ಗುಬ್ಬಿ ತಹಶೀಲ್ದಾರ್ ಆರತಿ ಬಿ. ಅಧ್ಯಕ್ಷತೆಯಲ್ಲಿ ಮೈಕ್ರೋ ಫೈನಾನ್ಸ್ ಹಾಗೂ ಅನಧಿಕೃತ ಕೆರೆಯ ಮಣ್ಣಿನ ಬಗ್ಗೆ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು.
ಕಳೆದ ವಾರದ ಹಿಂದೆ ಮೈಕ್ರೋ ಫೈನಾನ್ಸ್ ಕಂಪನಿಗಳ ಬಳಿ ಸಾಲ ಪಡೆದು ತೀರಿಸಲು ಸಾಧ್ಯವಾಗದೆ ಇರುವ ಕಾರಣ ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ದಾಖಲಾದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ಎಲ್ಲಾ ತಾಲೂಕು ಗಳಲ್ಲಿ ತಹಶೀಲ್ದಾರ್ ಅಧ್ಯಕ್ಷತೆಯಲ್ಲಿ ತಾಲೂಕಿನಲ್ಲಿರುವ ಮೈಕ್ರೋ ಫೈನಾನ್ಸ್ ಕಂಪನಿಗಳ ಸಿಬ್ಬಂದಿಗಳ ಸಭೆಯನ್ನು ಕರೆದು RBI ನ ಯಾವ ನಿಯನದಡಿ ಫೈನಾನ್ಸ್ ಗಳು ಕರ್ತವ್ಯ ನಿರ್ವಹಿಸುತ್ತಿದೆ, ಕಂಪನಿ ಸಿಬ್ಬಂದಿಯೂ ಸಾಲದ ಮರುಪಾವತಿಗಾಗಿ ಒತ್ತಡ ಹಾಕಿದಲ್ಲಿ ರಾಜ್ಯ ಸರ್ಕಾರವು ಬರಪೀಡಿತ ತಾಲೂಕು ಎಂದು ಘೋಷಣೆ ಮಾಡಿದ್ದ ಹಿನ್ನೆಲೆ ಸಾಲ ನೀಡಿರುವ ಕಂಪನಿಗಳು ಸಾಲದ ಮರುಪಾವತಿಗಾಗಿ ರೈತರು ಹಾಗೂ ಸಾರ್ವಜನಿಕರಲ್ಲಿ ಒತ್ತಡ ಹೇರದಂತೆ ಜಿಲ್ಲಾಧಿಕಾರಿಗಳು ಆದೇಶ ನೀಡಿದ್ದು, ತಾಲೂಕಿನಲ್ಲಿಯು ಸಹ ಈ ನಿಯಮ ಅನ್ವಯ ಆಗಲಿದ್ದು, ಒತ್ತಡ ಏರಿದ್ದೇ ಆದಲ್ಲಿ ಅಹಿತಕರ ಘಟನೆ ಕಂಡುಬಂದರೆ ಅಂತಹವರ ವಿರುದ್ಧ ಪ್ರಕರಣವನ್ನು ದಾಖಲಿಸಲು ಸೂಚಿಸಲಾಗಿದೆ ಎಂದು ತಿಳಿಸಿದರು.
ರೈತರಿಗೆ ಹಾಗೂ ಸಾರ್ವಜನಿಕರಿಗೆ ಸಾಲ ನೀಡಿರುವ ಮೈಕ್ರೋ ಫೈನಾನ್ಸ್ ಕಂಪನಿಗಳು ಈಗಾಗಲೇ ರಾಜ್ಯ ಸರ್ಕಾರವು ಗುಬ್ಬಿ ತಾಲೂಕು ಅನ್ನು ಬರ ಪೀಡಿತ ತಾಲೂಕು ಎಂದು ಘೋಷಣೆ ಮಾಡಿದ್ದು ಸಾಲ ನೀಡಿರುವ ಕಂಪನಿಗಳು ಸಾಲದ ಮರುಪಾವತಿಗೆ ಒತ್ತಡ ಏರದಂತೆ ಸೂಚನೆ ಬಂದಿದ್ದು, ಆದಾಗಿಯೂ ಕಂಪನಿಗಳು ಅವರ ಮನೆಗಳಿಗೆ ತೆರಳಿ ಒತ್ತಡ ಏರಿ ಅಹಿತಕರ ಘಟನೆ ಕಂಡುಬಂದರೆ ಸದರಿಯವರನ್ನೇ ನೇರ ಹೊಣೆಗಾರರನ್ನಾಗಿ ಮಾಡಲಾಗುವುದು ಇದರ ಜೊತೆಗೆ ಮೊನಿ ಲೀಡರ್ ವಿರುದ್ಧ ಐಪಿಸಿ ಸೆಕ್ಷನ್ 188 ಹಾಗೂ 308 ಅಡಿ ಪ್ರಕರಣ ದಾಖಲು ಅವಕಾಶವಿದ್ದು, ಮುಂದಿನ ಎರಡು ತಿಂಗಳು ಸಾಲ ಮರುಪಾವತಿಗೆ ಒತ್ತಡ ಏರದಂತೆ ಸೂಚನೆಯನ್ನು ಸಭೆಯಲ್ಲಿ ನೀಡಲಾಯಿತು ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಹಲವು ಬಾರಿ ಕೆರೆಯಲ್ಲಿ ಮಣ್ಣನ್ನು ತೆಗೆಯದಂತೆ ಸೂಚನೆ ನೀಡುತ್ತಾ ಬಂದಿದ್ದು, ತಾಲೂಕು ಬರ ಪೀಡಿತ ತಾಲೂಕು ಆಗಿದ್ದು ಕೆರೆಯಲ್ಲಿ ನೀರು ಇಲ್ಲದೇ ಇರುವುದರಿಂದ ತುಂಬಾ ಮಣ್ಣನ್ನು ತೆಗೆಯುತ್ತಿರುವ ಬಗ್ಗೆ ದೂರುಗಳು ಕಚೇರಿಗೆ ಬರುತ್ತಾ ಇದ್ದು ಈ ಬಗ್ಗೆ ಈಗಾಗಲೇ ಕ್ರಮವಹಿಸಿದ್ದು, ಜಿಲ್ಲಾ ಮೈನ್ಸ್ ಅಧಿಕಾರಿಗಳ ಸಹಕಾರದೊಂದಿಗೆ ದಂಡವನ್ನು ಸಹ ಈಗಾಗಲೇ ಹಾಕಿದ್ದು, ಮುಂದಿನ ದಿನಗಳಲ್ಲಿ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿಗಳ ಆದೇಶವು ಇದ್ದು, ಅದರಂತೆ ತಾಲೂಕಿನಲ್ಲಿ ಇಓ ಜೊತೆಗೆ ಹೇಮಾವತಿ ಅಧಿಕಾರಿಗಳ ನೇತೃತ್ವದ ದಂಡವು ದೂರುಗಳು ಬಂದ ತಕ್ಷಣ ಸ್ಥಳಕ್ಕೆ ತೆರಳಿ ಅವರ ವಿರುದ್ಧ ಕಾನೂನು ಕ್ರಮ ಜರುಗಿಸುವ ಜೊತೆಗೆ ಪ್ರಕರಣವನ್ನು ದಾಖಲಿಸಲು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು. ಈ ಸಂಬಂಧ ದೂರುಗಳನ್ನು ನೀಡಲು ತಾಲೂಕು ಕಚೇರಿಯ ದೂರವಾಣಿ ಸಂಖ್ಯೆ 08131- 222234, ತಾಲೂಕು ಪಂಚಾಯತ್ ದೂ.08131-222784 ಹೇಮಾವತಿ ಇಂಜಿನಿಯರ್ ಚೇಳೂರು 6366174716, ಕಡಬ ನಿಟ್ಟೂರು 8660633430, 9449117380 ಇದರ ಜೊತೆಗೆ 112 ದೂರವಾಣಿ ಸಂಖ್ಯೆಗೆ ಕರೆ ಮಾಡಿ ದೂರು ನೀಡಬಹುದು ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಬರ ಪೀಡಿತ ತಾಲೂಕು ಎಂದು ಘೋಷಣೆ ಆಗಿರುವ ಹಿನ್ನೆಲೆ ಮಳೆ ಬೆಳೆ ಇಲ್ಲದೆ ಇರುವ ರೈತರು ಸಂಕಷ್ಟದಲ್ಲಿ ಇರುವುದರಿಂದ ಒತ್ತಡ ಹಾಕಬಾರದು, ಮಾನಸಿಕ ಹಿಂಸೆ ಕೊಡಬಾರದು ಅವರ ಮನೆಗೆ ತೆರಳಿ ಅವರಿಗೆ ಮಾನಸಿಕ ತಗ್ಗೆ ತರಬಾರದು, ಸಾಮಾನ್ಯವಾಗಿ ಅವರ ಸಂಸ್ಥೆಯ ಕರ್ತವ್ಯಕ್ಕೆ ಯಾವುದೇ ರೀತಿಯ ಅಡ್ಡಿಪಡಿಸದೇ ಇರುವಂತೆ ಸಭೆಯಲ್ಲಿ ಸೂಕ್ತ ಸಲಹೆಯನ್ನು ನೀಡಲಾಯಿತು.
ಈ ಸಭೆಯಲ್ಲಿ ಇಓ ಪರಮೇಶ್ ಕುಮಾರ್, ಶಿರಸ್ತೇದಾರ್ ಶ್ರೀರಂಗ, ಹೇಮಾವತಿ ಎಇಇ ಗಿರೀಶ್, ಮಹೇಶ್, ಜಯರಾಂ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ತಾಲೂಕು ಯೋಜನಾಧಿಕಾರಿ ರಾಜೇಶ್ ಸೇರಿದಂತೆ ಮೈಕ್ರೋ ಫೈನಾನ್ಸ್ ಕಂಪನಿಗಳು ಸಿಬ್ಬಂದಿ ಉಪಸ್ಥಿತರಿದ್ದರು.