ತುಮಕೂರು: ತುಮಕೂರು ದಸರಾ ಸಮಿತಿಯ ದಸರಾ ಉತ್ಸವದ ಶನಿವಾರದ ಕಾರ್ಯಕ್ರಮದಲ್ಲಿ ನಗರದ ವಿವಿಧ ಸಮಾಜಗಳ ಮುಖಂಡರಿಗೆ ‘ಸಮಾಜ ಸಾಮರಸ್ಯ ಸುಧಾರಕರು’ ಎಂದು ಪ್ರಶಂಸಿಸಿ ಗೌರವಿಸಲಾಯಿತು.
ನಗರದ ಕೆ.ಆರ್.ಬಡಾವಣೆಯ ಶ್ರೀರಾಮ ಮಂದಿರ ಆವರಣದಲ್ಲಿ ನಡೆದಿರುವ ದಸರಾ ಉತ್ಸವದ ಕಾರ್ಯಕ್ರಮದಲ್ಲಿ ಮಾಜಿ ಸಂಸದ ಜಿ.ಎಸ್.ಬಸವರಾಜು ಹಾಗೂ ಸಮಿತಿಯ ಮುಖಂಡರು ನಾನಾ ಸಮಾಜಗಳ ಮುಖಂಡರನ್ನು ಸನ್ಮಾನಿಸಿ ಅಭಿನಂದಿಸಿದರು.
ವಿವಿಧ ಸಮಾಜಗಳ ಮುಖಂಡರುಗಳಾದ ಟಿ.ಕೆ.ನರಸಿಂಹಮೂರ್ತಿ, ಜಿ.ಎಂ.ಸಣ್ಣಮುದ್ದಯ್ಯ, ತುಂಗೋಟಿ ನರಸಿಂಹಯ್ಯ, ಪಿ.ಎನ್.ರಾಮಯ್ಯ, ಎಸ್.ಪುಟ್ಟೀರಪ್ಪ, ಮಹದೇವಯ್ಯ, ಪ್ರೊ.ಕೆ.ಚಂದ್ರಣ್ಣ, ಸೀತಾರಾಮ್, ಹೆಚ್.ಪಿ.ವಿಶ್ವಜ್ಞಾನಚಾರ್ಯ, ತಾಂಡವಮೂರ್ತಿ, ಸಕ್ಕರೆ ಕುಮಾರಸ್ವಾಮಿ, ಟಿ.ಹೆಚ್.ಶಿವಾನಂದ್, ಶ್ರೀನಿವಾಸಪ್ರಸಾದ್, ಶಾಂತಕುಮಾರ್, ವಿಷ್ಣವರ್ಧನ್, ಮಂಜುನಾಥ್, ಮೆಳೆಕೋಟೆ ಶ್ರೀನಿವಾಸ್, ಪುಟ್ಟರಾಜು, ವಿಶ್ವನಾಥ್, ಡಿ.ಆರ್.ಹನುಮಂತರಾಜು, ರಂಗಾನಾಯ್ಕ್, ಮಂಜುನಾಥ್, ಶುಭಂ ಶ್ರೀನಿವಾಸ್, ಬಾಲಕೃಷ್ಣ, ವಿಶ್ವೇಶ್ವರಯ್ಯ, ಭೀಮಯ್ಯ, ಸಂಗೀತ್ ಶ್ರೀನಿವಾಸ್, ಬಿಳಿಗೆರೆ ಶಿವಕುಮಾರ್, ನಾಗೇಶ್ವರರಾವ್ ಗಾಯಕ್ವಾಡ್, ಲಿಂಗರಾಜು, ಮೋಹನ್ ಲಾಲ್, ಜಯರಾಮ್ ಮೊದಲಾದವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಈ ವೇಳೆ ಮಾತನಾಡಿದ ಹಿರಿಯ ಮುಖಂಡ ಎಸ್.ಪುಟೀರಪ್ಪ, 1993ರಲ್ಲಿ ಆಗಿನ ಹಿರಿಯ ನ್ಯಾಯವಾದಿ ಟಿ.ಎಸ್.ವೆಂಕಟನಂಜಪ್ಪ ಮತ್ತಿತರ ಹಿರಿಯರೊಂದಿಗೆ ಶ್ರೀರಾಮ ಮಂದಿರದಲ್ಲಿ ಸಭೆ ಸೇರಿ ಪ್ರತಿವರ್ಷ ದಸರಾ ಉತ್ಸವವನ್ನು ಹಿಂದೂ ಸಮಾಜೋತ್ಸವಾಗಿ ಆಚರಿಸಬೇಕು ಎಂದು ತೀರ್ಮಾನಿಸಿ ಸಮಿತಿ ರಚಿಸಲಾಗಿತ್ತು.
ಯಾವುದಾದರೂ ಸಮಾಜದ ಸ್ವಾಮೀಜಿಯವರನ್ನು ದಸರಾ ಉತ್ಸವ ಉದ್ಘಾಟನೆಗೆ ಆಹ್ವಾನಿಸಬೇಕು. ನಗರದ ದೇವಸ್ಥಾನಗಳ ಉತ್ಸವ ಮೂರ್ತಿಗಳ ಅದ್ಧೂರಿ ಮೆರವಣಿಗೆ ಮಾಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಅದರಂತೆ ನಡೆಸಿಕೊಂಡು ಬರಲಾಗಿತ್ತು. ಆಗಿನಿಂದ ಈವರೆಗೂ ಅದೇ ಸಂಪ್ರದಾಯದಲ್ಲಿ ತುಮಕೂರು ದಸರಾ ಸಮಿತಿ ದಸರಾ ಉತ್ಸವ ಆಚರಣೆ ಮುಂದುವರೆಸಿದೆ ಎಂದು ಹೇಳಿದರು.
ಫಿಟ್ವೆಲ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಅನಂತ್ ಆವರು ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ತುಮಕೂರು ದಸರಾ ಸಮಿತಿ ಅಧ್ಯಕ್ಷ ಬಿ.ಎಸ್.ಮಂಜುನಾಥ್, ಆಚರಣಾ ಸಮಿತಿ ಕಾರ್ಯಾಧ್ಯಕ್ಷ ಡಾ.ಜೆ.ಲಕ್ಷ್ಮೀಕಾಂತ್, ಮೆರವಣಿಗೆ ಸಮಿತಿ ಅಧ್ಯಕ್ಷ ಕೋರಿ ಮಂಜುನಾಥ್, ಉಪಾಧ್ಯಕ್ಷರಾದ ವೈ.ಹೆಚ್.ಹುಚ್ಚಯ್ಯ, ಎಂ.ಕೆ.ನಾಗರಾಜರಾವ್, ಖಜಾಂಚಿ ಜಿ.ಎಸ್.ಬಸವರಾಜು, ಸಂಯೋಜಕ ಕೆ.ಎನ್.ಗೋವಿಂದರಾವ್, ಈ ಕಾರ್ಯಕ್ರಮದ ಉಪ ಸಮಿತಿ ಅಧ್ಯಕ್ಷ ಹೆಚ್.ಎಂ.ರವೀಶಯ್ಯ ಸೇರಿದಂತೆ ಸಮಿತಿಯ ವಿವಿಧ ಪದಾಧಿಕಾರಿಗಳು ಭಾಗವಹಿಸಿದ್ದರು.
ಇದೇ ದಿನ ಯೋಗ ದಸರಾ ಅಂಗವಾಗಿ ಯೋಗ ನೃತ್ಯ ವೈಭವ ಕಾರ್ಯಕ್ರಮ ನಡೆಯಿತು.
ದಸರಾ ಉತ್ಸವದ ಅಂಗವಾಗಿ ಏರ್ಪಡಿಸಿದ್ದ ವೇಷಭೂಷಣ ಸ್ಪರ್ಧೆ, ಶಾಲಾ ಕಾಲೇಜು ಹಾಗೂ ಸಾರ್ವಜನಿಕರಿಗೆ ಪ್ರತ್ಯೇಕ ವಿಭಾಗಗಳಲ್ಲಿ ನಡೆದ ಪ್ರಬಂಧ ಸ್ಪರ್ಧೆಯ ವಿಜೇತರಾದ ವಿವಿಧ ಶಾಲೆಗಳ ಹಾಗೂ ಕಾಲೇಜು ವಿದ್ಯಾರ್ಥಿಯರಿಗೆ ಬಹುಮಾನ ವಿತರಿಸಲಾಯಿತು.