ರಂಗಕಲೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುತ್ತಾ ನಶಿಸದಂತೆ ಕಾಪಾಡುವುದು ನಮ್ಮೇಲ್ಲರ ಆದ್ಯ ಕರ್ತವ್ಯವಾಗಬೇಕಿದೆ: ಮುರಳೀಧರ ಹಾಲಪ್ಪ

ರಂಗಕಲೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುತ್ತಾ ನಶಿಸದಂತೆ ಕಾಪಾಡುವುದು ನಮ್ಮೇಲ್ಲರ ಆದ್ಯ ಕರ್ತವ್ಯವಾಗಬೇಕಿದೆ: ಮುರಳೀಧರ ಹಾಲಪ್ಪ


ಗುಬ್ಬಿ ತಾಲ್ಲೂಕಿನ ಮಂಚಲದೊರೆ ಗ್ರಾಮ ಪಂಚಾಯಿತಿಯ ಮುಚ್ಚವೀರನಹಳ್ಳಿ ಗ್ರಾಮದ ಶ್ರೀ ಕಂಬದ ಲಕ್ಷ್ಮೀನರಸಿಂಹ ಸ್ವಾಮಿಯ ಬ್ರಹ್ಮರಥೋತ್ಸವ ಪ್ರಯುಕ್ತ ಕುರುಕ್ಷೇತ್ರ ಎಂಬ ಪೌರಾಣಿಕ ನಾಟಕ ಕಾರ್ಯಕ್ರಮಕ್ಕೆ ಕೆಪಿಸಿಸಿ ಉಪಾಧ್ಯಕ್ಷರು ಹಾಗೂ ಮಾಜಿ ಅಧ್ಯಕ್ಷರು ಕೌಶಲ್ಯ ಅಭಿವೃದ್ಧಿ ನಿಗಮದ ಮುರಳೀಧರ ಹಾಲಪ್ಪ ನವರು ಭಾಗವಹಿಸಿ, ಮಾತನಾಡಿದ ಅವರು ಇಂದು ವೃತ್ತಿ ರಂಗಭೂಮಿ ಕಲಾವಿದರು ಸಂಕಷ್ಟದಲ್ಲಿದ್ದಾರೆ.
ಸರ್ಕಾರವು ಇವರುಗಳ ಸಮಸ್ಯೆಗಳಿಗೆ ಸ್ಪಂದಿಸುವ ಅಗತ್ಯವಿದೆ ಎಂದು ಮಾತಾನಾಡಿದರು.

ಮಾಧ್ಯಮಗಳ ಹಾವಳಿಯಿಂದಾಗಿ ರಂಗಭೂಮಿಯ ನಾಟಕ ಕಲೆಗಳು ಕಣ್ಮರೆಯತ್ತ ಸಾಗುತ್ತಿವೆ.ಈ ಜೀವಂತ ಕಲೆಯನ್ನು ಮತ್ತು ಕಲಾವಿದರನ್ನು ಪ್ರೋತ್ಸಾಹಿಸಿ,ಬೆಳೆಸಿ ರಂಗಕಲೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುತ್ತಾ ನಶಿಸದಂತೆ ಕಾಪಾಡುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಬೇಕಿದೆ ಎಂದು ತಿಳಿಸಿದರು.ಯುವಕರ ಏಕಗ್ರತೆಗೆ ಹಾಗೂ ಒಳ್ಳೆಯ ಹವ್ಯಾಸಗಳಿಗೆ ಪೂರಕ ವಾತಾವರಣ ನಾಟಕಗಳ ಮೂಲಕ ಸಾಧ್ಯ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ರಂಗಶ್ಯಾಮಣ್ಣ ಅಧ್ಯಕ್ಷರು, ಶ್ರೀ ಕಂಬದ ಲಕ್ಷ್ಮೀನರಸಿಂಹ ಸ್ವಾಮಿ ಜೀರ್ಣೋದ್ಧಾರ ಸಮಿತಿ,ದಯಾನಂದ್ ಉಪ ಕಮೀಷನರ್,ವಾಣಿಜ್ಯ ತೆರಿಗೆ ಇಲಾಖೆ,
ಗುರುರಾಜ್ ಗ್ರಾ.ಪಂ.ಅಧ್ಯಕ್ಷರು ಮಂಚಲದೊರೆ,
ರಾಜಣ್ಣಭೂಮಾಪಕ ಇಲಾಖೆ ಮತ್ತು ನಾಟಕದ ಆಯೋಜಕರುಗಳಾದ M.N ರಾಮಾಂಜಿನಯ್ಯ, M.K ಬಸವರಾಜ್, H.R ರಂಗನಾಥ್ VSSN ಕಾರ್ಯದರ್ಶಿ,ಕರಿಯಮ್ಮ ರಮೇಶ್ ತಾ.ಪಂ ಸದಸ್ಯರು,ಮಂಚಲದೊರೆ, ವತ್ಸಲ S.R ಗ್ರಾ.ಪಂ ಅಧ್ಯಕ್ಷರು,ನಲ್ಲೂರು
ಶಿವಣ್ಣ ಜಿಲ್ಲಾ ಕಾಂಗ್ರೆಸ್ ಕಾರ್ಯಾಧ್ಯಕ್ಷರು ಕುಂಟರಾಮನಹಳ್ಳಿ,ಗೋವಿಂದಪ್ಪ, ಹಾಗೂ ಮುಚ್ಚವೀರನಹಳ್ಳಿ ಗ್ರಾಮದ ಮುಖಂಡರು ಮತ್ತು ಅಕ್ಕ-ಪಕ್ಕದ ಗ್ರಾಮಗಳ ಕಲಾಭಿಮಾನಿಗಳು ಹಾಗೂ ಸಹಸ್ರಾರು ಸಂಖ್ಯೆಯ ಭಕ್ತಾದಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!