
ಪ್ರಮುಖ ಸುದ್ದಿಗಳು
ಕುಣಾಘಟ್ಟ ಗ್ರಾಮದಲ್ಲಿ ಅದ್ದುರಿಯಾಗಿ ನೆಡೆದ ನರಸಿಂಹ ಜಯಂತಿ
ಗುಬ್ಬಿ ಸುದ್ದಿ ತಾಲೂಕಿನ ಕಡಬ ಹೋಬಳಿ ಕುಣಾಘಟ್ಟ ಗ್ರಾಮದಲ್ಲಿ ನರಸಿಂಹ ಜಯಂತಿಯನ್ನು ಶ್ರೀ ರಾಮಾನುಜಾ ಸೇವಾ ಸಮಿತಿ(ರಿ) ವತಿಯಿಂದ ಹಮ್ಮಿಕೊಳ್ಳಲಾಗಿದ್ದು. ಪ್ರತಿ ವರ್ಷದಂತೆ ಈ ಬಾರಿಯು ಶ್ರೀ ರಾಮಾನುಜ ಸೇವಾ ಸಮಿತಿಯು ನರಸಿಂಹ ಜಯಂತಿ ಅಂಗವಾಗಿ ಪುಣ್ಯಾಹ, ಸ್ವಾಮಿಯವರಿಗೆ ಪಂಚಾಮೃತ ಅಭಿಷೇಕವನ್ನು ನೆರವೇರಿಸಿ ಶಾಂತಿ ಹೋಮ, ನರಸಿಂಹ ಹೋಮ, ಗಣ ಹೋಮವನ್ನು ಲೋಕ ಕಲ್ಯಾಣಾರ್ಥಕ್ಕಾಗಿ ಅಪಾರ ಭಕ್ತರ ಸಮುಖದಲ್ಲಿ ನೆರವೇರಿಸಿ ನಂತರ ಪೂರ್ಣಹೂತಿಯೊಂದಿಗೆ ಹೋಮವನ್ನು ಮುಕ್ತಾಯ ಗೋಳಿಸಲಾಯಿತು. ಅರಿಶಿನ ಅಲಂಕಾರದೊಂದಿಗೆ ಸ್ವಾಮಿಯವರು ಕಂಗೊಳಿಸುತ್ತಿದ್ದನ್ನು ಕಂಡ ಬಂದ ಭಕ್ತರು…
ಬಿತ್ತನೆ ಬೀಜ, ರಸಗೊಬ್ಬರ ಕೊರತೆಯಾಗದಂತೆ ಮುನ್ನೆಚ್ಚರಿಕೆ ವಹಿಸಿ: ಜಿಲ್ಲಾಧಿಕಾರಿ ಸೂಚನೆ
ತುಮಕೂರು: ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿರುವುದರಿಂದ ರೈತರು ಏಕಕಾಲದಲ್ಲಿ ಮುಂಗಾರು ಹಂಗಾಮಿನ ಬಿತ್ತನೆಯನ್ನು ಪ್ರಾರಂಭಿಸುವ ಸಾಧ್ಯತೆಯಿರುವ ಹಿನ್ನೆಲೆಯಲ್ಲಿ ಮುಂಗಾರು ಹಂಗಾಮಿಗೆ ಬಿತ್ತನೆ ಬೀಜ, ರಸಗೊಬ್ಬರ ಕೊರತೆಯಾಗದಂತೆ ಮುನ್ನೆಚ್ಚರಿಕೆ ವಹಿಸಬೇಕೆಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಕೃಷಿ ಇಲಾಖೆ ಜಂಟಿ ನಿರ್ದೇಶಕರಿಗೆ ಸೂಚನೆ ನೀಡಿದರು. ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಮಂಗಳವಾರ ಸಂಜೆ ಮುಂಗಾರು ಹಂಗಾಮಿನ ಸಿದ್ಧತೆ ಕುರಿತು ಕೃಷಿ ಇಲಾಖೆಯ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು ರೈತರ ಬೇಡಿಕೆಗನುಗುಣವಾಗಿ ಬಿತ್ತನೆ ಬೀಜ ಹಾಗೂ ರಸಗೊಬ್ಬರವನ್ನು ದಾಸ್ತಾನು…
ಸೀಗೆ ಕಟ್ಟೆ ಯಲ್ಲಿ ಹಲವಾರು ದಿನಗಳಿಂದ ನೀರಿಲ್ಲದೆ ಜನರ ಗೋಳಾಟ”
ಕೊರಟಗೆರೆ:- ತಾಲೂಕಿನ ಕೋಳಾಲ ಹೋಬಳಿ ಎಲೆೇರಾಂಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಕ್ಕದಲ್ಲಿರುವ ಸೀಗೆ ಕಟ್ಟೆಯಲ್ಲಿ ಸುಮಾರು 30 ವರ್ಷಗಳಿಂದ ಇದೇ ಗ್ರಾಮದಲ್ಲಿ 8 ರಿಂದ 10 ಮನೆಗಳಿದ್ದು ಎಲೆೇರಾಂಪುರ ಗ್ರಾಮ ಪಂಚಾಯಿತಿಯ ಕರೆದುಗನಹಳ್ಳಿ ಹಾಗೂ ಹನುಮಂತಯ್ಯನಪಾಳ್ಳ ಈ ಒಂದೇ ಬೋರಿನಿಂದ ಗ್ರಾಮಗಳಿಗೆ ಬೋರ್ವೆಲ್ ನಲ್ಲಿ ಮೂರು ಗ್ರಾಮಗಳಿಗೆ ನೀರು ಸರಬರಾಜು ಆಗುತ್ತಾ ಇದ್ದು ಪಕ್ಕದ 8 ರಿಂದ 10 ಮನೆಗಳಿಗೆ ಇದೇ ಮಾರ್ಗವಾಗಿ ಹಲವಾರು ವರ್ಷಗಳಿಂದ ನೀರು ಬಿಡುತ್ತಿದ್ದರು. ಕಳೆದ 20 ದಿನಗಳಿಂದ ರಾಜಕೀಯ ವೈಶ್ಯಮದಿಂದ ನೀರನ್ನು…
ಮಲೇರಿಯ ರೋಗ ನಿರ್ಮೂಲನೆಗೆ ಅರಿವು ಅಗತ್ಯ :ಡಾ|| ಮಂಜುನಾಥ್
ತುಮಕೂರು: ರಾಜ್ಯದಲ್ಲಿ ಮಲೇರಿಯ ರೋಗವನ್ನು 2025ಕ್ಕೆ ಸಂಪೂರ್ಣ ನಿವಾರಣೆ ಮಾಡುವ ಗುರಿಯನ್ನು ಹೊಂದಿದ್ದು, ಮಲೇರಿಯಾ ರೋಗ ನಿರ್ಮೂಲನೆ ಮಾಡಲು ಸಮುದಾಯ ಹಂತದಲ್ಲಿ ಅರಿವು ಮೂಡಿಸಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ|| ಮಂಜುನಾಥ್ ತಿಳಿಸಿದರು. ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ಮಲೇರಿಯ ರೋಗ ಕುರಿತು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸಾರ್ವಜನಿಕರಲ್ಲಿ ಮಲೇರಿಯ ರೋಗದ ಬಗ್ಗೆ ಅರಿವು ಮೂಡಿಸಲು ವಿಶ್ವದಾದ್ಯಂತ 2008 ರಿಂದ ಪ್ರತಿ ವರ್ಷ ಏಪ್ರಿಲ್ 25ರಂದು…
ಭದ್ರತಾ ಕೊಠಡಿಗೆ ಮುಖ್ಯ ಚುನಾವಣಾಧಿಕಾರಿಗಳ ಭೇಟಿ ಪರಿಶೀಲನೆ
ತುಮಕೂರು: ಜಿಲ್ಲೆಯ ಲೋಕಸಭಾ ಕ್ಷೇತ್ರ ಚುನಾವಣೆಗೆ ಸಂಬಂಧಿಸಿದಂತೆ ವಿದ್ಯುನ್ಮಾನ ಮತಯಂತ್ರಗಳನ್ನು 24 x 7 ಸಿಎಪಿಎಫ್ ಹಾಗೂ ಪೊಲೀಸ್ ಬಿಗಿ ಭದ್ರತೆಯಲ್ಲಿ ನಗರದ ವಿಶ್ವವಿದ್ಯಾನಿಲಯದ ವಿಜ್ಞಾನ ಕಾಲೇಜು ಹಾಗೂ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಇರಿಸಿರುವ ಭದ್ರತಾ ಕೊಠಡಿಗಳಿಗೆ ಇಂದು ಬೆಳಿಗ್ಗೆ ಭಾರತ ಚುನಾವಣಾ ಆಯೋಗದ ಮುಖ್ಯ ಚುನಾವಣಾಧಿಕಾರಿ ಮನೋಜ್ಕುಮಾರ್ ಮೀನಾ ಅವರು ಭೇಟಿ ನೀಡಿ ಪರಿಶೀಲಿಸಿದರು. ಲೋಕಸಭಾ ಚುನಾವಣೆಯ ಮತ ಎಣಿಕೆಯು ವಿಶ್ವವಿದ್ಯಾನಿಲಯದ ವಿಜ್ಞಾನ ಕಾಲೇಜು ಹಾಗೂ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಜೂನ್ 4ರಂದು ನಡೆಯಲಿದ್ದು, ಮತ…
ಫ್ಲಾರೆನ್ಸ್ ನೇಟಿಂಗೆಲ್ ಜನ್ಮದಿನೋತ್ಸ ಆಚರಣೆ
ಟಿ.ಬೇಗೂರಿನ ಶ್ರೀ ಸಿದ್ಧಾರ್ಥ ಶುಶ್ರೂಷಕರ ಮಹಾವಿದ್ಯಾಲಯ ಮತ್ತು ಸಂಶೋಧನಾ ಕೇಂದ್ರದಲ್ಲಿ ಫ್ಲಾರೆನ್ಸ್ ನೇಟಿಂಗೆಲ್ ಜನ್ಮದಿನೋತ್ಸವವನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಎನ್.ವಿ.ಚಂದ್ರಶೇಖರ್ ಮಾತನಾಡಿ ರೋಗಿಗಳ ಮನೋಭಾವನೆಗೆ ತಕ್ಕಂತೆ ಕಾರ್ಯಕ್ಷಮತೆಯನ್ನು ಮಾಡಬೇಕಾಗಿದೆ ಎಂದರು. ಕೋವಿಡ್ ಸಂದರ್ಭದಲ್ಲಿ ದಾದಿಯರು ತಮ್ಮ ಪ್ರಾಣದ ಹಂಗನ್ನು ತೊರೆದು ಸೇವೆ ಸಲ್ಲಿಸಿರುವುದು ಅವಿಸ್ಮರಣಿಯ, ರೋಗಿಗಳ ಲಾಲನೆ, ಪಾಲನೆ, ಎಲ್ಲಾ ಮೂಲ ಸೌಕರ್ಯಗಳ ಸಮೇತ ಹಾರೈಕೆ ಮಾಡಿರುವುದು ಇಂದಿಗೂ ಸಹ ನಮ್ಮ ಕಣ್ಣ ಮುಂದೆ ಇದೆ, ಫ್ಲಾರೆನ್ಸ್ ನೇಟಿಂಗೆಲ್ರವರ ಆದರ್ಶ ಗುಣಗಳನ್ನು ಶುಶ್ರೂಷಕ ವಿದ್ಯಾರ್ಥಿಗಳು…
ವೈ.ಎ.ನಾರಾಯಣಸ್ವಾಮಿ ಶಿಕ್ಷಕರ ನಂಬಿಕೆಗೆ ಅರ್ಹರಾದವರಲ್ಲ ಲೋಕೇಶ್ ತಾಳಿಕಟ್ಟೆ
ಶಿಕ್ಷಕರು ಅಧಿಕಾರಕ್ಕೆ ಬಂದರೆ ಮಾತ್ರ ಶಿಕ್ಷಕರ ಅಭಿವೃದ್ಧಿ ಸಾಧ್ಯ – ದಿನೇ ದಿನೇ ಶಿಕ್ಷಕರ ಸ್ತಿತಿ ಶೋಚನೀಯವಾಗುತ್ತಿದೆ. ಈ ಬಾರಿ ನಡೆಯುತ್ತಿರುವ ಚುನಾವಣೆ ಧರ್ಮ ಮತ್ತು ಅಧರ್ಮದ ನಡುವೆ ನೆಡೆಯುತ್ತಿದೆ ಎಂದ ಲೋಕೇಶ್ ತಾಳಿಕಟ್ಟೆ ತಿಪಟೂರು ನಗರದ ಖಾಸಗಿ ಹೋಟೆಲ್ ಕಲ್ಪತರು ಗ್ರಾಂಡ್ ನಲ್ಲಿ ಆ ಯೋಜನೆ ಮಾಡಲಾಗಿದ್ದ, ಪತ್ರಿಕಾಗೋಷ್ಠಿಯಲ್ಲಿ ಆಗ್ನೇಯ ಶಿಕ್ಷಕರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಲೋಕೇಶ್ ತಾಳಿಕಟ್ಟೆ ವಿಧಾನ ಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ ವಿರುದ್ಧ ಹರಿ ಹಾಯಿದರು. ಮೂರು ಬಾರಿ ಚುನಾವಣೆಯಲ್ಲಿ ಶಿಕ್ಷಕರ ಕ್ಷೇತ್ರದಿಂದ…
ಜೂ.1ರೊಳಗಾಗಿ ಮತ ಎಣಿಕಾ ಏಜೆಂಟ್ ನೇಮಕಕ್ಕೆ ಜಿಲ್ಲಾ ಚುನಾವಣಾ ಅಧಿಕಾರಿ ಶುಭ ಕಲ್ಯಾಣ ನಿರ್ದೇಶನ.
ತುಮಕೂರು: ಲೋಕಸಭಾ ಕ್ಷೇತ್ರದ ಚುನಾವಣೆಗೆ ಸಂಬಂಧಿಸಿದಂತೆ ಜೂನ್ 4ರಂದು ನಡೆಯಲಿರುವ ಮತ ಎಣಿಕಾ ಕಾರ್ಯಕ್ಕೆ ಎಣಿಕಾ ಏಜೆಂಟರನ್ನು ನೇಮಿಸಿ, ಜೂನ್ 1ರೊಳಗಾಗಿ ಜಿಲ್ಲಾ ಚುನಾವಣಾಧಿಕಾರಿಗಳ ಕಚೇರಿಗೆ ಮಾಹಿತಿ ನೀಡಬೇಕೆಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಶುಭ ಕಲ್ಯಾಣ್ ನಿರ್ದೇಶನ ನೀಡಿದರು. ಜಿಲ್ಲಾಧಿಕಾರಿಗಳ ಕಚೇರಿ ನ್ಯಾಯಾಲಯ ಸಭಾಂಗಣದಲ್ಲಿ ಮಾನ್ಯತೆ ಪಡೆದ ರಾಷ್ಟ್ರೀಯ ಹಾಗೂ ರಾಜ್ಯ ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗೆ ಸೋಮವಾರ ಸಭೆ ನಡೆಸಿ ಮಾತನಾಡಿದ ಅವರು ಜೂನ್ 4ರಂದು ನಗರದ ವಿಶ್ವವಿದ್ಯಾನಿಲಯದ ವಿಜ್ಞಾನ ಕಾಲೇಜು ಹಾಗೂ ಸರ್ಕಾರಿ…
ನಾಲೆಯಲ್ಲಿ ನೀರು ಬಿಟ್ಟೆವಾದರೂ ಪೈಪ್ ಲೈನ್ ನಲ್ಲಿ ನೀರು ಬಿಡಲು ಒಲ್ಲೆವು – ಮಾಜಿ ಸಚಿವ ಸೊಗಡು ಶಿವಣ್ಣ*
ರಾಮನಗರ ಜಿಲ್ಲೆಯ ಮಾಗಡಿಯ ಶ್ರೀರಂಗ ಏತ ನೀರಾವರಿ ಯೋಜನೆಗೆ ಹೆಚ್ಚುವರಿ ನೀರನ್ನು ಹಂಚಿಕೆ ಮಾಡಿಕೊಂಡು ನಾಲೆಯಲ್ಲಿ ನೀರು ತೆಗೆದುಕೊಂಡು ಹೋಗಲು ನಮ್ಮ ವಿರೋಧವಿಲ್ಲ ಲಿಂಕ್ ಕೆನಾಲ್ ಮೂಲಕ ಪೈಪ್ ಲೈನ್ ನಲ್ಲಿ ನೀರು ಬಿಡಲು ಸುತಾರಾಮ್ ಒಪ್ಪುವುದಿಲ್ಲ ಎಂದು ಮಾಜಿ ಸಚಿವ ಸೊಗಡು ಶಿವಣ್ಣ ತಿಳಿಸಿದರು. ಇಂದು ತುರುವೇಕೆರೆ ತಾಲ್ಲೂಕು ಸಿ ಎಸ್ ಪುರ ಹೋಬಳಿ ಚೆನ್ನೇನಹಳ್ಳಿ ಗ್ರಾಮದಲ್ಲಿ ರಾಮನಗರ ಜಿಲ್ಲೆಗೆ ಹೇಮಾವತಿ ನೀರು ಕೊಂಡೊಯ್ಯಲು ಪೈಪ್ ಲೈನ್ ಕಾಮಗಾರಿಗಾಗಿ ನಿರ್ಮಾಣ ಮಾಡಿರುವ ನಾಲೆಯನ್ನು ಜೆಸಿಬಿಗಳ ಮೂಲಕ…
ಶಂಕರಪ್ಪಬಳ್ಳೇಕಟ್ಟೆರವರಿಗೆ ರಾಷ್ಟ್ರೀಯ ಬಸವ ಪ್ರಶಸ್ತಿ ಪುರಸ್ಕಾರ*
ತಿಪಟೂರು: ಚೇತನ ಫೌಂಡೇಶನ್ ಕರ್ನಾಟಕ ಇವರು ಧಾರವಾಡದ ಕನ್ನಡ ಸಾಹಿತ್ಯ ಪರಿಷತ್ ಸಭಾಂಗಣದಲ್ಲಿ ಬಸವ ಜಯಂತಿ ಅಂಗವಾಗಿ ವಚನ ವೈಭವ, ಉಪನ್ಯಾಸ ವಚನ ವಾಚನ ಕವಿಗೋಷ್ಠಿ ಹಾಗೂ ನಾಡಿನ ಸಾಧಕರಿಗೆ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಂಡು ,ತಿಪಟೂರಿನ ರೈತಕವಿ ಡಾ.ಪಿ.ಶಂಕರಪ್ಪ ಬಳ್ಳೇಕಟ್ಟೆ.ಇವರ ಸಾಹಿತ್ಯ ಮತ್ತು ಸಮಾಜ ಸೇವೆಯನ್ನು ಗುರುತಿಸಿ “ರಾಷ್ಟ್ರೀಯ ಬಸವ ಪ್ರಶಸ್ತಿ” ನೀಡಿ ಗೌರವಿಸಿದ್ದಾರೆ ಸಮಾರಂಭದಲ್ಲಿ ಶ್ರೀ ವೇ ಜ್ಞಾನ ಬ್ರಹ್ಮ ಚಿರಂತಯ್ಯ ಹಿರೇಮಠ ಸ್ವಾಮೀಜಿಯವರು ಕಾರ್ಯಕ್ರಮ ಉದ್ಘಾಟಿಸಿ; ದಿವ್ಯ ಸಾನಿದ್ಯ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಡಾ….