ಲಿಂಕ್ ಕೆನಾಲ್ ಕಾಮಗಾರಿ ಮಾಡಲು ಬಿಟ್ಟರೆ ರೈತರಿಗೆ ಉಳಿಗಾಲವಿಲ್ಲ ಶಾಸಕ ಎಂ ಟಿ ಕೃಷ್ಣಪ್ಪ.

ಗುಬ್ಬಿ : ಲಿಂಕ್ ಕೆನಾಲ್ ಕಾಮಗಾರಿ ಮಾಡಲು ನಾವೇನಾದರು ಬಿಟ್ಟರೆ ಖಂಡಿತವಾಗಿಈಗ ಬೆಳೆಯುತ್ತಿರುವ ತೆಂಗು ಅಡಿಕೆ ಇಲ್ಲದ ಹಾಗೆ ಆಗುತ್ತೆ ಅನ್ನೋದುನ್ನ ಮರೆಯಬೇಡಿ ಎಂದು ತುರುವೇಕೆರೆ ಕ್ಷೇತ್ರದ ಶಾಸಕ ಎಂ ಟಿ ಕೃಷ್ಣಪ್ಪ ಹೇಳಿದರು.

ತುಮಕೂರು ಸಹಕಾರಿ ಹಾಲು ಒಕ್ಕೂಟ ಮತ್ತು ಪಶು ಪಾಲನಾ ಮತ್ತು ಪಶು ವೈದ್ಯಕೀಯ ಇಲಾಖೆಯ ಸಹಯೋಗದಲ್ಲಿ ಮಿಶ್ರ ತಳಿಕರು ಪ್ರದರ್ಶನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು
ಹೇಮಾವತಿ ಲಿಂಕ್ ಕೆನಾಲ್ ವಿಚಾರದಲ್ಲಿ ಈಗಾಗಲೇ ಹೊರಟ ಮಾಡಿ ನಿಲ್ಲಿಸಿದ್ದೇವೆ ಆದರೆ ಮುಂದಿನ ದಿನದಲ್ಲಿ ನೋಟಿಫಿಕೇಶ್ ನಡೆಯುವ ಸಾಧ್ಯತೆ ಇದ್ದು,ರೈತರು ಇದರ ಬಗ್ಗೆ ಎಚ್ಚರಿಕೆ ವಹಿಸಬೇಕಿದೆ.
ಸರಕಾರ ಬರುತೆ ಹೋಗುತ್ತೆ ಅಧಿಕಾರ ಇರುತ್ತೆ ಹೋಗುತ್ತೆ ಆದರೆ ನಮ್ಮ ನೀರನ್ನ ಯಾವುದೇ ಕಾರಣಕ್ಕೂ ಬಿಡಲು ಸಾಧ್ಯವಿಲ್ಲ ಇಲ್ಲಿ ನಾಲೆ ಮಾಡುತ್ತಿರುವುದು ಕಾನೂನು ಬಾಹಿರವಾಗಿದ್ದು ರೈತರು ಜಿಲ್ಲಾಧಿಕಾರಿ ಮುಂದೆ ಅಬ್ಜೆಕ್ಷನ್ ಹಾಕಿ ಎಂದು ತಿಳಿಸಿದರು.
ಹಲವು ಜನರಹೋರಾಟದ ಫಲವಾಗಿ ನೀರು ಬಂದಿದೆ ಈಗ ನಾವೇನಾದ್ರು ಹೊರಟ ಮಾಡದೇ ಹೋದರೆ ನೀರು ಬೇರೆಡೆ ಗೆ ಹೋದರೆ ನಮ್ಮ ರೈತರ ಜೀವನ ನಾಶ ವಾಗುತ್ತೆ ಅನ್ನೋದನ್ನ ಮರೆಯಬೇಡಿ ಎಂದು ತಿಳಿಸಿದರು.

ತುಮಕೂರು ಹಾಲು ಒಕ್ಕೂಟದ ನಿರ್ದೇಶಕಿ ಭಾರತಿ ಶ್ರೀನಿವಾಸ್ ಮಾತನಾಡಿ ಇಂದು ಇಲ್ಲಿಗೆ ವಿಶೇಷ ತಳಿಯ 415 ಮಿಶ್ರ ತಳಿ ಕರುಗಳು ಬಂದಿರೋದು ಖುಷಿ ನೀಡಿದೆ.
ಗುಬ್ಬಿ ತಾಲೂಕಿನ ಸಿ ಎಸ್ ಪುರ ಹೋಬಳಿಯಲ್ಲಿ ಹೆಚ್ಚು ಹಾಲು ಸಂಗ್ರಹ ವಾಗುತ್ತಿದ್ದು ಖಾಸಗಿ ಡೈರಿ ಗಳಿಂದ ರೈತರು ದೊರ ಬಂದು ನಮ್ಮ ಡೈರಿಗಳಿಗೆ ಹಾಲು ಹಾಕಿದರೆ ಹೆಚ್ಚಿನ ಅನುಕೂಲ ಪಡೆಯಬಹುದಾಗಿದೆ.
ಈ ಹೋಬಳಿಯಲ್ಲಿ ಕೇವಲ 10 ಡೈರಿಗಳು ಮಾತ್ರವಿದೆ ನಾವು ಈಗ ಹೆಚ್ಚಿನ ಡೈರಿಗಳು ಮಾಡುವುದಕ್ಕೆ ಮುಂದಾಗಿದ್ದು ರೈತರ ಸಹಕಾರ ಬೇಕಿದೆ.ಈ ಹೋಬಳಿಯಲ್ಲಿ ಸಾಕಷ್ಟು ಡೈರಿ ಮಾಡಬೇಕು ಅನ್ನೋ ಅಸೆ ಇದೆ ಆದರೆ ಇಲ್ಲಿ ನಮಗೆ ಸಲ್ಪ ಸಮಸ್ಯೆ ಆಗುತ್ತಿದ್ದೂ ಕೆಲವೊಂದು ಕಾಣದ ಕೈಗಳು ನಮಗೆ ವಿರೋಧ ವ್ಯಕ್ತ ಪಡಿಸುತ್ತಿದ್ದು ಶಾಸಕರು ಸಹಕಾರ ನೀಡಬೇಕು ಎಂದು ತಿಳಿಸಿದರು.
ತುಮಕೂರು ಹಾಲು ಒಕ್ಕೂಟವು ಪ್ರತಿಭಾ ಪುರಸ್ಕಾರ, ಹಸುವಿನ ವಿಮೆ, ವಿದ್ಯಾರ್ಥಿಗಳಿಗೆ ವಸತಿ ನಿಲಯ ಸೇರಿದಂತೆ ಹಲವು ಅನುಕೂಲಕರವಾದ ಕೆಲಸವನ್ನು ಮಾಡುತ್ತಿದ್ದು ಹೆಚ್ಚಿನ ರೀತಿಯ ಸಹಕಾರವನ್ನು ರೈತರು ಇದರಿಂದ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಉತ್ತಮವಾದ ಕರುಗಳಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಇದೆ ಸಂದರ್ಭದಲ್ಲಿ ಮುಖಂಡರಾದ ನಂಜಪ್ಪ,ನರಸಿಂಹ ಮೂರ್ತಿ, ಶಿವ ಪ್ರಸಾದ್, ನರಸೇಗೌಡ,
ನಾಗರಾಜು ಅಧ್ಯಕ್ಷ, ರಂಗನಾಥ್, ಕುಮಾರ್ ಸ್ವಾಮಿ, ಎಲ್ಲಾ ಹಾಲು ಒಕ್ಕೂಟದ ನಿರ್ದೇಶಕರು, ತುಮುಲ್ ನಾ ವ್ಯವಸ್ಥಾಪಕ ಚಂದ್ರ ಶೇಖರ್ ಕೇದಾನುರಿ, ಸೇರಿದಂತೆ ನೂರಾರು ರೈತರು, ಸಾರ್ವಜನಿಕರು ಮುಖಂಡರು, ಸ್ಥಳೀಯ ಜನಪ್ರತಿನಿಧಿಗಳು ಹಾಜರಿದ್ದರು.

Leave a Reply

Your email address will not be published. Required fields are marked *

error: Content is protected !!