ಗುಬ್ಬಿ : ಪ್ರತಿನಿತ್ಯ ಯೋಗಾಭ್ಯಾಸಕ್ಕಾಗಿ ಕನಿಷ್ಠ ಸಮಯವನ್ನು ಮೀಸಲಿಟ್ಟಲ್ಲಿ ಉತ್ತಮ ಆರೋಗ್ಯ ಹಾಗೂ ಮಾನಶಾಂತಿಯನ್ನು ಪಡೆಯಲು ಸಾಧ್ಯವಾಗುವುದು.ಪತಂಜಲಿ ಯೋಗ ಸಂಸ್ಥೆಯು ಸಾರ್ವಜನಿಕರ ಹಿತಕ್ಕಾಗಿ ಯೋಗ ತರಗತಿಗಳನ್ನು ನಡೆಸಲು ಸಿದ್ಧವಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ ) ಬೆಂಗಳೂರು ಪ್ರಾದೇಶಿಕ
ನಿರ್ದೇಶಕ ಶೀನಪ್ಪ ಎಂ. ತಿಳಿಸಿದರು.
ಅಂತರರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಪಟ್ಟಣದಲ್ಲಿ ಪತಂಜಲಿ ಯೋಗ ಶಿಕ್ಷಣ ಸಂಸ್ಥೆ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಹಾಗೂ ವಿವಿಧ ಸಂಘಗಳ ಸಹಯೋಗದಲ್ಲಿ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ನಂತರ ಮಾತನಾಡಿದ ಅವರು ಸುವರ್ಣ ಮಾತನಾಡಿ ಆಧುನಿಕ ಜೀವನ ಶೈಲಿ ಬದಲಾದಂತೆ ಅನೇಕ ಹೊಸ ಕಾಯಿಲೆಗಳು ಸೃಷ್ಟಿಯಾಗುತ್ತಿವೆ.ಅವುಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ರೋಗ ನಿರೋಧ ಶಕ್ತಿಯನ್ನು ಹೆಚ್ಚಿಸಿಕೊಳ್ಳ ಬೇಕಿದೆ.ಯೋಗಾಭ್ಯಾಸದಿಂದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಂಡು ಆರೋಗ್ಯವನ್ನು ಕಾಪಾಡಿಕೊಳ್ಳಲು ಸಾಧ್ಯವಾಗುವುದು ಎಂದು ತಿಳಿದರು.
ಯೋಗ ಶಿಕ್ಷಕ ಮಹಾವೀರ್ ಜೈನ್ ಮಾತನಾಡಿ
ಯೋಗದಿಂದ ರೋಗಮುಕ್ತ ಸಮಾಜ ನಿರ್ಮಾಣ ಮಾಡಿ ದೇಶದ ಅಭಿವೃದ್ಧಿಗೆ ಪೂರಕವಾಗಿರಲು ಸಾಧ್ಯವಾಗುವುದು.ದೈಹಿಕ ಮತ್ತು ಮಾನಸಿಕ ಆರೋಗ್ಯ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಭಾರತೀಯ ಋಷಿ ಮನಿಗಳು ಯೋಗದಿಂದ ಉತ್ತಮ ಪರಿಹಾರವನ್ನು ನೀಡಿದ್ದಾರೆ.ಅದನ್ನು ಉಳಿಸಿ,ಬೆಳೆಸಿ,ರೂಡಿಸಿಕೊಂಡಲ್ಲಿ ವೈಯಕ್ತಿಕವಾಗಿ ಹಾಗೂ ದೇಶಕ್ಕೂ ಅನುಕೂಲವಾಗುವುದು.
ದಶಕದ ಹಿಂದೆ ಚಾಲನೆ ದೊರಕಿದ ವಿಶ್ವಯೋಗ ದಿನಾಚರಣೆಗೆ ಪ್ರಪಂಚದ ಸುಮಾರು 175 ದೇಶಗಳು ಬೆಂಬಲಿಸಿರುವುದು ಯೋಗದ ಮಹತ್ವವನ್ನು ಸಾರುತ್ತಿದೆ. ನಿರಂತರ ಅಭ್ಯಾಸ ರೂಢಿಸಿಕೊಂಡು ಉತ್ತಮ ಆರೋಗ್ಯ ಕಾಪಾಡಿಕೊಳ್ಳೋಣ ಎಂದು ತಿಳಿಸಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದ ಜಿಲ್ಲಾ ನಿರ್ದೇಶಕ ಸತೀಶ್ ಸುವರ್ಣ ಮಾತನಾಡಿ ಆರೋಗ್ಯವಂತ ಸಮಾಜ ನಿರ್ಮಾಣ ಮಾಡುವಲ್ಲಿ ಯೋಗ ಪ್ರಮುಖ ಪಾತ್ರ ವಹಿಸುವುದರಿಂದ ಎಲ್ಲರಲ್ಲಿಯೂ ಯೋಗದ ಮಹತ್ವವನ್ನು ತಿಳಿಸಿ ಕೊಡಬೇಕಾದ ಅಗತ್ಯವಿದೆ ಎಂದು ಹೇಳಿದರು.
ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಹಾಗೂ ಪಟ್ಟಣ ಪಂಚಾಯಿತಿ ಸದಸ್ಯ ಜಿ.ಆರ್.ಶಿವಕುಮಾರ್ ಮಾತನಾಡಿ ಎಲ್ಲರೂ ಸಾಮೂಹಿಕವಾಗಿ ಯೋಗ ಅಭ್ಯಾಸಕ್ಕೆ ಸೇರೋಣ, ಆರೋಗ್ಯವಂತ ಉತ್ತಮ ಸಮಾಜ ನಿರ್ಮಿಸಿ ಆದರ್ಶ ಬದುಕನ್ನು ಹೊಂದೋಣ ಹಾಗೂ ಹಾಗೂ ಈ ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಯವರು ತುಂಬಾ ಸಹಕಾರವನ್ನು ನೀಡಿದ್ದಾರೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಎಲ್ ವಿಶ್ವನಾಥ್ ಸಾವಂತ, ಬಸವರಾಜ್, ವಿವೇಕಾನಂದ ಆಚಾರ್,ವಿವೇಕಾನಂದ ಸ್ವಾಮಿ, ರಾಜಶೇಖರಯ್ಯ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ತಾಲ್ಲೂಕು ಯೋಜನಾಧಿಕಾರಿ ರಾಜೇಶ್, ಪಂಚಾಕ್ಷರಯ್ಯ, ನಟರಾಜ್, ದಕ್ಷಿಣ ಮೂರ್ತಿ, ಪಿ ಜಯಣ್ಣ, ಪುಣ್ಯಶ್ರೀ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಎಲ್ಲಸಿಬ್ಬಂದಿಗಳು, ಶಿಕ್ಷಕರು, ಶಾಲಾ ವಿದ್ಯಾರ್ಥಿಗಳು ಸೇರಿದಂತೆ ಇನ್ನಿತರರು ಹಾಜರಿದ್ದರು.