ಗುಬ್ಬಿ : ಮಾತೃಶ್ರೀ ಹೇಮಾವತಿ ಅಮ್ಮನವರ ಕನಸಿನ ಕೂಸು ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮ 1991-1992ರಲ್ಲಿ ಪ್ರಾರಂಭವಾಗಿದ್ದು ಈ ಕಾರ್ಯಕ್ರಮದ ಮೂಲಕ ಮಹಿಳೆಯರಿಗೆ ಸೂಕ್ತ ಮಾಹಿತಿ ನೀಡಲಾಗುತ್ತಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ
ನಿರ್ದೇಶಕರಾದ ಸತೀಶ್ ಸುವರ್ಣ ತಿಳಿಸಿದರು.
ಪಟ್ಟಣದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಚೇರಿಯಲ್ಲಿ ತಾಲೂಕಿನ ಜ್ಞಾನ ವಿಕಾಸ ಸಂಯೋಜಕರಿಗೆ ಕ್ರೀಯಾ ಯೋಜನೆ ಸಭೆ ಹಮ್ಮಿಕೊಂಡಿದ್ದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು ಜ್ಞಾನ ವಿಕಾಸ ಸಂಯೋಜಕೀಯರಿಗೆ ತಮ್ಮ ತಮ್ಮ ಕೇಂದ್ರದಲ್ಲಿ ಮಾಹಿತಿ ಕೊಡಲು 1. ಜ್ಞಾನ ಶಕ್ತಿ,2. ಕ್ರೀಯಾ ಶಕ್ತಿ.3. ಇಚ್ಛಾ ಶಕ್ತಿ ಇರಬೇಕು ಎಂಬುದರ ಬಗ್ಗೆ ವಿವರಣೆ ಮೂಲಕ ಸಣ್ಣ ಸಣ್ಣ ಕಥೆಗಳ ಮೂಲಕ ಮಾಹಿತಿ ನೀಡಿ ಕೇಂದ್ರಗಳನ್ನು ಉತ್ತಮವಾಗಿ ನಡೆಸಿಕೊಂಡು ಹೋಗುವಂತೆ ಮಾಹಿತಿಯನ್ನು ನೀಡಿದರು.
ಕ್ಷೇತ್ರ ಯೋಜನಾಧಿಕಾರಿ ರಾಜೇಶ್ ಮಾತನಾಡಿ ಕೇಂದ್ರಗಳನ್ನು ನಿಗದಿತ ದಿನದಂದು ನಿಗದಿತ ಸಮಯಕ್ಕೆ ನಡೆಸಬೇಕು. ಎಲ್ಲಾ ಸಂಯೋಜಕೀಯರು ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸಲು ತಿಳಿಸಿದರು.
ಬೆಂಗಳೂರು ಪ್ರಾದೇಶಿಕ ವಿಭಾಗದ ಜ್ಞಾನವಿಕಾಸ ಯೋಜನಾಧಿಕಾರಿ ಸಂಧ್ಯಾ ವಿ ಶೆಟ್ಟಿ ಮಾತನಾಡಿ ಜ್ಞಾನವಿಕಾಸ ಕಾರ್ಯಕ್ರಮಗಳ ಬಗ್ಗೆ ಸವಿಸ್ತಾರವಾಗಿ ಮಾಹಿತಿಯನ್ನು ನೀಡಿದರು. ಪೌಷ್ಟಿಕ ಆಹಾರ, ಸಿರಿಧಾನ್ಯ ಬಳಕೆ ಕಾರ್ಯಕ್ರಮಗಳ ಬಗ್ಗೆ, ಕಾನೂನು ಮತ್ತು ಆರೋಗ್ಯ ಮತ್ತು ನೈರ್ಮಲ್ಯ, ಕ್ರಿಯಾಯೋಜನೆ ಬಗ್ಗೆ ಮಾಹಿತಿಯನ್ನು ನೀಡಿದರು.
ಈ ಸಂದರ್ಭದಲ್ಲಿ ತಾಲ್ಲೂಕು ಮಹಿಳಾ ಜ್ಞಾನವಿಕಾಸ ಸಮನ್ವಯ ಅಧಿಕಾರಿ ಜಯಲಕ್ಷ್ಮಿ, ಸಿಬ್ಬಂದಿವರ್ಗದವರು ಸೇರಿದಂತೆ ಇನ್ನಿತರರು ಹಾಜರಿದ್ದರು.