ಗುಬ್ಬಿ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, BC TRUST ತುಮಕೂರು ಜಿಲ್ಲೆ ಗುಬ್ಬಿ ತಾಲೂಕು ವತಿಯಿಂದ ತಾಲೂಕಿನ 68 ಒಕ್ಕೂಟಗಳ ಪದಾಧಿಕಾರಿಗಳ ಸಮಾವೇಶ ಕಾರ್ಯಗಾರವನ್ನು ಹಮ್ಮಿಕೊಳ್ಳಲಾಗಿತ್ತು .
ಈ ಕಾರ್ಯಕ್ರಮವನ್ನು ತುಮಕೂರು ಜಿಲ್ಲೆಯ ಗೌರವಾನ್ವಿತ ನಿರ್ದೇಶಕರಾದ ಸತೀಶ್ ಸುವರ್ಣ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕಿನ ರೀಜಿನಲ್ ಮ್ಯಾನೇಜರ್ ಬಮ್ ಶಂಕರ್ ಮಿಶ್ರ, ಚೀಫ್ ಮ್ಯಾನೇಜರ್ ಶಾಲಿನಿ ಕುಮಾರಿ ಮೇಡಂ, ಅಸಿಸ್ಟೆಂಟ್ ಮ್ಯಾನೇಜರ್ ಅದ ಚಿನ್ನ ಸರ್ ಹಾಗೂ ಜನಜಾಗೃತಿ ವೇದಿಕೆಯ ಸದಸ್ಯರಾದ ಶಿವಕುಮಾರ್ ಸರ್ ದೀಪ ಬೆಳಗಿಸುವುದರ ಮೂಲಕ ಉದ್ಘಾಟನೆ ಮಾಡಿದರು.
ಈ ಸಂದರ್ಭದಲ್ಲಿ ತುಮಕೂರು ಜಿಲ್ಲೆಯ ನಿರ್ದೇಶಕರಾದ ಸತೀಶ್ ಸುವರ್ಣ ಸರ್ ಅವರು ಮಾತನಾಡಿ ಕ್ಷೇತ್ರಕ್ಕೆ ಸುಮಾರು 800 ವರ್ಷಗಳ ಇತಿಹಾಸವಿದೆ ಕ್ಷೇತ್ರವು 4 ಚತುರ್ದಾನ ಹೆಸರುವಾಸಿಯಾಗಿದ್ದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಪ್ರಾರಂಭವಾಗಿ 42 ವರ್ಷಗಳ ಕಳೆದಿದ್ದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮಾಡುತ್ತಿರುವ ಸಮುದಾಯ ಅಭಿವೃದ್ಧಿ ಕಾರ್ಯಕ್ರಮಗಳಾದ ಕೆರೆ ಪುನಶ್ಚೇತನ ವಾತ್ಸಲ್ಯ ಮನೆ ಅತಿಥಿ ಶಿಕ್ಷಕರ ನೇಮಕಾತಿ ಪರಿಸರ ಕಾರ್ಯಕ್ರಮಗಳು ಹೀಗೆ ಮಾಡುತ್ತಿರುವ ಅನೇಕ ಸಮಾಜಮುಖಿ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು,
ಸಂಘದಲ್ಲಿ ವಾರ ಸಭೆಯ ಮಹತ್ವ ವಾರ ಸಭೆಯ ಬಗ್ಗೆ,ಬಡ್ಡಿ ಲೆಕ್ಕಾಚಾರದ,ಬಗ್ಗೆ ಪಿಂಕ್ ರಸೀದಿ ಮರುಪಾವತಿ ಚೀಟಿ, ಮಾಸಿಕ ವರದಿಯ ಮಹತ್ವದ ಬಗ್ಗೆ ಮತ್ತು ಬ್ಯಾಂಕಿನ ವಹಿವಾಟಿನ ಬಗ್ಗೆ ಮಾಹಿತಿ ನೀಡಿದರು ಬ್ಯಾಂಕಿಗೂ ಮತ್ತು ಯೋಜನೆಗಿರುವ ಸಂಬಂಧದ ಬಗ್ಗೆ ತಿಳಿಸಿದರು. ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ಆಗಿ ಕೆಲಸ ನಿರ್ವಹಿಸುತ್ತಿದ್ದು ಯಾವುದೇ ಲಾಭದಾಯಕ ಸಂಸ್ಥೆ ಆಗಿಲ್ಲ ಎಂದು ಹಲವಾರು ಉದಾಹರಣೆಯನ್ನು ನೀಡುವ ಮೂಲಕ ಮಾಹಿತಿ ನೀಡಿದರು.
SBI ತುಮಕೂರು ಬ್ರಾಂಚ್ ಸಹ ವ್ಯವಸ್ಥಾಪಕರಾದ ಚಿನ್ನ ಸರ್ ಅವರು ಮಾತನಾಡಿ
ಪ್ರತಿ ಒಂದು ಹಳ್ಳಿಯಲ್ಲಿ ಬ್ಯಾಂಕ್ ತೆರೆಯಲು ಸಾಧ್ಯವಿಲ್ಲ ಬ್ಯಾಂಕಿನ ಪ್ರತಿನಿಧಿಯಾಗಿ ಆರ್ ಬಿ ಐ ನ ನಿಬಂಧದ ಪ್ರಕಾರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಾರ್ಯನಿರ್ವಹಿಸುತ್ತಿದ್ದು. ಇದುವರೆಗೆ ಗುಬ್ಬಿ ತಾಲೂಕಿನಲ್ಲಿ 2982 ಸಂಘದ ಖಾತೆಗಳನ್ನು ತೆರೆದಿದ್ದು. ಇದುವರೆಗೆ 84 ಕೋಟಿ ಸಾಲವನ್ನು ನೀಡಿದ್ದು ಸಂಘದ ಖಾತೆಯನ್ನು ತೆರೆಯಲು ಯಾವ ಯಾವ ದಾಖಲಾತಿಗಳು ಸರಿ ಇರಬೇಕು ಎಂದು ಮಾಹಿತಿ ನೀಡಿದರು, ಸಿಸಿ ಖಾತೆಗೂ ಮತ್ತು ಎಸ್ ಬಿ ಖಾತೆಗೂ ಇರುವ ವ್ಯತ್ಯಾಸವನ್ನು ತಿಳಿಸಿದರು ಹಾಗೂ ಯೋಜನೆಯ ಮುಖಾಂತರ ಬ್ಯಾಂಕಿನ ಸೌಲಭ್ಯವನ್ನು ಸಂಘದ ಸದಸ್ಯರಿಗೆ ತಲುಪುವ ವ್ಯವಸ್ಥೆಯ ಬಗ್ಗೆ ವಿವರಣೆ ನೀಡಿದರು.
ಕಾರ್ಯಕ್ರಮದಲ್ಲಿ ಜನಜಾಗೃತಿ ವೇದಿಕೆ ಸದಸ್ಯರಾದ ಶಿವಕುಮಾರ್ ಸರ್ ಅವರು ಮಾತನಾಡಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಗುಬ್ಬಿ ತಾಲೂಕಿಗೆ ಬಂದು ಸುಮಾರು 13 ವರ್ಷಗಳಾಗಿದ್ದು ಹಲವಾರು ಸಮಾಜ ಅಭಿವೃದ್ಧಿ ಕಾರ್ಯಕ್ರಮಗಳನ್ನು ಮಾಡಿದ್ದು ಈ ವರ್ಷವೂ ಸಹ 2 ವಾತ್ಸಲ್ಯ ಮನೆ ನಿರ್ಮಾಣ ಮಾಡಿದ್ದಾರೆ, ಅತಿಥಿ ಶಿಕ್ಷಕರ ನೇಮಕವನ್ನು ಮಾಡಲಾಗಿದೆ ಯೋಜನೆಯಿಂದ ಹಲವಾರು ಸಂಘದ ಸದಸ್ಯರ ಮಕ್ಕಳಿಗೆ ವಿದ್ಯಾರ್ಥಿವೇತನವನ್ನು ದೊರೆಯುತ್ತಿದ್ದು,
ಹಲವಾರು ನಿರ್ಗತಿಕರಿಗೆ ಮಾಸಾಶನ ನೀಡುತ್ತಿದ್ದು ಸರ್ಕಾರವು ಮಾಡದ ಹಲವಾರು ಸಮುದಾಯ ಅಭಿವೃದ್ಧಿ ಕಾರ್ಯಗಳನ್ನ ಪರಮಪೂಜ್ಯ
ಡಾ ವೀರೇಂದ್ರ ಹೆಗ್ಗಡೆಯವರು ಮಾಡುತ್ತಿರುವುದು ಶ್ಲಾಘನೀಯ,
ಎಲ್ಲ ಒಕ್ಕೂಟ ಪದಾಧಿಕಾರಿಗಳು ಮತ್ತು ಸಂಘದ ಸದಸ್ಯರು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ನೀಡುತ್ತಿರುವ ಸೌಲಭ್ಯ ಗಳನ್ನು ಸೂಕ್ತ ರೀತಿಯಲ್ಲಿ ಮುನ್ನಡೆಸಿಕೊಂಡು ಹೋಗಿ ಆರ್ಥಿಕ ಸ್ವಾವಲಂಬಿಗಳಾಗಿ ಬದುಕನ್ನು ರೂಪಿಸಿಕೊಳ್ಳಬೇಕು ಎಂದು ತಿಳಿಸಿದರು,
ಗುಬ್ಬಿ ತಾಲೂಕಿನ ಯೋಜನಾಧಿಕಾರಿ ರಾಜೇಶ್. ಎಸ್ ಮಾತನಾಡಿ
ಇದುವರೆಗೆ ತಾಲೂಕಿನಲ್ಲಿ ಮಾಡಿರುವ ಸಮುದಾಯ ಅಭಿವೃದ್ಧಿ ಕಾರ್ಯಕ್ರಮದ ಅಂಕಿ ಅಂಶಗಳ ಬಗ್ಗೆ ಮಾಹಿತಿ ನೀಡಿದರು.
ಈ ಕಾರ್ಯಕ್ರಮದಲ್ಲಿ ಎಲ್ಲಾ ಒಕ್ಕೂಟ ಪದಾಧಿಕಾರಿಗಳು ದಾಖಲಾತಿ ಸಮಿತಿಯವರು ತಾಲೂಕಿನ ಎಲ್ಲಾ ಮೇಲ್ವಿಚಾರಕ ಶ್ರೇಣಿಯ ಕಾರ್ಯಕರ್ತರು ಕಚೇರಿ ಸಿಬ್ಬಂದಿಗಳು, ಸೇವಾಪ್ರತಿನಿಧಿಯವರು CSC ಸೇವಾದಾರರು ಹಾಗೂ 700ಕ್ಕೂ ಹೆಚ್ಚಿನ ಪದಾಧಿಕಾರಿಗಳು ಬಾವಗವಹಿಸಿದ್ದರು…