ಸೈಂಟ್ ಥಾಮಸ್ ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ

ಗುಬ್ಬಿ: ನವಂಬರ್ ಮೊದಲ ದಿನ ಮಾತ್ರ ಕನ್ನಡ ರಾಜ್ಯೋತ್ಸವ ಆಚರಣೆ ಮಾಡದೆ ವರ್ಷಪೂರ್ತಿ ಆಚರಿಸುವ ಮೂಲಕ ಕನ್ನಡ ಭಾಷೆಯ ಹಿರಿಮೆಯನ್ನು ಹೆಚ್ಚಿಸುವಂತೆ ತಹಶೀಲ್ದಾರ್ ಆರತಿ ಬಿ. ಕರೆ ನೀಡಿದರು.

ತಾಲೂಕಿನ ಸಿ ಎಸ್ ಪುರ ಗ್ರಾಮದ ಸೈಂಟ್ ಥಾಮಸ್ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಕನ್ನಡ ಹಬ್ಬ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ರಾಷ್ಟ್ರದಲ್ಲಿ ಅತಿ ಹೆಚ್ಚು ಜ್ಞಾನ ಪೀಠ ಪ್ರಶಸ್ತಿ ದೊರಕಿರುವುದು ಕನ್ನಡ ಭಾಷೆಗೆ ಎಷ್ಟು ಗೌರವವಿದೆ ಎಂಬುದನ್ನು ತಿಳಿಯಬಹುದು. ರಾಷ್ಟ್ರದಲ್ಲಿ ಕನ್ನಡ ಭಾಷೆಗೆ ಇರುವ ಪ್ರಾಶಸ್ತ್ಯ ಎಷ್ಟು ಎನ್ನುವುದು ವರ ರಾಜ್ಯದವರಿಗೂ ತಿಳಿದಿದ್ದು, ಮೊದಲು ನಾವು ಮಾತೃ ಭಾಷೆಗೆ ಪ್ರಾತಿನಿತ್ಯತೆ ನೀಡುವ ಅವಶ್ಯಕತೆ ಇದೆ. ಶಾಲಾ ಹಂತದಲ್ಲಿ ಮಕ್ಕಳನ್ನು ಕನ್ನಡ ಭಾಷೆಯ ಬಗ್ಗೆ ಪರಿಚಯಿಸುವ ಕೆಲಸ ಅಗಬೇಕಿದ್ದು, ಅದಕ್ಕೆ ಇಂದು ಶಾಲೆಯಲ್ಲಿ ಕನ್ನಡ ಹಬ್ಬದ ಮುಖೇನ ಕನ್ನಡ ಭಾಷೆಯನ್ನು ಪದೇ ಪದೇ ನೆನಪಿಸುವ ಕಾರ್ಯಕ್ಕೆ ಮುಂದಾಗಿರುವುದು ಶ್ಲಾಘನೀಯ ಎಂದು ತಿಳಿಸಿದರು.

 

ಕಸಾಪ ಅಧ್ಯಕ್ಷ ಯತೀಶ್ ಮಾತನಾಡಿ ಕನ್ನಡ ರಾಜ್ಯೋತ್ಸವ ಆಚರಣೆಯನ್ನು ಕನ್ನಡ ಹಬ್ಬ ಎಂಬ ಶೀರ್ಷಿಕೆಯಡಿ ಕಾರ್ಯಕ್ರಮ ಆಯೋಜನೆ ಮಾಡಿರುವುದು ಸಂತಸದ ವಿಷಯ. ಖಾಸಗಿ ಶಾಲೆಯಲ್ಲಿ ಇಂಗ್ಲಿಷ್ ಭಾಷೆಗೆ ಹೆಚ್ಚು ಒತ್ತು ಕೊಟ್ಟು ಕನ್ನಡ ಭಾಷೆಯನ್ನು ವಿಷಯಕ್ಕೆ ಮಾತ್ರ ಸೀಮಿತ ಮಾಡುತ್ತಿದ್ದು, ಸೈಂಟ್ ಥಾಮಸ್ ಶಾಲೆಯು ಕನ್ನಡ ಹಬ್ಬವನ್ನು ಆಚರಿಸುವ ಮುಖೇನ ಕನ್ನಡ ಭಾಷೆಯ ಮೇಲೆ ಎಷ್ಟು ಅಭಿಮಾನ ಇದೆ ಎಂಬುದನ್ನು ಸಾಬೀತುಪಡಿಸಿದೆ. ಸಿ ಎಸ್ ಪುರ ಗ್ರಾಮದವರಾದ ಚಿ.ಉದಯ್ ಶಂಕರ್ ಅವರು ತಮ್ಮದೇ ಆದ ಕವನಗಳನ್ನು ರಚನೆ ಮಾಡುವ ಮುಖೇನ ಹಿರಿಮೆಯನ್ನು ತಂದಿದ್ದು, ಕನ್ನಡ ಭಾಷೆಗೆ ರಾಷ್ಟ್ರ ಮಟ್ಟದಲ್ಲಿ ಉತ್ತಮ ಪ್ರಶಸ್ತಿಗೆ ಬಾಜನರಾಗಿದ್ದರು. ಹಾಗಾಗಿ ಪ್ರಾಥಮಿಕ ಹಂತದಲ್ಲಿಯೇ ವಿದ್ಯಾರ್ಥಿಗಳಿಗೆ ಕನ್ನಡ ಭಾಷೆಯ ಮೇಲೆ ಅಭಿಮಾನ ಮೂಡಿಸುವ ಕಾರ್ಯವನ್ನು ಯಶಸ್ವಿಯಾಗಿ ಮಾಡಲಿ ಎಂದು ಶುಭ ಹಾರೈಸಿದರು.

 

ಇದೇ ವೇಳೆ ಶಾಲಾ ಮಕ್ಕಳಿಂದ ಸರ್ಕಲ್ ನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜನೆ ಮಾಡಿ ಸಾರ್ವಜನಿಕರ ಕಣ್ಮನ ಸೆಳೆದಿದ್ದು ವಿಶೇಷವಾಗಿತ್ತು

ಈ ಕಾರ್ಯಕ್ರಮದಲ್ಲಿ ಕಂದಾಯ ನಿರೀಕ್ಷಕಿ ಪ್ರಮೀಳಾ, ಸೈಂಟ್ ಥಾಮಸ್ ಸಂಘದ ಅಧ್ಯಕ್ಷರಾದ ಲತಾ ನಾಗೇಶ್, ಕಾರ್ಯದರ್ಶಿ ನಾಗೇಶ್, ನಿರ್ದೇಶಕ ಹರೀಶ್, ಮುಖ್ಯ ಶಿಕ್ಷಕಿ ನಂದಿನಿ ಹರೀಶ್, ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!