ಪ್ರಮುಖ ಸುದ್ದಿಗಳು
ನಗರದಲ್ಲಿ 39ನೇ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆ: ಆ.3ರಿಂದ ಮಕ್ಕಳು, ಹಿರಿಯರಿಗೆ ವಿವಿಧ ಸ್ಪರ್ಧೆ ಆಯೋಜನೆ
ತುಮಕೂರು: ನಗರದ ಶ್ರೀ ಕೃಷ್ಣ ಜನ್ಮಾಷ್ಟಮಿ ಸಮಿತಿಯಿಂದ ಬರುವ ಆಗಸ್ಟ್ 17ರಂದು ನಗರದ ಕೆ.ಆರ್.ಬಡಾವಣೆಯ ಶ್ರೀರಾಮ ಮಂದಿರದಲ್ಲಿ 39ನೇ ಶ್ರೀ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮ ಹಮ್ಮಿಕೊಂಡಿದೆ. ಇದರ ಅಂಗವಾಗಿ ಆಗಸ್ಟ್ 3ರಿಂದ ವಿವಿಧ ವಯೋಮಾನದವರಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ ಎಂದು ಸಮಿತಿ ಉಪಾಧ್ಯಕ್ಷ ಜಿ.ಎಸ್.ಬಸವರಾಜು ಹೇಳಿದರು. ಬುಧವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ನಮ್ಮ ಸಂಸ್ಕøತಿ, ಆಚಾರವಿಚಾರಗಳ ಮಹತ್ವವನ್ನು ಮುಂದಿನ ತಲೆಮಾರಿನವರಿಗೆ ಪರಿಚಯಿಸಿ ಆಸಕ್ತಿ ಮೂಡಿಸಲು ಕಳೆದ 38 ವರ್ಷಗಳಿಂದ ಶ್ರೀ ಕೃಷ್ಣ…
ಗೃಹ ಸಚಿವ ಡಾ: ಜಿ. ಪರಮೇಶ್ವರ್ ರವರ ಕಾರ್ಯಕ್ರಮದ ಪೂರ್ವಭಾವಿ ಸಭೆ
ಸೋಮಶೇಖರ್ ರವರ ನೇತೃತ್ವದಲ್ಲಿ ಸರ್ಕಾರಿ ಶಾಲೆಗಳ ಕಂಟೇನರ್ ಶೌಚಾಲಯ ಉದ್ಘಾಟನಾ ಕಾರ್ಯಕ್ರಮ ಕೊರಟಗೆರೆ: ತಾಲ್ಲೂಕಿನ ಕೋಳಾಲ ಹೋಬಳಿಯ ನೀಲಗೋಂಡನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಕರ್ನಾಟಕ ಪಬ್ಲಿಕ್ ಶಾಲೆ ಇರಕಸಂದ್ರ ಕಾಲೋನಿಯಲ್ಲಿ 30-07-2025ರಂದು ತಾಲೂಕಿನ ಆದ್ಯಂತ 70 ಶಾಲೆಗಳಲ್ಲಿ ಕಂಟೇನರ್ ಶೌಚಾಲಯವನ್ನು ನಿರ್ಮಾಣ ಮಾಡಿದ್ದು. ಇರಕಸಂದ್ರ ಕಾಲೋನಿಯ ಸರ್ಕಾರಿ ಹಿರಿಯ ಪ್ರಾಥಮಿಕ ಪ್ರೌಢ ಶಾಲೆಯಲ್ಲಿ ಗೃಹ ಸಚಿವರಾದ. ಡಾ: ಜಿ. ಪರಮೇಶ್ವರ್ ರವರು ಉದ್ಘಾಟನೆ ಮಾಡುವವರು ಎಂದು ಪೂರ್ವಭಾವಿ ಸಭೆ ಮಾಡಲಾಗಿತ್ತು. ಮುಖಂಡರಾದ ಸೋಮಶೇಖರ್ ರವರು ಮಾತನಾಡಿ: 30-07-2025ರಂದು…
ಇತಿಹಾಸ ಪ್ರಸಿದ್ಧ ಶ್ರೀ ಗೋಸಲ ಚನ್ನಬಸವೇಶ್ವರ ಸ್ವಾಮಿ ದೇವಾಲಯದ ನೂತನ ವೆಬ್ ಸೈಟ್ ಗೆ ಶಾಸಕ ಎಸ್ ಆರ್ ಶ್ರೀನಿವಾಸ್ ಚಾಲನೆ.
ಗುಬ್ಬಿ ಸುದ್ದಿ ಇತ್ತೀಚಿನ ದಿನ ಮಾನಗಳಲ್ಲಿ ಆನ್ಲೈನ್ ಸೇವೆಗೆ ಮಾರು ಹೋಗಿರುವ ಭಕ್ತರು ತಾವು ಇರುವಲ್ಲಿಯೇ ಎಲ್ಲಾ ಸೇವೆಯ ಸೌಲಭ್ಯಗಳನ್ನು ಪಡೆಯಲು ಇಚ್ಛಿಸುವ ಹಿನ್ನೆಲೆ ಮುಜರಾಯಿ ಇಲಾಖೆಗೆ ಒಳಪಡುವ ಗುಬ್ಬಿ ಇತಿಹಾಸ ಪ್ರಸಿದ್ಧ ಶ್ರೀ ಗೋಸಲ ಚನ್ನಬಸವೇಶ್ವರ ಸ್ವಾಮಿ ಅವರ ದರ್ಶನ ರಾಜ್ಯ ಹೊರ ರಾಜ್ಯಗಳಲ್ಲಿ ಭಕ್ತ ಸಮೂಹ ಇರುವ ಹಿನ್ನೆಲೆ ಸುಲಭ ಮಾರ್ಗದಲ್ಲಿ ಸೇವೆಗಳ ಸೌಲಭ್ಯಗಳ ಮಾಹಿತಿ ಪಡೆಯಲು ಅವಶ್ಯಕತೆ ಇರುವ ಹಿನ್ನೆಲೆ ನೂತನ ವೆಬ್ ಸೈಟ್ ಕಲ್ಪಿಸುವ ನಿಟ್ಟಿನಲ್ಲಿ ಭಕ್ತರಿಗೆ ಅನುಕೂಲವಾಗುವಂತೆ ಇಂದು ಆನ್ಲೈನ್…
ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ತಿಪಟೂರು ತಾಲ್ಲೂಕು ಘಟಕದ ವತಿಯಿಂದ ಕಾರ್ಗಿಲ್ ವಿಜಯೋತ್ಸವ ದಿನಾಚರಣೆ
ತಿಪಟೂರು :*ಸುಭದ್ರ, ಸುಭಿಕ್ಷ, ಸುಶಿಕ್ಷ, ಸುರಕ್ಷವಾದ ರಾಷ್ಟ್ರ ನಮ್ಮದಾಗಲು ಶ್ರಮಿಸುತ್ತಿರುವ ಗುರುಗಳು, ವೈದ್ಯರು, ಪತ್ರಕರ್ತರು, ಸೈನಿಕರೆಲ್ಲರನ್ನೂ ಸ್ಮರಿಸುವ ವಿಶೇಷ ದಿನಗಳನ್ನೊಳಗೊಂಡಿರುವ ಈ ಮಾಸದಲ್ಲಿ ಅನ್ನದಾತನಾದ ರೈತನನ್ನೂ ಸ್ಮರಿಸುತ್ತಾ ಈ ಕಾರ್ಗಿಲ್ ವಿಜಯೋತ್ಸವವನ್ನು ಆಚರಿಸೋಣ, ಹುತಾತ್ಮ ಯೋಧರಿಗೆ ಭಾವಪೂರ್ಣ ನಮನಗಳನ್ನು ಸಲ್ಲಿಸೋಣ. ಹಾಗೂ ಇಂದಿನ ಮಕ್ಕಳಲ್ಲಿ ದೇಶಾಭಿಮಾನ ಮೂಡಿಸುವ ಪ್ರಯತ್ನ ಮಾಡೋಣ: ಲತಾಮಣಿ ಎಂ ಕೆ ತುರುವೇಕೆರೆ, ಅಧ್ಯಕ್ಷರು, ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ, ತಾಲ್ಲೂಕು ಘಟಕ ತಿಪಟೂರು.* ಜುಲೈ ತಿಂಗಳಲ್ಲಿ ಬರುವ ಪತ್ರಿಕೋದ್ಯಮ ದಿನಾಚರಣೆ, ಗುರು ಪೂರ್ಣಿಮಾ,…
ಖಜಾನೆ ತುಂಬಲು ಸರ್ಕಾರದಿಂದ ಜನರ ಶೋಷಣೆ ಕಾಂಗ್ರೆಸ್ ಸರ್ಕಾರದ ಧೋರಣೆಗೆ ಸಚಿವ ಸೋಮಣ್ಣ ಖಂಡನೆ
ತುಮಕೂರು: ರಾಜ್ಯದ ಖಜಾನೆ ಖಾಲಿಯಾಗಿದೆ, ಹಣಕ್ಕಾಗಿ ರಾಜ್ಯ ಕಾಂಗ್ರೆಸ್ ಸರ್ಕಾರ ಎಲ್ಲೆಲ್ಲಿ, ಯಾವ ರೀತಿಯಲ್ಲಿ ಜನರನ್ನು ಶೋಷಣೆ ಮಾಡುತ್ತಿದೆ ಎಂಬುದು ಎಲ್ಲರಿಗೂ ಗೊತ್ತು. ಇತ್ತೀಚೆಗೆ ಸಣ್ಣಪುಟ್ಟ ವ್ಯಾಪಾರಿಗಳಿಂದ ತೆರಿಗೆ ಹಣ ವಸೂಲಿ ಮಾಡುತ್ತಾ ಬಡ ವ್ಯಾಪಾರಿಗಳನ್ನು ಶೋಷಣೆ ಮಾಡುತ್ತಿದೆ ಎಂದು ಕೇಂದ್ರ ಜಲಶಕ್ತಿ ಹಾಗೂ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಟೀಕಿಸಿದರು. ಸಿದ್ಧಗಂಗಾ ಮಠಾಧ್ಯಕ್ಷರಾದ ಸಿದ್ಧಲಿಂಗ ಸ್ವಾಮೀಜಿಗಳ 63ನೇ ಜನ್ಮದಿನದ ಅಂಗವಾಗಿ ಸಚಿವ ಸೋಮಣ್ಣ, ಪತ್ನಿ ಶೈಲಜಾ ಸೋಮಣ್ಣ ಅವರು ಮಂಗಳವಾರ ಮಠಕ್ಕೆ ಆಗಮಿಸಿ ಡಾ.ಶಿವಕುಮಾರ…
ಕುಣಿಗಲ್ ರಸ್ತೆ ಸೇತುವೆಗೆ ತಡೆಗೋಡೆ ನಿರ್ಮಿಸಿ ಅಪಾಯ ತಡೆಯಲು ಆಯುಕ್ತರಿಗೆ ಇಕ್ಬಲ್ ಅಹ್ಮದ್ ಮನವಿ
ತುಮಕೂರು: ನಗರದ ಕುಣಿಗಲ್ ರಸ್ತೆಯ ರೈಲ್ವೆ ಸೇತುವೆಯ ಮೇಲೆ ಎರಡೂ ಬದಿ ತಡೆಗೋಡೆಗಳಿಲ್ಲದೆ ಪ್ರಾಣಾಪಾಯ ಎದುರಾಗುವ ಸಾಧ್ಯತೆಗಳಿವೆ. ಕೂಡಲೇ ತಡೆಗೋಡೆಗಳನ್ನು ನಿರ್ಮಾಣ ಮಾಡಿ ನಾಗರೀಕರ ಸುರಕ್ಷಿತ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದು ನಗರದ ಕಾಂಗ್ರೆಸ್ ಮುಖಂಡ ಇಕ್ಬಾಲ್ ಅಹ್ಮದ್ ಅವರು ನಗರಪಾಲಿಕೆ ಆಯುಕ್ತರಾದ ಬಿ.ವಿ.ಅಶ್ವಿಜ ಅವರಿಗೆ ಮನವಿ ಮಾಡಿದ್ದಾರೆ. ಹಾಳಾಗಿದ್ದ ಕುಣಿಗಲ್ ರಸ್ತೆಯ ರೈಲ್ವೆ ಸೇತುವೆಯ ಕೆಳ ರಸ್ತೆಯನ್ನು ಇತ್ತೀಚೆಗೆ ದುರಸ್ಥಿ ಮಾಡಲಾಗಿದೆ. ಆದರೆ ಸೇತುವೆ ಮೇಲ್ಭಾಗ ಎರಡೂ ಬದಿಯಲ್ಲಿ ಸುರಕ್ಷತೆ ಬಗ್ಗೆ ಗಮನಹರಿಸಿಲ್ಲ. ಸೇತುವೆ…
ತಿಂಗಳಲ್ಲಿ ಒಳಮೀಸಲಾತಿ ಜಾರಿ ಮಾಡದಿದ್ದರೆ ಅಸಹಕಾರ ಚಳವಳಿ
ಆ.1ರಿಂದ ರಾಜ್ಯಾದ್ಯಂತ ಉಗ್ರ ಹೋರಾಟ: ಗೋವಿಂದ ಕಾರಜೋಳ ತುಮಕೂರು: ರಾಜ್ಯ ಸರ್ಕಾರ ಈ ತಿಂಗಳ ಅಂತ್ಯದೊಳಗೆ ಪರಿಶಿಷ್ಟ ಜಾತಿಗಳ ಜನಸಂಖ್ಯೆ ಆಧಾರದಲ್ಲಿ ಒಳಮೀಸಲಾತಿ ಜಾರಿಗೊಳಿಸದಿದ್ದರೆ ಆಗಸ್ಟ್ 1ರಿಂದ ಎಲ್ಲಾ ಜಿಲ್ಲಾಧಿಕಾರಿಗಳ ಕಚೇರಿ ಬಳಿ ಪ್ರತಿಭಟನೆ ನಡೆಸಲಾಗುವುದು. ಆಗಸ್ಟ್ 15ರ ನಂತರ ಸರ್ಕಾರದ ವಿರುದ್ಧ ಅಸಹಕಾರ ಚಳುವಳಿ ನಡೆಸಲಾಗುವುದು ಎಂದು ಚಿತ್ರದುರ್ಗ ಸಂಸದ ಗೋವಿಂದ ಕಾರಜೋಳ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು. ಶನಿವಾರ ನಗರದಲ್ಲಿ ನಡೆದ ಮಾದಿಗ ಸಮಾಜದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಒಳಮೀಸಲಾತಿ ಜಾರಿ ಮಾಡಲು ಸಿದ್ದರಾಮಯ್ಯ ಸರ್ಕಾರಕ್ಕೆ…
ಸರ್ಕಾರಿ ಶಾಲೆಗೆ ಉಚಿತ ಕ್ರೀಡಾ ಸಮವಸ್ತ್ರವಿತರಣೆ
ತಿಪಟೂರು: ತಾಲೂಕಿನ ಕಿಬ್ಬನಹಳ್ಳಿ ಹೋಬಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಕರಡಾಳು ಸಂತೆ ಮೈದಾನ ಶಾಲೆಯ ಎಲ್ಲಾ ಮಕ್ಕಳಿಗೆ ತಿಪಟೂರಿನ ವಂದನ ಟೆಕ್ಸ್ ಟೋರಿಯಂ ಮಾಲೀಕರಾದ ಶ್ರೀಯುತ ಪ್ರಕಾಶ್ ಮತ್ತು ಸಹೋದರರು ಅವರ ತಂದೆಯವರಾದ ಶ್ರೀಯುತ ನೇಮಿನಾಥ್ ಜೈನ್ ರವರ ಸ್ಮರಣಾರ್ಥ ಉಚಿತ ಕ್ರೀಡಾ ಸಮವಸ್ತ್ರ ವಿತರಣೆ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಪ್ರಕಾಶ್ ರವರು ಮಕ್ಕಳು ಸರ್ಕಾರ ಹಾಗೂ ಧಾನಿಗಳು ನೀಡುತ್ತಿರುವ ಪ್ರೋತ್ಸಾಹದಾಯಕ ಯೋಜನೆಗಳ ಸದುಪಯೋಗಪಡಿಸಿಕೊಂಡು ಚೆನ್ನಾಗಿ ಓದಿ ಮುಂದೆ ನೀವು ಓದಿದ ಶಾಲೆಗೆ ,ನಿಮ್ಮ…
ಶಾಸಕರು ಗುತ್ತಿಗೆದಾರರ ಬಳಿ ಲಂಚ ಪಡೆದಿದ್ದರೆ ರಾಜಕೀಯ ನಿವೃತ್ತಿ. ವೆಂಕಟೇಶ್.
ಗುಬ್ಬಿ ಕ್ಷೇತ್ರದ ಶಾಸಕ ಎಸ್ ಆರ್ ಶ್ರೀನಿವಾಸ್ ಅವರು ಯಾರಾದರೂ ಗುತ್ತಿಗೆದಾರರ ಬಳಿ ಕಮಿಷನ್ ಅಥವಾ ಲಂಚವನ್ನು ಪಡೆದಿದ್ದರೆ ಶಾಸಕರು ರಾಜಕೀಯ ನಿವೃತ್ತಿ ಪಡೆಯಲಿದ್ದಾರೆ ಎಂದು ಪಂಚ ಗ್ಯಾರಂಟಿ ಯೋಜನೆಯ ತಾಲೂಕು ಅಧ್ಯಕ್ಷ ವೆಂಕಟೇಶ್ ಬಿಜೆಪಿ ಮುಖಂಡ ಎಸ್ ಡಿ ದಿಲೀಪ್ ಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದರು. ಪಟ್ಟಣದ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಹೇಮಾವತಿ ಲಿಂಕ್ ಕೆನಲ್ ಕಾಮಗಾರಿ ಗುತ್ತಿಗೆದಾರರಿಂದ ಲಂಚವನ್ನು ಪಡೆದು ಮೋಜು ಮಸ್ತಿ ಮಾಡಲು ಅಮೆರಿಕಕ್ಕೆ ತೆರಳಿದ್ದಾರೆ ಎಂದು ಆರೋಪ ಮಾಡುತ್ತಿರುವ…
ಉಪ ನೊಂದನಾಧಿಕಾರಿಗಳ ವಿರುದ್ಧ ರೈತ ಸಂಘದಿಂದ ಪ್ರತಿಭಟನೆ
ಪಾವಗಡ : ತಾಲ್ಲೂಕು ಉಪ ನೋಂದಣಾಧಿಕಾರಿಗಳು ಜನರಲ್ಲಿ ಹಾಗೂ ರೈತರಲ್ಲಿ ಉತ್ತಮ ಬಾಂಧವ್ಯವಿಲ್ಲದೇ ನೋಂದಣಿಗೆ ಬರುವ ಸಾರ್ವಜನಿಕರನ್ನು ವಿನಾಕಾರಣ ಅಲೆಸುತ್ತಿದ್ದಾರೆ ಎಂದು ತಾಲೂಕು ರೈತ ಸಂಘದ ವತಿಯಿಂದ ಪ್ರತಿಭಟನೆ ನಡೆಸಿದರು. ಪ್ರತಿಭಟನೆ ಉದ್ದೇಶಿಸಿ ತಾಲೂಕು ರೈತ ಸಂಘದ ಅಧ್ಯಕ್ಷ ನರಸಿಂಹ ರೆಡ್ಡಿ ಮಾತನಾಡಿ ತಾಲೂಕು ನೊಂದಣಿ ಅಧಿಕಾರಿ ರಾಧಮ್ಮ ಇಲ್ಲಸಲ್ಲದ ಕಾನೂನುಗಳನ್ನು ಮುಂದಿಟ್ಟುಕೊಂಡು ಸಾರ್ವಜನಿಕರಿಗೆ ಕೆಲಸವನ್ನು ಮಾಡಿಕೊಡದೆ ಆಲಿಸುತ್ತಿದ್ದಾರೆ ಎಂದು ಆರೋಪಿಸಿದರು. ಕಾನೂನು ರೀತ್ಯಾ ನೋಂದಣಿ ಹಣವನ್ನು ಕಟ್ಟಿದರೂ ಕಚೇರಿ ಮಾಮೂಲು ಕೊಡಬೇಕೆಂದು ಲಂಚಿದ ಹಣಕ್ಕಾಗಿ ಸಾಯಂಕಾಲದವರೆಗೂ…