ವಿಶ್ವಕರ್ಮ ಸಮಾಜದಿಂದ ಕೊಡಗೀಹಳ್ಳಿ ಗ್ರಾಪಂ ಅಧ್ಯಕ್ಷೆ ಶೋಭಾ ಸೀನಾಚಾರ್ ಗೆ ಸನ್ಮಾನ
ತುರುವೇಕೆರೆ: ತಾಲೂಕು ವಿಶ್ವಕರ್ಮ ಸಮಾಜದ ವತಿಯಿಂದ ಕೊಡಗೀಹಳ್ಳಿ ಗ್ರಾಮ ಪಂಚಾಯ್ತಿಗೆ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಶೋಭಾಸೀನಾಚಾರ್ ಅವರನ್ನು ಸನ್ಮಾನಿಸಲಾಯಿತು. ಪಟ್ಟಣದ ಬಾವಿಕೇರಿಯ ಶ್ರೀ ಕಾಳಿಕಾಂಬ ವಿಶ್ವಕರ್ಮ ಸಮುದಾಯ ಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ ಶೋಭಾ ಸೀನಾಚಾರ್ ಅವರನ್ನು ಶಾಲು ಹೊದಿಸಿ, ಫಲಪುಷ್ಪ ಕಾಣಿಕೆ ನೀಡಿ ಗೌರವಿಸಲಾಯಿತು. ಸಮಾರಂಭ ಕುರಿತು ವಿಶ್ವಕರ್ಮ ಸಮಾಜದ ತಾಲೂಕು ಅಧ್ಯಕ್ಷ ಟಿ.ಎನ್. ಅರುಣ್ ಕುಮಾರ್ ಮಾತನಾಡಿ, ಅಂದು ವಿಶ್ವಕರ್ಮ ಸಮುದಾಯ ಕೇವಲ ದೇವರ ವಿಗ್ರಹ, ಮರಗೆಲಸದಂತಹ…