ಗುಬ್ಬಿ ಕ್ಷೇತ್ರದ ಶಾಸಕ ಎಸ್ ಆರ್ ಶ್ರೀನಿವಾಸ್ ಅವರು ಯಾರಾದರೂ ಗುತ್ತಿಗೆದಾರರ ಬಳಿ ಕಮಿಷನ್ ಅಥವಾ ಲಂಚವನ್ನು ಪಡೆದಿದ್ದರೆ ಶಾಸಕರು ರಾಜಕೀಯ ನಿವೃತ್ತಿ ಪಡೆಯಲಿದ್ದಾರೆ ಎಂದು ಪಂಚ ಗ್ಯಾರಂಟಿ ಯೋಜನೆಯ ತಾಲೂಕು ಅಧ್ಯಕ್ಷ ವೆಂಕಟೇಶ್ ಬಿಜೆಪಿ ಮುಖಂಡ ಎಸ್ ಡಿ ದಿಲೀಪ್ ಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದರು.
ಪಟ್ಟಣದ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಹೇಮಾವತಿ ಲಿಂಕ್ ಕೆನಲ್ ಕಾಮಗಾರಿ ಗುತ್ತಿಗೆದಾರರಿಂದ ಲಂಚವನ್ನು ಪಡೆದು ಮೋಜು ಮಸ್ತಿ ಮಾಡಲು ಅಮೆರಿಕಕ್ಕೆ ತೆರಳಿದ್ದಾರೆ ಎಂದು ಆರೋಪ ಮಾಡುತ್ತಿರುವ ಮಿಸ್ಟರ್ ದಿಲೀಪ್ ಕುಮಾರ್ ನೀನು ಶಾಸಕರು ಯಾವುದೇ ಗುತ್ತಿಗೆದಾರರ ಬಳಿ ಹಣವನ್ನು ಪಡೆದು ಮೋಜು ಮಸ್ತಿ ಮಾಡಲು ಹೋಗಿರುವ ಬಗ್ಗೆ ಸಾಬೀತುಪಡಿಸಿದರೆ ನಾವುಗಳು ಹಾಗೂ ನಮ್ಮ ಶಾಸಕರು ರಾಜಕೀಯದಿಂದ ನಿವೃತ್ತಿ ಪಡಿಲಿದ್ದೇವೆ ಎಂದು ಬಿಜೆಪಿ ಮುಖಂಡ ಎಸ್‍ಡಿ ದಿಲೀಪ್ ಕುಮಾರ್ ಆರೋಪ ಕ್ಕೆ ತೀರುಗೆಟು ನೀಡಿದರು.
ಮಾಜಿ ಶಾಸಕ ಚಿಕ್ಕೇಗೌಡರು ಸಾಕಷ್ಟು ಜನಪರ ಕಾರ್ಯಕ್ರಮವನ್ನು ಮಾಡಿದ್ದರಿಂದ ಇಂದಿಗೂ ಸಹ ಅವರ ಹೆಸರು ಪ್ರಚಲಿತವಾಗಿದೆ ಅಂತಹ ವ್ಯಕ್ತಿಗಳಿಗೆ ಮಸಿ ಬಳಿಯುವ ಕೆಲಸಕ್ಕೆ ಮುಂದಾಗ ಬೇಡ ಅವರು ಮಾಡಿರುವ ಜನಪರ ಕಾರ್ಯಕ್ರಮಗಳನ್ನು ನೀನು ಮಾಡಿ ತೋರಿಸು ಅದನ್ನು ಬಿಟ್ಟು ಹುಚ್ಚು ನಾಯಿಯಂತೆ ಮಾತನಾಡುವುದನ್ನು ನಿಲ್ಲಿಸಬೇಕು.
ಒಕ್ಕಲಿಗ ಸಮಾಜದ ವಿರೋಧಿಯಾದ ದಿಲೀಪ್ ಕುಮಾರ್ ವಿನಾಕಾರಣ ಶಾಸಕರ ಬಗ್ಗೆ ಅಗುರವಾಗಿ ಮಾತನಾಡುತ್ತಿರುವುದು ಸರಿಯಲ್ಲ.
ಅಮೆರಿಕದಲ್ಲಿ ಒಕ್ಕಲಿಗರ ಸಮ್ಮೇಳನಕ್ಕಾಗಿ ಹೋಗಿದ್ದ ಮಾಜಿ ಶಾಸಕರ ಬಗ್ಗೆ ಅನೈತಿಕವಾಗಿ ನಿನು ಮಾತಾನಾಡುತ್ತಿದ್ದು ಮತ್ತೆ ಜೈಲು ಸೇರುವ ಪರಿಸ್ಥಿತಿ ಎದುರಿಸಬೇಕಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸರ್ಕಾರದ ಪಂಚ ಗ್ಯಾರಂಟಿ ಯೋಜನೆಯಲ್ಲಿ ಒಂದಾದ ಶಕ್ತಿ ಯೋಜನೆ ಅಡಿಯಲ್ಲಿ ಸರ್ಕಾರದ ಮಹತ್ವಕಾಂಕ್ಷೆ ಯಾದ ಮಹಿಳಾ ಸಬಲೀಕರಣ ಮಹಿಳೆಯರ ಉತ್ತೇಜನಕ್ಕೆ ಪ್ರತಿ ತಾಲೂಕಿನಲ್ಲಿ ಬಸ್ ನಿಲ್ದಾಣದಲ್ಲಿ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಂಡು ಸಿಹಿ ಹಂಚುವ ಮೂಲಕ ಕಾರ್ಯಕ್ರಮ ನೆಡೆಸುವಂತೆ ಸರ್ಕಾರದ ಗ್ಯಾರಂಟಿ ಯೋಜನೆಯ ಅಧ್ಯಕ್ಷರಾದ ಎಚ್ಆರ್ ರೇವಣ್ಣನವರು ಸಂದೇಶವನ್ನು ಕಳುಹಿಸಿದ್ದು ಅವರ ಸೂಚನೆ ಮೇರೆಗೆ ದಿ. 14 ರಂದು ಬೆ. 10ಕ್ಕೆ ಪಟ್ಟಣದ ಬಸ್ ನಿಲ್ದಾಣ ದಲ್ಲಿ ಸಾರ್ವಜನಿಕರು ಹಾಗೂ ಶಕ್ತಿ ಯೋಜನೆಯ ಪ್ರಯೋಜನ ಪಡೆದ ಫಲಾನುಭವಿಗಳು ಈ ಕಾರ್ಯಕ್ರಮಕ್ಕೆ ಆಗಮಿಸಿ ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಬೇಕು ಎಂದರು.
ಡೆಪಾಸಿಟ್ ಸಮಸ್ಯೆಯಿಂದ ಹೊಸ ಬಸ್ ಸಂಚಾರ ಮಾಡುವುದಕ್ಕೆ ಇನ್ನು ಆರು ತಿಂಗಳು ಅಥವಾ ವರ್ಷಗಳಲ್ಲಿ ಈ ಸಮಸ್ಯೆ ಬಗೆಹರಿಸುತ್ತೇವೆ. ಈಗಾಗಲೇ ಬಸ್ ಡಿಪೋ ನಿರ್ಮಾಣಕ್ಕೆ 5 ಎಕರೆ ಜಮೀನು, ಹೇರೂರು ಸಮೀಪದ ರೇಷ್ಮೆ ಇಲಾಖೆಯ ಆವರಣದ ಜಾಗವನ್ನು ಮೀಸಲಿರಿಸಿದ್ದೇವೆ. ಶೀಘ್ರದಲ್ಲಿ ಬಸ್ ಡಿಪೋ ನಿರ್ಮಾಣ ಕಾಮಗಾರಿ ಅನುಷ್ಠಾನಗೊಳ್ಳಲಿದೆ.
ಬೆಳಿಗ್ಗೆ 7 ರಿಂದ 10 ಗಂಟೆಯ ಒಳಗೆ ಬರುವ ಶಿವಮೊಗ್ಗ ದಿಂದ ಬೆಂಗಳೂರು ಮಾರ್ಗದ ಬಸ್ ಗಳಲ್ಲಿ ಸಾರ್ವಜನಿಕರಿಗೆ ಯಾವುದೇ ರೀತಿಯಾದ ತೊಂದರೆ ಅಗದಂತೆ ಬಸ್ಸುಗಳನ್ನು ನಿಲ್ಲಿಸಿ ಹತ್ತಿಸಿಕೊಳ್ಳಬೇಕು ಮಕ್ಕಳು ವಿದ್ಯಾರ್ಥಿನಿಯರು ಎಂದು ನಿರ್ಲಕ್ಷ ಮಾಡದೆ ಕಡ್ಡಾಯವಾಗಿ ಬಸ್ ನಿಲ್ಲಿಸತಕ್ಕದ್ದು ಎಂದು ತಿಳಿಸಿದರು.
22,45,780 ರಷ್ಟು ಫಲಾನುಭವಿಗಳಿಗೆ ಅನ್ನ ಭಾಗ್ಯ ಯೋಜನೆ ಅಡಿಯಲ್ಲಿ 5 ಕೆಜಿ ಅಕ್ಕಿ ಮತ್ತು ಐದು ಕೆಜಿ ರೂಪದಲ್ಲಿ ದುಡ್ಡನ್ನು ಕೊಡುತ್ತಿದ್ದೇವು ಎಂದು ಹೇಳಿದರು.
ಈಗ ಮತ್ತೆ 10 ಕೆಜಿ ಅಕ್ಕಿ ಇರೋದು ನಿಮ್ಮ ಕಣ್ಣೆದುರಿಗೆ ಇದೆ ಮುಂದಿನ ದಿನಗಳಲ್ಲಿ ಇಂದಿರಾ ಕಿಟ್ ಅಡಿಯಲ್ಲಿ ಸಮರ್ಪಕವಾಗಿ ಎಲ್ಲರ ಮನೆಮನೆಗಳಲ್ಲೂ ಇಂದಿರಾ ಕಿಟ್ ಕೊಡುವ ಯೋಜನೆ ಇದೆ ಮತ್ತು ಜನವರಿ 24 ರಿಂದ ಮೇ 25 ಇಲ್ಲಿವರೆಗೂ 693 ಜನ ಫಲಾನುಭವಿಗಳಾದ ಪದವಿ ವಿದ್ಯಾರ್ಥಿಗಳಿಗೆ ಓದಲು ಅನುಕೂಲವಾಗಲಿ ಎಂಬ ಉದ್ದೇಶದಿಂದ ಯುವ ನಿಧಿ ನೀಡುತ್ತಿದೆ ಸರ್ಕಾರ 2024 ರಿಂದ 2025ರ ವರೆಗೆ ಒಂದು ಕೋಟಿ 25 ಲಕ್ಷದ ಮೂವತ್ತೇಳು ಸಾವಿರ ಹಣವನ್ನು ಪದವೀಧರರಿಗೆ ನೀಡಿದೆ ಮತ್ತೆ ಅವರವರ ಖಾತೆಗಳಿಗೆ ಜಮೆ ಮಾಡಲಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಡಿಕೆ ಶಿವಕುಮಾರ್ ನೇತೃತ್ವದ ಸರ್ಕಾರದ ವಿವಿಧ ಯೋಜನೆಗಳ ಸದುಪಯೋಗಗನ್ನು ಜನತೆ ಪಡೆಯಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಗ್ಯಾರೆಂಟಿ ಯೋಜನೆಯ ಸದಸ್ಯರು ಹಾಗೂ ಮುಖಂಡರಾದ ಯತೀಶ್.ಗೋಪಿ.ರಾಜಣ್ಣ.ಶಾಂತಕುಮಾರ್. ವತ್ಸಲಾ ಇತರರು ಹಾಜರಿದ್ದರು.