ನೂತನ ಸಂಸದರು ಹಾಗೂ ಕೇಂದ್ರ ಸಚಿವ ವಿ ಸೋಮಣ್ಣನವರಿಗೆ ಎನ್.ಡಿ. ಎ ಪಕ್ಷದ ಕಾರ್ಯಕರ್ತರಿಂದ ಅಭಿನಂದನೆ

ಗುಬ್ಬಿ ತಾಲೂಕಿನ ಕಸಬಾ ಹೋಬಳಿಯ ಹೇರೂರು ಬಳಿಯಿರುವ ಬಾಲಾಜಿ ಕಲ್ಯಾಣ ಮಂಟಪದಲ್ಲಿ ತುಮಕೂರು ಜಿಲ್ಲೆಯ ನೂತನ ಸಂಸದರು ಹಾಗೂ ಕೇಂದ್ರ ಜಲಶಕ್ತಿ ಮತ್ತು ರಾಜ್ಯ ರೈಲ್ವೆ ಸಚಿವರಾದ ವಿ.ಸೋಮಣ್ಣ ನವರಿಗೆ ಎನ್.ಡಿ. ಎ ಪಕ್ಷದ ಕಾರ್ಯ ಕರ್ತರು ಹಾಗೂ ಮತದಾರರಿಂದ ಅಭಿನಂದನಾ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು.

 

 

 

 

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಪ್ರತಿ ಶನಿವಾರ ಮತ್ತು ಭಾನುವಾರ ತುಮಕೂರಿನಲ್ಲಿ ಇರುತ್ತೇನೆ. ರೈತರು ಮತ್ತು ಜನ ಸಾಮಾನ್ಯರ ಸಮಸ್ಯೆಗಳನ್ನು ಆಲಿಸಿ ಅವರ ಕುಂದು ಕೊರತೆಗಳನ್ನು ಬಗೆಹರಿಸುವಂತಹ ಕೆಲಸ ಮಾಡುತ್ತೇನೆ ನಿರುದ್ಯೋಗಿ ಯುವಕರಿಗೆ ಬೇಕಾಗಿರುವಂತಹ ಕಾರ್ಖಾನೆಗಳನ್ನು ಮಾಡಲು ಮುಂದಾಗಿದ್ದೇವೆ.

 

 

ಜಿಲ್ಲೆಯ ನೀರಾವರಿಯ ಬಗ್ಗೆ ಉಸ್ತುವಾರಿ ಸಚಿವರು ಹಾಗೂ ಮುಖ್ಯಮಂತ್ರಿಗಳ ಜೊತೆ ಸಭೆಯಲ್ಲಿ ಚರ್ಚೆ ಮಾಡಿದ್ದೇನೆ. ಸರ್ಕಾರ ನಿಲ್ಲುವ ನೀರಲ್ಲ ಹರಿಯುವ ನೀರು ಹಾಗಾಗಿ ಅಭಿವೃದ್ಧಿಯ ಹೆಸರಿನಲ್ಲಿ ಯಾವುದೇ ಗೊಂದಲ ಬೇಡ. ಮಾತನಾಡುವುದನ್ನು ಕಡಿಮೆ ಮಾಡಿ ಜನರ ಬಳಿ ಹೋಗೋಣ. ಭಗವಂತನ ಕೃಪೆ ಹಾಗೂ ಮತದಾರರ ಆಶೀರ್ವಾದಿಂದ ಉತ್ತಮ ಕೆಲಸ ಮಾಡುತ್ತೇನೆ ಎಂದು ತಿಳಿಸಿದರು.

 

ಬಿಜೆಪಿ ಮುಖಂಡ ಎಸ್.ಡಿ.ದಿಲೀಪ್ ಕುಮಾರ್ ಮಾತನಾಡಿ ಜಿಲ್ಲೆಯಲ್ಲಿ ಯಾವುದಾದರು ಕಚಡ ರಸ್ತೆ ಇದ್ದರೆ ಅದು ಗುಬ್ಬಿ ತಾಲ್ಲೂಕಿನಲ್ಲಿ ಮಾತ್ರ ಗುಬ್ಬಿ ತಾಲೂಕಿನ ಜನತೆಯ ಆಶೀರ್ವಾದದಿಂದ ಹಾಗೂ ಕಾರ್ಯಕರ್ತರ ಒಗ್ಗಟ್ಟಿನ ಶ್ರಮದಿಂದ ಸಂಸದರ ಚುನಾವಣೆಯಲ್ಲಿ ನಮ್ಮ ಹಿರಿಯರು ಮಾರ್ಗದರ್ಶಕರು ಆದ ವಿ ಸೋಮಣ್ಣನವರಿಗೆ ಹೆಚ್ಚಿನ ಮತ ಹಾಕುವ ಮೂಲಕ ತಾಲೂಕಿನ ಅಭಿವೃದ್ಧಿಗೆ ಬೆಂಬಲಿಸಿದ್ದಾರೆ.

 

 

ಈ ಬಾರಿಯ ಲೋಕಸಭಾ  ಚುನಾವಣೆಯಲ್ಲಿ ಕಾರ್ಯಕರ್ತರು ಯಾರು ದುಡ್ಡಿಗೆ ಬೆಲೆ ಕೊಡಲಿಲ್ಲ. ನಮ್ಮ ಮೇಲೆ ಇಲ್ಲಸಲ್ಲದ ಆಪಾದನೆಗಳನ್ನು ಮಾಡಿದರು  ನಾವು ಪಕ್ಷದಲ್ಲಿ ಇದ್ದು ಕೊಂಡು ಬೇರೆ ಪಕ್ಷದ ಪರವಾಗಿ ಕೆಲಸ ಮಾಡಿದರೆ ಸ್ವಪಕ್ಷಕ್ಕೆ ಮೋಸ ಮಾಡಿ ತಾಯಿಗೆ ಮೋಸ ಮಾಡಿದ ಹಾಗೆ ಆಗುತ್ತದೆ ನಾನು ಮತ್ತು ಜೆಡಿಎಸ್ ಪಕ್ಷದ ಬಿಎಸ್ ನಾಗರಾಜು ಹಾಗೂ ಗುಬ್ಬಿ ತಾಲೂಕಿನ ಎಲ್ಲಾ ಎರಡು ಪಕ್ಷಗಳ ಮುಖಂಡರು ಖಾಯ ವಾಚ ಮನಸ್ಸಿನಿಂದ ಕೆಲಸ ಮಾಡಿದ್ದಕ್ಕೆ ನಮಗೆ ಇಂದು ಜಯ ಸಿಕ್ಕಿದೆ ಎಂದರು.

 

 

ನಮ್ಮ ನೂತನ ಸಚಿವರಲ್ಲಿ ತಾಲೂಕಿನ ಜನತೆಯ ಪರವಾಗಿ ಮನವಿ ಏನೆಂದರೆ ತಾಲ್ಲೂಕಿನಲ್ಲಿ ಎತ್ತಿನಹೊಳೆ ಹಾದು ಹೋಗುತ್ತಿದ್ದು ಈ ಭಾಗಕ್ಕೆ ನೀರು ಹರಿಸಬೇಕು ಹಾಗಲವಾಡಿ ಭಾಗದ ಕೆರೆಗಳಿಗೆ ನೀರು ಹರಿಸುವ ಮೂಲಕ ರೈತರ ಭವಣೆಯನ್ನು ನೀಗಿಸುವ ಮೂಲಕ ನಿಮ್ಮ ಅಮೃತ ಹಸ್ತದಿಂದ ನಮಗೆ ಗಂಗಾ ಪೂಜೆಯನ್ನು ನೆರವೇರಿಸಿ ಕೊಡಬೇಕೆಂದು ಮನವಿ ಮಾಡಿದರು.

 

 

 

ಈ ಸಂದರ್ಭದಲ್ಲಿ ಮಾಜಿ ಸಂಸದ ಜಿ.ಎಸ್.ಬಸವರಾಜು, ಬಿಜೆಪಿ ಜಿಲ್ಲಾಧ್ಯಕ್ಷ ರವೀಶ್ ಹೆಬ್ಬಾಕ ಎಂ.ಚಿಂದಾನಂದ ಗೌಡ, ಜೆಡಿಎಸ್ ಮುಖಂಡ ಬಿ.ಎಸ್.ನಾಗರಾಜು, ಹೊನ್ನಗೀರಿ ಗೌಡ, ಕಳ್ಳಿ ಪಾಳ್ಯ ಲೋಕೇಶ್ ಹಾರನಹಳ್ಳಿ ಪ್ರಭಾಕರ್, ಚಂದ್ರಶೇಖರ್ ಬಾಬು ನಂಜೇಗೌಡ, ಹೆಚ್ ಟಿ ಭೈರಪ್ಪ, ಸಾಗರನಳ್ಳಿ ನಟರಾಜ್, ಬಿ.ಎಸ್.ಪಂಚಾಕ್ಷರಿ, ಬಿಜೆಪಿ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಗಂಗಣ್ಣ, ಪಟ್ಟಣ ಪಂಚಾಯಿತಿ ಸದಸ್ಯರು, ಗ್ರಾಮ ಪಂಚಾಯಿತಿ ಸದಸ್ಯರು ಗಳು ಸೇರಿದಂತೆ ಎನ್. ಡಿ. ಎ ಪಕ್ಷದ ಮುಖಂಡರು ಕಾರ್ಯ ಕರ್ತರು ಸೇರಿದಂತೆ ಇನ್ನಿತರರು ಹಾಜರಿದ್ದರು.

Leave a Reply

Your email address will not be published. Required fields are marked *