ಪ್ರಮುಖ ಸುದ್ದಿಗಳು
ಉದ್ಘಾಟನೆಗೆ ಸಿದ್ಧಗೊಂಡ ಜಿಲ್ಲಾ ಬಂಜಾರ ಭವನ
ತುಮಕೂರು :- ಜಿಲ್ಲೆಯ ಲಂಬಾಣಿ (ಬಂಜಾರ) ಸಮುದಾಯ ಭವನದ ಕನಸು ಅನೇಕ ವರ್ಷಗಳ ಹೋರಾಟದ ಫಲವಾಗಿ, ತುಮಕೂರು ನಗರದ ಸರಸ್ವತಿಪುರಂನಲ್ಲಿ ಬೃಹತ್ ಮತ್ತು ಭವ್ಯವಾದ ಜಿಲ್ಲಾ ಬಂಜಾರ ಭವನ ನಿರ್ಮಾಣಗೊಳ್ಳುವುದರೊಂದಿಗೆ ಸಕಾರಗೊಂಡಿದೆ. ಸುಸಜ್ಜಿತ ಸಮುದಾಯ ಭವನ ಉದ್ಘಾಟನೆಗೆ ಸಿದ್ಧಗೊಂಡಿದೆ. ಜಿಲ್ಲೆಯಲ್ಲಿ ತನ್ನದೆಯಾದ ಆದ ವೈಶಿಷ್ಟತೆ ಹೊಂದಿರುವ ಲಂಬಾಣಿ ಸಮುದಾಯದ ಬುಡಕಟ್ಟು ಸಂಸ್ಕøತಿ, ಕಲೆ, ಪರಂಪರೆ ಮತ್ತು ಐತಿಹಾಸಿಕ ಹೆಗ್ಗಳಿಕೆಯನ್ನು ಉಳಿಸಿ ಬೆಳೆಸಲು ಭವನವು ಭದ್ರ ನೆಲೆಯಾಗಲಿದೆ. ಭಾರತದ ಶ್ರೀಮಂತ ಸಂಸ್ಕೃತಿಯಲ್ಲಿ ಬಂಜಾರ ಸಮುದಾಯವು ವಿಶಿಷ್ಟ ಸ್ಥಾನಪಡೆದುಕೊಂಡಿದೆ. ಸಮುದಾಯದ…
ಸವಿತಾ ಸಮಾಜದ ಅವಿವಾಹಿತರ ವಧು-ವರರ ಅನ್ವೇಷಣಾ ಕೇಂದ್ರ ಉದ್ಘಾಟನೆ.
ತುಮಕೂರು : ತುಮಕೂರು ನಗರದ ಗಾರ್ಡನ್ ರಸ್ತೆಯಲ್ಲಿರುವ ಸವಿತಾ ಸಮಾಜ ಜಿಲ್ಲಾ ಸಂಪರ್ಕ ಕೇಂದ್ರದ ವತಿಯಿಂದ ಇಂದು ಸವಿತಾ ಸಮಾಜದ ಅವಿವಾಹಿತರ ಅನುಕೂಲಕಕ್ಕಾಗಿ ವಧು-ವರರ ಅನ್ವೇಷಣಾ ಕೇಂದ್ರವನ್ನು ಇಂದು ಸವಿತಾ ಸಮಾಜ ಯುವಪಡೆಯ ಜಿಲ್ಲಾಧ್ಯಕ್ಷರಾದ ಕಟ್ವೆಲ್ ರಂಗನಾಥ್ ಅವರ ನೇತೃತ್ವದಲ್ಲಿ ಉದ್ಘಾಟನೆಯನ್ನು ಮಾಡಲಾಯಿತು. ಕಟ್ವೆಲ್ ರಂಗನಾಥ್ರವರು ಮಾತನಾಡುತ್ತಾ ಪ್ರಸ್ತುತದ ದಿನಗಳಲ್ಲಿ ನಮ್ಮ ಸಮಾಜದಲ್ಲಿ ವಿವಾಹದ ವಯಸ್ಸಿಗೆ ಬಂದಿರುವ ಹೆಣ್ಣು ಮತ್ತು ಗಂಡು ಮಕ್ಕಳಿಗೆ ಜಾತಕ ಹೊಂದಾಣಿಕೆ, ಪರಸ್ಪರ ಅನ್ವೇಷಣೆ ಮಾಡುವುದು ತುಂಬಾ ಕಷ್ಟಕರವಾಗುತ್ತಿದೆ, ಸರಿಯಾದ ಜೋಡಿ ಸಿಗುವಲ್ಲಿ…
ಹುಳಿಯಾರಿನ ಪತ್ರಕರ್ತ ರಮೇಶ್ ರವರಿಗೆ ಆರ್ಥಿಕ ನೆರವು
ಹುಳಿಯಾರಿನ ಪತ್ರಕರ್ತ ರಮೇಶ್ ರವರಿಗೆ ತಿಪಟೂರಿನ ಕೆಪಿಸಿಸಿ ಸದಸ್ಯ ವಿ.ಯೋಗೇಶ್ ಮತ್ತು ಪತ್ರಕರ್ತ ಬಿ.ಟಿ.ಕುಮಾರ್ ನೆರವು. ಆರೋಗ್ಯದ ಸಮಸ್ಯೆ ಹಿನ್ನೆಲೆಯಲ್ಲಿ ಮತ್ತು ಆಕಸ್ಮಿಕ ದೃಷ್ಟಿ ಹೀನತೆಯಿಂದ ಬಳಲುತ್ತಿರುವ ಹುಳಿಯಾರಿನ ಪತ್ರಕರ್ತ ರಮೇಶ್ ರವರಿಗೆ ತಿಪಟೂರಿನ ಕೆಪಿಸಿಸಿ ಸದಸ್ಯ ವಿ.ಯೋಗೇಶ್ 25.000/-ರೂಗಳು ಮತ್ತು ಪತ್ರಕರ್ತ ಬಿ.ಟಿ.ಕುಮಾರ್ 5,000/-ರೂಗಳು ಆರ್ಥಿಕ ನೆರವು ನೀಡುವುದರ ಮೂಲಕ ಮಾನವೀಯತೆ ಮೆರೆದಿದ್ದಾರೆ. ಹುಳಿಯಾರಿನ ಪತ್ರಕರ್ತ ರಮೇಶ್ ರವರಿಗೆ ಸುಮಾರು 5 ತಿಂಗಳಿಂದ ಇದ್ದಕ್ಕಿದ್ದಂತೆ ದೃಷ್ಟಿ ಹೀನತೆ ಸಮಸ್ಯೆ ಎದುರಾಗಿ ಕಣ್ಣು ಕಾಣದ…
ನಶ ಮುಕ್ತ ಭಾರತ ಅಭಿಯಾನಕ್ಕೆ ಚಾಲನೆ ನೀಡಿದ ಸಬ್ ಇನ್ಸ್ಪೆಕ್ಟರ್ ಸುನಿಲ್ ಕುಮಾರ್
ಗುಬ್ಬಿ : ತಾಲೂಕು ಕೇಂದ್ರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಮಂಗಳವಾರ ಮದ್ಯಾಹ್ನ ನಡೆದ ನಶ ಮುಕ್ತ ಭಾರತ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಸಬ್ ಇನ್ಸ್ಪೆಕ್ಟರ್ ಸುನಿಲ್ ಕುಮಾರ್ ಇತ್ತೀಚಿನ ದಿನಗಳಲ್ಲಿ ಯುವ ಸಮುದಾಯ ಮಾದಕ ವಸ್ತುಗಳ ದಾಸರಾಗಿದ್ದು, ಇದರ ಅತಿಯಾದ ಬಳಕೆಯಿಂದಾಗಿ ದೈಹಿಕ ಮತ್ತು ಮಾನಸಿಕ ಆರೋಗ್ಯ ತೊಂದರೆಗಳನ್ನು ಎದುರಿಸುತ್ತಿದ್ದು, ಜೀವನವನ್ನೇ ದುರಂತದ ಕಡೆಗೆ ಕೊಂಡೊಯ್ಯುತ್ತಿದ್ದಾರೆ ಎಂದು ತಿಳಿಸಿದರು. 2019 ರ ಅಂಕಿ ಅಂಶಗಳ ಮಾಹಿತಿ ಪ್ರಕಾರ ಭಾರತ ದೇಶದಲ್ಲಿ ಸುಮಾರು 7.2…
ಸಂವಿಧಾನ ಪಿತಾಮಹನಿಗೆ ಗೌರವ ನಮನ
ಅಖಿಲ ಭಾರತ ಡಾಕ್ಟರ್ ಅಂಬೇಡ್ಕರ್ ಪ್ರಚಾರ ಸಮಿತಿ ಹಾಗೂ ಅಖಿಲ ಭಾರತ ದಲಿತ ಕ್ರಿಯಾ ಸಮಿತಿಯ ವತಿಯಿಂದ ಬಾಬಾ ಸಾಹೇಬ್ ಅಂಬೇಡ್ಕರ್ ಅವರ 69ನೇ ಪರಿ ನಿಬ್ಬಾಣ ದಿನದ ಗೌರವ ಸಮರ್ಪಣೆ ತುಮಕೂರು: ಭಾರತ ದೇಶದಲ್ಲಿ ಎಲ್ಲರೂ ಸ್ವತಂತ್ರವಾಗಿ ಬದುಕುತ್ತಿದ್ದೇವೆ ಎಂದರೆ ಅದಕ್ಕೆ ಕಾರಣ ಡಾ. ಬಿ.ಆರ್ ಅಂಬೇಡ್ಕರ್. ಎಲ್ಲರೂ ಅವರು ಹಾಕಿ ಕೊಟ್ಟಿರುವ ದಾರಿಯಲ್ಲಿ ಸಾಗೋಣ ಎಂದು ಅಖಿಲ ಭಾರತ ಡಾ ಅಂಬೇಡ್ಕರ್ ಪ್ರಚಾರ ಸಮಿತಿಯ ಜಿಲ್ಲಾಧ್ಯಕ್ಷ ಎನ್, ಕೆ ನಿಧಿಕುಮಾರ್ ಅವರು…
ಅಬಕಾರಿ ಅಧಿಕಾರಿಗಳ ವಿರುದ್ಧ ಸುರೇಶ್ಗೌಡ ಗರಂ: ತನಿಖೆಗೆ ಒತ್ತಾಯ
ತುಮಕೂರು: ಅಬಕಾರಿ ಅಧಿಕಾರಿಗಳು ತುಮಕೂರು ತಾಲ್ಲೂಕಿನಲ್ಲಿ ಕಾನೂನು ಬಾಹೀರವಾಗಿ 29 ಮದ್ಯದ ಅಂಗಡಿಗಳಿಗೆ ಪರವಾನಗಿ ನೀಡಿದ್ದು, ಈ ಬಗ್ಗೆ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲು ಶಾಸಕ ಬಿ.ಸುರೇಶ್ಗೌಡರು ಒತ್ತಾಯಿಸಿದರು. ನಗರದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ನಡೆದ ತುಮಕೂರು ತಾಲ್ಲೂಕು ಮಟ್ಟದ ತ್ರೈ ಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಶಾಸಕರು, ಮದ್ಯದ ಅಂಗಡಿಗಳಿಗೆ ಪರವಾನಗಿ ನೀಡುವಲ್ಲಿ ಅಕ್ರಮ ನಡೆದಿದೆ. ಯಾವ ನಿಯಮದಡಿಯಲ್ಲಿ ಮದ್ಯದಂಗಡಿಗಳಿಗೆ ಲೈಸೆನ್ಸ್ ನೀಡಿದಿರಿ ಎಂದು ಅಬಕಾರಿ ಅಧಿಕಾರಿಗಳ ವಿರುದ್ಧ…
ವಕೀಲರ ದಿನಾಚರಣೆ_ಆರೋಗ್ಯ ತಪಾಸಣಾ ಶಿಬಿರ ಜಿಲ್ಲಾ ವಕೀಲರ ಸಂಘದಿಂದ ವಕೀಲರ ದಿನ ಆಚರಣೆ
ತುಮಕೂರು: ವಕೀಲರ ದಿನಾಚರಣೆ ಅಂಗವಾಗಿ ಜಿಲ್ಲಾ ವಕೀಲರ ಸಂಘದಿಂದ ನ್ಯಾಯಾಲಯ ಆವರಣದ ವಕೀಲರ ಭವನದಲ್ಲಿ ಬುಧವಾರ ವಕೀಲರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ಏರ್ಪಡಿಸಲಾಗಿತ್ತು. ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಜಯಂತ್ಕುಮಾರ್ ಅವರು ಜ್ಯೋತಿ ಬೆಳಗಿ ಶಿಬಿರ ಉದ್ಘಾಟಿಸಿ, ನಾನೂ ವಕೀಲನಾಗಿ ವಕೀಲರ ದಿನಾಚರಣೆ ಸಂಭ್ರಮದಲ್ಲಿ ಭಾಗಿಯಾಗಿದ್ದೇನೆ, ಎಲ್ಲಾ ವಕೀಲರಿಗೂ ಶುಭಾಶಯಗಳು ಎಂದು ಹೇಳಿದರು. ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಹೆಚ್.ಕೆಂಪರಾಜಯ್ಯ ಮಾತನಾಡಿ, ದೈನಂದಿನ ಕೆಲಸದ ಒತ್ತಡ ವಕೀಲರ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ…
ಆಗ್ನೆಯ ಪದವೀಧರರ ಕ್ಷೇತ್ರದ ಚುನಾವಣೆ ಕರಡು ಮತದಾರರ ಪಟ್ಟಿ ಪ್ರಕಟ
ಗುಬ್ಬಿ : ವಿವಿಧ ಪಕ್ಷದ ಮುಖಂಡರ ಸಭೆ ಕರೆದು ಆಗ್ನೇಯ ಪದವೀಧರ ಕ್ಷೇತ್ರದ ಮತದಾರರ ಪಟ್ಟಿಯ ಬಗ್ಗೆ ಮಾಹಿತಿ ನೀಡಿ ತಿದ್ದುಪಡಿ, ಆಕ್ಷೇಪಣೆ ಇದ್ದಲ್ಲಿ ಡಿ.10 ರೊಳಗೆ ಸಲ್ಲಿಸಬಹುದಾಗಿದೆ ಎಂದು ತಹಶೀಲ್ದಾರ್ ಆರತಿ ಬಿ. ತಿಳಿಸಿದರು. ತಾಲೂಕು ಕಚೇರಿಯ ತಹಶೀಲ್ದಾರ್ ಕಚೇರಿಯಲ್ಲಿ ಕರೆದಿದ್ದ ವಿವಿಧ ಪಕ್ಷಗಳ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಕರ್ನಾಟಕ ಆಗ್ನೆಯ ಪದವೀಧರರ ಕ್ಷೇತ್ರದ ಚುನಾವಣೆ ಸಂಬಂಧ ಈಗಾಗಲೇ ಕರಡು ಮತದಾರರ ಪಟ್ಟಿಯನ್ನು ಸಿ.ಇ.ಓ ಕರ್ನಾಟಕ ವೆಬ್…
ವಿದ್ಯಾರ್ಥಿಗಳ ಚಿತ್ತ ಕಲಿಕೆಯತ್ತ ಇರಲಿ: ಶಾಸಕ ಸುರೇಶ್ಗೌಡ
ಹೆಬ್ಬೂರು ಪದವಿ ಕಾಲೇಜು ಶೈಕ್ಷಣಿಕ ಚಟುವಟಿಕೆಗಳ ಉದ್ಘಾಟನೆ ತುಮಕೂರು: ಬದುಕನ್ನು ಉತ್ತಮ ಸ್ಥಿತಿಗೆ ಕೊಂಡೊಯ್ಯವ ಶಕ್ತಿ ಶಿಕ್ಷಣಕ್ಕಿಗಿದೆ. ಉನ್ನತ ಶಿಕ್ಷಣ ಪಡೆದರೆ ಹಣ, ಸ್ಥಾನಮಾನ, ಗೌರವ ಎಲ್ಲವೂ ದೊರೆಯುತ್ತದೆ. ವಿದ್ಯಾರ್ಥಿಗಳು ಅನ್ಯ ವಿಚಾರಗಳಿಗೆ ಗಮನಹರಿಸದೆ ಕಲಿಕೆಗೆ ಚಿತ್ತಹರಿಸಬೇಕು ಎಂದು ಶಾಸಕ ಬಿ.ಸುರೇಶ್ಗೌಡರು ಹೇಳಿದರು. ತುಮಕೂರು ಗ್ರಾಮಾಂತರ ಕ್ಷೇತ್ರದ ಹೆಬ್ಬೂರು ಸರ್ಕಾರಿ ಪದವಿ ಕಾಲೇಜಿನ ಈ ಸಾಲಿನ ಸಾಂಸ್ಕøತಿಕ, ಕ್ರೀಡೆ, ರಾಷ್ಟ್ರೀಯ ಸೇವಾ ಯೋಜನೆ ಮತ್ತಿತರ ಚಟುವಟಿಕೆಗಳ ಉದ್ಘಾಟನೆ ಹಾಗೂ ಪ್ರಥಮ ಪದವಿ ವಿದ್ಯಾರ್ಥಿಗಳ ಸ್ವಾಗತ…
ಆಗ್ನೇಯ ಕ್ಷೇತ್ರ: ಬಿಜೆಪಿ ಮುಖಂಡರ ಸಮಾಲೋಚನೆ ಅತ್ಯಧಿಕ ಮತದಾರರ ನೋಂದಣಿ ಕುರಿತು ಚರ್ಚೆ
ತುಮಕೂರು: ಮುಂದಿನ ವರ್ಷ ನಡೆಯುವ ಆಗ್ನೇಯ ಪದವಿಧರರ ಕ್ಷೇತ್ರದ ವಿಧಾನ ಪರಿಷತ್ತಿನ ಚುನಾವಣೆಗೆ ಅರ್ಹ ಪದವಿಧರರನ್ನು ಮತದಾರರ ಪಟ್ಟಿಗೆ ಸೇರಿಸುವ ಸಂಬಂಧ ಕ್ಷೇತ್ರದ ಬಿಜೆಪಿ ಟಿಕೇಟ್ ಆಕಾಂಕ್ಷಿಯಾಗಿರುವ ರಾಜ್ಯ ಬಿಜೆಪಿ ಕಾನೂನು ಪ್ರಕೋಷ್ಠ ಸಂಚಾಲಕ ವಸಂತಕುಮಾರ್ ಅವರು ಶಾಸಕ ಜಿ.ಬಿ.ಜ್ಯೋತಿಗಣೇಶ್ ಹಾಗೂ ಪಕ್ಷದ ಮುಖಂಡರೊಂದಿಗೆ ಸಮಾಲೋಚನೆ ನಡೆಸಿದರು. ಹನುಮ ಜಯಂತಿ ಅಂಗವಾಗಿ ಮಂಗಳವಾರ ನಗರದ ಕೋಡಿ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ನಂತರ ವಸಂತಕುಮಾರ್, ಶಾಸಕರೊಂದಿಗೆ ಜಿಲ್ಲಾ ಬಿಜೆಪಿ ಅಧ್ಯಕ್ಷ ಎಚ್.ಎಸ್.ರವಿಶಂಕರ್ ಹೆಬ್ಬಾಕ, ಜಿಲ್ಲಾ ಯುವ ಮೋರ್ಚಾ…