ಅರ್ಹ ಪಲಾನುಭವಿಗಳಿಗೆ ಕೃಷಿ ಪರಿಕರಗಳನ್ನು ವಿತರಿಸಿದ ಶಾಸಕ ಎಸ್ ಆರ್ ಶ್ರೀನಿವಾಸ್

ಗುಬ್ಬಿ ಸುದ್ದಿ

ಇಂದು ಗುಬ್ಬಿ  ಪಟ್ಟಣದ ಶಾಸಕರ ಕಚೇರಿಯ ಆವರಣದಲ್ಲಿ ಕೃಷಿ ಪರಿಕರಗಳನ್ನು. ಕೃಷಿ ಯಾಂತ್ರೀಕರಣ ಹಾಗೂ ರಾಗಿ ಪ್ರಾತ್ಯಕ್ಷಿಕೆ ಜೊತೆಗೆ ಜೈವಿಕ ರಸಗೊಬ್ಬರವನ್ನು 20ಕ್ಕೂ ಹೆಚ್ಚು ಫಲಾನುಭವಿಗಳಿಗೆ ಶಾಸಕ ಹಾಗೂ ಕೆ ಎಸ್ ಆರ್ ಟಿ ಸಿ ನಿಗಮ ಮಂಡಳಿ ಅಧ್ಯಕ್ಷ ಎಸ್ ಆರ್ ಶ್ರೀನಿವಾಸ್ ವಿತರಿಸಿದರು.

 

ನರೇಗಾ ಯೋಜನೆಯಡಿ ಕಾಮಗಾರಿಗಳು ಎಲ್ಲೆಲ್ಲಿ ಕಳಪೆ ಆಗಿದೆ ಅದರ ಮಾಹಿತಿಯನ್ನು ಪಡೆದು ತನಿಖೆ ಮಾಡಲಿ, ಅದನ್ನು ಬಿಟ್ಟು ಸದಸ್ಯರು ಹೇಳಿದಾಗೆ ಪಿಡಿಓ ಅವರು ಬಿಲ್ ಮಾಡಿಲ್ಲ ಅಂತ ಅವರ ಮೇಲೆ ಆರೋಪ ಮಾಡುತ್ತಾರೆ. ನರೇಗಾ ಯೋಜನೆಯಡಿ ಕೆಲಸ ಮಾಡುವವರು ಯಾರು ಸದಸ್ಯರೇ ಮಾಡುವುದು, ಯಾವ ಯಾವ ಪಂಚಾಯಿತಿ ಈ ರೀತಿ ಆಗಿರುತ್ತದೆಯೋ ಅದು ಸದಸ್ಯರೇ ಗೊತ್ತಿರುತ್ತದೆ. ಪಿಡಿಓ ಸದಸ್ಯರು ಹೇಳಿದಕ್ಕೆ ಸಹಿ ಮಾಡಲಿಲ್ಲ, ಕೇಳಿದ್ದು ಕೊಡಲಿಲ್ಲ ಎಂದರೆ ಇವೆಲ್ಲ ರಾಜಕೀಯದಲ್ಲಿ ಇರುತ್ತದೆ. ಜಾಬ್ ಕಾರ್ಡ್ ಇಟ್ಟುಕೊಂಡು ಕೂಲಿ ಕಾರ್ಮಿಕರ ಹತ್ತಿರ ಕೆಲಸ ಮಾಡಿಸಲು ಸಾಧ್ಯವಿಲ್ಲ, ಸರ್ಕಾರದ ಯೋಜನೆಯನ್ನು ಅನುಷ್ಠಾನಕ್ಕೆ ತರಬೇಕೆಂದು ಪ್ರಯತ್ನ ಮಾಡಲಾಗುತ್ತಿದೆ. ಇತ್ತೀಚಿಗೆ ಏನು ಮಾಡಿದರೂ ಅದರಲ್ಲಿ ಭ್ರಷ್ಟಚಾರದ ಆರೋಪ ಇದ್ದೇ ಇರುತ್ತದೆ, ಯಾವುದೇ ಕೆಲಸ ಮಾಡಿದರು ಅದರಲ್ಲಿ ಭ್ರಷ್ಟಚಾರ ನೆಡೆದಿದೆ ಎಂದರೆ ಯಾವುದು ಕೆಲಸ ಮಾಡುವುದೇ ಬೇಡ ಎಂದು ತಿಳಿಸಿದರು.

ಪಟ್ಟಣ ಪಂಚಾಯಿತಿ ಅಧ್ಯಕ್ಷ ಉಪಾಧ್ಯಕ್ಷರ ಸ್ಥಾನಕ್ಕೆ ನಮ್ಮಲ್ಲಿ 11+02 ಸದಸ್ಯರು ಇದ್ದು, ನಮಗೆ ಬಹುಮತ ಇದೆ ನಮ್ಮಲ್ಲಿಯೇ ಒಬ್ಬರನ್ನು ಮಾಡುತ್ತೇವೆ. ಯಾವುದೇ ರೀತಿಯ ಪೈಪೋಟಿಯ ಲಕ್ಷಣ ಇಲ್ಲ ಕೇವಲ ಮಾಧ್ಯಮಕ್ಕೆ ಅಷ್ಟೇ ಪೈಟ್ ನಮ್ಮಲ್ಲಿ ಯಾರೂ ಇಲ್ಲಿಯವರೆಗೆ ಅದರ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ನನಗೆ ನಮ್ಮ ಸದಸ್ಯರ ಮೇಲೆ ನಂಬಿಕೆ ಇದೆ, ಚುನಾವಣೆ ದಿನ ಕರೆದು ಯಾರನ್ನಾದರೂ ಒಬ್ಬರನ್ನು ಆಯ್ಕೆ ಮಾಡಲಾಗುವುದು, ಎಲ್ಲಾ ಸದಸ್ಯರಿಗೂ ಅಧ್ಯಕ್ಷರಾಗಬೇಕೆಂಬ ಆಸೆ ಇದ್ದೇ ಇರುತ್ತದೆ. ಚುನಾವಣಾ ಸಂದರ್ಭದಲ್ಲಿ ಸದಸ್ಯನಾಗಿ ಆಯ್ಕೆ ಆದರೆ ಸಾಕು ಎನ್ನುತ್ತೇವೆ ಅದಾದ ಬಳಿಕ ಅಧ್ಯಕ್ಷ ಹಾಗೂ ಉಪಾಧ್ಯಕ್ಷನ್ನಾಗಬೇಕೆಂಬ ಬಯಕೆ ಮನುಷ್ಯನಿಗೆ ಸ್ವಾಭಾವಿಕವಾಗಿ ಬಂದಿರುವಂತಹುದು ಎಂದು ತಿಳಿಸಿದರು.

ಕೃಷಿ ಇಲಾಖೆ ವತಿಯಿಂದ ರಾಗಿ ಪ್ರಾತ್ಯಕ್ಷಿಕೆಯನ್ನು ಜೈವಿಕ ಗೊಬ್ಬರಗಳು ವಿತರಣೆ, ಕೃಷಿ ಯಾಂತ್ರೀಕರಣ ಅಡಿ ಪವರ್ ವೇಡರ್, ಪ್ರೇಶ್ ಕಟರ್, ಜಾಬ್ ಕಟರ್, ಮತ್ತು ರೊಟೋ ಯಂತ್ರೋಪಕರಣಗಳನ್ನು 20ಕ್ಕೂ ಹೆಚ್ಚು ರೈತರಿಗೆ ವಿತರಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ಕೃಷಿ ಇಲಾಖೆ ಡಿ ಡಿ ಹುಲಿರಾಜ್, ತಾ.ಪಂ ಇಓ ಶಿವಪ್ರಕಾಶ್, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಜಗನ್ನಾಥ್ ಗೌಡ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಕೆ.ಆರ್. ವೆಂಕಟೇಶ್, ರೈತ ಸಂಘದ ಪ್ರಧಾನ ಕಾರ್ಯದರ್ಶಿ ಸಿ ಜಿ ಲೋಕೇಶ್ ಸೇರಿದಂತೆ ಹಲವು ಮುಖಂಡರು ರೈತರು ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

 

Leave a Reply

Your email address will not be published. Required fields are marked *