ಚೇಳೂರು : ಶಿಕ್ಷಣ ಸಂಸ್ಥೆಗಳು ಹಣ ಸಂಪಾದನೆ ಮಾಡುವ ಕಾಯಕವಾಗದೇ ಮಕ್ಕಳ ಬೌಧಿಕ ಮತ್ತುವ ಮಾನಸಿಕ ಜ್ಞಾನವನ್ನು ಬಲಪಡಿಸುವ ಮಾರ್ಗವಾದಾಗ ಮಾತ್ರ ಶಿಕ್ಷಣದ ಮೂಲ ಗುರಿಯನ್ನು ತಲುಪಿಸಲು ಸಾಧ್ಯ ಬೆಟ್ಟದಹಳ್ಳಿ ಗವಿಮಠದ ಶ್ರೀ ನಿ.ಪ.ಸ್ವ ಚಂದ್ರಶೇಖರ ಸ್ವಾಮೀಜಿಗಳು ತಿಳಿಸಿದರು.

ಅವರು ಗ್ರಾಮದ ಶ್ರೀ ಮಲ್ಲಿಕಾರ್ಜುನ ಸಂಸ್ಕೃತ, ಪ್ರಾಥಮಿಕ ಮತ್ತು ಪ್ರೌಢಶಾಲೆ ಸಂಯುಕ್ತ ಆಶ್ರಯದಲ್ಲಿ ನಡೆದ ಶಾಲಾ ವಾರ್ಷಿಕೋತ್ಸವ ಹಾಗೂ ಪೋಷಕರ ಮಹಾಸಭೆಯನ್ನು ಉದ್ದೇಶಿಸಿ ಮಾತನಾಡುತ್ತಾ, ಸುಮಾರು 35 ವರ್ಷಗಳಿಂದ ಮಕ್ಕಳ ಬೌಧಿಕ ಹಾಗೂ ಶಿಕ್ಷಣಿಕ ಚಟುವಟಿಕೆಗಳ ಮೂಲಕ ಲಕ್ಷಾಂತರ ವಿದ್ಯಾರ್ಥಿಗಳ ಮೌಲ್ಯಯುತ ಶಿಕ್ಷಣ ನೀಡಿದ ನಮ್ಮ ಶಾಲೆಯು ಇತ್ತೀಚಿನ ದಿನಗಳಲ್ಲಿ ಸರ್ಕಾರಗಳ ಬಿಗಿ ಧೋರಣೆಯಿಂದಾಗಿ ಶಾಲೆಗಳು ಮುಚ್ಚುವ ಹಂತವನ್ನು ತಲುಪಿವೆ, ಕಾರಣ ಶಾಲೆಗಳ ಗುಣಮಟ್ಟ ಹೆಚ್ಚಾಗಲು ಅಲ್ಲಿನ ಶಿಕ್ಷಕರುಗಳೇ ಕಾರಣವಾಗಿದ್ದು ಅಂತಹ ಶಿಕ್ಷರನ್ನು ನೇಮಕ ಮಾಡಿಕೊಳ್ಳಲು ಅವಕಾಶ ನೀಡದೆ ಮಲತಾಯಿ ದೋರಣೆ ಸರಿಯಾದ ಕ್ರಮವಲ್ಲ ಎಂದು ಹೇಳಿದರು.

τಇದೇ ಸಂದರ್ಭದಲ್ಲಿ ಮಾತನಾಡಿದ ಕಾರ್ಯದರ್ಶಿ ನಿರಂಜನಮೂರ್ತಿ ಶಾಲೆಗಳು ಮುಚ್ಚುವ ಹಂತದಲ್ಲಿ ಹಳೆಯ ವಿದ್ಯಾರ್ಥಿಗಳ ಹಾಗೂ ಸಾರ್ವಜನಿಕರ ಸಹಕಾರದಿಂದ ಶಾಲೆಯ ವಾತಾವರಣವನ್ನು ಉತ್ತಮಗೊಳಿಸಬಹುದು ಎಂದು ತಿಳಿಸಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲಕ್ಷ್ಮೀದೇವಿ, ಉಪಾಧ್ಯಕ್ಷೆ ಸುಜಾತ, ಸದ್ಯಾರಾದ ಶಿವಕುಮಾರ್, ನಟರಾಜು, ಹೇಮಂತ್, ತಾಲೂಕು ಪ್ರೌಢಶಾಲೆ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಉಮೇಶ್, ಸುಜಾತ, ಕೇಶವಮೂರ್ತಿ, ಪರಮೇಶ್, ಹೇಮಂತ್, ಜಿಲ್ಲಾ ಪ್ರಾಂಶುಪಾಲರ ಸಂಘದ ಕಾರ್ಯದರ್ಶಿ ಸತೀಶ್.ಸಿ.ಜಿ. ಬಸವರಾಜು, ಕೆಂಪರಾಜು, ಹೋಬಳಿ ಕಸಾಪ ಅಧ್ಯಕ್ಷರಾದ ಹರೀಶ್, ಎಸ್.ಎಂ ಶಿವಕುಮಾರ್, ರಂಗಸ್ವಾಮಿ, ಮುಖ್ಯ ಶಿಕ್ಷರಾದ ಗಂಗಾಧರಯ್ಯ, ಶಿಕ್ಷಕರಾದ ಸಿ ಎಸ್ ಶಿವಕುಮಾರ್, ಮಲ್ಲಿಕಾರ್ಜುನ, ಜಯಣ್ಣ, ಚಂದ್ರಶೇಖರ್, ನೂರಾರು ಪೋಷಕರು ಹಾಜರಿದ್ದರು.