ಗುಬ್ಬಿ ಸುದ್ದಿ
ಇತ್ತೀಚಿನ ದಿನ ಮಾನಗಳಲ್ಲಿ ಆನ್ಲೈನ್ ಸೇವೆಗೆ ಮಾರು ಹೋಗಿರುವ ಭಕ್ತರು ತಾವು ಇರುವಲ್ಲಿಯೇ ಎಲ್ಲಾ ಸೇವೆಯ ಸೌಲಭ್ಯಗಳನ್ನು ಪಡೆಯಲು ಇಚ್ಛಿಸುವ ಹಿನ್ನೆಲೆ ಮುಜರಾಯಿ ಇಲಾಖೆಗೆ ಒಳಪಡುವ ಗುಬ್ಬಿ ಇತಿಹಾಸ ಪ್ರಸಿದ್ಧ ಶ್ರೀ ಗೋಸಲ ಚನ್ನಬಸವೇಶ್ವರ ಸ್ವಾಮಿ ಅವರ ದರ್ಶನ ರಾಜ್ಯ ಹೊರ ರಾಜ್ಯಗಳಲ್ಲಿ ಭಕ್ತ ಸಮೂಹ ಇರುವ ಹಿನ್ನೆಲೆ ಸುಲಭ ಮಾರ್ಗದಲ್ಲಿ ಸೇವೆಗಳ ಸೌಲಭ್ಯಗಳ ಮಾಹಿತಿ ಪಡೆಯಲು ಅವಶ್ಯಕತೆ ಇರುವ ಹಿನ್ನೆಲೆ ನೂತನ ವೆಬ್ ಸೈಟ್ ಕಲ್ಪಿಸುವ ನಿಟ್ಟಿನಲ್ಲಿ ಭಕ್ತರಿಗೆ ಅನುಕೂಲವಾಗುವಂತೆ ಇಂದು ಆನ್ಲೈನ್ ಸೇವೆಯನ್ನು ಆನಾವರಣ ಮಾಡಲಾಗಿದೆ ದೇವಸ್ಥಾನಲ್ಲಿ ಮತ್ತಷ್ಟು ವಿನೂತನ ಆನ್ಲೈನ್ ಸೌಲಭ್ಯಗಳು ಸುಲಭ ರೀತಿಯಲ್ಲಿ ನೀಡುವ ನಿಟ್ಟಿನಲ್ಲಿ ದೇವಾಲಯದ ಆಡಳಿತ ಮಂಡಳಿ ಮುಂದಾಗಿರುವುದು ಸ್ವಾಗತಾರ್ಹ ಸಂಗತಿ. ಬೇರೆ ಬೇರೆ ಜಿಲ್ಲೆಗಳಿಂದ ರಾಜ್ಯಗಳಿಂದ ಬಂದ ಭಕ್ತರಿಗೆ ಉಳಿಯಲು ಸ್ಥಳಾವಕಾಶ ಇಲ್ಲದೆ ಇರುವುದು ಕಂಡುಬಂದಿರುವುದರ ಜೊತೆಗೆ ಈ ಕ್ಷೇತ್ರ ಪ್ರವಾಸೋದ್ಯಮ ಇಲಾಖೆ ಒಳಪಟ್ಟಿದ್ದು ಅಧಿಕಾರಿಗಳ ಜೊತೆ ಹಾಗೂ ಸರ್ಕಾರದ ಹಂತದಲ್ಲಿ ಮಾತನಾಡಿ ಯಾತ್ರಿ ನಿವಾಸ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಒದಗಿಸಿ ಕೊಡುವ ಮುಖೇನ ಈ ದೇವಾಲಯದ ಶ್ರೇಯೋಭಿವೃದ್ಧಿ ಕೈ ಜೋಡಿಸುವ ಭರವಸೆಯನ್ನು ನೀಡಿದರು.
ಇತಿಹಾಸ ಪ್ರಸಿದ್ಧ ಶ್ರೀ ಗೋಸಲ ಚನ್ನಬಸವೇಶ್ವರ ಸ್ವಾಮಿ (ಗುಬ್ಬಿಯಪ್ಪ) ದೇವಾಲಯದ ನೂತನ ವೆಬ್ ಸೈಟ್ https://gubbigosalachannabasaveshwara.com/ ಇದಾಗಿದ್ದು ಇದನ್ನು ಭಕ್ತರು ಸದ್ಬಳಕೆ ಮಾಡಿಕೊಂಡು ದೇವಾಲಯದ ಶ್ರೇಯೋಭಿವೃದ್ಧಿಗೆ ಶ್ರಮಿಸಿ ವಿಶ್ವದೆಲ್ಲೆಡೆ ಪಸರಿಸುವಂತೆ ಆದಾಗ ಇನ್ನಷ್ಟು ಆನ್ಲೈನ್ ಸೇವೆ ಕಲ್ಪಿಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ರಾಮಣ್ಣ, ಶಿರಸ್ತೇದಾರ್ ವರುಣ್, ಪೆಷ್ಕಾರ್ ವಿನೋದ್, ಮಾಜಿ ಜಿ.ಪಂ ಸದಸ್ಯ ಜಿ ಎಚ್ ಜಗನ್ನಾಥ್ , ಪ.ಪಂ ಮುಖ್ಯಾಧಿಕಾರಿ ಮಂಜುಳಾ ದೇವಿ ಪ.ಪಂ ವ್ಯವಸ್ಥಾಪನ ಸಮಿತಿ, ಜೀರ್ಣೋದ್ಧಾರ ಸಮಿತಿ ಸದಸ್ಯರು, 18 ಕೋಮಿನ ಮುಖಂಡರ ಉಪಸ್ಥಿತಿ ಇದ್ದರು