ಗುಬ್ಬಿ:
ಭಾನುವಾರ ರಾತ್ರಿ ಗುಡುಗು ಮಿಂಚು ಸಿಡಿಲುಗಳೊಂದಿಗೆ ಸುರಿದ ಬಾರಿಮಳೆಗೆ ಹೊಲ,ಗದ್ದೆ, ತೋಟಗಳಲ್ಲಿ ನೀರು ಹರಿದಿರುವ ಜೊತೆಗೆ ಕೆರೆ ಕಟ್ಟೆಗಳಿಗೆ ನೀರು ಬಂದಿರುವುದು ಜನತೆಯಲ್ಲಿ ಸಂತೋಷವನ್ನು ಉಂಟು ಮಾಡಿದ್ದರೂ,ಅನೇಕ ಕಡೆ ಮನೆಗಳು,ಅಡಿಕೆ ಮತ್ತು ತೆಂಗಿನ ಮರಗಳು ಉರುಳಿವೆ.
ಕಡಬ ಹೋಬಳಿ ಸಿ.ಕುನ್ನಾಲ ಗ್ರಾಮದ ಗೌಸ್ ಫೀರ್ ಮನೆಗೆ ಮಳೆ ನೀರು ನುಗ್ಗಿ ಸಾಕಷ್ಟು ಹಾನಿಯಾಗಿದೆ.
ಈರುಳ್ಳಿ ವ್ಯಾಪಾರಿಯಾಗಿದ್ದ ಅವರ ಮನೆಯಲ್ಲಿ ದಾಸ್ತಾನು ಮಾಡಲಾಗಿದ್ದ ಸುಮಾರು 3ಲಕ್ಷ ವೆಚ್ಚದ ಈರುಳ್ಳಿ ಸಂಪೂರ್ಣ ನೀರಿನಲ್ಲಿ ನೆಂದು ಹಾಳಾಗಿವೆ.
ಇದರಿಂದ ಕುಟುಂಬವು ಸಾಕಷ್ಟು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು, ಏನು ಮಾಡಲು ತೋಚದೆ ಸಹಾಯಕ್ಕಾಗಿ ಅಂಗಲಾಚುವಂತಾಗಿದೆ .
ಗ್ರಾಮ ಪಂಚಾಯಿತಿಯವರು ವ್ಯವಸ್ಥಿತವಾಗಿ ಚರಂಡಿ ಸ್ವಚ್ಚ್ಗ ಗೊಳಿಸಿದ ಕಾರಣ ಮನೆಗೆ ನೀರು ನುಗ್ಗಿ ಈ ಅನಾಹುತ ಸಂಭವಿಸಿದೆ ಎಂದು ಅಳಲು ತೋಡಿಕೊಂಡರು.
ಕುಟುಂಬವು ಇಡೀ ರಾತ್ರಿ ಮಳೆ ನೀರಿನಲ್ಲಿಯೇ ಕಾಲ ಕಳೆಯುವಂತಾಗಿತ್ತು .
ಕುಟುಂಬಕ್ಕೆ ಆಗಿರುವ ನಷ್ಟದ ಪರಿಹಾರ ನೀಡುವಂತೆ ಮನೆಯ ಮಾಲಿಕ ಗೌಸ್ ಪೀರ್ ತಾಲೂಕು ಆಡಳಿತಕ್ಕೆ ಮನವಿ ಮಾಡಿದ್ದಾರೆ.