ಬೇಸಿಗೆ ಪ್ರರಂಭವಾದ ಇನ್ನೆಲೆಯಲ್ಲಿ ತಾಲೋಕಿನಲ್ಲಿ ಯಾವುದೇ ರೀತಿಯಾಗಿ ಕುಡಿಯುವ ನೀರಿಗೆ ಸಮಸ್ಯೆ ಉಂಟಾಗದಂತೆ ತಾಲೋಕಿನ ಅಧಿಕಾರಿಗಳು ಮುಂಜಾಗೃತ ಕ್ರಮ ವಹಿಸುವಂತೆ ಗುಬ್ಬಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಎಸ್, ಆರ್, ಶ್ರೀನಿವಾಸ್ ರವರ ಅಧ್ಯಕ್ಷತೆಯಲ್ಲಿ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಅಧಿಕಾರಿಗಳ ಜೋತೆ ಸಭೆ ನೇಡಸಲಾಯಿತು.
ಸಭೆಯಲ್ಲಿ ಅಧಿಕಾರಿಗಳಿಂದ ಮಾಹಿತಿ ಪಡೆದು ಮಾತನಾಡಿದ ಶಾಸಕರು ತಾಲೂಕಿನ ಎಲ್ಲಾ ಗ್ರಾಮಗಳಲ್ಲಿ ಶುಧ್ಧನೀರಿನ ಘಟಕಗಳು ನಿಲ್ಲದಂತೆ ಕ್ರಮ ವಹಿಸಬೇಕು ಶುದ್ಧ ನೀರಿನ ಘಟಕಗಳ ರಿಪೇರಿ ತುರ್ತಾಗಿ ಹಾಗಬೇಕು ಸಾರ್ವಜನಿಕರಿಗೆ ಜಾನುವಾರುಗಳಿಗೆ ಕುಡಿಯಲು ನೀರಿನ ಸಮಸ್ಯೆ ಉಂಟಾಗದಂತೆ ಕ್ರಮ ವಯಿಸಬೇಕು ಎಂದು ಗ್ರಾಮಪಂಚಾಯಿತಿ ಅಧಿಕಾರಿಗಳಿಗೆ ತಿಳಿಸಿದರು.
ಜೆ ಜೆ ಎಂ ಯೋಜನೆಯ ಕಾಮಗಾರಿ ತಾಲೂಕಿನಲ್ಲಿ ಮಂದಗತಿಯಲ್ಲಿ ನೆಡೆಯುತ್ತಿದೆ ಜೆ ಜೆ ಎಂ ಕಾಮಗಾರಿ ವಿಳಂಬ ಮಾಡುತ್ತಿರುವ ಗುತ್ತಿಗೆದಾರರಿಗೆ ನೋಟಿಸ್ ಜಾರಿಮಾಡುವ ಮೂಲಕ ಅವರ ಟೆಂಡರ್ ರದ್ದುಗೋಳಿಸಿ ಮರು ಟೆಂಡರ್ ಮಾಡುವಂತೆ ಸೂಚಿಸಿದರು ಜಲಜೀವನ್ ಕಾಮಗಾರಿಯಲ್ಲಿ ಕಳಪೆ ಗುಣಮಟ್ಟದ ಕಾಮಗಾರಿ ನೆಡೆದಿದ್ದರೆ ಅಥವ ಅಪೂರ್ಣವಾದ ಕಾಮಗಾರಿ ನೆಡೆದಿದ್ದರೆ ಅಂತಹವುಗಳನ್ನು ಗ್ರಾಮಪಂಚಾಯಿತಿ ಅಧಿಕಾರಿಗಳು ಗುತ್ತಿಗೆಗಾರರಿಂದ ಪಂಚಾಯ್ತಿ ಅಧಿನಕ್ಕೆ ಹಸ್ತಾಂತರ ಮಾಡಿಕೊಳ್ಳಬಾರದು ಹಾಗೇನಾದರೂ ಅಸ್ತಾಂತರ ಮಾಡಿಕೊಂಡರೆ ಗ್ರಾಮ ಪಂಚಾಯಿತಿಯ ಅಧಿಕಾರಿಗಳೇ ನೇರ ವಣೆಯಾಗಬೇಕಾಗುತ್ತದೆ ಎಂದು ಅಧಿಕಾರಿಗಳಿಗೆ ಕಟ್ಟುನಿಟ್ಟಾಗಿ ಆದೇಶಿಸಿದರು.
ತಾಲೂಕಿನಲ್ಲಿರುವಂತ ವಿಧ್ಯಾರ್ಥಿಗಳ ವಸತಿ ನಿಲಯಗಳಲ್ಲಿ ಯಾವುದೇ ಮೂಲಭೂತ ಸೌಲಭ್ಯಗಳ ಕೊರತೆ ಆಗದಂತೆ ನೋಡಿಕೋಳ್ಳಬೇಕು ಹಾಗು ಅವರಿಗೂ ಸಹ ಕುಡಿಯುವ ನೀರಿನ ಕೊರತೆ ಆಗದಂತೆ ನೋಡಿಕೋಳ್ಳಬೇಕು ಮತ್ತು ವಿಧ್ಯಾರ್ಥಿಗಳು ಹಾಗೂ ರೈತರು ತಮ್ಮ ಹೊಲ ಗದ್ದೆ ತೋಟಗಳಲ್ಲಿ ಕೇಲಸ ಮಾಡುವ ಸಂದರ್ಭದಲ್ಲಿ ಚಿರತೆಗಳ ದಾಳಿಯಾಗದಂತೆ ಎಚ್ಚರ ವಹಿಸಬೇಕು ಮತ್ತು ರೈತರ ಇಡುವಳಿ ಜಮೀನಿನಲ್ಲಿ ಹೆಚ್ಚಾಗಿ ಜಂಗಲ್ ಗಳು ಬೆಳೆದಿದ್ದರೆ ಅಂತಹ ಜಂಗಲ್ ಳನ್ನು ರೈತರಿಗೆ ಜಾಗೃತಿ ಮೂಡಿಸುವ ಮೂಲಕ ತೆರವು ಗೊಳಿಸಬೇಕು ಚಿರತೆಗಳು ಹೆಚ್ಚಾಗಿ ಓಡಾಡುವಂತಹ ಪ್ರದೇಶಗಳನ್ನು ಗುರುತಿಸಿ ಆ ಜಾಗಗಳಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಗಳು ಬೋನ್ ಗಳನ್ನು ಇಟ್ಟು ಸೆರೆ ಹಿಡಿಯುವ ಕೆಲಸವನ್ನು ಮಾಡಬೇಕು ಎಂದು ತಿಳಿಸಿದರು.
ಆಶ್ರಯ ಯೋಜನೆ ಅಡಿಯಲ್ಲಿ ನಿವೇಶನ ಹಂಚಿಕೆಗೆಂದು ನಿಗದಿಪಡಿಸಿರುವ ಜಾಗವನ್ನು ಅತಿ ಶೀಘ್ರವಾಗಿ ಪಂಚಾಯಿತಿ ವ್ಯಾಪ್ತಿಗೆ ಹಸ್ತಾಂತರಿಸಿಕೊಂಡು ಗ್ರಾಮಗಳಲ್ಲಿ ನಿಜವಾದ ನಿವೇಶನ ವಂಚಿತರನ್ನು ಗುರುತಿಸಿ ಪಟ್ಟಿ ಮಾಡುವಂತೆ ಸೂಚಿಸಿದರು.
ಇತ್ತೀಚೆಗೆ ಪತ್ರಕರ್ತರ ಸೋಗಿನಲ್ಲಿ ಬಂದು ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ಹಣ ವಸೂಲಿ ಮಾಡುತ್ತಿರುವುದು ನನ್ನ ಗಮನಕ್ಕೆ ಬಂದಿರುತ್ತದೆ ಅಂತಹ ವಸೂಲಿ ಪತ್ರಕರ್ತರಿಗೆ ಪಂಚಾಯ್ತಿಯಿಂದ ಹಣ ನೀಡಿರುವುದು ನನಗೆ ತಿಳಿದು ಬಂದರೆ ಯಾರು ಹಣ ನಿಡುತ್ತಾರೂ ಅಂತಹ ಗ್ರಾಮ ಪಂಚಾಯ್ತಿ ಪಿ ಡಿ ಓ ಗಳನ್ನು ನೇರವಾಗಿ ಸಸ್ಪೆಂಡ್ ಮಾಡಿಸಲಾಗುತ್ತದೆ ನಿಜವಾದ ಪತ್ರಕರ್ತರು ಯಾರು ಸಹ ಯಾವುದೇ ವಸೂಲಿ ಮಾಡುವುದಿಲ್ಲ ಅದರೆ ಪತ್ರಕರ್ತರ ಹೆಸರು ಹೇಳಿಕೊಂಡು ಅಧಿಕಾರಿಗಳಿಗೆ ಬೆದರಿಕೆ ಹಾಕಿಕೊಂಡು ಬರುವವರಿಗೆ ಮಣೆ ಹಾಕಬೇಡಿ ಇದರ ವಿಚಾರವಾಗಿ ತಾಲೋಕಿನ ದಂಢಾಧಿಕಾರಿಗಳಿಗೆ ಪಂಚಾಯ್ತಿಯಲ್ಲಿ ಯಾವ ಯಾವ ಅಧಿಕಾರಿಗಳು ಅಂತಹವರಿಗೆ ಎಷ್ಟು ಹಣ ನೀಡಿದ್ದಾರೆ ಎಂಬುದನ್ನು ತನಿಖೆ ಮಾಡಲು ತಂಡ ರಚಿಸಿ ತನಿಖೆ ಮಾಡುವಂತೆ ಸೂಚಿಸಿದರು.
ಸಭೆಯಲ್ಲಿ ತಹಸೀಲ್ದಾರ್ ಬಿ ಆರತಿ, ಕಾರ್ಯನಿರ್ವಾಹಕ ಅಧಿಕಾರಿ ಶಿವಪ್ರಕಾಶ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಹಾಗೂ ತಾಲೂಕಿನ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು