನಡೆದುಕೊಂಡ ಹೇಮರೆಡ್ಡಿ ಮಲ್ಲಮ್ಮನವರು ಪ್ರಸಕ್ತ ಸಮಾಜದ ಎಲ್ಲ ಮಹಿಳೆಯರಿಗೂ ಆದರ್ಶಪ್ರಾಯರು. ಸಂಸಾರದ ಎಲ್ಲ ನೋವು-ನಲಿವುಗಳನ್ನು ಅನುಭವಿಸಿದ ಇವರು ಭಿನ್ನವಾಗಿ ನಿಲ್ಲಲು ಇವರೊಳಗಿನ ಆಧ್ಯಾತ್ಮಿಕ ಶಕ್ತಿಯೇ ಕಾರಣ ಎಂದು ತಿಳಿಸಿದ ಅವರು ಕಾಯಕವೇ ಕೈಲಾಸ ಎಂದು ಮಾನವ ಕುಲಕ್ಕೆ ಸಂದೇಶವನ್ನು ನೀಡಿದ ಬಸವಣ್ಣನವರ ಹುಟ್ಟಿದ ದಿನ ಇಂದು. ಸಮಾಜಕ್ಕೆ ತನ್ನದೇ ಆದ ತತ್ವಗಳ ಮೂಲಕ ಸಾಮಾಜಿಕ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸಿದ ಮಹಾ ಸಂತನ ಜನ್ಮದಿನ.ಜಾತಿ ವ್ಯವಸ್ಥೆಯ ವಿರುದ್ಧ ಧ್ವನಿ ಎತ್ತಿದ್ದ ಬಸವಣ್ಣನವರು ಕ್ರಾಂತಿಯ ಬೀಜವನ್ನು ಬಿತ್ತಿದ ಹರಿಕಾರ. ‘ಕಾಯಕವೇ ಕೈಲಾಸ’, ‘ವಸುದೈವ ಕುಟುಂಬಕಂ’ ಹೀಗೆ ಹಲವಾರು ತತ್ವಗಳನ್ನು ಸಾರಿದ ಮಹಾನ್ ಭಾವನನ್ನು ಇಂದು ನೆನಪಿಸಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಯುವ ಪೀಳಿಗೆಗೆ ಕರೆ ನೀಡಿದರು.

 

ತಾಲೂಕು ವೈದ್ಯಾಧಿಕಾರಿ ಡಾ.ಬಿಂದು ಮಾಧವ ಮಾತನಾಡಿ ಹನ್ನೆರಡನೆಯ ಶತಮಾನದಲ್ಲಿ ಕರ್ನಾಟಕ ರಾಜ್ಯದಲ್ಲಿ ನಡೆದ ಸಾಮಾಜಿಕ ಕ್ರಾಂತಿಯ ರೂವಾರಿ ಬಸವಣ್ಣನವರು. ಅಲ್ಲಮಪ್ರಭು, ಅಕ್ಕಮಹಾದೇವಿ, ಮಡಿವಾಳಮಾಚಯ್ಯ, ನೂಲಿನ ಚಂದಯ್ಯ ಮುಂತಾದ ಶಿವಶರಣರ ಕಾಲದಲ್ಲಿಯೇ ಜೀವಿಸಿದ್ದ ಜಗಜ್ಯೋತಿ ಬಸವಣ್ಣನವರ ಪ್ರಭಾವದ ಕಾರಣ ಆ ಕಾಲವನ್ನು ಬಸವಯುಗವೆಂದೇ ಕರೆಯುತ್ತಾರೆ.ಶೈವ ಧರ್ಮದ ತೀವ್ರ ಅನುಯಾಯಿಗಳಾಗಿದ್ದರು ಮತ್ತು ದಕ್ಷಿಣ ಭಾರತದಲ್ಲಿ ಭಕ್ತಿ ಚಳವಳಿಯ ಸಂದರ್ಭದಲ್ಲಿ ತಮ್ಮ ತತ್ವಶಾಸ್ತ್ರವನ್ನು ಹರಡಿದರು. ದೇವಾಲಯದ ಪೂಜೆ ಮತ್ತು ಬ್ರಾಹ್ಮಣರು ಪ್ರಚಾರ ಮಾಡುವ ಆಚರಣೆಗಳನ್ನು ಬೇರೆ ರೀತಿಯ ಭಕ್ತಿಯಿಂದ ಬದಲಾಯಿಸಬಹುದೆಂಬ ಕಲ್ಪನೆಯನ್ನು ಸ್ವಾಮಿ ಬಸವ ಮಂಡಿಸಿದರು. ಇದು ಮುಖ್ಯವಾಗಿ ಶಿವ ಲಿಂಗದಂತಹ ಚಿಹ್ನೆಗಳ ಮೂಲಕ ಶಿವನ ವೈಯಕ್ತಿಕ ಮತ್ತು ನೇರ ಆರಾಧನೆಯ ಮೇಲೆ ಕೇಂದ್ರೀಕರಿಸಿದೆ ಎಂದು ತಿಳಿಸಿದರು.

 

 

ಈ ಕಾರ್ಯಕ್ರಮದಲ್ಲಿ ಹೆಚ್ಚುವರಿ ಶಿರಸ್ತೇದಾರ್ ಶ್ರೀರಂಗ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಜಗದೀಶ್, ಸಿಡಿಪಿಓ ಮಹೇಶ್, ವೀರಶೈವ ಮಹಾಸಭಾ ಮುಖಂಡರಾದ ಸಿದ್ಧಲಿಂಗಮೂರ್ತಿ, ಪತ್ರೆ ದಿನೇಶ್, ಮಂಜಣ್ಣ, ಮಲ್ಲಿಕಾರ್ಜುನ್, ಮನು, ರಾಜೇಶ್ ಗುಬ್ಬಿ, ಆರ್ ಆರ್ ಟಿ ಶಿರಸ್ತೇದಾರ್ ಕಲ್ಲೇಶ್, ಸೇರಿದಂತೆ ಸಮಾಜದ ಮುಖಂಡರು ತಾಲೂಕು ಆಡಳಿತ ಸಿಬ್ಬಂದಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *