ತುಮಕೂರು ಜಿಲ್ಲೆಯಲ್ಲಿ ನಕಲಿ ಡಾಕ್ಟರ್ ಗಳ ವಿರುದ್ಧ ಕ್ರಮ ಯಾವಾಗ.

ಗೃಹ ಸಚಿವರ ಜಿಲ್ಲೆಯಲ್ಲಿ ನಕಲಿ ಡಾಕ್ಟರ್ ಗಳ ವಿರುದ್ಧ ಕ್ರಮ ಯಾವಾಗ ?.ನಕಲಿ ಕ್ಲಿನಿಕ್ ಗಳನ್ನು ಯಾವಾಗ ಬಂದ್ ಮಾಡಿಸುತ್ತೀರಾ ಗೃಹ ಸಚಿವರೇ ? ಎಂಬ ಕೂಗು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ

 

ಜಿಲ್ಲಾ ಆರೋಗ್ಯ ಕಲ್ಯಾಣಾಧಿಕಾರಿಗಳು , ಕಣ್ಮುಚ್ಚಿ ಕುಳಿತಿರುವುದರ ಹಿಂದಿನ ಮರ್ಮವೇನು ಜಿಲ್ಲೆಯ ನಕಲಿ ವೈದ್ಯರ ಮೇಲೆ  ಕ್ರಮ ಏಕೆ ಇಲ್ಲ ಎಂಬ ಮಾತುಗಳು ಕೇಳಿ ಬರುತ್ತಿದ್ದು ಇದಕ್ಕೆಲ್ಲ ಡಿ, ಎಚ್, ಓ, ರವರೆ ಉತ್ತರಿಸಬೇಕಾಗಿದೆ

 

 

ವೈಧ್ಯ ದೇವೋಭವ ಎಂಬ ನಾಡ್ನುಡಿ ಇದೆ. ವೈಧ್ಯರು ದೇವರ ಸಮಾನ ಎಂಬ ಭಾವನೆ ಎಲ್ಲರಲ್ಲಿದೆ. ಯಾರೆ ವಿಧ್ಯಾರ್ಥಿಗಳಿಗೆ ಕೇಳಿದರು ಮುಂದೆ ಓದಿ ನೀನು ಏನಾಗಬೇಕೆಂದಿದ್ದೀಯಾ ಅಂದರೆ ಹೆಚ್ಚಾಗಿ ಎಲ್ಲರೂ ನಾನು ಮುಂದೆ ಓದಿ ಡಾಕ್ಟರ್ ಆಗುತ್ತೇನೆ ಎಂದು ಹೇಳುತ್ತಾರೆ. ಹಾಗು ಎಲ್ಲಾ ಪೋಷಕರು ತಮ್ಮ ಮಕ್ಕಳು ಓದಿ ಮುಂದೆ ಒಳ್ಳೆಯ ಡಾಕ್ಟರ್ ಆಗಬೇಕೆಂದು ಆಸೆ ವ್ಯಕ್ತಪಡಿಸುತ್ತಾರೆ.

 

ಆದರೆ ಅಂತಹ ಡಾಕ್ಟರ್ ಆಗಬೇಕಾದರೆ ಎಷ್ಟು ಕಷ್ಟ ಎಂಬುದು ಲಕ್ಷಾಂತರ ರೂಪಾಯಿ ಹಣ ಖರ್ಚು ಮಾಡಿ ಕಷ್ಟಪಟ್ಟು ಓದಿ ಡಾಕ್ಟರ್ ಆದವರಿಗೆ ಗೊತ್ತು ,ಅದರ ಮಹತ್ವದ ಬಗ್ಗೆ.

 

ಒರಿಜಿನಲ್ ಡಾಕ್ಟರ್ :

ಡಾಕ್ಟರ್ ಕೋಸ್೯ ಗಳಲ್ಲಿ ಅಲೋಪತಿ ( MBBS ) , ,ಆಯುರ್ವೇದ (BAMS) , ಯುನಾನಿ ( BUMS ), ಹೋಮಿಯೋಪತಿ (BHMS ), ಯೋಗ ಮತ್ತು ನ್ಯಾಚುರೋಪತಿ ( BNYS ) ಹಾಗು ಸಿದ್ದಾ , ಈ ರೀತಿಯಲ್ಲಿ AYUSH ಎಂಬ ಹಲವು ವಿಧಗಳಿವೆ‌ .

 

 

ಈ ಎಲ್ಲಾ ಡಾಕ್ಟರ್ ಕೋಸ್೯ ಗಳನ್ನು ಮಾಡಲು ಪಿ.ಯು.ಸಿ ಯಲ್ಲಿ ಸೈನ್ಸ್ ತೆಗೆದುಕೊಂಡಿರಬೇಕು ( PUC – PCMB ) ನಂತರ CET , NEET ಪರೀಕ್ಷೆ ಗಳನ್ನು ಬರೆದು ಅದರಲ್ಲಿ ಒಳ್ಳೆಯ ಅಂಕಗಳನ್ನು ಪಡೆಯಬೇಕು , ನಂತರ ಲಕ್ಷಾಂತರ ರೂಪಾಯಿ ಖರ್ಚು ಮಾಡಿ , ಐದು ವರ್ಷಗಳ ಕಾಲ ಓದಬೇಕು .ನಂತರ ಒಂದು ವರ್ಷ ಇಂಟನ್೯ಷಿಪ್ ಮಾಡಿ ಒರಿಜಿನಲ್ ಡಾಕ್ಟರ್ ಆಗಿ ಹೊರ ಬರುತ್ತಾರೆ.

 

ನಕಲಿ ಡಾಕ್ಟರ್ :

ಆದರೆ ನಕಲಿ ಡಾಕ್ಟರ್ ಗಳಾಗಲು ಕಷ್ಟವೇ ಪಡಬೇಕಿಲ್ಲ , ಬರೀ SSLC ,PUC ಮಾಡಿಕೊಂಡು ನಂತರ ಹೊಟ್ಟೆಪಾಡಿಗಾಗಿ ಯಾವುದಾದರೂ ನರ್ಸಿಂಗ್ ಹೋಂ ಗಳಲ್ಲಿ ಅಥವಾ ಕ್ಲಿನಿಕ್ ಗಳಲ್ಲಿ ಅಟೆಂಡರ್ ಅಥವಾ ಸಹಾಯಕನಾಗಿ ಐದಾರು ವರ್ಷಗಳು ಕೆಲಸ ಮಾಡಿದರೆ ಸಾಕು ,ನಕಲಿ ಡಾಕ್ಟರ್ ಆಗಬಹುದು.

ಒರಿಜಿನಲ್ ಡಾಕ್ಟರ್ ಗಳು ಯಾವ ಕಾಯಿಲೆಗೆ ಯಾವ ಔಷಧಿಗಳನ್ನು ಕೊಡುತ್ತಾರೆ ,ಯಾವ ಇಂಜೆಕ್ಷನ್ ಗಳನ್ನು ಹಾಕುತ್ತಾರೆ ಹಾಗು ಯಾವ ಡ್ರಿಪ್ ಗಳನ್ನು ಹಾಕುತ್ತಾರೆ ,ಹೇಗೆ ಹಾಕುತ್ತಾರೆ ಎಂಬುದನ್ನು ನೋಡಿಕೊಂಡು , ಬರೀ Externally ತಿಳಿದುಕೊಂಡು ಬಂದು . ಎಲ್ಲದರೂ ಒಂದು ಸೂಕ್ತವಾದ ಜಾಗ ನೋಡಿ ಕ್ಲಿನಿಕ್ ತೆರೆದು ಒರಿಜಿನಲ್ ಡಾಕ್ಟರ್ ಗಳ ತರಹ ನಕಲಿ ಡಾಕ್ಟರ್ ಗಳು ರೋಗಿಗಳಿಗೆ ಚಿಕಿತ್ಸೆ ನೀಡುತ್ತಾ ,ಅಮಾಯಕರ ಪ್ರಾಣದೊಡನೆ ಚೆಲ್ಲಾಟವಾಡುತ್ತಿದ್ದಾರೆ.

 

 

ಇವರಿಗೆ ಯಾರ ಭಯವೂ ಇಲ್ಲ.. ಆರೋಗ್ಯ ಇಲಾಖೆಯ DHO ,THO ಗಳಾಗಲಿ ಅಥವಾ ಪೋಲಿಸ್ ಇಲಾಖೆಯ SP , Dysp , ಸರ್ಕಲ್ ಇನ್ಸ್ಪೆಕ್ಟರ್ ಗಳಾಲಿ ,ಸಬ್ ಇನ್ಸ್ಪೆಕ್ಟರ್ ಗಳಾಗಲಿ ಇಂತಹ ನಕಲಿ ಕ್ಲಿನಿಕ್ ಗಳನ್ನು ನೋಡಿಯು ನೋಡದಂತೆ ಇದ್ದು ಬಿಟ್ಟಿರುವುದು , ಈ ನಕಲಿ ಕ್ಲಿನಿಕ್ ಗಳು ಹಾಗೂ ನಕಲಿ ಡಾಕ್ಟರ್ ಗಳು ಹೆಚ್ಚಾಗಲು ಕಾರಣ.

 

 

 

ಇನ್ನೂ ಕೆಲವರು ಲ್ಯಾಬ್ ಟೆಕ್ನಷಿಯನ್ ಕೋಸ್೯ ಮಾಡಿ ರಕ್ತ ಪರೀಕ್ಷೆಯ ಲ್ಯಾಬೋರೇಟರಿ ಮಾಡಿಕೊಂಡು ಅದರಲ್ಲಿಯೆ ಡಾಕ್ಟರ್ ಗಳೆಂದು ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ಹಾಗೂ ಇನ್ನೂ ಕೆಲವರು ಮೂಳೆ ಡಾಕ್ಟರ್ ಗಳೆಂದು ಚಿಕಿತ್ಸೆ ಕೊಡುತ್ತಿದ್ದಾರೆ.

 

 

 

PUC ಸೈನ್ಸ್ ನಂತರ CET ಬರೆದು BPT ಕೋಸ್೯ ಗೆ ಆಯ್ಕೆ ಯಾಗಿ ಸೀಟ್ ಸಿಕ್ಕಿದ ನಂತರ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ನಾಲ್ಕು ವರ್ಷಗಳ ಕಾಲ ಕಷ್ಟಪಟ್ಟು ಓದಿ ,ನಂತರ ಪಿಸಿಯೋಥೆರಪಿಸ್ಟ್ ಆಗಿ ಹೊರ ಬಂದು ಎಲ್ಲದರೂ ಪಿಸಿಯೋಥೆರಪಿ ಸೆಂಟರ್ ಗಳನ್ನು ಮಾಡಿಕೊಳ್ಳಬಹುದು.

 

 

ಆದರೆ ಕೆಲವರು ಯಾವುದನ್ನೂ ಮಾಡದೇ ಬರೀ SSLC ,PUC ಆಗದವರು ಮೂಳೆ ಡಾಕ್ಟರ್ ಗಳೆಂದು ಕ್ಲಿನಿಕ್ ಗಳನ್ನು ಮಾಡಿಕೊಂಡಿದ್ದಾರೆ. ಇನ್ನೂ ಕೆಲವರು SSLC ನಂತರ ಬರೀ ಹತ್ತು ತಿಂಗಳ ಪಿಸಿಯೋಥೆರಪಿ ಸರ್ಟಿಫಿಕೇಟ್ ಕೋಸ್೯ (DPT ). ಮಾಡಿಕೊಂಡು , ಮೂಳೆ ಡಾಕ್ಟರ್ ಗಳೆಂದು ಜನತೆಗೆ ಯಾಮಾರಿಸುತ್ತಿದ್ದಾರೆ.

 

 

ಕಾನೂನಿನ ಪ್ರಕಾರ BPT ( Bachelor of Physiotherapy ) ಪದವಿ ಮಾಡಿರುವವರು ಪಿಸಿಯೋಥೆರಪಿ ಸೆಂಟರ್ ಮಾಡಬಹುದು , ಅಂತಹವರ ಪಿಸಿಯೋಥೆರಪಿ ಸೆಂಟರ್ ಗಳಲ್ಲಿ , SSLC ಯ ನಂತರ ಹತ್ತು ತಿಂಗಳ DPT ಸರ್ಟಿಫಿಕೇಟ್ ಕೋಸ್೯ ಮಾಡಿರುವವರು ಸಹಾಯಕರಾಗಿ ಕೆಲಸ ಮಾಡಿಕೊಂಡಿರಬೇಕು ಅಷ್ಟೇ. DPT ಮಾಡಿರುವವರು ಸ್ವಂತ ವಾಗಿ ಪಿಸಿಯೋಥೆರಪಿ ಸೆಂಟರ್ ಮಾಡುವ ಹಾಗಿಲ್ಲ.

ಅದನ್ನು ಬಿಟ್ಟು ಕೆಲವರು ಕ್ಲಿನಿಕ್ ಗಳನ್ನು ತರೆದು ಮೂಳೆ ಡಾಕ್ಟರ್ ಗಳೆಂದು ಯಾಮಾರಿಸುತ್ತಾ ,ಕ್ಲಿನಿಕ್ ಗಳಲ್ಲಿ ರೋಗಿಗಳಿಗೆ ಇಂಜೆಕ್ಷನ್ ಗಳನ್ನು ಹಾಕುತ್ತಾ , ಡ್ರಿಪ್ ಗಳನ್ನು ಹಾಕತ್ತಾ ,ಔಷಧಿಗಳನ್ನು ನೀಡುತ್ತಾ ಹಾಗು ಒಂದು ಕಡೆ ಪಿಸಿಯೋಥೆರಪಿ ಸೆಂಟರ್ ಗಳನ್ನು ಮಾಡಿಕೊಂಡು ಅದರಲ್ಲೂ ಮೂಳೆ ಡಾಕ್ಟರ್ ಗಳೆಂದು ಚಿಕಿತ್ಸೆ ನೀಡುತ್ತಿದ್ದಾರೆ.

 

 

ಕಾನೂನಿನ ಪ್ರಕಾರ B.Sc ನರ್ಸಿಂಗ್ ಹಾಗೂ GNM ನರ್ಸಿಂಗ್ ಕೋಸ್೯ ಮಾಡಿರುವವರೆ ,ಡಾಕ್ಟರ್ ಗಳ ರೆಫರೆನ್ಸ್ ಇಲ್ಲದೆ ರೋಗಿಗಳಿಗೆ ಇಂಜೆಕ್ಷನ್ ಆಗಲಿ ,ಔಷಧಿ ಆಗಲಿ ಕೊಡುವಂತಿಲ್ಲ ಎಂದ ಮೇಲೆ ಬರೀ SSLC ,PU C ಓದಿರುವವರು ಯಾವ ಆಧಾರದ ಮೇಲೆ ಕ್ಲಿನಿಕ್ ಗಳನ್ನು ತೆರೆದು ಅಮಾಯಕ ರೋಗಿಗಳ ಪ್ರಾಣದ ಜೊತೆಗೆ ಚೆಲ್ಲಾಟವಾಡುತ್ತಿದ್ದಾರೆ.

 

 

ಇಷ್ಟೆಲ್ಲಾ ಅಕ್ರಮಗಳು ನಡೆಯುತ್ತಿದ್ದರು , ಆರೋಗ್ಯ ಇಲಾಖೆಯ DHO , THO ರವರು ಹಾಗೂ ಪೋಲಿಸ್ ಇಲಾಖೆಯ SP ,Dysp , CPI ,PSI ಯವರುಗಳು ಏನು ಮಾಡುತ್ತಿದ್ದಾರೆ ಎಂಬ ಪ್ರಶ್ಮೆ ಸಾರ್ವಜನಿಕರಲ್ಲಿ ಮೂಡತೋಡಗಿದೆ.

 

 

ಅದು ಅಲ್ಲದೆ ಗೃಹ ಸಚಿವರ ಸ್ವಂತ ಕ್ಷೇತ್ರ ಕೊರಟಗೆರೆ ತಾಲ್ಲೂಕಿನಲ್ಲಿ ಹಾಗು ಗೃಹ ಸಚಿವರ ಉಸ್ತುವಾರಿ ಜಿಲ್ಲೆ ತುಮಕೂರು ಜಿಲ್ಲೆಯಲ್ಲಿ ಹಾಗೂ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಯಾವಾಗ ನಕಲಿ ಡಾಕ್ಟರ್ ಗಳ ನಕಲಿ ಕ್ಲಿನಿಕ್ ಗಳ ವಿರುದ್ಧ ಕ್ರಮ ಜರುಗಿಸುತ್ತೀರಾ , ಹಾಗು ಯಾವಾಗ ನಕಲಿ ಕ್ಲಿನಿಕ್ ಗಳನ್ನು ಬಂದ್ ಮಾಡಿಸುತ್ತೀರಾ ಗೃಹ ಸಚಿವರೆ ಎಂದು ಸಾರ್ವಜನಿಕರ ಪ್ರಶ್ನೆಯಾಗಿದೆ.

 

 

ಬರೀ ಗ್ರಾಮೀಣ ಪ್ರದೇಶಗಳಲ್ಲಿ ಅಷ್ಟೇ ಅಲ್ಲದೆ ಪಟ್ಟಣ ,ನಗರಗಳಲ್ಲಿಯೂ ಇವೆ ನಕಲಿ ಕ್ಲಿನಿಕ್ ಗಳು ,ನಕಲಿ ಡಾಕ್ಟರ್ ಗಳು ಹೆಚ್ಚಾಗಿ ಕಂಡುಬರುತ್ತವೆ ಇನ್ನಾದರೂ ಯಾರಾದರೂ ಸಂಘ ಸಂಸ್ಥೆಗಳವರು ಅಥವಾ ಸಾರ್ವಜನಿಕರು ನಕಲಿ ಡಾಕ್ಟರ್ ಗಳ ವಿರುದ್ಧ ನಕಲಿ ಕ್ಲಿನಿಕ್ ಗಳ ವಿರುದ್ಧ ಸಂಬಂಧಿಸಿದ ಪೋಲಿಸ್ ಠಾಣೆಗಳಿಗೆ ದೂರು ನೀಡಿ , ಅಮಾಯಕ ರೋಗಿಗಳ ಪ್ರಾಣ ಉಳಿಸಬೇಕಿದೆ. ಅಥವಾ ಸಂಭಂದಿಸಿದ ಪೋಲಿಸ್ ಠಾಣೆಗಳ ಹಿರಿಯ ಅಧಿಕಾರಿಗಳು ಸುಮೊಟೋ ಪ್ರಕರಣ ದಾಖಲಿಸಿ ,ಇಂತಹ ನಕಲಿ ಕ್ಲಿನಿಕ್ ಗಳನ್ನು ಬಂದ್ ಮಾಡಿಸಿ , ನಕಲಿ ಡಾಕ್ಟರ್ ಗಳ ವಿರುದ್ಧ FIR ದಾಖಲಿಸಿ ,ಅವರುಗಳ ವಿರುದ್ಧ ಕಾನೂನು ಕ್ರಮ ಜರುಗಿಸುವ ಕೆಲಸ ಅತೀ ತುರ್ತಾಗಿ ಆಗಬೇಕೆಂದು ಸಾರ್ವಜನಿಕರ ಒತ್ತಾಯವಾಗಿದೆ.

Leave a Reply

Your email address will not be published. Required fields are marked *