ಗುಬ್ಬಿ ಸುದ್ದಿ.
ಗುಬ್ಬಿ ಕ್ಷೇತ್ರದ ಶಾಸಕ ಎಸ್ ಆರ್ ಶ್ರೀನಿವಾಸ್ ನನ್ನ ಬಗ್ಗೆ ಲಘುವಾಗಿ ಮಾತನಾಡಿದು ಧೈರ್ಯವಿದ್ದರೆ ಹೇಮಾವತಿ ಲಿಂಕ್ ಕೆನಾಲ್ ಕಾಮಗಾರಿಯನ್ನು ನಿಲ್ಲಿಸಲು ಹೋರಾಟ ಮಾಡಲಿ ನಾವು ಸಹ ಬೆಂಬಲವನ್ನು ವ್ಯಕ್ತಪಡಿಸುತ್ತೇವೆ ಅದನ್ನು ಬಿಟ್ಟು ಗುಳ್ಳೆ ನರಿಯ ಆಟವನ್ನು ಆಡುವುದು ಸರಿಯಲ್ಲ ಹಾಗೂ ನನ್ನ ಬಗ್ಗೆ ಲಘುವಾಗಿ ಮಾತನಾಡುವುದು ಸೂಕ್ತವಲ್ಲ ಎಂದು ತುರುವೇಕೆರೆ ಕ್ಷೇತ್ರದ ಶಾಸಕ ಎಂ ಟಿ ಕೃಷ್ಣಪ್ಪ ಶಾಸಕ ಎಸ್ ಆರ್ ಶ್ರೀನಿವಾಸ್ ಹೇಳಿಕೆಗೆ ತಿರುಗೇಟು ನೀಡಿದರು.
ಗುಬ್ಬಿ ತಾಲೂಕಿನ ಸಿ ಎಸ್ ಪುರ ಹೋಬಳಿಯ ಡಿ ಹೊಸಹಳ್ಳಿ ಗ್ರಾಮದಲ್ಲಿ ನಡೆಯುತ್ತಿರುವ ಹೇಮಾವತಿ ಲಿಂಕ್ ಕೆನಾಲ್ ಕಾಮಗಾರಿಯ ಸ್ಥಳಕ್ಕೆ ಇಂದು ಭೇಟಿ ನೀಡಿ ಕಾಮಗಾರಿ ಪ್ರಾರಂಭದ ಬಗ್ಗೆ ಪ್ರತಿಭಟನೆಯನ್ನು ನಡೆಸಿದರು.
ಹೇಮಾವತಿ ಲಿಂಕ್ ಕೆನಾಲ್ ಕಾಮಗಾರಿ ರದ್ದುಗೊಳಿಸುವ ಬಗ್ಗೆ ಪಕ್ಷಾತೀತವಾಗಿ ಸಾರ್ವಜನಿಕರು ರೈತರು ಸಾವಿರಾರು ಸಂಖ್ಯೆಯಲ್ಲಿ ಸೇರಿ ಡಿ ರಾಂಪುರ ಗ್ರಾಮದಲ್ಲಿ ಶನಿವಾರ ಪ್ರತಿಭಟನೆ ನಡೆಸಿ ಜೂನ್ 6 ವರೆಗೆ ಸರ್ಕಾರಕ್ಕೆ ಗಡುವು ನೀಡಿದ್ದರೂ ಸಹ ರೈತರ ಸಮಸ್ಯೆಯನ್ನು ಆಲಿಸದ ಕಾಂಗ್ರೆಸ್ ಸರ್ಕಾರ ಏಕಾಏಕಿ ಇಂದು ಕಾಮಗಾರಿ ಮಾಡುವ ಸಲುವಾಗಿ ನೀರು ಸರಬರಾಜು ಮಾಡುವ ಬೃಹತ್ ಪ್ರಮಾಣದ ಪೈಪುಗಳನ್ನು ಕಾಮಗಾರಿ ಮಾಡುವ ಸ್ಥಳಕ್ಕೆ ಪೂರೈಕೆ ಮಾಡುವ ಮೂಲಕ ರೈತರು ಹಾಗೂ ಸಾರ್ವಜನಿಕರ ಆಕ್ರೋಶಕ್ಕೆ ಕಾಂಗ್ರೆಸ್ ಸರ್ಕಾರ ಮುಂದಾಗುತ್ತಿದೆ ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಪ್ರತಿಭಟನೆಯ ಬೆನ್ನಲ್ಲಿ ಯಾವುದಕ್ಕೂ ಸಹ ಸಹಕಾರ ನೀಡಿದ ಕಾಂಗ್ರೆಸ್ ಸರ್ಕಾರ ಡಿಕೆ ಶಿವಕುಮಾರ್ ಹೆದರಿಕೆಗೆ ಹೇಮಾವತಿ ಲಿಂಕ್ ಕೆನಾಲ್ ಕಾಮಗಾರಿ ಮಾಡಲು ಮುಂದಾಗಿರುವುದು ಈ ಸರ್ಕಾರದ ದುರಾಡಳಿತವನ್ನು ತೋರುತ್ತದೆ .
ಈಗಾಗಲೇ ನಾವು ಹೇಮಾವತಿ ಲಿಂಕ್ ಕೆನಾಲ್ ಕಾಮಗಾರಿಯನ್ನು ಮಾಡದಂತೆ ಜಿಲ್ಲಾ ಉಸ್ತುವಾರಿ ಸಚಿವರುಗಳ ಗಮನಕ್ಕೆ ತಂದಿದ್ದರು ಕಾಮಗಾರಿ ಮಾಡುತ್ತಿರುವುದು ಸರಿಯಲ್ಲ ಯಾವುದೇ ಕಾರಣಕ್ಕೂ ಹೇಮಾವತಿ ನಿರು ಮಾಗಡಿ ಭಾಗಕ್ಕೆ ತೆಗೆದುಕೊಂಡು ಹೋಗಲು ನಾವು ಬಿಡುವುದಿಲ್ಲ ಎಂತಹ ಪರಿಸ್ಥಿತಿ ಬಂದರೂ ಸಹ ಕಾಮಗಾರಿ ಮಾಡಲು ನಾವು ಬಿಡುವುದಿಲ್ಲ ಸೋಮವಾರದಂದು ಸಿಎಸ್ ಪುರ ಹೋಬಳಿ ವ್ಯಾಪ್ತಿಯ ಎಲ್ಲಾ ರೈತರುಗಳು ಸಹ ಜೆಸಿಬಿ ಮೂಲಕ ತೆಗೆಯಲಾಗಿರುವ ಹೇಮಾವತಿ ನಾಲೆಯ ಮಣ್ಣನ್ನು ಸಂಪೂರ್ಣವಾಗಿ ಮುಚ್ಚುವುದು ಶತಸಿದ್ಧ ಎಂದು ತಿಳಿಸಿದರು.
ಮಾಜಿ ಸಚಿವ ಸೊಗಡು ಶಿವಣ್ಣ ಮಾತನಾಡಿ ರೈತರು ಯಾವ ಬೆದರಿಕೆಗೂ ಜಗ್ಗದೆ ಸೋಮವಾರದಂದು ಕಾಮಗಾರಿ ನಡೆದಿರುವಂತಹ ಸ್ಥಳಗಳಿಗೆ ಖುದ್ದು ಭೇಟಿ ನೀಡಿ ಜೆಸಿಬಿ ಯಂತ್ರಗಳ ಮೂಲಕ ನಾಲೆಯನ್ನು ಮುಚ್ಚಲು ಮುಂದಾಗ ಬೇಕಿದೆ ಇದಕ್ಕೆ ನಮ್ಮ ಸಂಪೂರ್ಣ ಸಹಕಾರವಿದ್ದು ಹೋರಾಟದ ಮೂಲಕ ತುಮಕೂರು ಜಿಲ್ಲೆಗೆ ಬರುವಂತಹ ಹೇಮವತಿ ನೀರನ್ನು ಯಾವುದೇ ಕಾರಣಕ್ಕೂ ಮತ್ತೊಂದು ಜಿಲ್ಲೆಗೆ ತೆಗೆದುಕೊಂಡು ಹೋಗಲು ನಾವು ಬಿಡುವುದಿಲ್ಲ ಸರ್ಕಾರ ಕಾಮಗಾರಿ ಸ್ಥಗೀತ ಗೊಳಿಸದೆ ಹೋದರೆ ಮುಂದೆ ಆಗಬಹುದಾದಂತಹ ಅನಾಹುತಗಳಿಗೆ ಸರ್ಕಾರವೇ ನೇರ ಹೊಣೆ ಹೊರಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಸರ್ಕಾರ ರೈತ ಮತ್ತು ಜನಪರ ಇರಬೇಕಾಗಿ ಹೊರತು ಯಾವುದೋ ಒಬ್ಬ ವ್ಯಕ್ತಿಯ ಒತ್ತಡಕ್ಕೆ ಮಣಿದು ಹಾಗೂ ಹೆದರಿಕೆಗೆ ರೈತರನ್ನು ಒಕ್ಕಲೆ ಬ್ಬಿಸುವುದು ಸರಿಯಲ್ಲ ಯಾವುದೇ ಹೋರಾಟದಕ್ಕೂ ನಾವು ಸಿದ್ಧರಿದ್ದು ಕಾಮಗಾರಿ ಮಾಡಲು ಮಾತ್ರ ನಾವು ಬಿಡುವುದಿಲ್ಲ ಸರ್ಕಾರ ಕೂಡಲೇ ಕಾಮಗಾರಿಯನ್ನು ರದ್ದುಪಡಿಸಲು ಮುಂದಾಗಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದರು ಇದೇ ಸಂದರ್ಭದಲ್ಲಿ ಬೃಹತ್ ಪ್ರಮಾಣದ ಪೈಪು ಸಾಗಿಸುವ ಲಾರಿಗಳನ್ನು ತಡೆದು ಸ್ಥಳದಲ್ಲಿ ಇದ್ದ ರೈತರು ಹಾಗೂ ಮುಖಂಡರು ಲಾರಿಗಳನ್ನು ವಾಪಸು ಕಳಿಸಿದ್ದರು.
ಈ ಸಂದರ್ಭದಲ್ಲಿ ನೂರಾರು ಸಂಖ್ಯೆ ರೈತರು ಸ್ಥಳೀಯ ಮುಖಂಡರುಗಳು ಹಾಜರಿದ್ದರು.